Assembly Election Highlights: 3 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ; ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗೆಲುವು; ಮತದಾರರಿಗೆ ಮೋದಿ ನಮನ
Assembly Election Results Highlights: ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿಸಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆಗಳ ಪೈಕಿ 4 ರಾಜ್ಯಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ತೆಲಂಗಾಣ, ಛತ್ತೀಸ್‌ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ.
Assembly Election Results 2023 Highlights: ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಫಲಿತಾಂಶದ ಜನರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ಮುನ್ನುಡಿ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು. ಕರ್ನಾಟಕದ ನೆರೆಯ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಬಿಆರ್‌ಎಸ್ ಪಕ್ಷದ ಮುನ್ನಡೆ-ಹಿನ್ನಡೆ ಕುರಿತು ಕರ್ನಾಟಕದಲ್ಲಿಯೂ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದರು. ಎಲ್ಲ ನಾಲ್ಕು ರಾಜ್ಯಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು ಮೊದಲ ಫಲಿತಾಂಶ ದಿಕ್ಸೂಚಿಯಲ್ಲಿ ಅವಧಿಯಲ್ಲಿ ತೆಲಂಗಾಣ, ರಾಜಸ್ಥಾನದಲ್ಲಿ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿತ್ತು. ಫಲಿತಾಂಶದ ತಾಜಾ ಮಾಹಿತಿ, ಕ್ಷಣಕ್ಷಣದ ಅಪ್‌ಡೇಟ್ಸ್ kannada.hindustantimes.com ಜಾಲತಾಣದಲ್ಲಿ ಲಭ್ಯ.
5.55 PM: Election Results Live: ಲೋಕ ಕಲ್ಯಾಣಕ್ಕಾಗಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ
ʼಬಿಜೆಪಿಗೆ ಭರ್ಜರಿ ಜಯ ಸಿಕ್ಕಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿಯ ರಾಜಕೀಯ, ಅವರ ಭರವಸೆ, ಬಿಜೆಪಿ ಮೇಲಿನ ನಂಬಿಕೆ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಜನರು ಮತ ಹಾಕಿದ್ದಾರೆ. ಮೋದಿ ಅವರು ಆರಂಭಿಸಿದ ಅಭಿವೃದ್ಧಿಯ ಡಬಲ್ ಎಂಜಿನ್ ಸರ್ಕಾರಕ್ಕೆ ಜನ ಮತ ಹಾಕಿದ್ದಾರʼ ಎಂದು ಚುನಾವಣಾ ಫಲಿತಾಂಶದ ಕುರಿತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿಕೆ ನೀಡಿದ್ದಾರೆ.
5.43 PM: Election Results Live: ಶಿವರಾಜ್ ಸಿಂಗ್ ಚೌಹಾಣ್ 1,04,974 ಮತಗಳ ಅಂತರದಿಂದ ಗೆಲುವು
ಮಧ್ಯಪ್ರದೇಶ ಮುಖ್ಯಮಂತ್ರಿ ಬುಧ್ನಿ ಕ್ಷೇತ್ರದಿಂದ ಸ್ಪರ್ಧಿಸಿರುವ ಶಿವರಾಜ್ ಸಿಂಗ್ ಚೌಹಾಣ್ 1,04,974 ಮತಗಳ ಅಂತರದಿಂದ ಗೆದ್ದು ಒಟ್ಟು 1,64,951 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
5:10 PM: ಬಿಜೆಪಿ ಜಯಭೇರಿಗೆ ಮೋದಿ ಅಭಿನಂದನೆ
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವಿಗೆ ಅಭಿನಂದನೆ ಮೋದಿ ಸಲ್ಲಿಸಿದ್ದಾರೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಫಲಿತಾಂಶಗಳು ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದೊಂದಿಗೆ ದೃಢವಾಗಿ ಇದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ರಾಜ್ಯಗಳ ಜನರಿಗೆ ಅವರ ಅಚಲ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಮತ್ತು ಅವರ ಯೋಗಕ್ಷೇಮಕ್ಕಾಗಿ ನಾವು ದಣಿವರಿಯಿಲ್ಲದೆ ಶ್ರಮಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ.
