ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jee Advanced 2024 Result: ಜೆಇಇ ಅಡ್ವಾನ್ಸ್ಡ್ 2024 ಪ್ರಕಟ, ದೆಹಲಿಯ ವೇದ್‌ ಲಹೋಟಿ ಟಾಪರ್‌, ಫಲಿತಾಂಶ ಹೀಗೆ ವೀಕ್ಷಿಸಿ

JEE Advanced 2024 result: ಜೆಇಇ ಅಡ್ವಾನ್ಸ್ಡ್ 2024 ಪ್ರಕಟ, ದೆಹಲಿಯ ವೇದ್‌ ಲಹೋಟಿ ಟಾಪರ್‌, ಫಲಿತಾಂಶ ಹೀಗೆ ವೀಕ್ಷಿಸಿ

Exam Results ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಗಳ ಫಲಿತಾಂಶ(JEE Advanced 2024 result) ಪ್ರಕಟಿಸಲಾಗಿದೆ.

ಫಲಿತಾಂಶ ವೀಕ್ಷಣೆಗೆ ಅಣಿಯಾದ ವಿದ್ಯಾರ್ಥಿನಿಯರು.
ಫಲಿತಾಂಶ ವೀಕ್ಷಣೆಗೆ ಅಣಿಯಾದ ವಿದ್ಯಾರ್ಥಿನಿಯರು.

ಚೆನ್ನೈ: ಜೆಇಇ ಅಡ್ವಾನ್ಸ್ಡ್ 2024 ರ ಫಲಿತಾಂಶವನ್ನು ಭಾನುವಾರ ಪ್ರಕಟಿಸಲಾಗಿದೆ. ಈ ವರ್ಷ, ಐಐಟಿ ದೆಹಲಿ ವಲಯದ ವೇದ್ ಲಹೋಟಿ 360 ರಲ್ಲಿ 355 ಅಂಕಗಳನ್ನು ಪಡೆಯುವ ಮೂಲಕ ಭಾರತದ ಕಠಿಣ ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ,ಮದ್ರಾಸ್‌ JEE Advanced 2024 result ಫಲಿತಾಂಶವನ್ನು jeeadv.ac.in ಪ್ರಕಟಿಸಲಿದೆ. ಈ ಜಂಟಿ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಜೆಇಇ ಅಡ್ವಾನ್ಸಡ್‌ 2024 ಪರೀಕ್ಷೆಯು ಮೇ ನಲ್ಲಿ ಎರಡು ಶಿಫ್ಟ್‌ನಲ್ಲಿ ನಡೆದಿತ್ತು. ಪೇಪರ್‌ 1 ಪರೀಕ್ಷೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆದಿತ್ತು. ಪತ್ರಿಕೆ 2 ಅನ್ನು ಮಧ್ಯಾಹ್ನ 2.30 ರಿಂದ 5.30 ರವರೆಗೆ ನಡೆಸಲಾಗಿತ್ತು.

ಈ ಬಾರಿ ಪರೀಕ್ಷೆ ನಡೆಸುವ ಹೊಣೆಯನ್ನು ಐಐಟಿ ಮದ್ರಾಸ್‌ ವಹಿಸಿಕೊಂಡಿತ್ತು. ಜೆಇಇ ಅಡ್ವಾನ್ಸ್‌ಡ್‌ (JEE Advanced) ಪರೀಕ್ಷೆಗೆ ಈ ಸಾರಿ 48,248 ವಿದ್ಯಾರ್ಥಿಗಳು ಜೆಇಇ‌ ಅಡ್ವಾನ್ಸ್ಡ್ ಪರೀಕ್ಷೆ ಪಾಸಾಗಿದ್ದಾರೆ. ಇದರಲ್ಲಿ 7964 ವಿದ್ಯಾರ್ಥಿನಿಯರಿದ್ದಾರೆ. ಮುಂಬೈನ ದ್ವಿಜ ಪಟೇಲ್ ಅವರು ವಿದ್ಯಾರ್ಥಿನಿಯರಲ್ಲಿ ಪ್ರಥಮ ಸ್ಥಾನ (360ಕ್ಕೆ 322) ಪಡೆದಿದ್ದಾರೆ. ದೇಶದ ವಿವಿಧ ಐಐಟಿಗಳಲ್ಲಿ ಪ್ರವೇಶ ಪಡೆಯಲು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ನಡೆಸಲಾಗುತ್ತದೆ.

ಜೆಇಇ ಅಡ್ವಾನ್ಸಡ್‌ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?

ಜೆಇಇ ಅಡ್ವಾನ್ಸಡ್‌ ಫಲಿತಾಂಶ ವೀಕ್ಷಣೆಗೆ ಈ ಮುಂದಿನ ಹಂತಗಳನ್ನು ಅನುಸರಿಸಿ.

