‘ಸ್ವಯಂ‘ ಪರೀಕ್ಷೆ 2025ರ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿದೆ ನೇರ ಲಿಂಕ್
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ‘ಸ್ವಯಂ‘(SWAYAM) ಪರೀಕ್ಷೆಯನ್ನು ಮೇ 24, 25 ಮತ್ತು 31, ರಂದು ನಡೆಸಲಿದೆ. ಇದರ ಪ್ರವೇಶ ಪತ್ರಿಕೆ ಬಿಡುಗಡೆಯಾಗಿದ್ದು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿದೆ ನೇರ ಲಿಂಕ್.

ಸ್ವಯಂ ಪರೀಕ್ಷೆ 2025ರ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿದೆ ನೇರ ಲಿಂಕ್
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜನವರಿ ಸೆಮಿಸ್ಟರ್‌ನ ಸ್ಟಡಿ ವೆಬ್ಸ್ ಆಫ್ ಆಕ್ಟಿವ್ ಲರ್ನಿಂಗ್ ಫಾರ್ ಯಂಗ್ ಆಸ್ಪೈರಿಂಗ್ ಮೈಂಡ್ಸ್ (SWAYAM) ಪರೀಕ್ಷೆಯನ್ನು ಮೇ 24, 25 ಮತ್ತು 31 ರಂದು ಎರಡು ಪಾಳಿಗಳಲ್ಲಿ ನಡೆಸಲಿದೆ. ಮೊದಲ ಪರೀಕ್ಷೆಯು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಎರಡನೇ ಪಾಳಿಯು ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ ನಡೆಯಲಿದೆ.
ನೀವು ಈ ಪರೀಕ್ಷೆ ಬರೆಯುತ್ತಿದ್ದು, ಇನ್ನೂ ಪ್ರವೇಶ ಪತ್ರಿಕೆ ಡೌನ್‌ಲೋಡ್ ಮಾಡಿಕೊಂಡಿಲ್ಲ ಎಂದರೆ https://exams.nta.ac.in/swayam ಈ ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲಿ ನೀವು ನಿಮ್ಮ ಪ್ರವೇಶ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸ್ವಯಂ ಪರೀಕ್ಷೆಯ ಆಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- ಅಧಿಕೃತ ವೆಬ್‌ಸೈಟ್ exams.nta.ac.in/swayamಗೆ ಭೇಟಿ ನೀಡಿ.
- ಮುಖಪುಟದಲ್ಲಿ ಸ್ವಯಂ ಅಡ್ಮಿಟ್ ಕಾರ್ಡ್ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಅಪ್ಲಿಕೇಷನ್ ನಂಬರ್, ಹುಟ್ಟಿದ ದಿನಾಂಕ ಮತ್ತು ಸೆಕ್ಯೂರಿಟಿ ಪಿನ್ ಮುಂತಾದ ಲಾಗಿನ್ ಕ್ರೆಡೆಂಷಿನಲ್ ನಮೂದಿಸಿ.
- ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
- ಈಗ ಅಡ್ಮಿಟ್ ಕಾರ್ಡ್ ಅಥವಾ ಪ್ರವೇಶ ಪತ್ರಿಕೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
- ಈಗ ಪ್ರವೇಶ ಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳಿ.
ಸ್ವಯಂ ಪರೀಕ್ಷೆಯ ಸ್ವರೂಪ
- ಸ್ವಯಂ ಜನವರಿ 2025 ಪರೀಕ್ಷೆಯನ್ನು ಒಟ್ಟು 594 ಕೋರ್ಸ್‌ಗಳಿಗೆ ನಡೆಸಲಾಗುವುದು.
- ಈ ವರ್ಷ ಪರೀಕ್ಷೆಯು ಆನ್‌ಲೈನ್ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮತ್ತು ಆಫ್‌ಲೈನ್ (ಪೆನ್ ಮತ್ತು ಪೇಪರ್ ಪರೀಕ್ಷೆ) ಎರಡರಲ್ಲೂ ನಡೆಯಲಿದೆ.
- ಈ ಪರೀಕ್ಷೆಯು ಇಂಗ್ಲಿಷ್‌ನಲ್ಲಿರುತ್ತದೆ. ಭಾಷಾ ಕೋರ್ಸ್‌ಗಳು ಆಯಾ ಆಯಾ ಭಾಷೆಯಲ್ಲಿರುತ್ತದೆ.
ವಿಭಾಗ
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.