ಕನ್ನಡ ಸುದ್ದಿ  /  Nation And-world  /  Disturbing Details Emerge From Internal Pfi Document -'India Vision 2047'

PFI Vision 2047: RSS ಮತ್ತು SC, ST, OBC ಸಮುದಾಯದ ನಡುವೆ ಒಡಕು ಮೂಡಿಸಲು PFI ಹುನ್ನಾರ

ದೇಶ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವನ್ನು ಆಚರಿಸುತ್ತಿದೆ. ಶತಮಾನೋತ್ಸವ ಆಚರಣೆ ವೇಳೆಗೆ ಭಾರತದಲ್ಲಿ "ಇಸ್ಲಾಮಿಕ್‌ ಸರ್ಕಾರ" ರಚಿಸುವ ಅಜೆಂಡಾ ಪಿಎಫ್‌ಐಯದ್ದು. PFI ಕಚೇರಿಯಲ್ಲಿ ಪೊಲೀಸರಿಗೆ ಸಿಕ್ಕ ಖಾಸಗಿ ಪ್ರಸಾರದ ಪುಸ್ತಕ ʻIndia 2047- Towards rule of Islam in Indiaʼನಲ್ಲಿ ಇವೆಲ್ಲ ದಾಖಲಾಗಿವೆ. ಇನ್ನಷ್ಟು ಮಾಹಿತಿ ಇಲ್ಲಿದೆ.

ಪಿಎಫ್ಐ ಕಚೇರಿಯಿಂದ ಬಿಹಾರ ಪೊಲೀಸರು ವಶಪಡಿಸಿಕೊಂಡ ದಾಖಲೆ
ಪಿಎಫ್ಐ ಕಚೇರಿಯಿಂದ ಬಿಹಾರ ಪೊಲೀಸರು ವಶಪಡಿಸಿಕೊಂಡ ದಾಖಲೆ

ಪಾಟ್ನಾ (ಬಿಹಾರ): ದೇಶಕ್ಕೆ ದೇಶವೇ ಬೆಚ್ಚಿ ಬೀಳಿಸುವ ದಾಖಲೆಯನ್ನು ಬಿಹಾರದ ಪಾಟ್ನಾದಲ್ಲಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಕಚೇರಿಯಿಂದ ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ʻIndia 2047- Towards rule of Islam in Indiaʼ ಎಂಬ ಶೀರ್ಷಿಕೆಯ ಎಂಟು ಪುಟಗಳ ಖಾಸಗಿ ಪ್ರಸಾರದ ಪುಸ್ತಕದಲ್ಲಿ ಪಿಎಫ್ಐ ಸಂಘಟನೆಯ ಅಜೆಂಡಾ ಬಹಿರಂಗವಾಗಿದೆ.

ಮುಂದಿನ 25 ವರ್ಷದಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)d ಕುತಂತ್ರ ಬಹಿರಂಗವಾಗಿದೆ. ಬಿಹಾರ ಪೊಲೀಸರ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಪಾಟ್ಬಾದ ಪಿಎಫ್‌ಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಲವು ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ. ಇದರಲ್ಲಿ 'ಭಾರತ 2047- ಭಾರತದಲ್ಲಿ ಇಸ್ಲಾಂ ಆಡಳಿತದ ಕಡೆಗೆ' ಎಂಬ ಈ ಎಂಟು ಪುಟಗಳ ದಾಖಲೆಯಲ್ಲಿ ಸಾರ್ವಜನಿಕ ಪ್ರಸಾರಕ್ಕೆ ಇರುವುದಲ್ಲ ಎಂದು ಉಲ್ಲೇಖವಿದೆ.