ಶ್ರಮಿಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದಗಳು. ಅವರಲ್ಲಿ ಪ್ರತಿಯೊಬ್ಬರೂ ದಣಿವರಿಯದೆ ಕೆಲಸ ಮಾಡಿದ್ದಾರೆ ಮತ್ತು ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರಲ್ಲಿ ಎತ್ತಿ ತೋರಿಸಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
5 PM: ತೆಲಂಗಾಣ ಜನತೆಗೆ ಮೋದಿ ಧನ್ಯವಾದ
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲವಾದರೂ ತನ್ನ ನೆಲೆಯೇ ಅಲ್ಲ ಜಾಗದಲ್ಲಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನನ್ನ ಪ್ರೀತಿಯ ತೆಲಂಗಾಣದ ಸಹೋದರ ಸಹೋದರಿಯರೇ, ಬಿಜೆಪಿಗೆ ನೀವು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ, ಈ ಬೆಂಬಲವು ಹೆಚ್ಚುತ್ತಿದೆ ಮತ್ತು ಈ ಪ್ರವೃತ್ತಿಯು ಮುಂಬರುವ ದಿನಗಳಲ್ಲಿ ಮುಂದುವರಿಯುತ್ತದೆ. ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು ಮತ್ತು ನಾವು ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಶ್ರಮದಾಯಕ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ” ಎಂದು ತೆಲುಗು ಮತ್ತು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
4.22 PM: Telangana Election Results Live: ನಾವು ಒಟ್ಟಾಗಿದ್ದೇವೆ; ಹೈಕಮಾಂಡ್ ಸೂಚನೆಯಂತೆ ಮುಂದುವರಿಯುತ್ತೇವೆ; ಡಿಕೆ ಶಿವಕುಮಾರ್
ಇಂದು ಸಂಜೆಯೊಳಗೆ ಎಲ್ಲಾ ಶಾಸಕರನ್ನು ಬರ ಹೇಳಿದ್ದೇವೆ. ಎಲ್ಲರೂ ಬರುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ನಮಗೆ ಯಾವುದೇ ಬೆದರಿಕೆಯಿಲ್ಲ, ನಮ್ಮ ಜಾಗೃತೆಯಲ್ಲಿ ನಾವಿದ್ದೇವೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
4.05 PM: Telangana Election Results Live: ರಾಜಸ್ಥಾನದಲ್ಲಿ ಸಚಿನ್ ಪೈಲೆಟ್‌ಗೆ ಗೆಲುವು
ರಾಜಸ್ಥಾನದ ಟೊಂಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿನ್ ಪೈಲೆಟ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ ಒಟ್ಟು 1,05,812 ಮತಗಳನ್ನು ಗಳಿಸುವ ಮೂಲಕ 29,475 ಅಂತರದಿಂದ ಗೆಲುವು ಸಾಧಿಸಿದ್ದಾರೆ.
4.05 PM: Telangana Election Results Live: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ
ಮಧ್ಯಪ್ರದೇಶದ ಶಾಜಾಪುರ ಎಂಬಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪೋಲಿಸರು ಲಾಠಿ ಚಾರ್ಜ್ ನಡೆಸುವ ಮೂಲಕ ಗುಂಪನ್ನು ಚದುರಿಸಿದ್ದಾರೆ.
4:02 PM: Telangana Election Results Live: ಬಿಜೆಪಿಯು ಮಹಿಳೆಯರಿಗೆ ನೀಡುವ ಗೌರವಕ್ಕೆ ಸಂದ ಮತ; ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್
ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೋದಿ ಇದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅದು ಸಾಬೀತಾಗಿದೆ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜನರು ಬಿಜೆಪಿಗೆ ಮತ ನೀಡುತ್ತಿದ್ದಾರೆ. ಬಿಜೆಪಿಯು ಮಹಿಳೆಯರಿಗೆ ನೀಡುವ ಗೌರವ ಹಾಗೂ ದೇಶದ ರಕ್ಷಣೆಯ ಕಾರಣಕ್ಕೆ ಜನರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಇಂದಿನ ಚುನಾವಣಾ ಫಲಿತಾಂಶದ ಬಗ್ಗೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
3:57 PM: Telangana Election Results Live: ಕೆಟಿಆರ್ ಪ್ರತಿಕ್ರಿಯೆ ಸ್ವಾಗತಿಸಿ ರೇವಂತ್ ರೆಡ್ಡಿ
ನಾವು ನಿಮ್ಮ ಜೊತೆಗೆ ಇರುತ್ತೇವೆ. ಗೆದ್ದ ಮಾತ್ರಕ್ಕೆ ನಾವು ಜನರಿಂದ ದೂರಾಗುವುದಿಲ್ಲ. ನಮ್ಮ ಗೆಲುವನ್ನು ರಾಜ್ಯದ ಎಲ್ಲ ಜನರಿಗೂ, ರಾಜ್ಯಕ್ಕಾಗಿ ಹೋರಾಡಿದ ಅಮರ ವೀರರಿಗೆ ಅರ್ಪಿಸುತ್ತೇನೆ. ಮಾನವಹಕ್ಕುಗಳನ್ನು ಕಾಪಾಡಲು, ಪುನರುಜ್ಜೀವನಕ್ಕಾಗಿ ಶ್ರಮಿಸಲು ನಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತೇವೆ ಎಂದು ರೇವಂತ್ ರೆಡ್ಡಿ ಹೇಳಿದರು. ಪ್ರಜೆಗಳ ತೀರ್ಪನ್ನು ಗೌರವಿಸಿ, ನಮ್ಮನ್ನು ಅಭಿನಂದಿಸಿರುವ ಕೆ.ಟಿ.ರಾಮರಾವ್ ಅವರ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇನೆ. ಸರ್ಕಾರ ರಚನೆ ಮತ್ತು ಆಡಳಿತಕ್ಕೆ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದರು.
