ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ICSE ISC Class 10th, 12th Result 2024: 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಫಲಿತಾಂಶ ಇಂದು ಪ್ರಟಕವಾಗಿದೆ. ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟವಾಗಿದ್ದು, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19 ದಾಖಲಾಗಿದೆ. ಫಲಿತಾಂಶ ನೋಡುವ ವಿಧಾನವೂ ಸೇರಿ ವಿವರ ವರದಿ ಇಲ್ಲಿದೆ.

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟವಾಗಿದೆ. 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19 ದಾಖಾಲಗಿದೆ. (ಸಾಂಕೇತಿಕ ಚಿತ್ರ)
ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟವಾಗಿದೆ. 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19 ದಾಖಾಲಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಐಸಿಎಸ್‌ಇ (10ನೇ ತರಗತಿ) ಮತ್ತು ಐಎಸ್‌ಸಿ (12ನೇ ತರಗತಿ) ಫಲಿತಾಂಶ ಪ್ರಕಟವಾಗಿದೆ. ಸಹಜವಾಗಿಯೇ ಹತ್ತನೇ ತರಗತಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇಕಡ 99.65 ಉತ್ತೀರ್ಣ ಪ್ರಮಾಣ ದಾಖಲಿಸಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇಕಡ 99.31 ಇದೆ. 12ನೇ ತರಗತಿ ಫಲಿತಾಂಶ ಗಮನಿಸಿದರೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡ 98.92 ಮತ್ತು ಬಾಲಕರ ಉತ್ತೀರ್ಣ ಪ್ರಮಾಣ 97.53 ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ತನ್ನ 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಫಲಿತಾಂಶಗಳನ್ನು ಇಂದು (ಮೇ 6) ಪ್ರಕಟಿಸಿತು. ಭಾರತದಾದ್ಯಂತ ವಿವಿಧ ಕೇಂದ್ರಗಳಲ್ಲಿ ಈ ಬೋರ್ಡ್ ಪರೀಕ್ಷೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈಗ ತಮ್ಮ ಅಂಕಗಳನ್ನು, ಫಲಿತಾಂಶವನ್ನು ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್‌ cisce.org ಅಥವಾ results.cisce.org ನಲ್ಲಿ ಪರಿಶೀಲಿಸಬಹುದು.

ಈ ವರ್ಷ, 10ನೇ ತರಗತಿ (ಐಸಿಎಸ್‌ಇ) ಗೆ 243,617 ಅಭ್ಯರ್ಥಿಗಳು ಮತ್ತು 12ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳಿಗೆ 99,901 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 10ನೇ ತರಗತಿಯ 242,328 ವಿದ್ಯಾರ್ಥಿಗಳು ಐಸಿಎಸ್‌ಇ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. 12ನೇ ತರಗತಿ (ಐಎಸ್‌ಸಿ) ಪರೀಕ್ಷೆಯಲ್ಲಿ 98,088 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಉತ್ತೀರ್ಣ ಶೇಕಡಾವಾರು ಶೇಕಡಾವನ್ನು ಐಸಿಎಸ್‌ಇ ಫಲಿತಾಂಶ ಪ್ರಮಾಣ ಶೇಕಡ 99.47 ಮತ್ತು ಐಎಸ್‌ಸಿ ಫಲಿತಾಂಶ ಪ್ರಮಾಣ ಶೇಕಡ 98.19 ಇದೆ.

ಫಲಿತಾಂಶದಲ್ಲಿ ರಾಷ್ಟ್ರೀಯ ಸರಾಸರಿ ಮೀರಿದ ಕರ್ನಾಟಕ

10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಫಲಿತಾಂಶದಲ್ಲಿ ರಾಷ್ಟ್ರೀಯ ಸರಾಸರಿಯನ್ನು ಕರ್ನಾಟಕ ಈ ಸಲ ಮೀರಿದ ಉತ್ತಮ ಫಲಿತಾಂಶ ಪಡೆದಿದೆ. 2024 ರಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 99.83 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.49 ಫಲಿತಾಂಶ ಪ್ರಮಾಣವನ್ನು ಕರ್ನಾಟಕ ದಾಖಲಿಸಿದೆ. ರಾಷ್ಟ್ರೀಯ ಫಲಿತಾಂಶ ಪ್ರಮಾಣ ಅನುಕ್ರಮವಾಗಿ 10ನೇ ತರಗತಿಗೆ ಶೇಕಡ 99.47 ಮತ್ತು ಐಎಸ್‌ಸಿಗೆ ಶೇಕಡ 98.19 ಇದೆ.

ಕರ್ನಾಟಕದಲ್ಲಿ ಕೂಡ ಬಾಲಕಿಯರದ್ದೇ ಮೇಲುಗೈ. 10ನೇ ತರಗತಿ ಫಲಿತಾಂಶ ಗಮನಿಸಿದರೆ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡ 99.93 ಇದ್ದರೆ ಬಾಲಕರ ಉತ್ತೀರ್ಣ ಪ್ರಮಾಣ ಶೇಕಡ 99.76 ಇದೆ. ಇದೇ ರೀತಿ, 12ನೇ ತರಗತಿ ಫಲಿತಾಂಶದಲ್ಲಿ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡ 99.73 ಇದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇಕಡ 99.18 ಇದೆ.

ಆನ್‌ಲೈನ್‌ನಲ್ಲಿ ಐಸಿಎಸ್‌ಇ ಫಲಿತಾಂಶ ಪರಿಶೀಲಿಸುವುದು ಹೇಗೆ

ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ ಎಂದು ಹುಡಕಾಡುವುದು ಸಹಜ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು, ಅಭ್ಯರ್ಥಿಗಳಿಗೆ ಅವರ ವಿಶಿಷ್ಟ ID, ಸೂಚ್ಯಂಕ ಸಂಖ್ಯೆ ಮತ್ತು ಲಾಗಿನ್ ಪುಟದಲ್ಲಿ ತೋರಿಸಿರುವ ಕ್ಯಾಪ್ಚಾ ಕೋಡ್ ಅಗತ್ಯವಿದೆ. ಇದಲ್ಲದೆ, ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶಗಳು ಡಿಜಿಲಾಕರ್‌ನಲ್ಲಿ ಲಭ್ಯವಿದ್ದು, ಅಧಿಕೃತ ದಾಖಲೆಗಳನ್ನು ಅಲ್ಲಿ ಪಡೆಯಬಹುದು.

1) ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್‌ cisce.org ಅಥವಾ results.cisce.org ಗೆ ಭೇಟಿ ನೀಡಬೇಕು

2) ಅಲ್ಲಿ ಹೋಮ್‌ ಪೇಜ್‌ನಲ್ಲಿರುವ 'ICSE, ISC Result 2024' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

3) ಆಗ ತೆರೆದುಕೊಳ್ಳುವ ಪುಟದಲ್ಲಿ ಲಾಗಿನ್ ವಿವರ ನೀಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು.

4) ಇಷ್ಟಾಗುತ್ತಲೇ ಪರದೆಯ ಮೇಲೆ ಪೂರ್ಣ ಫಲಿತಾಂಶ ಕಾಣುತ್ತದೆ.

5) ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದನ್ನು ಮುದ್ರಿಸಿ ಭವಿಷ್ಯದ ಅಗತ್ಯಗಳಿಗೆ ಇಟ್ಟುಕೊಳ್ಳಬಹುದು.

IPL_Entry_Point