CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈ ವರ್ಷ ಒಟ್ಟಾರೆ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕರಿಗಿಂತ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 87.98 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 87.98 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12 ನೇ ತರಗತಿ ಫಲಿತಾಂಶವನ್ನು ಇಂದು (ಮೇ 13, ಸೋಮವಾರ) ಪ್ರಕಟಿಸಿದೆ. ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ cbse.gov.in ಅಥವಾ cbse.inc.in ನಲ್ಲಿ ಪರಿಶೀಲಿಸಬಹುದು. ಈ ವರ್ಷ ಒಟ್ಟಾರೆ ತೇರ್ಗಡೆ ಶೇಕಡಾ 87.98 ರಷ್ಟು ದಾಖಲಾಗಿದೆ.

ಒಟ್ಟು 1,62,1224 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 1,42,6420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಯಂತೆ ಈ ಬಾರಿಯೂ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರಲ್ಲಿ ಗರಿಷ್ಠ ಶೇಕಡಾ 91.52 ರಷ್ಟು ಫಲಿತಾಂಶ ಪಡೆದಿದ್ದರೆ, ಬಾಲಕರು ಶೇಕಡಾ 85.12 ರಷ್ಟು ಫಲಿತಾಂಶ ಗಳಿಸಿದ್ದಾರೆ.

ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಯನ್ನು ಫೆಬ್ರವರಿ 15 ರಿಂದ ಏಪ್ರಿಲ್ 2, 2024 ರವರೆಗೆ ಒಂದೇ ಪಾಳಿಯಲ್ಲಿ ನಡೆಸಲಾಗಿತ್ತು. ದೇಶಾದ್ಯಂತ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.

ಈ ವರ್ಷ ದೇಶಾದ್ಯಂತ ಸುಮಾರು 39 ಲಕ್ಷ ಅಭ್ಯರ್ಥಿಗಳು 10 ಮತ್ತು 12 ನೇ ತರಗತಿಗೆ ನೋಂದಾಯಿಸಿಕೊಂಡಿದ್ದರು. ಅಧಿಕೃತ ವೆಬ್‌ಸೈಟ್‌ cbse.gov.in ಹೊರತಾಗಿ, ಫಲಿತಾಂಶಗಳನ್ನು cbseresults.nic.in results.cbse.nic.in cbse.nic.in digilocker.gov.in results.gov.in. ಸಹ ಪರಿಶೀಲಿಸಬಹುದು.

ಸಿಬಿಎಸ್ಇ 12 ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸುವ ವಿಧಾನ

  • ಸಿಬಿಎಸ್ಇ ಫಲಿತಾಂಶ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ results.cbse.nic.in. ಗೆ ಭೇಟಿ ನೀಡಿ
  • 12 ನೇ ತರಗತಿ ಫಲಿತಾಂಶ ಪುಟವನ್ನು ತೆರೆಯಿರಿ
  • ನಿಮ್ಮ ಲಾಗಿನ್ ವಿವರಗಳನ್ನು ಒದಗಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
  • ನಿಮ್ಮ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿ. ಭವಿಷ್ಯದ ಅಗತ್ಯಗಳಿಗಾಗಿ ಪುಟವನ್ನು ಡೌನ್ಲೋಡ್ ಮಾಡಿ.

ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಡಿಜಿಲಾಕರ್‌ನಲ್ಲೂ ಪರಿಶೀಲಿಸಬಹುದು. ಡಿಜಿಲಾಕರ್‌ನಲ್ಲಿ ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

  • ಡಿಜಿಲಾಕರ್ ಅಪ್ಲಿಕೇಶನ್ / ವೆಬ್‌ಸೈಟ್‌ ತೆರೆಯಿರಿ
  • ಸೈನ್ ಇನ್ / ನಿಮ್ಮ ಖಾತೆಯನ್ನು ರಚಿಸಿ
  • ಮುಖಪುಟದಲ್ಲಿ, ಸಿಬಿಎಸ್ಇ ಫಲಿತಾಂಶ ಲಿಂಕ್ ಅನ್ನು ನೋಡಿ (ಅಥವಾ ವರ್ಗಗಳ ಅಡಿಯಲ್ಲಿ ಸಿಬಿಎಸ್ಇ ವಿಭಾಗಕ್ಕೆ ಹೋಗಿ)
  • ಅಗತ್ಯ ಮಾಹಿತಿಯನ್ನು ಒದಗಿಸಿ ಮತ್ತು ಫಲಿತಾಂಶ ಪರಿಶೀಲಿಸಿ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ cbse.gov.in ಗೆ ಭೇಟಿ ನೀಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.