ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ts Inter Results 2024: ಇಂದು ತೆಲಂಗಾಣ ಇಂಟರ್ ಫಲಿತಾಂಶಗಳು, Ht ತೆಲುಗಿನಲ್ಲಿ ರಿಸಲ್ಟ್‌ ವಿವರ ಶೀಘ್ರ ಲಭ್ಯ

TS Inter Results 2024: ಇಂದು ತೆಲಂಗಾಣ ಇಂಟರ್ ಫಲಿತಾಂಶಗಳು, HT ತೆಲುಗಿನಲ್ಲಿ ರಿಸಲ್ಟ್‌ ವಿವರ ಶೀಘ್ರ ಲಭ್ಯ

ತೆಲಂಗಾಣ ಇಂಟರ್ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ವಿದ್ಯಾರ್ಥಿಗಳು HT ತೆಲುಗಿನಲ್ಲಿ ಫಲಿತಾಂಶಗಳನ್ನು ಕ್ಷಿಪ್ರವಾಗಿ ಪರಿಶೀಲಿಸಬಹುದು.

TS Inter Results 2024: ಇಂದು ತೆಲಂಗಾಣ ಇಂಟರ್ ಫಲಿತಾಂಶ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ)
TS Inter Results 2024: ಇಂದು ತೆಲಂಗಾಣ ಇಂಟರ್ ಫಲಿತಾಂಶ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ)

ಹೈದರಾಬಾದ್‌: ತೆಲಂಗಾಣ ಇಂಟರ್ ಫಲಿತಾಂಶಗಳು (TS Inter Results 2024) ಇಂದು (ಏಪ್ರಿಲ್ 24) ಪ್ರಕಟವಾಗಲಿದೆ. ತೆಲಂಗಾಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ 11 ಗಂಟೆಗೆ ಇಂಟರ್ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಟರ್ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್‌ಗಳ ಜೊತೆಗೆ HT ತೆಲುಗು ವೆಬ್‌ಸೈಟ್‌ನಲ್ಲೂ ನೀವು ತೆಲಂಗಾಣ ಇಂಟರ್ ಫಲಿತಾಂಶಗಳನ್ನು ಸುಲಭವಾಗಿ ವೀಕ್ಷಿಸಬಹುದು. ವಿದ್ಯಾರ್ಥಿಗಳು ಒಂದೇ ಕ್ಲಿಕ್‌ನಲ್ಲಿ ಟಿಎಸ್ ಇಂಟರ್ ಫಸ್ಟ್ ಇಯರ್, ಟಿಎಸ್ ಇಂಟರ್ ಸೆಕೆಂಡ್ ಇಯರ್, ಟಿಎಸ್ ಇಂಟರ್ ವೊಕೇಶನಲ್ ಫಸ್ಟ್ ಇಯರ್, ಟಿಎಸ್ ಇಂಟರ್ ವೊಕೇಶನಲ್ ದ್ವಿತೀಯ ವರ್ಷದ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು. ಈ ವರ್ಷ 9.80 ಲಕ್ಷ ವಿದ್ಯಾರ್ಥಿಗಳು ಇಂಟರ್ ಪರೀಕ್ಷೆಗೆ ಹಾಜರಾಗಿದ್ದರು.

HT ತೆಲುಗು ವೆಬ್‌ಸೈಟ್‌ ರಿಸಲ್ಟ್‌ ಪೇಜ್‌ನಲ್ಲಿ ಏನಿದೆ ವಿಶೇಷ

ತೆಲಂಗಾಣ ಇಂಟರ್ ಸೆಕೆಂಡರಿ ಫಲಿತಾಂಶ, ತೆಲಂಗಾಣ ಇಂಟರ್ ಫಸ್ಟ್‌ ಇಯರ್ ಫಲಿತಾಂಶ, ತೆಲಂಗಾಣ ಇಂಟರ್ ವೊಕೇಶನಲ್ ಸೆಕೆಂಡರಿ ಫಲಿತಾಂಶ, ತೆಲಂಗಾಣ ಇಂಟರ್ ವೊಕೇಶನಲ್ ಫಸ್ಟ್ ಇಯರ್ ಫಲಿತಾಂಶಗಳನ್ನು ವೀಕ್ಷಿಸುವುದನ್ನು ಸರಳಗೊಳಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವಿಂಡೋಗಳನ್ನು ಒದಗಿಸಿದ್ದು, ಅಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ನಮೂದಿಸಿ ಬಳಿಕ ಚೆಕ್ ರಿಸಲ್ಟ್ ಐಕಾನ್ ಕ್ಲಿಕ್ ಮಾಡಿದರೆ ಸಾಕು. ಅವರ ಫಲಿತಾಂಶ ಪರದೆ ಮೇಲೆ ಕಾಣಿಸಿಕೊಳ್ಳಲಿದೆ.

