ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿದೆ ಡೈರೆಕ್ಟ್ ಲಿಂಕ್
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (CISCE) ಐಸಿಎಸ್‌ಇ 10ನೇ ತರಗತಿ ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು results.cisce.org ಮತ್ತು DigiLocker ನಲ್ಲಿ ರಿಸಲ್ಟ್ ನೋಡಬಹುದು.

ನವದೆಹಲಿ: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಇಂದು ಬೆಳಿಗ್ಗೆ 11 ಗಂಟೆಗೆ 2024–25ನೇ ಸಾಲಿನ ಐಸಿಎಸ್‌ಸಿ 10 ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಭಾರತದಾದ್ಯಂತ ಹಲವು ಮಕ್ಕಳು ತಮ್ಮ 10 ಮತ್ತು 12ನೇ ತರಗತಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದರು.
ಫೆಬ್ರುವರಿ 21 ರಿಂದ ಮಾರ್ಚ್ 27ರವರೆಗೆ ದೇಶದಾದ್ಯಂತ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ನಡೆದಿತ್ತು. ಫೆಬ್ರುವರಿ 13 ರಿಂದ ಏಪ್ರಿಲ್ 5ರವರೆಗೆ ಐಎಸ್‌ಸಿ 12ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅಧಿಕೃತ ಘೋಷಣೆಯ ನಂತರ ಫಲಿತಾಂಶಗಳನ್ನು results.cisce.org ಮತ್ತು ಡಿಜಿಲಾಕರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ರಿಸಲ್ಟ್ ನೋಡುವುದು ಹೇಗೆ?
ಫಲಿತಾಂಶ ಅಧಿಕೃತವಾಗಿ ಘೋಷಣೆಯಾದ ನಂತರ results.cisce.org. ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಂತರ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಎಂದಿರುವಲ್ಲಿ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಯೂನಿಕ್ ಐಡಿ, ಇಂಡೆಕ್ಸ್ ನಂಬರ್ ಹಾಗೂ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ.
ನಂತರ ರಿಸ್ಟಲ್ ಡಿಸ್‌ಪ್ಲೇ ಮೇಲೆ ಬಂದಿರುತ್ತದೆ.
ಅದನ್ನು ಡೌನ್‌ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದು.
ಡಿಜಿಲಾಕರ್‌ನಲ್ಲಿ ರಿಸ್ಟಲ್ ನೋಡುವುದು
results.digilocker.gov.in. ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಲ್ಲಿ CISCE ವಿಭಾಗಕ್ಕೆ ಹೋಗಿ.
ಅಲ್ಲಿ Class X ಬಟನ್ ಒತ್ತಿ.
ನಂತರ ಲಾಗಿನ್ ಕ್ರೆಡಿಷಿಯಲ್ ನಮೂದಿಸಿ.
ಸಬ್‌ಮಿಟ್ ಕೊಟ್ಟರೆ ನಿಮ್ಮ ರಿಸಲ್ಟ್ ನೋಡಬಹುದು.
ಇದರಲ್ಲಿ ನೀವು ಪಿಯುಸಿ ರಿಸಲ್ಟ್ ಕೂಡ ನೋಡಬಹುದು.