ಒಟ್ಟು ಮುಸ್ಲಿಂ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ತನ್ನ (ಪಿಎಫ್​ಐ) ಹಿಂದೆ ಒಗ್ಗೂಡಿದರೂ ಸಾಕು ಭಾರತದಲ್ಲಿ ಇಸ್ಲಾಂನ ವೈಭವವನ್ನು ಮರಳಿ ತರಬಹುದು ಎಂಬ ವಿಶ್ವಾಸವನ್ನು ಈ ದಾಖಲೆಯಲ್ಲಿ ಪಿಎಫ್​ಐ ವ್ಯಕ್ತಪಡಿಸಿದೆ. ಈ ಗುರಿಯನ್ನು ಸಾಧಿಸಲು ರೋಡ್​ಮ್ಯಾಪ್​ ಅನ್ನು ಪಿಎಫ್​ಐ ಸಿದ್ಧಪಡಿಸಿದ್ದು, ಈ ಬಗ್ಗೆ ಪಿಎಫ್​ಐ ಕಾರ್ಯಕರ್ತರಿಗೆ ಹಾಗೂ ಮುಸ್ಲಿಂ ಸಮುದಾಯದ ಜನರಿಗೆ ಮಾರ್ಗದರ್ಶನ ನೀಡುವಂತೆ ಎಲ್ಲಾ ಪಿಎಫ್​ಐ ನಾಯಕರಿಗೆ ಸೂಚಿಸಲಾಗಿದೆ.

ಪಿಎಫ್​ಐ ಸೇರಿದಂತೆ ಎಲ್ಲಾ ಮುಂಚೂಣಿ ಮುಸ್ಲಿಂ ಸಂಸ್ಥೆಗಳು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುವತ್ತ ಗಮನಹರಿಸಬೇಕು. ನೇಮಕರಾದವರಿಗೆ ದಾಳಿ ಮತ್ತು ರಕ್ಷಣಾತ್ಮಕ ತಂತ್ರಗಳು, ಕತ್ತಿಗಳು, ರಾಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳ ಬಳಕೆಗಳ ಬಗ್ಗೆ ತರಬೇತಿ ನೀಡಬೇಕು ಎಂಬುದು ಡಾಕ್ಯುಮೆಂಟ್​ನಲ್ಲಿದೆ.

ಆರ್​ಎಸ್​ಎಸ್​ ಹಾಗೂ ಹಿಂದುಳಿದ ವರ್ಗದ ನಡುವೆ ಒಡಕು ಸೃಷ್ಟಿಸಲು ಪ್ಲಾನ್​

ಪೋಲೀಸ್ ಮತ್ತು ಸೇನೆ ಸೇರಿದಂತೆ ಸರ್ಕಾರಿ ಇಲಾಖೆಗಳಿಗೆ ಮುಸ್ಲಿಮರನ್ನು ನೇಮಕವಾಗುವಂತೆ ಮಾಡುವುದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ವಿರುದ್ಧ ಮಾಹಿತಿ ಸಂಗ್ರಹಣೆ, ಮೇಲ್ಜಾತಿ ಹಿಂದೂಗಳ ಕಲ್ಯಾಣದಲ್ಲಿ ಮಾತ್ರ ಆರ್​ಎಸ್​ಎಸ್​ ಆಸಕ್ತಿ ಹೊಂದಿದೆ ಎಂದು ಬಿಂಬಿಸುವ ಮೂಲಕ ಆರ್‌ಎಸ್‌ಎಸ್ ಮತ್ತು ಎಸ್‌ಸಿ / ಎಸ್‌ಟಿ / ಒಬಿಸಿಗಳ ನಡುವೆ ಒಡಕು ಸೃಷ್ಟಿಸಲು ಪಿಎಫ್​ಐ ಯೋಜಿಸಿರುವುದು ಈ ಡಾಕ್ಯುಮೆಂಟ್​ನಲ್ಲಿದೆ.

