Earthquake tsunami: ನ್ಯೂ ಕ್ಯಾಲೆಡೋನಿಯಾದ ಸಮೀಪ 7.7 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
Earthquake tsunami: ನ್ಯೂ ಕ್ಯಾಲೆಡೋನಿಯಾ ಸಮೀಪ ಭೂಕಂಪ ಸಂಭವಿಸಿದೆ. ಇದರ ಪರಿಣಾಮ, ವನುವಾಟುವಿನ ಕೆಲವು ಕರಾವಳಿ ಪ್ರದೇಶಗಳಲ್ಲಿ ಉಬ್ಬರವಿಳಿತದಿಂದ ಒಂದರಿಂದ ಮೂರು ಮೀಟರ್ (ಆರರಿಂದ ಒಂಬತ್ತು ಅಡಿ) ಎತ್ತರದ ಸುನಾಮಿ ಅಲೆಗಳು ಮೇಲೇಳುವ ಸಾಧ್ಯತೆ ಇದೆ ಎಂದು ಹೊನೊಲುಲು ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
ನ್ಯೂ ಕ್ಯಾಲೆಡೋನಿಯಾದ ಆಗ್ನೇಯ ಪೆಸಿಫಿಕ್ ಮಹಾಸಾಗರದಲ್ಲಿ ಶುಕ್ರವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಆ ಪ್ರಾಂತ್ಯದಲ್ಲಿ ಸುನಾಮಿ ಎಚ್ಚರಿಕೆಯನ್ನು ಉಂಟುಮಾಡಿದೆ ಎಂದು ಯುಎಸ್ ಮೇಲ್ವಿಚಾರಣಾ ಸಂಸ್ಥೆಗಳು ತಿಳಿಸಿವೆ.
ನ್ಯೂ ಕ್ಯಾಲೆಡೋನಿಯಾ ಭಾಗದಲ್ಲಿ ಸಂಭವಿಸಿದ ಈ ಭೂಕಂಪವು 37 ಕಿಲೋಮೀಟರ್ (23 ಮೈಲುಗಳು) ಆಳದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಸೇವೆ ತಿಳಿಸಿದೆ.
ವನುವಾಟುವಿನ ಕೆಲವು ಕರಾವಳಿ ಪ್ರದೇಶಗಳಲ್ಲಿ ಉಬ್ಬರವಿಳಿತದಿಂದ ಒಂದರಿಂದ ಮೂರು ಮೀಟರ್ (ಆರರಿಂದ ಒಂಬತ್ತು ಅಡಿ) ಎತ್ತರದ ಸುನಾಮಿ ಅಲೆಗಳು ಮೇಲೇಳುವ ಸಾಧ್ಯತೆ ಇದೆ ಎಂದು ಹೊನೊಲುಲು ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
ನ್ಯೂ ಕ್ಯಾಲೆಡೋನಿಯಾ, ಫಿಜಿ, ಕಿರಿಬಾಟಿ ಮತ್ತು ನ್ಯೂಜಿಲೆಂಡ್‌ನಲ್ಲಿ 0.3-1.0 ಮೀಟರ್‌ಗಳಷ್ಟು ಸಣ್ಣ ಸುನಾಮಿ ಅಲೆಗಳ ಸಂಭವನೀಯತೆಯ ಬಗ್ಗೆಯೂ ಸುನಾಮಿ ಎಚ್ಚರಿಕೆ ಕೇಂದ್ರವು ಎಚ್ಚರಿಸಿದೆ.
ಭೂಕಂಪದಿಂದಾಗಿ ಭೂಮಿ ನಡುಗಿದ ಅನುಭವ ಉಂಟಾಗಿಲ್ಲ. ಎಲ್ಲರೂ ಬೀಚ್‌ಗಳಲ್ಲಿ ಇದ್ದಾರೆ ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಂದಿನಂತೆ ರಜೆಯ ಆನಂದವನ್ನು ಅನುಭವಿಸುತ್ತಿದ್ದಾರೆ ಎಂದು ನ್ಯೂ ಕ್ಯಾಲೆಡೋನಿಯಾ ರಾಜಧಾನಿ ನೌಮಿಯಾದಲ್ಲಿನ ಹೋಟೆಲ್ ರಿಸೆಪ್ಶನಿಸ್ಟ್ ಒಬ್ಬರು ಎಎಫ್‌ಪಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ನ್ಯೂ ಕ್ಯಾಲೆಡೋನಿಯಾ ದ್ವೀಪಸಮೂಹದ ಪೂರ್ವ ಅಂಚಿನಲ್ಲಿರುವ ಐಲ್ ಡೆಸ್ ಪಿನ್ಸ್ ದ್ವೀಪದಲ್ಲಿರುವ ಟ್ರಾವೆಲ್ ಏಜೆಂಟ್ ಅವರು ಕಂಪನದ ಅನುಭವ ಉಂಟಾಗಿಲ್ಲ ಅಥವಾ ಯಾವುದೇ ಸ್ಥಳಾಂತರಿಸುವ ಎಚ್ಚರಿಕೆ ಬಂದಿಲ್ಲ ಎಂದು ಹೇಳಿದರು.