ಶೀಘ್ರದಲ್ಲೇ ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಎಸ್ಎಂಎಸ್ ಮೂಲಕವೂ ಅಂಕ ಪರಿಶೀಲಿಸಬಹುದು, ವೆಬ್‌ಸೈಟ್ ಲಿಂಕ್ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶೀಘ್ರದಲ್ಲೇ ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಎಸ್ಎಂಎಸ್ ಮೂಲಕವೂ ಅಂಕ ಪರಿಶೀಲಿಸಬಹುದು, ವೆಬ್‌ಸೈಟ್ ಲಿಂಕ್ ಇಲ್ಲಿದೆ

ಶೀಘ್ರದಲ್ಲೇ ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಎಸ್ಎಂಎಸ್ ಮೂಲಕವೂ ಅಂಕ ಪರಿಶೀಲಿಸಬಹುದು, ವೆಬ್‌ಸೈಟ್ ಲಿಂಕ್ ಇಲ್ಲಿದೆ

ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಬೋರ್ಡ್‌ ವೆಬ್‌ಸೈಟ್‌ ಮಾತ್ರವಲ್ಲದೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಪರಿಶೀಲಿಸಬಹುದು. ಫಲಿತಾಂಶ ವೀಕ್ಷಣೆಗೆ ಮಾರ್ಗದರ್ಶಿ ಇಲ್ಲಿದೆ.

ಶೀಘ್ರದಲ್ಲೇ ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಎಸ್ಎಂಎಸ್ ಮೂಲಕವೂ ಪರಿಶೀಲಿಸಬಹುದು (REPRESENTATIVE PHOTO)
ಶೀಘ್ರದಲ್ಲೇ ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಎಸ್ಎಂಎಸ್ ಮೂಲಕವೂ ಪರಿಶೀಲಿಸಬಹುದು (REPRESENTATIVE PHOTO)

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education -CBSE) ಶೀಘ್ರದಲ್ಲೇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಅಧಿಕೃತ ಫಲಿತಾಂಶ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಹಿಂದಿನ ವರ್ಷಗಳಲ್ಲಿ ಮೇ ತಿಂಗಳ ಮಧ್ಯಭಾಗದಲ್ಲಿ ಬಿಡುಗಡೆಯಾಗಿದ್ದರಿಂದ, ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆಯ ಸುಳಿವಿದೆ. ಸಿಬಿಎಸ್‌ಇ ಫಲಿತಾಂಶ ಪ್ರಕಟವಾದರೆ ಪರೀಕ್ಷಾರ್ಥಿಗಳು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ cbseresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಈ ವರ್ಷ ಪರೀಕ್ಷೆಗಳು ಫೆಬ್ರುವರಿ 15ರಿಂದ ಏಪ್ರಿಲ್ 4ರವರೆಗೆ ನಡೆದವು. ಈ ಹಿಂದಿನ ಟ್ರೆಂಡ್‌ಗಳ ಪ್ರಕಾರ, ಮೇ ವೇಳೆಗೆ ಫಲಿತಾಂಶಗಳು ಹೊರಬರುವ ನಿರೀಕ್ಷೆಯಿದೆ. 2024ರಲ್ಲಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಮೇ 13ರಂದು ಫಲಿತಾಂಶಗಳನ್ನು ಪ್ರಕಟಿಸಿತ್ತು. 2023ರಲ್ಲಿ ಮೇ 12ರಂದು ಫಲಿತಾಂಶ ಘೋಷಿಸಲಾಗಿತ್ತು. ಅದಕ್ಕೂ ಹಿಂದೆ 2022 ರಲ್ಲಿ ಜುಲೈ 22ರಂದು ಫಲಿತಾಂಶಗಳನ್ನು ಪ್ರಕಟಿಸಿತು.

CBSE ಬೋರ್ಡ್ ಫಲಿತಾಂಶಗಳನ್ನು ಪರಿಶೀಲಿಸಲು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.

  • cbse.gov.in
  • cbseresults.nic.in
  • results.cbse.nic.in

ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಫಲಿತಾಂಶ ಪರಿಶೀಲಿಸುವುದು ಹೇಗೆ?