3:53 PM: Telangana Election Results Live: ಹೈದರಾಬಾದ್‌ನಲ್ಲಿ ರೇವಂತ್ ರೆಡ್ಡಿ ಪ್ರೆಸ್‌ಮೀಟ್
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ನಂತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ "ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಜೈ" ಎಂಬ ಘೋಷಣೆಗಳು ಮಾರ್ದನಿಸಿದವು. ತೆಲಂಗಾಣದ ಜನರು ಸೋನಿಯಾ ಗಾಂಧಿಯನ್ನು ಇಷ್ಟಪಡುತ್ತಾರೆ. ಇಲ್ಲಿನ ಜನರ ಆಕಾಂಕ್ಷೆಯನ್ನು ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿ ಎಂದುಕೊಳ್ಳುತ್ತದೆ ಎಂದು ರೇವಂತ್ ರೆಡ್ಡಿ ಹೇಳಿದರು.
3:50 PM: Telangana Election Results Live: ಸೋಲೊಪ್ಪಿಕೊಂಡ ಬಿಆರ್‌ಎಸ್ ನಾಯಕ ಕೆಟಿಆರ್
ತೆಲಂಗಾಣದ ಸೋಲನ್ನು ಬಿಆರ್‌ಎಸ್ ನಾಯಕ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರ ಕೆ.ಟಿ.ರಾಮರಾವ್ ಟ್ವೀಟ್ ಮೂಲಕ ಒಪ್ಪಿಕೊಂಡಿದ್ದಾರೆ. "ನಮಗೆ 2 ಬಾರಿ ಆಡಳಿತ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಮತದಾರರಿಗೆ ಕೃತಜ್ಞತೆಗಳು" ಎಂದು ಹೇಳಿರುವ ಅವರು, "ಈ ಫಲಿತಾಂಶದಿಂದ ನಮಗೆ ಬೇಸರವಾಗಿಲ್ಲ, ಆದರೆ ನಿರೀಕ್ಷೆಗಳು ಭಂಗವಾಗಿವೆ. ನಾವು ಪಾಠ ಕಲಿತು ಮತ್ತೆ ಪುಟಿದೇಳುತ್ತೇವೆ. ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
3:25 PM ವಸುಂಧರಾ ರಾಜೆಗೆ ಭರ್ಜರಿ ಜಯ
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೇ ಅವರು ಭಾರೀ ಅಂತರದಿಂದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಾವು ಸಿಎಂ ಸ್ಥಾನಕ್ಕೆ ಮತ್ತೊಮ್ಮೆ ಪ್ರಬಲ ಆಕಾಂಕ್ಷಿ ಎನ್ನುವ ಸಂದೇಶ ಸಾರಿದ್ದಾರೆ. ಸಾಕಷ್ಟು ಹೊಯ್ದಾಟದ ನಡುವೆ ಈ ಬಾರಿ ವಿಧಾನಸಭೆ ಚುನಾವಣೆಗೆ ವಸುಂಧರಾ ರಾಜೇ ಟಿಕೆಟ್ ಗಿಟ್ಟಿಸಿಕೊಂಡಿದ್ದರು.ತಮ್ಮ ಸಾಂಪ್ರದಾಯಿಕ ಕ್ಷೇತ್ರ ಜಲರಾ ಪಠಾಣ್ ಕ್ಷೇತ್ರದಿಂದ ಸುಮಾರು 53,000 ಮತಗಳ ಅಂತರಿಂದ ಜಯಭೇರಿ ಬಾರಿಸಿ ಆರನೇ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ಧಾರೆ.
2.47: Assembly Election Results: ಮನ ಮನದಲ್ಲೂ ಮೋದಿ, ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಪಕ್ಕಾ; ಏಕನಾಥ ಶಿಂಧೆ
ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರ ಸುಳ್ಳು ಪ್ರಮಾಣಗಳಿಗೆ ಜನರು ಬೆಲೆ ನೀಡಿಲ್ಲ. ಮೊದಲು ಮನೆ ಮನೆಯಲ್ಲೂ ಮೋದಿ ಅಂತಿದ್ದರೆ, ಈಗ ಮನ ಮನದಲ್ಲೂ ಮೋದಿ ಎಂಬಂತಾಗಿದೆ. ಮೂರು ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.
