Lok Sabha Elections2024: ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ಶಿಪ್‌ ಯೋಜನೆ ,ದೇಶಾದ್ಯಂತ ಜಾತಿಗಣತಿ; ಕಾಂಗ್ರೆಸ್‌ ಪ್ರಣಾಳಿಕೆ ಏನಿರಬಹುದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Elections2024: ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ಶಿಪ್‌ ಯೋಜನೆ ,ದೇಶಾದ್ಯಂತ ಜಾತಿಗಣತಿ; ಕಾಂಗ್ರೆಸ್‌ ಪ್ರಣಾಳಿಕೆ ಏನಿರಬಹುದು

Lok Sabha Elections2024: ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ಶಿಪ್‌ ಯೋಜನೆ ,ದೇಶಾದ್ಯಂತ ಜಾತಿಗಣತಿ; ಕಾಂಗ್ರೆಸ್‌ ಪ್ರಣಾಳಿಕೆ ಏನಿರಬಹುದು

Congress manifesto ಶಿಕ್ಷಣ, ಆರೋಗ್ಯದ ಸಹಿತ ಹಲವು ಹಕ್ಕುಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್‌ ಈ ಬಾರಿ ಉದ್ಯೋಗ ಹಕ್ಕು ಮೂಲಕ ನಿರುದ್ಯೋಗಿಗಳಿಗೆ ಬಲ ತುಂಬಲು ಪ್ರಣಾಳಿಕೆ ಮೂಲಕ ಆದ್ಯತೆ ನೀಡಲಿದೆ.

ಪ್ರಣಾಳಿಕೆ ತಯಾರಿ ಕುರಿತಾಗಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತುಕತೆ.
ಪ್ರಣಾಳಿಕೆ ತಯಾರಿ ಕುರಿತಾಗಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತುಕತೆ.

ದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆ ಬಾಕಿ ಇರುವಾಗಲೇ ತಯಾರಿಗಳು ನಡೆದಿವೆ. ಅದರಲ್ಲೂ ರಾಜಕೀಯ ಪಕ್ಷದಲ್ಲಿ ಟಿಕೆಟ್‌ ಹಂಚಿಕೆ. ಚುನಾವಣೆ ಪ್ರಚಾರದ ಕುರಿತೈ ಸಿದ್ದತೆಗಳು ನಡೆಯುತ್ತಿವೆ. ಅದರಲ್ಲೂ ಚುನಾವಣೆಗೆ ಪಕ್ಷ ಹಾಗೂ ಐದು ವರ್ಷ ಆಡಳಿತಕ್ಕಾಗಿ ನೀಡುವ ಪ್ರಣಾಳಿಕೆಯೂ ಮುಖ್ಯವಾಗಿದ್ದು, ಇದಕ್ಕೂ ಸಮಿತಿಗಳು ತಯಾರಿಯಲ್ಲಿ ತೊಡಗಿವೆ. ವಿಶೇಷವಾಗಿ ಕಾಂಗ್ರೆಸ್‌ ಕೂಡ ಈಗಾಗಲೇ ಹಲವಾರು ಸುತ್ತಿನ ಸಭೆ ನಡೆಸಿ ತನ್ನ ಪ್ರಣಾಳಿಕೆ ಅಣಿಗೊಳಿಸುತ್ತಿದೆ.ಹಲವಾರು ಹಕ್ಕುಗಳನ್ನು ನೀಡಿರುವ ಕಾಂಗ್ರೆಸ್‌ ಈ ಬಾರಿ ಉದ್ಯೋಗದ ಹಕ್ಕು ನೀಡುವ ನಿಟ್ಟಿನಲ್ಲಿ ಪ್ರಣಾಳಿಕೆ ರೂಪಿಸುತ್ತಿದೆ.

ಎರಡು ದಿನದಿಂದಲೂ ದೆಹಲಿಯಲ್ಲಿ ಪ್ರಣಾಳಿಕೆ ಸಮಿತಿ ಸಭೆಗಳು ನಡೆದಿವೆ. ಒಂದಿಬ್ಬರು ಸದಸ್ಯರನ್ನು ಹೊರತುಪಡಿಸಿ ಬಹುತೇಕರು ಪಾಲ್ಗೊಂಡಿದ್ದಾರೆ. ಬಾರದೇ ಇರುವವರು ಸಲಹೆಗಳನ್ನು ನೀಡಿದ್ದಾರೆ. ಇದರಿಂದ ಸದ್ಯದಲ್ಲಿಯೇ ಅಂತಿಮ ರೂಪವನ್ನು ನೀಡಲಾಗುತ್ತದೆ.

