ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ, ಒಟ್ಟು 190 ಹುದ್ದೆಗಳು; ಅಪ್ಲೈ ಮಾಡೋಕೆ ಬೇಗ ರೆಡಿ ಆಗಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ, ಒಟ್ಟು 190 ಹುದ್ದೆಗಳು; ಅಪ್ಲೈ ಮಾಡೋಕೆ ಬೇಗ ರೆಡಿ ಆಗಿ

ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ, ಒಟ್ಟು 190 ಹುದ್ದೆಗಳು; ಅಪ್ಲೈ ಮಾಡೋಕೆ ಬೇಗ ರೆಡಿ ಆಗಿ

Konkan Railway Recruitment 2024: ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳಿಗೆ ನೇಮಕಾತಿ ಶುರುವಾಗಿದೆ. ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ ಇದ್ದು, ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಪ್ರಥಮ ಪ್ರಾಶಸ್ತ್ಯವಿದೆ. ಹಾಗಾಗಿ, ಅಪ್ಲೈ ಮಾಡೋಕೆ ಬೇಗ ರೆಡಿ ಆಗಿ. ಇಲ್ಲಿದೆ ಉಳಿದ ವಿವರ, ಉದ್ಯೋಗ ನೇಮಕಾತಿ ಅಧಿಸೂಚನೆಯ ಡೈರೆಕ್ಟ್ ಲಿಂಕ್‌.

ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ, ಒಟ್ಟು 190 ಹುದ್ದೆಗಳು
ಕರ್ನಾಟಕದವರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ, ಒಟ್ಟು 190 ಹುದ್ದೆಗಳು

ಬೆಂಗಳೂರು/ನವದೆಹಲಿ: ಇಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಮಾಡಿದವರ ಗಮನಕ್ಕೆ. ಕೊಂಕಣ ರೈಲ್ವೆಯಲ್ಲಿ ಕರ್ನಾಟಕದವರಿಗೂ ಉದ್ಯೋಗಾವಕಾಶ ಇದ್ದು, ಇದೇ ಸೆಪ್ಟೆಂಬರ್ 16ಕ್ಕೆ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಒಟ್ಟು 190 ಹುದ್ದೆಗಳನ್ನು ಭರ್ತಿ ಮಾಡಲು ಕೊಂಕಣ ರೈಲ್ವೆ ಮುಂದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಇದರಲ್ಲಿ ಲೆವೆಲ್ 1 ರಿಂದ ಲೆವೆಲ್ 7 ರ ತನಕದ ಹುದ್ದೆಗಳಿದ್ದು ತಿಂಗಳಿಗೆ 18,000 ರೂಪಾಯಿಯಿಂದ 45,000 ರೂಪಾಯಿ ತನಕದ ವೇತನ ಶ್ರೇಣಿ ಇದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕೊಂಕಣ ರೈಲ್ವೆ ನಿಗಮ ನಿಯಮತಿ ಪ್ರಕಟಿಸಿದ್ದು, ವಿವಿಧ ವಿಭಾಗಗಳ ಖಾಲಿ ಹುದ್ದೆ ಭರ್ತಿ ಮಾಡುವುದಕ್ಕೆ ಸಂಬಂಧಿಸಿದ ವಿಸ್ತೃತ ಮಾಹಿತಿ ಒದಗಿಸಿದೆ.

ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 6 ರವರೆಗೆ konkanrailway.com ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಇರುವಂತಹ 190 ಖಾಲಿ ಹುದ್ದೆಗಳ ಅರ್ಹತಾ ಮಾನದಂಡಗಳು ಮತ್ತು ಇತರ ವಿವರಗಳು ಹೀಗಿವೆ.

