CBSE Board Result 2024: ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10, 12ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ-education news cbse 10th 12th class results likely to be announced first week of may rmy ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse Board Result 2024: ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10, 12ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

CBSE Board Result 2024: ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10, 12ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

ಸಿಬಿಎಸ್ಇ ಬೋರ್ಡ್ ಫಲಿತಾಂಶ 2024 ಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದಾರೆ. 10 ಮತ್ತು 12 ನೇ ತರಗತಿಯ ಸಿಬಿಎಸ್‌ಇ ಫಲಿತಾಂಶಗಳು ಮೇ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮೇ ತಿಂಗಳ ಮೊದಲ ವಾರದಲ್ಲಿ ಸಿಬಿಎಸ್‌ಇ‌ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. (Hindustan Times)

ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE)ನ 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು ಮೇ ತಿಂಗಳ ಮೊದಲ ವಾರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಫಲಿತಾಂಶ ಪ್ರಕಟಿಸುವುದಕ್ಕೂ ಮುನ್ನ ಸಿಬಿಎಸ್‌ಇ ಅಧಿಕಾರಿಗಳು ಸಿಬಿಎಸ್‌ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷಾ ಫಲಿತಾಂಶವನ್ನು ಯಾವಾಗ ಪ್ರಕಟಿಸುತ್ತಾರೆ ಎಂಬ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಾರೆ. ಮಂಡಳಿಯ ಅಧಿಕೃತ ವೆಬ್‌ಸೈಟ್ results.cbse.nic ನಲ್ಲಿ ಫಲಿತಾಂಶಗಳನ್ನು ನೋಡಬಹುದು. ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ cbseresults.nic ವೆಬ್‌ಸೈಟ್‌ನಲ್ಲೂ ಫಲಿತಾಂಶ ಪಡೆಯಬಹುದು. ಎಸ್‌ಎಂಎಸ್‌ ಸೌಲಭ್ಯ ಹಾಗೂ ಡಿಜಿಲಾಕರ್ ಮೂಲಕವೂ ವಿದ್ಯಾರ್ಥಿಗಳು ಸಿಬಿಎಸ್‌ಇಯ 10ನೇ ತರಗತಿ ಹಾಗೂ 12 ತರಗತಿಯ ರಿಲಸ್ಟ್ ಸ್ವೀಕರಿಸಬಹುದು.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2024 ರ ಸಿಬಿಎಸ್ಇ ಬೋರ್ಡ್ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ಫಲಿತಾಂಶವನ್ನು ಎಲ್ಲಿ ಮತ್ತು ಹೇಗೆ ನೋಡುವುದು ಅನ್ನೋದನ್ನ ತಿಳಿದಿರಬೇಕು. 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಘೋಷಣೆ ಮಾಡಿದಾಗ ವಿವಿಧ ಅಧಿಕೃತ ವೆಬ್‌ಸೈಟ್‌ಗಳು ಹಾಗೂ ಇತರೆ ವೇದಿಕೆಗಳಲ್ಲಿ ಲಭ್ಯವಾಗುತ್ತದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಿಬಿಎಸ್ಇ 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಸಿಬಿಎಸ್ಇಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸುತ್ತಾರೆ, ಆದರೆ ಆ ಸಂದರ್ಭದಲ್ಲಿ ಸೈಟ್ ಕ್ರ್ಯಾಶ್ ಆಗಿದ್ದರೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವಿವಿಧ ಅಪ್ಲಿಕೇಷನ್‌ಗಳು ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು. ಸಿಬಿಎಸ್ಇ ಬೋರ್ಡ್ ಫಲಿತಾಂಶ 2024 ಅನ್ನು ಪರಿಶೀಲಿಸಲು ವಿವಿಧ ಮಾರ್ಗಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಒಮ್ಮೆ ನೋಡಿ.

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು ನೋಡಲು ವೆಬ್‌ಸೈಟ್‌ಗಳು

  • cbseresults.nic.in
  • results.cbse.nic.in
  • cbse.nic.in
  • cbse.gov.in

ಸಿಬಿಎಸ್ಇ ಬೋರ್ಡ್ ಫಲಿತಾಂಶ 2024: ಮೊಬೈಲ್ ಆ್ಯಪ್‌ಗಳು

  • ಡಿಜಿಲಾಕರ್
  • ಉಮಾಂಗ್
  • ಎಸ್ಎಂಎಸ್: ಮಂಡಳಿಯಿಂದ ಮಾಹಿತಿ ಪಡೆಯಬೇಕು

ಇದನ್ನೂ ಓದಿ: ಪರೀಕ್ಷೆ ಸಮಯದಲ್ಲಿ ವದಂತಿಗಳಿಂದ ದೂರವಿರುವುದು ಹೇಗೆ; ಈ 5 ಸುಲಭ ಮಾರ್ಗಗಳು ನಿಮಗೆ ತಿಳಿದಿರಲಿ

ಸಿಬಿಎಸ್ಇ ಬೋರ್ಡ್ ಫಲಿತಾಂಶ 2024: digilocker.gov.in ಇತರ ಸೈಟ್‌ಗಳು

  • results.gov.in

ಸಿಬಿಎಸ್ಇ ಬೋರ್ಡ್ ಫಲಿತಾಂಶಗಳು 2024: 10 ಮತ್ತು 12 ನೇ ತರಗತಿ ಅಂಕಗಳನ್ನು ಪರಿಶೀಲಿಸುವುದು ಹೇಗೆ?

  • ಸಿಬಿಎಸ್ಇಯ ಅಧಿಕೃತ ಅಥವಾ ಇತರೆ ವೆಬ್‌ಸೈಟ್‌ಗಲಿಗೆ ಭೇಟಿ ನೀಡಿ
  • ಸಿಬಿಎಸ್ಇ ಬೋರ್ಡ್ ಫಲಿತಾಂಶ 2024 ರ 10, 12 ನೇ ತರಗತಿ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಖಾತೆಗೆ ಲಾಗಿನ್ ಮಾಡಿ
  • ಪರೀಕ್ಷಾ ನೋಂದಣಿ ಸಂಖ್ಯೆ ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
  • 10, 12 ನೇ ತರಗತಿಯ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
  • ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ ಲೋಡ್ ಮಾಡಿ ಅಥವಾ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ.

ಇದನ್ನೂ ಓದಿ: 2024-25ನೇ ಸಾಲಿನಿಂದ ಸಿಬಿಎಸ್‌ಇ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಗಳ ಜಾರಿ; ಹೆಚ್ಚಿನ ಮಾಹಿತಿ ಇಲ್ಲಿದೆ

ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸುವವರೆಗೆ ಡೌನ್‌ಲೋಡ್ ಮಾಡಿದ ಫಲಿತಾಂಶ ಪ್ರತಿಯನ್ನು ತಾತ್ಕಾಲಿಕ ಅಂಕಪಟ್ಟಿ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ, ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಯನ್ನು 2024ರ ಫೆಬ್ರವರಿ 15 ರಿಂದ ಮಾರ್ಚ್ 13 ಹಾಗೂ ಸಿಬಿಎಸ್‌ಇಯ 12 ನೇ ತರಗತಿ ಪರೀಕ್ಷೆಯನ್ನು 2024ರ ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆಸಲಾಗಿತ್ತು. ಎರಡೂ ತರಗತಿಗಳ ಪರೀಕ್ಷೆಗಳನ್ನು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಒಂದೇ ಪಾಳಿಯಲ್ಲಿ ನಡೆಸಲಾಯಿತು. 2024 ರ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳಿಗೆ ಸುಮಾರು 39 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.