ಕೇಂದ್ರದ ಮಾಜಿ ಅಧ್ಯಕ್ಷ ಪಿ.ಚಿದಂಬರಂ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಮಾಜಿ ಜೈರಾಂ ರಮೇಶ್‌, ಶಶಿತರೂರ್‌, ಆನಂದಶರ್ಮ, ಪ್ರಿಯಾಂಕಗಾಂಧಿ, ಟಿಎಸ್.ಸಿಂಗ್‌ ದೇವ್‌ ಸಹಿತ ಹಲವು ಪ್ರಮುಖರು ಇದ್ದಾರೆ.

ಈಗಾಗಲೇ ಸಮಿತಿ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದೆ. ಪ್ರತಿ ಸದಸ್ಯರಿಂದಲೂ ಪ್ರಣಾಳಿಕೆಗೆ ಸಲಹೆಗಳನ್ನು ಕೇಳಲಾಗಿದ್ದು, ಅವರೂ ಭಾರತದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಯೋಜನೆಗಳನ್ನು ನೀಡಿದ್ದಾರೆ. ಇದಲ್ಲದೇ ಬೇರೆ ಬೇರೆ ಕ್ಷೇತ್ರದ ತಜ್ಞರಿಂದಲೂ ಪ್ರಣಾಳಿಕೆಗೆ ಸಲಹೆ ಪಡೆಯಲಾಗಿದೆ.

ವಿಶೆಷವಾಗಿ ಯುವಕರು, ನಿರುದ್ಯೋಗಿಗಳು, ಮಹಿಳೆಯರು, ಬಡವರು ಹಾಗೂ ರೈತರಿಗೆ ಒತ್ತು ನೀಡಿ ಪ್ರಣಾಳಿಕೆ ಸಿದ್ದಪಡಿಸಲಾಗುತ್ತಿದೆ.

ಈಗಾಗಲೇ 50 ಪುಟಗಳ ಪ್ರಣಾಳಿಕೆ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಕಾಂಗ್ರೆಸ್‌ನ ಉನ್ನತ ಸಮಿತಿ ಮುಂದೆ ಇರಿಸಿ ಸದ್ಯದಲ್ಲೇ ಅಂತಿಮಗೊಳಿಸಲಾಗುತ್ತದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಣಾಳಿಕೆ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಲಿದೆ. ಇದು ಏಕರೂಪದಲ್ಲಿ ಇರಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಣಾಳಿಕೆಯಲ್ಲಿಏನಿರಬಹುದು

  • ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆಯಲ್ಲಿ ಘೋಷಿಸಿದ ಹಾಗೆ ನ್ಯಾಯ್‌ ಗೆ ಒತ್ತು
  • ನಿರುದ್ಯೋಗ ಪ್ರಮಾಣ ಏರುತ್ತಿರುವ ಕಾರಣಕ್ಕೆ ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ ಶಿಪ್‌ ಯೋಜನೆ ಜಾರಿ
  • ವಿದೇಶಗಳಲ್ಲಿ ಇರುವ ರೀತಿಯಲ್ಲಿ ಪದವೀಧರರಿಗೆ ಉದ್ಯೋಗ ಸಿಗುವವರೆಗೂ ಆರ್ಥಿಕ ನೆರವು
  • ಸರ್ಕಾರಿ ನೇಮಕಾತಿಯಲ್ಲಿ ಅಕ್ರಮ ತಡೆಗೆ ಕ್ರಮ, ಪಾರದರ್ಶನ ಆಯ್ಕೆ ವ್ಯವಸ್ಥೆಗೆ ವಿಶೇಷ ಗಮನ
  • ದೇಶಾದ್ಯಂತ ಜಾತಿ ಗಣತಿಗೆ ಒತ್ತು, ಹಿಂದುಳಿದ, ಅತಿ ಹಿಂದುಳಿದ ಜಾತಿಗಳ ಪ್ರಗತಿಗೆ ಒತ್ತು
  • ರೈತರು ಬೆಳೆದ ಬೆಳೆಗಳಿಗೆ ಕಾನೂನು ಬಲದೊಂದಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ
  • ಸಾಮಾಜಿಕ ಯೋಜನೆಗಳಿಗೆ ವಿಶೇಷ ಒತ್ತು, ಅಸಂಘಟಿತ ವಲಯಗಳಿಗೆ ಆರ್ಥಿಕ ಗ್ಯಾರಂಟಿ
  • ಕಾಂಗ್ರೆಸ್‌ ಆಡಳಿತದಲ್ಲಿರುವ ಜನಸ್ನೇಹಿ ಮಾದರಿ ಯೋಜನೆಗಳು ಇಡೀ ದೇಶಕ್ಕೆ ವಿಸ್ತರಣೆ
  • ಆಹಾರ ಸೇರಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಗಮನ, ಕಡಿಮೆ ದರದಲ್ಲಿ ಆಹಾರ ವಸ್ತುಗಳ ವಿತರಣೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.