Kannada News  /  Nation And-world  /  Delhi News Pm Narendra Modi 5 Years Birthday Activity This Year Will Be In Dwarka Many Programs Bjp Nation News In Kub

Modi birthday: ಮೋದಿ ಜನುಮ ದಿನದ ಐದು ವರ್ಷದ ಚಟುವಟಿಕೆ ಹೀಗಿತ್ತು: ಈ ವರ್ಷ, ಎಲ್ಲಿ ಹೇಗಿದೆ ಮೋದಿ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ತಮ್ಮ ಜನುಮ ದಿನಕ್ಕೆ ತಾಯಿ ಆಶಿರ್ವಾಡ ಪಡೆಯುವುದು ಈ ಬಾರಿ ಇರೋಲ್ಲ. ಆದರೆ ಇತರೆ ಚಟುವಟಿಕೆ ಅವರ ಜನುಮ ದಿನದ ಚಟುವಟಿಕೆಯ ಭಾಗವಾಗಿ ಇರಲಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಜನುಮ ದಿನಕ್ಕೆ ತಾಯಿ ಆಶಿರ್ವಾಡ ಪಡೆಯುವುದು ಈ ಬಾರಿ ಇರೋಲ್ಲ. ಆದರೆ ಇತರೆ ಚಟುವಟಿಕೆ ಅವರ ಜನುಮ ದಿನದ ಚಟುವಟಿಕೆಯ ಭಾಗವಾಗಿ ಇರಲಿದೆ.

PM Modi birthday ಪ್ರಧಾನಿ ನರೇಂದ್ರ ಮೋದಿ( Narendra Modi) ಜನುಮ ದಿನ ಪ್ರತಿ ವರ್ಷ ಆಚರಿಸಿಕೊಳ್ಳುತ್ತಾರೆ. ಅವರ ತಾಯಿ ಹೀರಾ ಬೆನ್‌ ಆಶಿರ್ವಾದ ಪಡೆಯುವುದು ಪ್ರತಿ ವರ್ಷ ಇರುತ್ತಿತ್ತು. ತಾಯಿ ನಿಧನರಾಗಿದ್ದರಿಂದ ಈ ಬಾರಿ ಅದು ಇರೋದಿಲ್ಲ. ಭಾನುವಾರ ಅವರು ಜನುಮ ದಿನದ ನಡುವೆ ದ್ವಾರಕಾದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅದರ ವಿವರ ಇಲ್ಲಿದೆ.

ನವದೆಹಲಿ: ಪ್ರಮುಖ ಜಾಗತಿಕ ನಾಯಕರಾಗಿ ಹೊರ ಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನುಮ ದಿನ ಇಂದು. ಭಾನುವಾರದಂದು 73 ವರ್ಷ ಪೂರೈಸಿರಲಿರುವ ನರೇಂದ್ರ ಮೋದಿ ಪ್ರತಿ ವರ್ಷ ತಮ್ಮ ಜನುಮ ದಿನವನ್ನು ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾಗಿ ಆಚರಿಸುತ್ತಾರೆ. ವರ್ಷವೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಬಿಜೆಪಿ ಕೂಡ ತಮ್ಮ ಪಕ್ಷದ ಹಿರಿಯ ನಾಯಕನ ಜನುಮ ದಿನಕ್ಕೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಾರಿಯೂ ಮೋದಿ ಅವರು ತಮ್ಮ ಜನುಮ ದಿನದಂದು ದೆಹಲಿಯಲ್ಲಿಯೇ ಇರಲಿದ್ದಾರೆ. ಬಿಜೆಪಿ ಕೂಡ ಹಲವು ಚಟುವಟಿಕೆಗಳನ್ನು ವಿವಿಧ ರಾಜ್ಯಗಳಲ್ಲಿ ಆಯೋಜಿಸಿದೆ.

ಈ ಬಾರಿ ತಮ್ಮ ಜನುಮದ ದಿನದಂದು ದ್ವಾರಕಾದಲ್ಲಿ ಇರಲಿದ್ದಾರೆ. ದೆಹಲಿ ಸಮೀಪದ ದ್ವಾರಕಾದಲ್ಲಿ ನಿರ್ಮಿಸಿರುವ ಯಶೋಭೂಮಿ ಕನ್ವೆನ್ಷನ್‌ ಸೆಂಟರ್‌ ಅನ್ನುಲೋಕಾರ್ಪಣೆ ಮಾಡುವರು. 73 ಸಾವಿರ ಚದರಿ ಅಡಿ ಪ್ರದೇಶದಲ್ಲೊ ನಿರ್ಮಿಸಿರುವ ಅಂತರಾಷ್ಟ್ರೀಯ ದರ್ಜೆಯ ಈ ವಿಶಾಲ ಸೆಂಟರ್‌ ನಲ್ಲಿ ಮುಖ್ಯ ಆಡಿಟೋರಿಯಂ ಇದೆ. ಹದಿನೈದು ಸಮಾವೇಶ ಕೊಠಡಿಗಳು ಇವೆ. ಹದಿಮೂರು ಸಭಾ ಕೊಠಡಿಗಳು ಇವೆ. ಒಟ್ಟು ಹನ್ನೊಂದು ಸಾವಿರ ಮಂದಿ ಸೇರಬಲ್ಲ ವಿಶಾಲ ಸೆಂಟರ್‌ ಇದಾಗಿದೆ. 5,400 ಕೋಟಿ ರೂ. ವೆಚ್ಚದ ಭವನವಿದು. ಇದರೊಟ್ಟಿಗೆ ದೆಹಲಿ ವಿಮಾನ ನಿಲ್ದಾಣದಿಂದ ದ್ವಾರಕಾಕ್ಕೆ ಹೊಸ ಮೆಟ್ರೋ ರೈಲು ನಿಲ್ದಾಣವನ್ನು ಉದ್ಘಾಟಿಸವರು.

