ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು; ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು ಈ ಅಂಶ
Economic Survey 2025: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2024-25 ಅನ್ನು ಇಂದು ಸಂಸತ್‌ನಲ್ಲಿ ಮಂಡಿಸಿದರು. ರೈತರ ವಿಚಾರ ಪ್ರಸ್ತಾಪವಾದಾಗ ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು ಎಂಬ ಈ ಅಂಶ ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು. ಇದರ ವಿವರ ಇಲ್ಲಿದೆ.

Economic Survey 2025: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನ ಮುಂಚಿತವಾಗಿ ಅಂದರೆ ಜನವರಿ 31 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2024-25 ಅನ್ನು ಸಂಸತ್‌ನಲ್ಲಿ ಮಂಡಿಸಿದರು. ಈ ಆರ್ಥಿಕ ಸಮೀಕ್ಷೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿವೆ. ಈ ಪೈಕಿ ಕೃಷಿ ಕ್ಷೇತ್ರ ವಿಶೇಷವಾಗಿ ರೈತರ ವಿಚಾರ ಪ್ರಸ್ತಾಪವಾದಾಗ ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು ಎಂಬ ಈ ಅಂಶ ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು. ಇದು ಪರಿಷ್ಕೃತ ಬಡ್ಡಿ ಸಹಾಯ ಯೋಜನೆಯ (Modified Interest Subvention Scheme- MISS) ಪರಿಣಾಮವನ್ನು ಬಿಂಬಿಸಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಿಂದ ಪರಿಷ್ಕೃತ ಬಡ್ಡಿ ಸಹಾಯ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿಲೆವಾರಿಯಲ್ಲಿ ತ್ವರಿತಗೊಳಿಸುವುದಕ್ಕೆ ಕಿಸಾನ್ ಋಣ ಪೋರ್ಟಲ್ (ಕೆಆರ್‌ಪಿ) ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ 2024ರ ಡಿ 31ರ ವೇಳೆಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಅರ್ಜಿ ವಿಲೇವಾರಿ ಮಾಡಲಾಗಿದೆ. ಪ್ರಸ್ತುತ, ಪರಿಷ್ಕೃತ ಬಡ್ಡಿ ಸಹಾಯ ಯೋಜನೆ-ಫಾರ್ಮರ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಕಿಸಾನ್ ಸಾಲ ಪೋರ್ಟಲ್ ಸಹಾಯದಿಂದ ಸುಮಾರು 5.9 ಕೋಟಿ ರೈತರು ಲಾಭ ಪಡೆಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಏನಿದು ಪರಿಷ್ಕೃತ ಬಡ್ಡಿ ಸಹಾಯ ಯೋಜನೆ
ಪರಿಷ್ಕೃತ ಬಡ್ಡಿ ಸಹಾಯ ಯೋಜನೆಯು ಕೃಷಿಮತ್ತು ಪೂರಕ ಚಟುವಟಿಕೆಗಳಿಗಾಗಿ ರೈತರಿಗೆ ರಿಯಾಯಿತಿ ಬಡ್ಡಿದರದಲ್ಲಿ ಕಿರು -ಅವಧಿಯ ಕೃಷಿ ಸಾಲವನ್ನು ಒದಗಿಸುತ್ತದೆ. ಇದರಲ್ಲಿ, 3 ಲಕ್ಷ ರೂಪಾಯಿವರೆಗಿನ ಸಾಲವನ್ನು ಶೇಕಡಾ 7 ರಷ್ಟು ಬಡ್ಡಿ ಇದೆ. ಅದೇ ಸಮಯದಲ್ಲಿ, ಸಮಯೋಚಿತ ಮರು-ಪಾವತಿಗಾಗಿ ಹೆಚ್ಚುವರಿ 3 ಪ್ರತಿಶತದಷ್ಟು ಅನುದಾನದೊಂದಿಗೆ ಪರಿಣಾಮಕಾರಿ ಬಡ್ಡಿದರವನ್ನು 4 ಪ್ರತಿಶತಕ್ಕೆ ಇಳಿಸಲಾಗುತ್ತದೆ.
ಆರ್ಥಿಕ ಸಮೀಕ್ಷೆಯನ್ನು ಮಂಡಿಸುವಾಗ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ, ವಿಶೇಷವಾಗಿ ಸಣ್ಣ ಮತ್ತು ಕಿರು ರೈತರಿಗೆ ಮತ್ತು ಸಮಾಜದ ಅನನುಕೂಲಕರ ವಿಭಾಗಗಳಿಗೆ ಸಾಲದ ನೆರವು ನೀಡುವ ಮೂಲಕ ಈ ಯೋಜನೆ ರೈತರಿಗೆ ವರದಾನವಾಗಿದೆ. ಈ ಕಾರಣದಿಂದಾಗಿ ಕೃಷಿಕರು ಮತ್ತು ಕೃಷಿಯ ಆದಾಯ ಹೆಚ್ಚಿಸುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಎಷ್ಟು ಕಿಸಾನ್ ಕ್ರೆಡಿಟ್ ಕಾರ್ಡ್
ಆರ್ಥಿಕ ಸಮೀಕ್ಷೆಯ ಪ್ರಕಾರ, 2024ರ ಮಾರ್ಚ್‌ವರೆಗೆ 7.75 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ. ಇದರಲ್ಲಿ 9.81 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾಲವನ್ನೂ ವಿತರಿಸಲಾಗಿದೆ. 2024ರ ಮಾರ್ಚ್ 31 ರ ಪ್ರಕಾರ, 1,24,000 ಕ್ರೆಡಿಟ್ ಕಾರ್ಡ್ ಮೀನುಗಾರರಿಗೆ ವಿತರಣೆಯಾಗಿದೆ. 44,40,000 ಕ್ರೆಡಿಟ್ ಕಾರ್ಡ್ ಪಶುಪಾಲನೆ ಮಾಡುತ್ತಿರುವ ರೈತರಿಗೆ ನೀಡಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಮಂಡಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರ ಇಂದು ಸಂಸತ್‌ನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯ ಪ್ರಕಾರ, ರೈತರ ಯೋಜನೆಗಳಾದ ಪಿಎಂ-ಕಿಸಾನ್ ಸಮ್ಮನ್ ನಿಧಿ ಮತ್ತು ಪ್ರಧಾನ್ ಮಂತ್ರಿ ಕಿಸಾನ್ ಮನಧಾನ್ ಯೋಜನೆ ರೈತರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುವ ಸಹ ರೈತರಿಂದ ಪ್ರಯೋಜನ ಪಡೆದಿದೆ. ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ, 11 ಕೋಟಿಗಿಂತ ಹೆಚ್ಚು ರೈತರು ಲಾಭ ಪಡೆದಿದ್ದಾರೆ ಮತ್ತು ಪ್ರಧಾನ್ ಮಂತ್ರಿ ಕಿಸಾನ್ ಮಾನಧನ್ ಯೋಜನೆಯಲ್ಲಿ 23, 61,000 ರೈತರುನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಫೆ 1 ರಂದು ಕೇಂದ್ರ ಬಜೆಟ್ 2025 ಮಂಡಿಸಲಿದ್ದಾರೆ.

ವಿಭಾಗ