ತೆಲಂಗಾಣ ಇಂಟರ್ ಸೆಕೆಂಡರಿ ಫಲಿತಾಂಶ ನೋಡಲು ನೇರ ಲಿಂಕ್‌: https://telugu.hindustantimes.com/telangana-board-inter-second-year-result-2024

ತೆಲಂಗಾಣ ಇಂಟರ್ ಫಸ್ಟ್‌ ಇಯರ್ ಫಲಿತಾಂಶ ನೋಡಲು ನೇರ ಲಿಂಕ್‌ : https://telugu.hindustantimes.com/telangana-board-inter-first-year-result-2024

ತೆಲಂಗಾಣ ಇಂಟರ್ ವೊಕೇಶನಲ್ ಸೆಕೆಂಡರಿ ಫಲಿತಾಂಶ ವೀಕ್ಷಣೆಗೆ ನೇರ ಲಿಂಕ್‌ : https://telugu.hindustantimes.com/telangana-board-inter-second-year-voc-result-2024

ತೆಲಂಗಾಣ ಇಂಟರ್ ವೊಕೇಶನಲ್ ಫಸ್ಟ್ ಇಯರ್ ಫಲಿತಾಂಶ ನೋಡುವುದಕ್ಕೆ ಇರುವ ನೇರ ಲಿಂಕ್: https://telugu.hindustantimes.com/telangana-board-inter-first-year-voc-result-2024

ತೆಲಂಗಾಣದಲ್ಲಿ ಇಂಟರ್ ಪರೀಕ್ಷೆ ನಡೆದದ್ದು ಯಾವಾಗ

ತೆಲಂಗಾಣ ರಾಜ್ಯದಲ್ಲಿ ತೆಲಂಗಾಣ ಇಂಟರ್ ಪರೀಕ್ಷೆಗಳನ್ನು (ಟಿಎಸ್ ಇಂಟರ್ ಪರೀಕ್ಷೆಗಳು 2024) ಈ ವರ್ಷ ಫೆಬ್ರವರಿ 28 ರಿಂದ ಮಾರ್ಚ್ 19 ರವರೆಗೆ ನಡೆಸಲಾಯಿತು. ಈ ಬಾರಿ 9,80,978 ವಿದ್ಯಾರ್ಥಿಗಳು ಇಂಟರ್ ಪರೀಕ್ಷೆಗೆ ಹಾಜರಾಗಿದ್ದರು. ಮಾರ್ಚ್ 10 ರಿಂದ ಮೌಲ್ಯಮಾಪನ ​ಪ್ರಕ್ರಿಯೆ ಆರಂಭವಾಗಿತ್ತು. ಏಪ್ರಿಲ್ 10ರಂದು ಮೌಲ್ಯಮಾಪನ ಪ್ರಕ್ರಿಯೆಯನ್ನು ಮೌಲ್ಯಮಾಪಕರು ಪೂರ್ಣಗೊಳಿಸಿದ್ದಾರೆ. ಅದಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಮೂರು ಬಾರಿ ಪರಿಶೀಲಿಸಿ ಅಂಕಗಳನ್ನು ಲೆಕ್ಕಹಾಕಿ ಒಟ್ಟು ಅಂಕಗಳನ್ನು ನಮೂದಿಸಲಾಗಿದೆ.

ಕಳೆದ ವರ್ಷ ಮೇ 9ರಂದು ಇಂಟರ್ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ, 15 ದಿನ ಮುಂಚಿತವಾಗಿಯೇ ಇಂಟರ್ ಪ್ರಥಮ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

IPL_Entry_Point