ತನ್ನ ಹಿತಾಸಕ್ತಿಗೆ ವಿರುದ್ಧವಾದವರನ್ನು ನಿರ್ಮೂಲನೆ ಮಾಡಲಾಗುವುದು ಎಂದು ಪಿಎಫ್​ಐ ಹೇಳಿದೆ. ಇದಕ್ಕಾಗಿ ಇಸ್ಲಾಮಿಕ್ ಮಿತ್ರ ರಾಷ್ಟ್ರಗಳಿಂದ ಸಹಾಯ ಬೇಕು. ಕಳೆದ ಕೆಲವು ವರ್ಷಗಳಲ್ಲಿ ಟರ್ಕಿ ಜೊತೆ ಪಿಎಫ್‌ಐ ಸೌಹಾರ್ದ ಸಂಬಂಧವನ್ನು ಅಭಿವೃದ್ಧಿಪಡಿಸಿದೆ. ಇತರ ಇಸ್ಲಾಮಿಕ್ ದೇಶಗಳಲ್ಲಿ ವಿಶ್ವಾಸಾರ್ಹ ಸ್ನೇಹವನ್ನು ಬೆಳೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಾಕ್ಯುಮೆಂಟ್​ನಲ್ಲಿ ಉಲ್ಲೇಖವಾಗಿದೆ.

ಮೂವರ ಬಂಧನ

ಗುಪ್ತಚರ ಸಂಸ್ಥೆಗಳ ಖಚಿತ ಮಾಹಿತಿಯ ಆಧಾರದ ಮೇಲೆ ಜುಲೈ 11 ರಂದು ಪಾಟ್ನಾದ ಫುಲ್ವಾರಿ ಶರೀಫ್ ಪ್ರದೇಶದ ನಯಾ ತೋಲಾದಲ್ಲಿರುವ ಪಿಎಫ್‌ಐ ಕಚೇರಿ ಮೇಲೆ ದಾಳಿ ನಡೆಸಿ, ಶೋಧ ನಡೆಸಲಾಗಿತ್ತು. ಜುಲೈ 13 ರಂದೂ ದಾಳಿ ನಡೆಸಲಾಗಿದ್ದು, ಈ ದಾಳಿಯ ಬಳಿಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಇಬ್ಬರು ಆರೋಪಿಗಳನ್ನು ಫುಲ್ವಾರಿ ಷರೀಫ್ ಪ್ರದೇಶದಿಂದ ಬಂಧಿಸಲಾಯಿತು. ಇಂದು (ಗುರುವಾರ) ಮೂರನೇ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತರದಲ್ಲಿ ಓರ್ವ ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾನೆ. ಈತನ ಹೆಸರು ಮೊಹಮ್ಮದ್ ಜಲಾವುದ್ದೀನ್. ಮತ್ತೋರ್ವನನ್ನು ನಿಷೇಧಿತ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಮಾಜಿ ಸದಸ್ಯ ಮತ್ತು ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪ್ರಸ್ತುತ ಸದಸ್ಯ ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ.

ಈ ಆರೋಪಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇತರ ರಾಜ್ಯಗಳಿಂದ ಬರುವ ಜನರನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಬರುವವರು ಟಿಕೆಟ್ ಕಾಯ್ದಿರಿಸುವಾಗ ಮತ್ತು ಹೋಟೆಲ್‌ಗಳಲ್ಲಿ ತಂಗುವಾಗ ತಮ್ಮ ಹೆಸರನ್ನು ಬದಲಾಯಿಸುತ್ತಿದ್ದರು. ಒಟ್ಟು 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಫುಲ್ವಾರಿ ಷರೀಫ್​ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮನೀಶ್​ ಕುಮಾರ್​ ತಿಳಿಸಿದ್ದಾರೆ.

ಇನ್ನು ಆರೋಪಿ ಪರ್ವೇಜ್‌ನ ತನ್ನ 2001-2002ರ ಬಾಂಬ್ ಸ್ಫೋಟದಲ್ಲಿ ಜೈಲು ಸೇರಿದ್ದಾನೆ. ಪರ್ವೇಜ್‌ ಮಾರ್ಷಲ್ ಆರ್ಟ್ಸ್ ಕಲಿಸುವ ನೆಪದಲ್ಲಿ ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಬಳಸಲು ಕಲಿಸುತ್ತಿದ್ದನು. ಧಾರ್ಮಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದನು ಎಂದು ಎಎಸ್ಪಿ ಮಾಹಿತಿ ನೀಡಿದ್ದಾರೆ.

IPL_Entry_Point

ವಿಭಾಗ