CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ 2024ರ ಮೇ 20 ರ ನಂತರ ಪ್ರಕಟವಾಗುವ ಸಾಧ್ಯತೆ ಇದೆ. ಫಲಿತಾಂಶ ನೋಡಲು ಅಧಿಕೃತ ವೆಬ್‌ಸೈಟ್‌ಗಳು ಹಾಗೂ ನೇರ ಲಿಂಕ್ ಇಲ್ಲಿದೆ.

ಮೇ 20ರ ನಂತರ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ. ಫಲಿತಾಂಶ ಎಲ್ಲಿ ಮತ್ತು ಹೇಗೆ ನೋಡುವುದು ಅನ್ನೋದರ ಮಾಹಿತಿ ಇಲ್ಲಿದೆ.
ಮೇ 20ರ ನಂತರ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ. ಫಲಿತಾಂಶ ಎಲ್ಲಿ ಮತ್ತು ಹೇಗೆ ನೋಡುವುದು ಅನ್ನೋದರ ಮಾಹಿತಿ ಇಲ್ಲಿದೆ. (HT)

ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಯ ಫಲಿತಾಂಶವನ್ನು 2024 ಮೇ 20ರ ನಂತರ ಪ್ರಕಟಿಸಲಿದೆ. ವಿದ್ಯಾರ್ಥಿಗಳು ಇದನ್ನು ಮಂಡಳಿಯ ವೆಬ್‌ಸೈಟ್‌ಗಳಾದ cbseresults.nic.in ಮತ್ತು results.cbse.gov.in ಪರಿಶೀಲಿಸಬಹುದು. ಇದಲ್ಲದೆ, ಮಂಡಳಿಯು digilocker.gov.in, results.gov.in ಮತ್ತು ಉಮಾಂಗ್ ಅಪ್ಲಿಕೇಶನ್‌ನಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆನ್‌ಲೈನ್‌ನಲ್ಲಿ ಫಲಿತಾಂಶ ನೋಡಲು ಬೋರ್ಡ್ ಪರೀಕ್ಷೆಯ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಹಾಗೂ ಪ್ರವೇಶ ಕಾರ್ಡ್ ಐಡಿಯ ಅಗತ್ಯವಿರುತ್ತದೆ.

ಈ ವರ್ಷ ಸಿಬಿಎಸ್ಇ ತನ್ನ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಸಿತು. 10 ನೇ ತರಗತಿ ಪರೀಕ್ಷೆಯು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ಒಂದೇ ಪಾಳಿಯಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ರವರೆಗೆ ನಡೆಸಿತ್ತು.

ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಿಸುವುದು ಹೇಗೆ?

  • ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ cbse.gov.in. ಗೆ ಭೇಟಿ ನೀಡಿ
  • ಮುಖಪುಟದಲ್ಲಿ, ಅಗತ್ಯವಿರುವಂತೆ 10 ಅಥವಾ 12 ನೇ ತರಗತಿ ಫಲಿತಾಂಶ ಲಿಂಕ್ ಅನ್ನು ಹುಡುಕಿ ಮತ್ತು ಅದನ್ನು ಓಪನ್ ಮಾಡಿ.
  • ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ, ಪ್ರವೇಶ ಕಾರ್ಡ್ ಐಡಿ ಹಾಕಿದರೆ ಫಲಿತಾಂಶ ಮುಖಪುಟದಲ್ಲಿ ಕಾಣಿಸುತ್ತದೆ
  • ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿದ ನಂತರ ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: ಶಾಲಾ ಪಠ್ಯ ಪುಸ್ತಕ ಪರಿಷ್ಕರಿಸಿದ ಕರ್ನಾಟಕ ಸರ್ಕಾರ; ಕಂಬಾರ, ಕಾರ್ನಾಡರ ಬರಹಗಳ ಸೇರ್ಪಡೆ

ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ 10 ಮತ್ತು 12 ನೇ ತರಗತಿ ಅಂತಿಮ ಪರೀಕ್ಷೆಗೆ ಹಾಜರಾಗಿದ್ದಾರೆ. ಮಂಡಳಿಯು ತೇರ್ಗಡೆ ಪ್ರಮಾಣ, ಲಿಂಗವಾರು ಫಲಿತಾಂಶ, ಪರೀಕ್ಷೆಗೆ ಹಾಜರಾದ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ, ಪ್ರದೇಶ ಮತ್ತು ಶಾಲಾವಾರು ಫಲಿತಾಂಶ ಇತ್ಯಾದಿಗಳನ್ನು ಸುದ್ದಿಗೋಷ್ಠಿ ಮೂಲಕ ಪ್ರಕಟಿಸುತ್ತದೆ. ಆದರೆ 10 ಅಥವಾ 12 ನೇ ತರಗತಿಗೆ ಯಾವುದೇ ಟಾಪರ್‌ಗಳ ಪಟ್ಟಿ ಇರುವುದಿಲ್ಲ.

ಆಯಾ ತರಗತಿಗಳಲ್ಲಿ ಅರ್ಹತೆ ಪಡೆಯದ ವಿದ್ಯಾರ್ಥಿಗಳಿಗೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಕಂಪಾರ್ಟ್ಮೆಂಟ್ ಪರೀಕ್ಷೆಗೆ ಹಾಜರಾಗಲು ಮತ್ತೊಂದು ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ, ಅವರು ಮಂಡಳಿಯ ವೆಬ್‌ಸೈಟ್ cbse.gov.in. ಗೆ ಭೇಟಿ ನೀಡಲು ಸೂಚಿಸಲಾಗಿದೆ. ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾತ್ರ ಫಲಿತಾಂಶವನ್ನು ಪ್ರಕಟಿಸುತ್ತದೆ. ಹೀಗಾಗಿ ನಕಲಿ ಸೈಟ್‌ಗಳಲ್ಲಿ ಫಲಿತಾಂಶ ನೋಡಲು ಹೋಗಿ ಸಂಕಷ್ಟಕ್ಕೆ ಸಿಲುಕದಿರಿ. ನಕಲಿ ಸೈಟ್‌ನವರು ನಿಮ್ಮ ದಾಖಲೆಗಳನ್ನು ಪಡೆದು ವಂಚಿಸುವ ಸಾಧ್ಯತೆ ಇರುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.