Modi birthday: ದೆಹಲಿ ಮೆಟ್ರೋ ಏರಿದ ಮೋದಿ: ಜನುಮ ದಿನ ಶುಭಾಶಯ ಕೋರಿದ ಪಯಣಿಗರು
modi in Delhi metro ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಜನುಮ ದಿನದಂದು ದೆಹಲಿ ಮೆಟ್ರೋ ಏರಿದರು. ಸಾಮಾನ್ಯ ಪ್ರಯಾಣಿಕರಂತೆ ಹೊರಟ ಮೋದಿ ಅವರಿಗೆ ಶುಭಾಶಯಗಳ ಸುರಿಮಳೆ. ಕೆಲವರು ಹಾಡಿನ ಶುಭಾಶಯಗಳನ್ನು ಕೋರಿದರು. ಮೋದಿ ಬಾಲಕನಿಗೆ ಚಾಕೋಲೆಟ್ ಕೊಟ್ಟು ಖುಷಿಪಡಿಸಿದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಭದಲ್ಲಿ ಜನರೊಂದಿಗೆ ಬೆರೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಭಾನುವಾರ ಅವರ ಜನುಮ ದಿನ ಬೇರೆ, ದೆಹಲಿ ಮೆಟ್ರೋದಲ್ಲಿ ಪಯಣ ಮಾಡಿದ ಮೋದಿ ಪ್ರಯಾಣಿಕೊಂದಿಗೆ ಕಳೆದರು. ಅವರ ಶುಭಾಶಯಗಳನ್ನು ಸ್ವೀಕರಿಸಿದರು.
ಟ್ರೆಂಡಿಂಗ್ ಸುದ್ದಿ
ಸೆಲ್ಫಿಗೂ ನಗು ಮುಖ ತೋರಿದರು. ಕೆಲವರು ಅನಿರೀಕ್ಷಿತವಾಗಿ ನೀಡಿದ ಹಾಡಿನ ಉಡುಗೊರೆಯನ್ನು ನಗುಮೊಗದಲ್ಲಿಯೇ ಸ್ವೀಕರಿಸಿದರು. ಇನ್ನು ಕೆಲವರು ಗುಂಪು ಗುಂಪಾಗಿ ಬಂದು ಹಾಡಿನ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದಾಗ ಮೋದಿ ಖುಷಿಗೊಂಡರು.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಹ ಪಯಣಿಗರಂತೆಯೇ ಮೆಟ್ರೋದಲ್ಲಿ ಪಯಣಿಸಿ ಕೆಲ ಹೊತ್ತು ಕಳೆದರು. ಎರಡೂವರೆ ತಿಂಗಳ ಹಿಂದೆ ಇದೇ ರೀತಿ ದೆಹಲಿಯಲ್ಲಿ ಮೆಟ್ರೋ ಪಯಣವನ್ನು ಮೋದಿ ಬೆಳೆಸಿದ್ದರು.
ದೆಹಲಿಯಲ್ಲಿ ಮೆಟ್ರೋ ವಿಸ್ತರಣೆಯ ಉದ್ಘಾಟನೆ ಸಮಾರಂಭವಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ದ್ವಾರಕಾಗೆ ವಿಸ್ತರಣೆಯಾಗಿರುವ ಮೆಟ್ರೋ ರೈಲು ಸೇವೆಯನ್ನು ಮೋದಿ ಲೋಕಾರ್ಪಣೆ ಮಾಡುವವರಿದ್ದರು. ಇದಕ್ಕಾಗಿ ಬಂದವರು ಮೆಟ್ರೋ ರೈಲು ಏರಿಯೇ ಬಿಟ್ಟರು. ರಜೆ ದಿನದಂದು ಮೆಟ್ರೋಗೆ ಬಂದವರಿಗೆ ಆಶ್ಚರ್ಯ. ಅವರು ಪ್ರಧಾನಿಯನ್ನು ಹತ್ತಿರದಲ್ಲೇ ಕಂಡು ಖುಷಿಯಾದರು. ಕೆಲವರ ಖುಷಿಗೆ ಪಾರವೇ ಇರಲಿಲ್ಲ. ಮೋದಿ ಅವರೊಂದಿಗೆ ಫೋಟೋ ತೆಗೆದುಕೊಂಡರು. ಕೆಲವರಂತೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಗೊಂಡರು.
