IndiGo: ದೆಹಲಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನಕ್ಕೆ ಸಣ್ಣ ಅಪಘಾತ; ಸಿಬ್ಬಂದಿ, ಪ್ರಯಾಣಿಕರು ಸುರಕ್ಷಿತ
ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನಕ್ಕೆ ಸಣ್ಣ ಅಪಘಾತವಾಗಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ದೆಹಲಿ: ಲ್ಯಾಂಡಿಂಗ್ ವೇಳೆ ಇಂಡಿಗೋ (IndiGo) ಸಂಸ್ಥೆಗೆ ಸೇರಿದ ವಿಮಾನವೊಂದರಲ್ಲಿ ಸಣ್ಣ ಅಪಘಾತಕ್ಕೀಡಾಗಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ನಡೆದಿದೆ. ಅಪಘಾತದಲ್ಲಿ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದ್ದು, ಇಂಡಿಗೋ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಲ್ಯಾಂಡಿಂಗ್ ವೇಳೆ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನವೊಂದರಲ್ಲಿ ಸಣ್ಣ ಅಪಘಾತಕ್ಕೀಡಾಗಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಪಘಾತದಲ್ಲಿ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದ್ದು, ಇಂಡಿಗೋ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ವಿಮಾನದ ಹಿಂಭಾಗದಲ್ಲಿನ ಬಾಲ ನೆಲಕ್ಕೆ ಬಡಿದು (Tail Strike) ಹಾನಿಯಾಗಿದೆ. ಘಟನೆಯಿಂದ ಪ್ರಯಾಣಿಕರು ಕೆಲಕಾಲದ ಆತಂಕಗೊಂಡಿದ್ದರು. ಆದರೆ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಘಟನೆ ಬಗ್ಗೆ ಆಂತರಿಕ ತನಿಖೆಗೆ ಡಿಜಿಸಿಎಂ ಆದೇಶಿಸಿದೆ.
ಅಪಘಾತದಲ್ಲಿ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದ್ದು, ಘಟನೆ ಬಳಿಕ ವಿಮಾನವನ್ನು ಪ್ರಯಾಣಿಕರ ಸೇವೆಗಳಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ತನಿಖೆ ಪೂರ್ಣಗೊಳ್ಳುವವರಿಗೆ ವಿಮಾನ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಯನ್ನೂ ತಾತ್ಕಾಲಿಕವಾಗಿ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಏನಿದು ಟೇಲ್ ಸ್ಟ್ರೈಕ್
ವಿಮಾನದ ಬಾಲವು ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಮಾಡುವ ವೇಳೆ ರನ್‌ಗೆ ಬಡಿದಾಗ ಅದನ್ನು ಟೇಲ್ ಸ್ಟ್ರೈಕ್ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಂಡಿಗೋ ವಿಮಾನವೊಂದು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಟೇಲ್ ಸ್ಟ್ರೈಕ್ ಅನುಭವಿಸಿತ್ತು.
ವಿಭಾಗ