Indian Railway: ರೈಲ್ವೆ ಆನ್‌ಲೈನ್‌ ಪಾವತಿಗೆ ಕ್ಯೂಆರ್‌ ಕೋಡ್‌ ಬಳಕೆ, ಏಪ್ರಿಲ್‌ 1ರಿಂದ ಎಲ್ಲೆಡೆ ಸೇವೆ-delhi news indian railway stations started qr code facility to pay ticket booking parking food counters kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Railway: ರೈಲ್ವೆ ಆನ್‌ಲೈನ್‌ ಪಾವತಿಗೆ ಕ್ಯೂಆರ್‌ ಕೋಡ್‌ ಬಳಕೆ, ಏಪ್ರಿಲ್‌ 1ರಿಂದ ಎಲ್ಲೆಡೆ ಸೇವೆ

Indian Railway: ರೈಲ್ವೆ ಆನ್‌ಲೈನ್‌ ಪಾವತಿಗೆ ಕ್ಯೂಆರ್‌ ಕೋಡ್‌ ಬಳಕೆ, ಏಪ್ರಿಲ್‌ 1ರಿಂದ ಎಲ್ಲೆಡೆ ಸೇವೆ

ಭಾರತೀಯ ರೈಲ್ವೆಯು ಪ್ರಯಾಣಿಕರ ಟಿಕೆಟ್‌ ಬುಕ್ಕಿಂಗ್‌ ಸಹಿತ ನಾನಾ ಸೇವೆಗೆ ಕ್ಯೂಆರ್‌ ಕೋಡ್‌ ಸೇವೆಯನ್ನುಅಧಿಕೃತವಾಗಿ ಆರಂಭಿಸಿದೆ.

ರೈಲ್ವೆ ನಿಲ್ದಾಣಗಳಲ್ಲಿ ಕ್ಯೂಆರ್‌ ಕೋಡ್‌ ಸೇವೆ ಆರಂಭಗೊಂಡಿದೆ.
ರೈಲ್ವೆ ನಿಲ್ದಾಣಗಳಲ್ಲಿ ಕ್ಯೂಆರ್‌ ಕೋಡ್‌ ಸೇವೆ ಆರಂಭಗೊಂಡಿದೆ. (The Hindu)

ದೆಹಲಿ; ಭಾರತೀಯ ರೈಲ್ವೆಯಲ್ಲಿ ಆನ್‌ಲೈನ್‌ ಸೇವೆಗಳು ಇದ್ದರೂ ಸಾಕಷ್ಟು ಜನ ಬಳಸುವ ಕ್ಯೂಆರ್‌ ಕೋಡ್‌ ಸೇವೆ ಇರಲಿಲ್ಲ. ಅದರಲ್ಲೂ ಟಿಕೆಟ್‌ ಬುಕ್ಕಿಂಗ್‌ಗೆ ಪ್ರಯಾಣಿಕರು ಕ್ಯೂರ್‌ಆರ್‌ ಕೋಡ್‌ ಸೇವೆ ಆರಂಭಿಸುವಂತೆ ಒತ್ತಾಯಿಸುತ್ತಲೇ ಇದ್ದರು. ಆದರೆ ರೈಲ್ವೆ ಇದನ್ನು ಆರಂಭಿಸಲು ಮೀನ ಮೇಷ ಎಣಿಸುತ್ತಲೇ ಇತ್ತು. ರೈಲ್ವೆ ಪ್ರಯಾಣಕ್ಕೆ ಪರ್ಯಾಯ ಇಲ್ಲದೇ ಇದ್ದುದರಿಂದ ಜನ ಇರುವ ಸೌಲಭ್ಯವನ್ನೇ ಬಳಸಿಕೊಂಡು ಮುಂಗಡ ಟಿಕೆಟ್‌ ಇಲ್ಲವೇ ದಿನದ ಪ್ರಯಾಣದ ಟಿಕೆಟ್‌ ಪಡೆದು ಸಂಚರಿಸುತ್ತಿದ್ದರು. ಈಗ ಭಾರತೀಯ ರೈಲ್ವೆ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಆರ್‌ ಕೋಡ್‌ ಸೇವೆಯನ್ನು ಟಿಕೆಟ್‌ ಬುಕ್ಕಿಂಗ್‌ ಸೇವೆಗೆ ಆರಂಭಿಸಿದೆ.

ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಕ್ಯೂಆರ್‌ ಕೋಡ್‌ ಬಳಸುವ ಸೇವೆ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಇದನ್ನು ದೇಶಾದ್ಯಂತ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಏಪ್ರಿಲ್‌ 1ರಿಂದಲೇ ಕ್ಯೂಆರ್‌ ಕೋಡ್‌ ಸೇವೆಯು ಆರಂಭಗೊಂಡಿದೆ.

