ಕನ್ನಡ ಸುದ್ದಿ  /  Nation And-world  /  Education News Nirf Ranking Iisc Bangalore Is The Best University In Country Iit Madras Number One For The 5th Time Rmy

NIRF Ranking: ಬೆಂಗಳೂರಿನ ಐಐಎಸ್‌ಸಿ ದೇಶದಲ್ಲೇ ಉತ್ತಮ ವಿಶ್ವವಿದ್ಯಾಲಯ; 5ನೇ ಬಾರಿ ಮದ್ರಾಸ್ ಐಐಟಿ ನಂಬರ್ 1

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ದೇಶದಲ್ಲಿ ಉತ್ತಮ ವಿಶ್ವವಿದ್ಯಾಲಯವಾಗಿದೆ. ಇಂದು ಬಿಡುಗಡೆ ಮಾಡಿದ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ಸಂಸ್ಥೆ ದೇಶದಲ್ಲಿ ಉತ್ತಮ ವಿಶ್ವವಿದ್ಯಾಲಯ ಎನಿಸಿದೆ. (Twitter)
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ಸಂಸ್ಥೆ ದೇಶದಲ್ಲಿ ಉತ್ತಮ ವಿಶ್ವವಿದ್ಯಾಲಯ ಎನಿಸಿದೆ. (Twitter)

ನವದೆಹಲಿ: ಭಾರತದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು( National Institutional Ranking Framework) ಎನ್‌ಐಆರ್‌ಎಫ್ 2023ರ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ (Indian Institute of Science) ದೇಶದಲ್ಲಿ ಉತ್ತಮ ವಿಶ್ವವಿದ್ಯಾಲಯ ಎನಿಸಿದೆ.

ದೆಹಲಿಯಲ್ಲಿಂದು (ಜೂನ್ 5, ಸೋಮವಾರ) ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಡಾ ರಾಜ್‌ಕುಮಾರ್ ರಂಜನ್ ಸಿಂಗ್ ಅವರು 2023ನೇ ಸಾಲಿನ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ಐಐಎಸ್‌ಸಿ ಉತ್ತಮ ವಿವಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ.

ಬೆಂಗಳೂರಿನ ಐಐಎಸ್‌ಸಿ ನಂತರದ ಸ್ಥಾನದಲ್ಲಿ ದಹೆಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಇವೆ. ಒಟ್ಟಾರೆ ಉತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಚೆನ್ನೈನ ಮದ್ರಾಸ್ ಐಐಟಿ 5ನೇ ಬಾರಿಯೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ.

ಬೋಧನೆ ಕಲಿಕೆ ಹಾಗೂ ಸಂಪನ್ಮೂಲಗಳು, ಸಂಶೋಧನೆ, ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಗ್ರಹಿಕೆ ಹೀಗೆ ಹಲವು ಅಂಶಗಳ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಶ್ರೇಣಿಯನ್ನು ನೀಡಲಾಗುತ್ತದೆ.

ಒಟ್ಟಾರೆ ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಐಐಟಿ ಮದ್ರಾಸ್ ಅಗ್ರಸ್ಥಾನದಲ್ಲಿ ಇದ್ದರೆ, ಬೆಂಗಳೂರಿನ ಐಐಎಸ್‌ಸಿ 2ನೇ ಸ್ಥಾನದಲ್ಲಿ ಇದೆ. ದೆಹಲಿಯ ಐಐಟಿ ಮೂರನೇ ಸ್ಥಾನದಲ್ಲಿದೆ.

ಒಟ್ಟಾರೆ ಎನ್ಐ‌ಆರ್‌ಎಫ್ ರ‍್ಯಾಂಕಿಂಗ್ 2023 ಪಟ್ಟಿಯಲ್ಲಿ ಅಗ್ರ ಸ್ಥಾನದ ಶಿಕ್ಷಣ ಸಂಸ್ಥೆಗಳು

ಐಐಟಿ ಮದ್ರಾಸ್

ಐಐಎಸ್‌ಸಿ, ಬೆಂಗಳೂರು

ಐಐಟಿ, ದೆಹಲಿ,

ಐಐಟಿ, ಬಾಂಬೆ

ಐಐಟಿ, ಕಾನ್ಪುರ್

ಏಮ್ಸ್, ದೆಹಲಿ

ಐಐಟಿ, ಖರಗ್‌ಪುರ್,

ಐಐಟಿ, ರೂರ್ಕಿ,

ಐಐಟಿ ಗುವಾಹಟಿ

ಜೆಎನ್‌ಯು, ದೆಹಲಿ

NIRF ರ‍್ಯಾಂಕಿಂಗ್ 2023 ಅಗ್ರ ವಿಶ್ವವಿದ್ಯಾಲಯಗಳು

  1. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ), ಬೆಂಗಳೂರು
  2. ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ, ದೆಹಲಿ
  3. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ದೆಹಲಿ
  4. ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
  5. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ
  6. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ
  7. ಅಮೃತ ವಿಶ್ವವಿದ್ಯಾಪೀಠಂ, ಕೊಯಮತ್ತೂರು
  8. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೆಲ್ಲೂರು
  9. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಅಲಿಗಢ
  10. ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್

ಎನ್‌ಐಆರ್‌ಎಫ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳ ಅಗ್ರ 5 ಸಂಸ್ಥೆಗಳು

  1. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ
  2. ಐಸಿಎಆರ್-ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ, ಕರ್ನಾಲ್
  3. ಪಂಜಾಬ್ ಕೃಷಿ ವಿಶ್ವವಿದ್ಯಾಲಯ, ಲೂಧಿಯಾನ
  4. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ
  5. ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಕೊಯಮತ್ತೂರು

ಇದನ್ನೂ ಓದಿ: ನಾಳೆಯಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಪರಿಷ್ಕೃತ ವೇಳಾಪಟ್ಟಿಯಲ್ಲಿರುವ ಪ್ರಮುಖ 10 ಅಂಶಗಳು

IPL_Entry_Point