ಖುಷಿ ಮೂಡ್ ನಲ್ಲಿ ಮೋದಿ
ಇಂದು ಮೋದಿ ಅವರ ಜನುಮ ದಿನ ಬೇರೆ. ಖುಷಿಯ ಮೂಡ್‌ನಲ್ಲಿ ಇದ್ದಂತೆ ಕಂಡು ಬಂದ ಮೋದಿ ಮೆಟ್ರೋದಲ್ಲಿದ್ದ ಹಲವರಿಂದ ಶುಭಾಶಯಗಳನ್ನು ಸ್ವೀಕರಿಸಿದರು. ಬಹುತೇಕರು ಹತ್ತಿರ ಬಂದು ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಲು ಮರೆಯಲಿಲ್ಲ.
ಯುವತಿಯೊಬ್ಬಳು ಜನುಮ ದಿನಕ್ಕೆ ಮೋದಿ ಅವರಿಗೆ ವಿಶೇಷ ಉಡುಗೊರೆ ಎಂದು ಹಾಡೊಂದನ್ನು ಹಾಡಿದರು. ನೀವು ಶತಾಯುಷಿಯಾಗಿ ಎಂದು ಆಕೆ ಹಾಡಿದ ಹಾಡನ್ನು ಆಲಿಸಿದರು ಮೋದಿ.
ಇದಲ್ಲದೇ ಹತ್ತಕ್ಕೂ ಹೆಚ್ಚು ಪಯಣಿಕರು ಜನುಮ ದಿನದ ಶುಭಾಶಯಗಳು ಎಂದು ರಾಗವಾಗಿ ಹಾಡುತ್ತಾ ಬಂದು ಖುಷಿಗೊಂಡರು.
ಚಾಕೋಲೇಟ್ ಪಡೆದ ಬಾಲಕ
ಅಮ್ಮನೊಂದಿಗೆ ಬಂದ ಬಾಲಕನೂ ಮೋದಿ ಅವರಿಗೆ ಶುಭಾಶಯ ಕೋರಿದ. ಆತನೊಂದಿಗೆ ಆತ್ಮೀಯವಾಗಿಯೇ ಮಾತನಾಡಿದ ಮೋದಿ ಅವರು ಬಾಲಕಿಗೆ ನೀಡಿದ್ದ ಚಾಕೋಲೇಟ್. ಅದನ್ನು ಸ್ವೀಕರಿಸಿದ ಬಾಲಕನಿಗೂ ಖುಷಿಯೋ ಖುಷಿ. ಅದನ್ನು ಕಂಡ ಬಾಲಕನ ತಾಯಿ ಹಾಗೂ ಸಹೋದರಿಗೂ ಆದ ಸಂತಸ ಹೇಳತೀರದು.
ರೈಲಿನಲ್ಲಿ ಕೆಲ ಹೊತ್ತು ಇದ್ದ ಮೋದಿ ಅವರು ಸಹ ಪಯಣಿಗರೊಂದಿಗೆ ಸಂವಾದವನ್ನೂ ನಡೆಸಿದರು. ಕೆಲವರು ಮೆಟ್ರೋ ರೈಲು ಸುಧಾರಣೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು.