ಹಿಂದಿನ ವರ್ಷಗಳಲ್ಲಿ..

2022ರಲ್ಲಿ ಮಧ್ಯಪ್ರದೇಶದ ಕುನ್ಹೋದಲ್ಲಿ ಎಂಟು ಚೀತಾಗಳನ್ನು ಭಾರತದ ನೆಲಕ್ಕೆ ಬಿಡುವ ಮೂಲಕ ತಮ್ಮ ಜನುಮ ದಿನ ಆಚರಿಸಿಕೊಂಡಿದ್ದರು. ಚೀತಾ ಪುನರುತ್ಥಾನ ಯೋಜನೆಯೂ ಇದಾಗಿತ್ತು. ಖುದ್ದು ಚೀತಾಗಳನ್ನು ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಅವರು ಬಿಡುಗಡೆ ಮಾಡಿದ್ದರು.

2021ರಲ್ಲಿ ಕೋವಿಡ್‌ ಲಸಿಕೆಯನ್ನು ನೀಡುವ ಮೂಲಕ ಜನುಮ ದಿನದ ಖುಷಿ ಹಂಚಿಕೊಂಡಿದ್ದರು. ಅಂದು ನಡೆದ್ದಿದ್ದ ವಿಶೇಷ ಅಭಿಯಾನದಲ್ಲಿ 2.26 ಕೋಟಿ ಮಂದಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿತ್ತು. ಇದರೊಟ್ಟಿಗೆ ಮೋದಿ ಅವರಿಗೆ ಬಂದಿರುವ ವಿಶೇಷ ಉಡುಗೊರೆಗಳ ಇ ಹರಾಜು ಕೂಡ ನಡೆದಿತ್ತು.

2020ರಲ್ಲಿ ಕೋವಿಡ್‌ ತೀವ್ರ ಪ್ರಮಾಣದಲ್ಲಿ ಇದ್ದುದರಿಂದ ಮೋದಿ ಜನುಮದಿನ ಸಡಗರ ಅಷ್ಟಾಗಿ ಇರಲಿಲ್ಲ. ಆದರೂ ಬಿಜೆಪಿ ಕೆಲವು ಕಡೆ ಸೇವಾ ಚಟುವಟಿಕೆಗಳನ್ನು ಆಯೋಜಿಸಿತ್ತು. ಸೇವಾ ಸಪ್ತಾಹಗಳೊಂದಿಗೆ ತನ್ನ ನೆಚ್ಚಿನ ನಾಯಕನ ಜನುಮ ದಿನ ಆಚರಿಸಿತ್ತು. ಕೆಲವು ಕಡೆ ರಕ್ತದಾನ ಶಿಬಿರ, ಆಹಾರ ಕಿಟ್‌ಗಳ ವಿತರಣೆಯೂ ನಡೆದಿತ್ತು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಲಾರ್ಡ್‌ ಆಫ್‌ ರೆಕಾರ್ಡ್ಸ್‌ ಎನ್ನುವ ಪುಸ್ತಕ ಪ್ರಕಟಿಸಿದ್ದರು. ಮೋದಿ ಸರ್ಕಾರದ 243 ಕ್ರಾಂತಿಕಾರಿಕ ಹೆಜ್ಜೆಗಳು ಎನ್ನುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು.

2019ರಲ್ಲಿ ತಮ್ಮ ತಾಯಿ ಹೀರಾಬೆನ್‌ ಅವರ ಆಶಿರ್ವಾದವನ್ನು ಮೋದಿ ಪಡೆದಿದ್ದರು. ಆನಂತರ ಗುಜರಾತ್‌ನಲ್ಲಿ ನಡೆದಿದ್ದ ನಮಾಮಿ ನರ್ಮದ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆನಂತರ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತೆಯ ಪ್ರತಿಮೆ ಎದುರು ಸಾರ್ವಜನಿಕ ಸಭೆಯನ್ನುದ್ದೇಶಿ ಮೋದಿ ಮಾತನಾಡಿದ್ದರು.

2018ರಲ್ಲಿ ತಮ್ಮ 68ನೇ ಜನುಮ ದಿನವನ್ನು ತಾವು ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಆಚರಿಸಿಕೊಂಡಿದ್ದರು. ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಕಾಶಿ ವಿದ್ಯಾಪೀಠದ ರೋಹನಿಯ ನರೌರ್‌ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದಿದ್ದರು.

