ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಿರೇ ಅಸೆಟ್ ಫೌಂಡೇಶನ್ ವಿದ್ಯಾರ್ಥಿವೇತನ; ಇಲ್ಲಿದೆ ವಿವರ
ಮಿರೇ ಅಸೆಟ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ, ಭಾರತದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 50,000 ರೂಪಾಯಿಯವರೆಗೆ ವಿದ್ಯಾರ್ಥಿವೇತನವನ್ನು ಪಡೆಯಬಹುದು ಎಂದು ಅರ್ಜಿ ಆಹ್ವಾನಿಸಿದ ವೆಬ್‌ಸೈಟ್ ತಿಳಿಸಿದೆ.
ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ವಿದ್ಯಾರ್ಥಿವೇತನದ ನಿರೀಕ್ಷೆಯಲ್ಲಿದ್ದರೆ ಇಲ್ಲೊಂದು ಅವಕಾಶವಿದೆ. ಮಿರೇ ಅಸೆಟ್ ಫೌಂಡೇಶನ್ ಕೊಡುವ ಮಿರೇ ಅಸೆಟ್ ಫೌಂಡೇಶನ್ ವಿದ್ಯಾರ್ಥಿವೇತನ (Mirae Asset Foundation Scholarship)ಕ್ಕೆ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ವಾಸಿಸುವ ಹಾಗೂ ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಮೂಲಕ ಆರ್ಥಿಕ ನೆರವು ನೀಡಲಾಗುತ್ತದೆ. ಹಾಗಿದ್ದರೆ, ಈ ಸ್ಕಾಲರ್‌ಶಿಪ್ ಪಡೆಯಲು ಯಾರೆಲ್ಲಾ ಅರ್ಹರು, ಎಷ್ಟು ಮೊತ್ತ ನೀಡಲಾಗುತ್ತದೆ, ಅರ್ಜಿ ಸಲ್ಲಿಸುವುದು ಹೇಗೆ ಎಂಬೆಲ್ಲಾ ವಿವರ ಇಲ್ಲಿದೆ.
ಮಿರೇ ಅಸೆಟ್ ಫೌಂಡೇಶನ್ ವಿದ್ಯಾರ್ಥಿವೇತನದ ಅಡಿಯಲ್ಲಿ, ಪ್ರಸ್ತುತ ಭಾರತದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಲ್ಲದೆ 50,000 ರೂಪಾಯಿಯವರೆಗೆ ವಿದ್ಯಾರ್ಥಿವೇತನವನ್ನು ಪಡೆಯುವ ಅವಕಾಶವಿದೆ.
2018ರಲ್ಲಿ ಸ್ಥಾಪನೆಯಾದ ಮಿರೇ ಅಸೆಟ್ ಫೌಂಡೇಶನ್, ಭಾರತದಲ್ಲಿ ಮಿರೇ ಅಸೆಟ್ ಫೈನಾನ್ಷಿಯಲ್ ಗ್ರೂಪ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಂಗವಾಗಿದೆ.
ಅರ್ಹತಾ ಮಾನದಂಡ
- ಪ್ರಸ್ತುತ ಭಾರತದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60 ಶೇ. ಅಂಕಗಳನ್ನು ಗಳಿಸಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ವಾರ್ಷಿಕ 8,00,000 ರೂ.ಗಿಂತ ಕಡಿಮೆಯಿರಬೇಕು.
- PAN ಇಂಡಿಯಾದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
- Buddy4Study ಉದ್ಯೋಗಿಗಳ ಮಕ್ಕಳು ಸ್ಕಾಲರ್‌ಶಿಪ್‌ಗೆ ಅರ್ಹರಲ್ಲ. (ಏಕೆಂದರೆ ಬಡ್ಡಿಪೋರ್ಸ್ಟಡಿ ಈ ಸ್ಕಾಲರ್‌ಶಿಪ್‌ನ ಅನುಷ್ಠಾನ ಪಾಲುದಾರ)
(ಆಯಾ ಸಂಸ್ಥೆಗೆ ಪಾವತಿಸುವ ಒಟ್ಟು ಶೈಕ್ಷಣಿಕ ಶುಲ್ಕವು ಪದವಿಪೂರ್ವ ವಿದ್ಯಾರ್ಥಿಗಳಿಗೆ 40,000 ಕ್ಕಿಂತ ಕಡಿಮೆಯಿರಬಾರದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 50,000ಕ್ಕಿಂತ ಕಡಿಮೆಯಿರಬಾರದು.)
ಪ್ರಯೋಜನಗಳು
ಪದವಿಪೂರ್ವ ವಿದ್ಯಾರ್ಥಿಗಳಿಗೆ 40,000 ರೂ.ವರೆಗಿನ ವಿದ್ಯಾರ್ಥಿವೇತನ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 50,000 ರೂ.ವರೆಗಿನ ವಿದ್ಯಾರ್ಥಿವೇತನ ಸಿಗಲಿದೆ.
ಗಮನಿಸಿ: ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಇದು ಕೋರ್ಸ್ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಮೆಸ್ ಶುಲ್ಕಗಳು ಮತ್ತು ಸಂಸ್ಥೆಗಳಿಗೆ ಪಾವತಿಸಬೇಕಾದ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಅಗತ್ಯ ದಾಖಲೆಗಳು
- ಇತ್ತೀಚಿನ ಛಾಯಾಚಿತ್ರ
- ಗುರುತಿನ ಪುರಾವೆ (ಆಧಾರ್ ಕಾರ್ಡ್)
- ಶುಲ್ಕದ ವಿವರಗಳೊಂದಿಗೆ ಪ್ರಸ್ತುತ ವರ್ಷದ ಪ್ರವೇಶ ಪತ್ರ (ಸಂಸ್ಥೆಯ ಬ್ಯಾಂಕ್ ವಿವರಗಳು ಇರಬೇಕು.)
- ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
- 12 ನೇ ತರಗತಿಯ ಅಂಕಪಟ್ಟಿ (ಅನ್ವಯಿಸಿದರೆ)
- ಕುಟುಂಬ ಆದಾಯ ಪುರಾವೆ
- ಶಿಕ್ಷಣ ಸಂಸ್ಥೆಯ ಬ್ಯಾಂಕ್ ಖಾತೆ ವಿವರಗಳು
buddy4study ವೆಬ್‌ಸೈಟ್ ಪ್ರಕಾರ ಅರ್ಜಿ ಸಲ್ಲಿಕೆಗೆ ಜೂನ್ 20ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನಲ್ಲಿ ಕೊಟ್ಟಿರುವ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.