  • ಮೊದಲು ಸಿಬಿಎಸ್‌ಇ ಅಧಿಕೃತ ಫಲಿತಾಂಶಗಳ ಪೋರ್ಟಲ್ ಆಗಿರುವ results.cbse.nic.in ಗೆ ಭೇಟಿ ನೀಡಿ.
  • ಇದರಲ್ಲಿ ನಿಮ್ಮ ತರಗತಿಯ ಅನುಸಾರವಾಗಿ "CBSE 10th Result 2025" ಅಥವಾ "CBSE 12th Result 2025" ಲಿಂಕ್ ಅನ್ನು ಆಯ್ಕೆಮಾಡಿ.
  • ನಿಮ್ಮ ರೋಲ್ ನಂಬರ್, ಜನ್ಮ ದಿನಾಂಕ ಮತ್ತು ಪರದೆಯ ಮೇಲೆ ತೋರಿಸಿರುವ ಭದ್ರತಾ ಕೋಡ್‌ (security code) ಅನ್ನು ನಮೂದಿಸಿ.
  • ನಿಮ್ಮ ಫಲಿತಾಂಶವನ್ನು ವೀಕ್ಷಿಸಲು ಎಲ್ಲಾ ವಿವರಗಳನ್ನು ಸಲ್ಲಿಸಿ.
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ. ಅಗತ್ಯವಿದ್ದರೆ ಡೌನ್‌ಲೋಡ್‌ ಮಾಡಿ ಪ್ರಿಂಟ್‌ ಕಾಪಿ ತೆಗೆದುಕೊಳ್ಳಿ.

ಮೆಸೇಜ್‌ ಮೂಲಕವೂ ಫಲಿತಾಂಶ ನೋಡಬಹುದು

ಈ ಬಾರಿ ಸುಲಭವಾಗಿ ಫಲಿತಾಂಶ ವೀಕ್ಷಿಸಲು ಮಂಡಳಿಯು ವಿಶೇಷ ಸೌಲಭ್ಯವನ್ನು ಪರಿಚಯಿಸಿದೆ. ವಿದ್ಯಾರ್ಥಿಗಳು ಸಾಮಾನ್ಯ ಆನ್ಲೈನ್ ಪೋರ್ಟಲ್‌ಗಳ ಜೊತೆಗೆ ಎಸ್ಎಂಎಸ್ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಸಾಧ್ಯವಿದೆ. ಸೀಮಿತ ಇಂಟರ್ನೆಟ್ ಸೌಲಭ್ಯವಿರುವ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಬಹುದು.

ವಿದ್ಯಾರ್ಥಿಗಳು ಹೀಗೆ ಟೈಪ್‌ ಮಾಡಬೇಕು CBSE10 <ರೋಲ್ ನಂಬರ್> <ಸ್ಕೂಲ್ ಕೋಡ್> <ಸೆಂಟರ್ ನಂಬರ್> ಟೈಪ್ ಮಾಡಿ ಫಲಿತಾಂಶವನ್ನು ಪಡೆಯಲು 7738299899 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬಹುದು. 12 ನೇ ತರಗತಿ ವಿದ್ಯಾರ್ಥಿಗಳು CBSE12 <ರೋಲ್ ನಂಬರ್> <ಸ್ಕೂಲ್ ಕೋಡ್> <ಸೆಂಟರ್ ನಂಬರ್> ಟೈಪ್ ಮಾಡಿ ಅದೇ ಸಂಖ್ಯೆಗೆ ಕಳುಹಿಸಬಹುದು.

ಈ ಹಿಂದಿನ ವರ್ಷಗಳಲ್ಲಿ ಫಲಿತಾಂಶಗಳು ಹೇಗಿದ್ದವು?

2024ರಲ್ಲಿ, ಸಿಬಿಎಸ್‌ಇ 10ನೇ ತರಗತಿಗೆ ಫಲಿತಾಂಶ ಶೇ. 93.60 ರಷ್ಟು ದಾಖಲಾಗಿತ್ತು. ಇದೇ ವೇಳೆ 12ನೇ ತರಗತಿಯಲ್ಲಿ 87.98 ಶೇಕಡ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2023 ರಲ್ಲಿ, 10 ನೇ ತರಗತಿಯಲ್ಲಿ 93.12 ಶೇ. ಮತ್ತು 12ನೇ ತರಗತಿಯಲ್ಲಿ 87.33 ಶೇ. ಫಲಿತಾಂಶ ಬಂದಿತ್ತು. 2022ರಲ್ಲಿ 10ನೇ ತರಗತಿಗೆ 94.40 ಶೇ. ಮತ್ತು 12ನೇ ತರಗತಿಗೆ 92.71 ಶೇ ಫಲಿತಾಂಶವಿತ್ತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.