ಕಾಡಲಿದೆ ತಾಯಿ ಅನುಪಸ್ಥಿತಿ

ಪ್ರತಿ ವರ್ಷ ಗುಜರಾತ್‌ಗೆ ತೆರಳಿ ತಮ್ಮ ತಾಯಿ ಹೀರಾಬೆನ್‌ ಅವರ ಆಶೀರ್ವಾದವನ್ನು ಪಡೆಯುತ್ತಿದ್ದರು ಮೋದಿ. ತಾಯಿಯೊಂದಿಗೆ ಕೆಲಹೊತ್ತು ಕಳೆದು ತಾಯಿಯ ಕೈತುತ್ತು ಸೇವಿಸಿ ಬರುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹೀರಾಬೆನ್‌ ಅವರು ತೀರಿಕೊಂಡರು. ಈ ಬಾರಿ ಜನುಮ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ತಾಯಿಯ ಅನುಪಸ್ಥಿತಿ ಕಾಡಲಿದೆ.

ಬಿಜೆಪಿಯಿಂದ ಚಟುವಟಿಕೆ

ಭಾರತೀಯ ಜನತಾಪಕ್ಷವು ಮೋದಿ ಅವರ ಜನುಮ ದಿನವನ್ನು ದೇಶದ್ಯಾಂತ ಆಚರಿಸಲಿದೆ. ಪಕ್ಷದ ಕಚೇರಿಯಲ್ಲಿ ಮಾತ್ರವಲ್ಲವೇ ವಿವಿಧೆಡೆ ಸೇವಾ ಚಟುವಟಿಕೆಗಳ ಮೂಲಕ ಆಚರಿಸಲಿದೆ.

ತ್ರಿಪುರಾ ಬಿಜೆಪಿ ಘಟಕವು ಮೋದಿ ಜನುಮ ದಿನವನ್ನು ನಮೋ ವಿಕಾಸ ಉತ್ಸವ ಎನ್ನುವ ಹೆಸರಿನ ಕಾರ್ಯಕ್ರಮ ರೂಪಿಸಿದೆ. ತ್ರಿಪುರಾದ ಅಗರ್ತಲಾ ಕುಮಾರಘಾಟ್‌ ಲೋಕೋಪಯೋಗಿ ಇಲಾಖೆ ಮೈದಾನದಲ್ಲಿ ಯೋಗ ಚಟುವಟಿಕೆಯನ್ನು ಆಯೋಜಿಸಲಾಗಿದ್ದು, ಸಿಎಂ ಮಾಣಿಕ್‌ ಸಾಹಾ ಹಾಗೂ ಸಚಿವರು ಪಾಲ್ಗೊಳ್ಳುವರು. ಭಗವದ್ಗೀತೆ ಪುಸ್ತಕವನ್ನು 73 ಜನರಿಗೆ ವಿತರಿಸಲಾಗುತ್ತಿದೆ. 73 ಮಂದಿ ವಿಕಲಚೇತನ ಮಕ್ಕಳಿಗೆ ಸೌಲಭ್ಯಗಳನ್ನು ಪ್ರಧಾನಿ ಜನುಮ ದಿನದ ಹಿನ್ನೆಲೆಯಲ್ಲಿ ವಿತರಿಸಲಾಗುತ್ತಿದೆ. ತೀವ್ರ ಅಗತ್ಯ ಇರುವ 73 ಕುಟುಂಬಗಳಿಗೆ ಆಹಾರ ವಸ್ತುಗಳನ್ನು ವಿತರಿಸಲಾಗುತ್ತಿದೆ.

ಗುಜರಾತ್‌ ಬಿಜೆಪಿ ಘಟಕವು ಸೆ.17 ರಂದು ಹಲವು ಕಾರ್ಯಕ್ರಮ ರೂಪಿಸಿದೆ. ಮೂವತ್ತು ಸಾವಿರ ಮಕ್ಕಳಿಗೆ ಬ್ಯಾಂಕ್‌ ಖಾತೆಯನ್ನು ತೆರೆಯುವ ಮೂಲಕ ಮೋದಿ ಅವರ ಜನುಮ ದಿನ ಆಚರಿಸಲಾಗುತ್ತದೆ. ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿಈ ಕಾರ್ಯಕ್ರಮ ನಿಗದಿಯಾಗಿದೆ ಎಂದು ಬಿಜೆಪಿ ಗುಜರಾತ್‌ ಘಟಕದ ಅಧ್ಯಕ್ಷ ಸಿ.ಆರ್‌.ಪಟೇಲ್‌ ಹೇಳಿದ್ದಾರೆ. ಇದರೊಟ್ಟಿಗೆ ಗುಜರಾತ್‌ ಬಿಜೆಪಿ ಯುವಮೋರ್ಚಾ ಎಲ್ಲಾ ಜಿಲ್ಲೆಗಳಲ್ಲೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿರಿ

ವಿಭಾಗ