ಮೆಟ್ರೋ ಸಿಬ್ಬಂದಿ ಜತೆ
ಇದೇ ವೇಳೆ ಮೋದಿ ಅವರು ದಿಲ್ಲಿ ಮೆಟ್ರೋ ರೈಲ್ ಕಾರ್ಪೋರೇಷನ್‌ನ ಸಿಬ್ಬಂದಿಯಿಂದಲೂ ಶುಭಾಶಯ ಸ್ವೀಕರಿಸಿದರು. ಅವರೊಂದಿಗೂ ಕೆಲ ಕ್ಷಣ ಮಾತುಕತೆ ನಡೆಸಿದರು.
ದೆಹಲಿ ಮೆಟ್ರೋ ವಿಸ್ತರಣೆ( Delhi Metro)
ಈಗಾಗಲೇ ಹಲವು ಮಾರ್ಗಗಳಲ್ಲಿ ಇರುವ ದೆಹಲಿ ಮೆಟ್ರೋ ಈಗ ದ್ವಾರಕಾ ಕಡೆಯೂ ವಿಸ್ತರಣೆಗೊಂಡಿದೆ. ಅತಿ ವೇಗದ ಮೆಟ್ರೋ ರೈಲು ಮಾರ್ಗವನ್ನು ದ್ವಾರಕಾ ವಲಯ 21ರಿಂದ ಯಶೋಭೂಮಿ ದ್ವಾರಕಾ ವಲಯ 25ರವರೆಗೂ ವಿಸ್ತರಿಸಲಾಗಿದೆ. ಸುಮಾರು ಎರಡು ಕಿ.ಮಿ. ಉದ್ದದ ಮಾರ್ಗವಿದು. ದ್ವಾರಕಾದಲ್ಲಿ ಅಂತರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಆರಂಭಿಸಲಾಗಿದೆ. ಈ ಕೇಂದ್ರವನ್ನು ಹೊಸ ನಿಲ್ದಾಣ ಸಂಪರ್ಕಿಸಲಿದೆ.
ಸದ್ಯ ದೆಹಲಿ ಮೆಟ್ರೋದಡಿ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್‌ನ ಮಾರ್ಗವು ದೆಹಲಿಯಿಂದ ಯಶೋಭೂಮಿ ದ್ವಾರಕಾ ವಲಯ 25ರವರೆಗೆ 24.9 ಕಿ.ಮಿ ಆಗಲಿದೆ. ಹೊಸ ಮಾರ್ಗ ಸೇರ್ಪಡೆಯೂ ಇದರಲ್ಲಿ ಸೇರಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಯೊಬ್ಬರು ವಿವರಣೆ ನೀಡಿದರು.
ಇದೇ ವೇಳೆ ದೆಹಲಿ ಸಮೀಪದ ದ್ವಾರಕಾದಲ್ಲಿ ನಿರ್ಮಿಸಿರುವ ಯಶೋಭೂಮಿ ಕನ್ವೆನ್ಷನ್ ಸೆಂಟರ್ ( Yasho Bhoomi Convention Center) ಅನ್ನುಲೋಕಾರ್ಪಣೆ ಮಾಡಿದರು. 73 ಸಾವಿರ ಚದರಿ ಅಡಿ ಪ್ರದೇಶದಲ್ಲೊ ನಿರ್ಮಿಸಿರುವ ಅಂತರಾಷ್ಟ್ರೀಯ ದರ್ಜೆಯ ಈ ವಿಶಾಲ ಸೆಂಟರ್ ನಲ್ಲಿ ಮುಖ್ಯ ಆಡಿಟೋರಿಯಂ ಇದೆ. ಹದಿನೈದು ಸಮಾವೇಶ ಕೊಠಡಿಗಳು ಇವೆ. ಹದಿಮೂರು ಸಭಾ ಕೊಠಡಿಗಳು ಇವೆ. ಒಟ್ಟು ಹನ್ನೊಂದು ಸಾವಿರ ಮಂದಿ ಸೇರಬಲ್ಲ ವಿಶಾಲ ಸೆಂಟರ್ ಇದಾಗಿದೆ. 5,400 ಕೋಟಿ ರೂ. ವೆಚ್ಚದ ಭವನವಿದು.
ವಿಭಾಗ