ಈಗಂತೂ ಪಾವತಿಗೆ ಹತ್ತಾರು ಮಾರ್ಗಗಳಿವೆ. ಮೊದಲೆಲ್ಲಾ ನಗದು ಮಾತ್ರ ಬಳಸಬೇಕಾಗಿತ್ತು. ಆನಂತರ ಎಟಿಎಂ ಕಾರ್ಡ್‌ ಬಳಸುವ ಅವಕಾಶವಿತ್ತು. ಈಗ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕ್ಯೂಆರ್‌ ಕೋಡ್‌ ಬಳಸಿ ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೌಂಟರ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ನಂತರ ಕ್ಯೂರ್‌ ಆರ್‌ ಕೋಡ್‌ ಮೂಲಕವೇ ಹಣ ಪಾವತಿಸಬಹುದು. ಇದಕ್ಕಾಗಿ ಗೂಗಲ್‌ ಪೇ, ಫೋನ್‌ ಪೇ ಸಹಿತ ಇತರೆ ಯುಪಿಐ ಆಪ್‌ಗಳ ಸೇವೆಯನ್ನು ಒದಗಿಸಲಾಗುತ್ತಿದೆ.

ಬರೀ ಟಿಕೆಟ್‌ ಮಾತ್ರವಲ್ಲದೇ ರೈಲ್ವೆಯ ಪಾರ್ಕಿಂಗ್‌ ವ್ಯವಸ್ಥೆ, ಫುಡ್‌ ಕೌಂಟರ್‌ಗಳಲ್ಲೂ ಪ್ರಯಾಣಿಕರು ಕ್ಯೂರ್‌ ಆರ್‌ ಕೋಡ್‌ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಈ ಹಿಂದೆ ಟಿಕೆಟ್‌ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವಾಗ ಸಿಕ್ಕಿಬಿದ್ದಾಗ, ಹೆಚ್ಚುವರಿ ಶುಲ್ಕ ಪಾವತಿಸುವಾಗ ಹಣ ಇಲ್ಲದೇ ಇದ್ದರೆ ಕಷ್ಟವಾಗುತ್ತಿತ್ತು. ಈಗ ಇದಕ್ಕೂ ಆನ್‌ಲೈನ್‌ ಪಾವತಿ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸಿಬ್ಬಂದಿ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಹೊಂದಲಿದ್ಧಾರೆ. ದಂಡ ಪಾವತಿಯನ್ನು ಸರಿಯಾಗಿ ಮಾಡಲು ಇದು ಸಹಕಾರಿಯಾಗಲಿದೆ.

ಭಾರತೀಯ ರೈಲ್ವೆಯು ಹಲವಾರು ಸುಧಾರಣಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಡಿಜಿಟಲ್‌ ಪಾವತಿ ವಿಚಾರದಲ್ಲೂ ಸಾಕಷ್ಟು ಬದಲಾವಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತೀಕರಣಗೊಳ್ಳಲಿದೆ. ಇದರಿಂದ ಪ್ರಯಾಣಿಕಗಿರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳ ವಿವರಣೆ.

ನಾವು ಮೊದಲೆಲ್ಲಾ ರೈಲ್ವೆ ಮುಂಗಡ ಬುಕ್ಕಿಂಗ್‌ಗೆ ಹೋದರೆ ನಗದು ಪಾವತಿಸಲೇಬೇಕಾಗಿತ್ತು. ಬೇರಾವ ವ್ಯವಸ್ಥೆಯೂ ರೈಲ್ವೆ ಸಿಬ್ಬಂದಿ ಬಳಿ ಇರಲಿಲ್ಲ. ಆನಂತರ ಮೊದಲೇ ತಿಳಿಸಿ ಎಟಿಎಂ ಕಾರ್ಡ್‌ ಮೂಲಕ ಪಾವತಿಸುವ ಸೇವೆ ಇದ್ದರೂ ಅದು ಎಲ್ಲ ಕಡೆ ಇರಲಿಲ್ಲ. ಇದರಿಂದ ಆನ್‌ಲೈನ್‌ ಪಾವತಿ ವ್ಯವಸ್ಥೆಗೆ ಒತ್ತಾಯಿಸುತ್ತಲೇ ಇದ್ದೆವು. ಈಗ ಕ್ಯೂಆರ್‌ ಕೋಡ್‌ ಆಧರಿತ ಸೇವೆ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಪ್ರಯಾಣಕರು ಹೇಳುತ್ತಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.