ಕೊಂಕಣ ರೈಲ್ವೆ ನೇಮಕಾತಿ 2024; ಹುದ್ದೆಗಳ ವಿವರ


ಎಲೆಕ್ಟ್ರಿಕಲ್ ಡಿಪಾರ್ಟ್‌ಮೆಂಟ್‌ -

ಹಿರಿಯ ಸೆಕ್ಷನ್ ಎಂಜಿನಿಯರ್ ಹುದ್ದೆ - 5

ಟೆಕ್ನಿಷಿಯನ್ - I, II ಹುದ್ದೆಗಳು- 15

ಅಸಿಸ್ಟೆಂಟ್ ಲೋಕೊ ಪೈಲಟ್‌ ಹುದ್ದೆಗಳು -15

ಸಿವಿಲ್ ಡಿಪಾರ್ಟ್‌ಮೆಂಟ್‌

ಸೀನಿಯರ್ ಸೆಕ್ಷನ್ ಎಂಜಿನಿಯರ್ ಹುದ್ದೆ- 5

ಟ್ರಾಕ್‌ ಮೇನ್‌ಟೇನರ್ ಹುದ್ದೆ - 35

ಮೆಕಾನಿಕಲ್ ಡಿಪಾರ್ಟ್‌ಮೆಂಟ್‌

ಟೆಕ್ನಿಷಿಯನ್ - I, II ಹುದ್ದೆಗಳು- 20

ಆಪರೇಟಿಂಗ್ ಡಿಪಾರ್ಟ್‌ಮೆಂಟ್‌

ಸ್ಟೇಷನ್ ಮಾಸ್ಟರ್‌ ಹುದ್ದೆಗಳು - 10

ಗೂಡ್ಸ್ ಟ್ರೇನ್‌ ಮ್ಯಾನೇಜರ್ ಹುದ್ದೆ- 5

ಪಾಯಿಂಟ್ಸ್‌ ಮ್ಯಾನ್ ಹುದ್ದೆ - 60

ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಷನ್ ಡಿಪಾರ್ಟ್‌ಮೆಂಟ್‌

ಇಎಸ್‌ಟಿಎಂ III ಹುದ್ದೆ - 15

ವಾಣಿಜ್ಯ ವಿಭಾಗ

ಕಮರ್ಷಿಯಲ್ ಸೂಪರ್‌ವೈಸರ್ ಹುದ್ದೆ - 5

ಕೊಂಕಣ ರೈಲ್ವೆ ನೇಮಕಾತಿ 2024ಕ್ಕೆ ಯಾರು ಅರ್ಜಿ ಸಲ್ಲಿಸಬಹುದು

1) ಕೊಂಕಣ ರೈಲ್ವೆ ಮಾರ್ಗ ಅಥವಾ ಯೋಜನೆ ಕಾಮಗಾರಿ ವೇಳೆ ಭೂಮಿ ಕಳೆದುಕೊಂಡವರು ಅಂದರೆ ಕೆಆರ್‌ಸಿಎಲ್ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಭೂಮಿ ಬಿಟ್ಟುಕೊಟ್ಟವರಿಗೆ ಪ್ರಥಮ ಪ್ರಾಶಸ್ತ್ಯ. ಈ ಹುದ್ದೆಗಳಿಗೆ ಭೂಮಿ ಕೊಟ್ಟವರ ಸಂಗಾತಿ (ಹೆಂಡತಿ/ಪತಿ), ಮಗ, ಮಗಳು, ಮೊಮ್ಮಗ ಮತ್ತು ಮೊಮ್ಮಗಳು ಸಹ ಅರ್ಜಿ ಸಲ್ಲಿಸಬಹುದು.

2) ಮಹಾರಾಷ್ಟ್ರ, ಗೋವಾ, ಅಥವಾ ಕರ್ನಾಟಕದಲ್ಲಿ ನೆಲೆಸಿರುವ ಅಭ್ಯರ್ಥಿಗಳು ಮತ್ತು ಕೊಂಕಣ ರೈಲ್ವೆ ಮಾರ್ಗದಲ್ಲಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾದ ಮಾನ್ಯ ಉದ್ಯೋಗ ವಿನಿಮಯ ಕಾರ್ಡ್‌ಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಇವರಿಗೆ ಎರಡನೇ ಆದ್ಯತೆ ಸಿಗಲಿದೆ.

3) ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕದ ನಿವಾಸಿಗಳಿಗೆ ಮೂರನೇ ಆದ್ಯತೆ ಸಿಗಲಿದೆ. ಇದಲ್ಲದೆ, ಕೆಆರ್‌ಸಿಎಲ್ ಉದ್ಯೋಗಿಗಳು ಅಂದರೆ ಕನಿಷ್ಠ ಮೂರು ವರ್ಷ ನಿಯತವಾಗಿ ಸೇವೆ ಸಲ್ಲಿಸಿದವರಿಗೂ ಮೂರನೇ ಆದ್ಯತೆ ಸಿಗಲಿದೆ.

ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ಆಗಸ್ಟ್ 1 ರಂದು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ 36 ವರ್ಷಕ್ಕಿಂತ ಹೆಚ್ಚಿರಬಾರದು. ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದಾಗಿ ವಯಸ್ಸಿನ ಮಿತಿಯನ್ನು ಮೀರಿದ ಅಭ್ಯರ್ಥಿಗಳಿಗೆ ಪರಿಹಾರವನ್ನು ಒದಗಿಸಲು ಗರಿಷ್ಠ ವಯಸ್ಸಿನ ಮಿತಿಯನ್ನು 33 ರಿಂದ 36 ಕ್ಕೆ ಹೆಚ್ಚಿಸಲಾಗಿದೆ ಎಂದು ಕೆಆರ್‌ಸಿಎಲ್‌ ತಿಳಿಸಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಹೆಚ್ಚಿನ ಸಡಿಲಿಕ ಸಿಗಲಿದೆ.

ಹೆಚ್ಚಿನ ಮಾಹಿತಿಗೆ ಕೊಂಕಣ ರೈಲ್ವೆಯ ನೇಮಕಾತಿ ಅಧಿಸೂಚನೆ ಇಲ್ಲಿದೆ - ಕ್ಲಿಕ್ ಮಾಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.