ಮೊದಲಿಗೆ ಜೆಇಇ ಅಧಿಕೃತ ವೆಬ್‌ಸೈಟ್‌ jeeadv.ac.in ಗೆ ಭೇಟಿ ನೀಡಿ.

JEE Advanced 2024 Result ಲಿಂಕ್‌ ಅನ್ನು ಕ್ಲಿಕ್‌ ಮಾಡಿ. ಈ ಲಿಂಕ್‌ ಮುಖಪುಟದಲ್ಲಿ ಲಭ್ಯವಿರುತ್ತದೆ.

ಲಾಗಿನ್‌ ವಿವರ ನೀಡಿ ಫಲಿತಾಂಶ ವೀಕ್ಷಿಸಿ.

ಫಲಿತಾಂಶದ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿ.

ಭವಿಷ್ಯದ ಉಪಯೋಗಕ್ಕಾಗಿ ಪ್ರಿಂಟೌಟ್‌ ತೆಗೆದುಕೊಳ್ಳಿ.

ಫಲಿತಾಂಶದ ಜತೆಗೆ ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಲಾಗುತ್ತದೆ. ಹೆಚ್ಚಿನ ವಿವರಕ್ಕಾಗಿ ಅಭ್ಯರ್ಥಿಗಳು ಜೆಇಇ ವೆಬ್‌ಸೈಟ್‌ಗೆ ಭೇಟಿ ನೀಡಿ.

ಟಾಪರ್‌ ಲಹೋಟಿ ಯಶಸ್ಸಿನ ಹಾದಿ

ಇದೇ ವೇಳೆ ಟಾಪರ್‌ ವೇದ್‌ ಲಹೋಟಿ ತಮ್ಮ ಪರೀಕ್ಷೆ ತಯಾರಿ, ಯಶಸ್ಸಿನ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಿಮ್ಮ ಕಠಿಣ ಪರಿಶ್ರಮವು ಅದೇ ಮಟ್ಟದಲ್ಲಿರಬೇಕು. ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡಿ. ನಿಮ್ಮ ಗುರಿಗೆ ಅನುಗುಣವಾಗಿ ನೀವು ಶ್ರಮಿಸಿದರೆ, ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಲಿಯಲು ಸಾಧ್ಯವಾದಷ್ಟು ಅಭ್ಯಾಸ ಮಾಡುವುದು ಮುಖ್ಯ ಎಂದು ತಿಳಿಸಿದ್ದಾರೆ

ಲಹೋಟಿ ಅವರ ಅಧ್ಯಯನ ವೇಳಾಪಟ್ಟಿಯ ಬಗ್ಗೆ ಹಂಚಿಕೊಳ್ಳುವಾಗ, ಇದು ತರಗತಿಗಳನ್ನು ಹೇಗೆ ನಿಗದಿಪಡಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ.

ಎಂಟು ಗಂಟೆಗಳ ನಿದ್ರೆಯನ್ನು ನಾನೂ ಎಂದಿಗೂ ತಪ್ಪಿಸಲಿಲ್ಲ. ಅಧ್ಯಯನದ ಹೊರತಾಗಿ, ಚೆಸ್ ಮತ್ತು ಕ್ರಿಕೆಟ್ ಆಡುವುದನ್ನು ಆನಂದಿಸಿದೆ. ಓದುವುದರಲ್ಲಿ ಸಂತೋಷವನ್ನು ಕಂಡುಕೊಂಡೆ ಎನ್ನುವುದು ವೇದ್‌ ವಿವರಣೆ.

ಲಹೋಟಿ ಅವರ ತಂದೆ ಯೋಗೇಶ್ ಲಹೋಟಿ ರಿಲಯನ್ಸ್ ಜಿಯೋದಲ್ಲಿ ಕನ್ಸ್ಟ್ರಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಜಯಾ ಲಹೋಟಿ ಗೃಹಿಣಿಯಾಗಿದ್ದಾರೆ. ವೇದ್ ಅವರಿಗೆ ನಿಜವಾದ ಸ್ಫೂರ್ತಿ ಅವರ ತಾಯಿ ಜಯಾ ಲಹೋಟಿ ಮತ್ತು ಅವರ ಅಜ್ಜ ಆರ್.ಸಿ.ಸೋಮಾನಿ ಅವರಿಂದ ಬಂದಿದೆ. ಸಮಸ್ಯೆಗಳಿದ್ದಾಗಲೆಲ್ಲಾ ಅವರೊಂದಿಗೆ ಮಾತನಾಡುತ್ತಾರೆ ಮತ್ತು ಅವರ ಸಲಹೆಗಳ ಆಧಾರದ ಮೇಲೆ ಓದಿನ ಹಾದಿಯನ್ನು ವೇದ್‌ ರೂಪಿಸಿಕೊಂಡು ಯಶಸ್ಸು ಪಡೆದಿರುವುದು ವಿಶೇಷ.

ಟಿ20 ವರ್ಲ್ಡ್‌ಕಪ್ 2024