2.02: Assembly Election Results: ತೆಲಂಗಾಣದಲ್ಲಿ ಜನಸೇನಾ ಪಕ್ಷಕ್ಕೆ ಭಾರಿ ಮುಖಭಂಗ
ತೆಲಂಗಾಣದಲ್ಲಿ ಪವನ್ ಕಲ್ಯಾಣ ಪಕ್ಷವಾದ ಜನಸೇನಾ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಯಾವುದೇ ಕ್ಷೇತ್ರದಲ್ಲೂ ಜನಸೇನಾ ಪಕ್ಷ ಗೆಲುವು ಸಾಧಿಸಿಲ್ಲ.
1.52: Assembly Election Results: ಮೋದಿ ಆಡಳಿತವನ್ನು ಮೆಚ್ಚಿ, ಉತ್ತರ ಭಾರತದ ಜನ ಬಿಜೆಪಿ ಕೈಹಿಡಿದಿದ್ದಾರೆ; ಶೋಭಾ ಕರಂದ್ಲಾಜೆ
ರಾಜಸ್ಥಾನ, ಮಧ್ಯಪ್ರದೇಶ ಛತ್ತೀಸಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಉತ್ತರ ಭಾರತದ ಜನರು ನರೇಂದ್ರ ಮೋದಿ ಕೈ ಹಿಡಿದಿದ್ದಾರೆ. 2024ರಲ್ಲಿ ಮೋದಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಮೋದಿ ಆಡಳಿತಕ್ಕೆ ಜನಬೆಂಬಲ ಸಿಗುತ್ತಿದೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
1.45: Assembly Election Results: ತೆಲಂಗಾಣದಲ್ಲಿ ಯಾವ ಪ್ರಮುಖ ಅಭ್ಯರ್ಥಿಗಳಿಗೆ ಮುನ್ನಡೆ-ಹಿನ್ನಡೆ?
ಕೆ ಚಂದ್ರಶೇಖರ್ ರಾವ್, ಬಿಆರ್ಸ್ (ಕಾಮರೆಡ್ಡಿ): ಮುನ್ನಡೆ
ಕೆ.ಟಿ.ರಾಮರಾವ್, ಬಿಆರ್‌ಎಸ್ (ಸಿರ್ಸಿಲ್ಲಾ): ಮುನ್ನಡೆ
ಬಂಡಿ ಸಂಜಯ್ ಕುಮಾರ್, ಬಿಜೆಪಿ (ಕರೀಂನಗರ) : ಹಿನ್ನಡೆ
ಮೊಹಮ್ಮದ್ ಅಜರುದ್ದೀನ್, ಕಾಂಗ್ರೆಸ್ (ಜುಬಿಲಿ ಹಿಲ್ಸ್): ಹಿನ್ನಡೆ
ಅಕ್ಬರುದ್ದೀನ್ ಓವೈಸಿ, ಎಐಎಂಐಎಂ (ಚಂದ್ರಾಯನಗುಟ್ಟ): ಮುನ್ನಡೆ
1.31: Assembly Election Results: ತೆಲಂಗಾಣದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು
ತೆಲಂಗಾಣದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಾಲಕುರ್ತಿ ಕ್ಷೇತ್ರದಲ್ಲಿ ಯಶಸ್ವಿನಿ ರೆಡ್ಡಿ, ಹುಜೂರ್ ನಗರದಲ್ಲಿ ಉತ್ತಮ್, ಮೆದಕ್‌ನಲ್ಲಿ ಮೈನಂಪಲ್ಲಿ ರೋಹಿತ್ ಗೆಲುವು ಪಡೆದಿದ್ದಾರೆ.
1.30: Assembly Election Results: ಸಿಹಿ ತಿನ್ನುತ್ತಾ-ತಿನ್ನಿಸುತ್ತಾ ಶಿವರಾಜ್ ಸಿಂಗ್ ಚೌಹಾಣ್ ಸಂಭ್ರಮ
ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದ್ದು, ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಜೊತೆ ಸಿಹಿ ವಿನಿಮಯ ಮಾಡಿಕೊಂಡರು.
1.26: Assembly Election Results: ಸಚಿನ್ ಪೈಲಟ್ಗೆ 5702 ಮತಗಳ ಅಂತರದ ಮುನ್ನಡೆ
8ನೇ ಸುತ್ತಿನ ಮತ ಎಣಿಕೆಯ ನಂತರ ರಾಜಸ್ಥಾನದ ಟೋಂಕ್‌ನ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ 5,702 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಇಲ್ಲಿಯವರೆಗೆ ಒಟ್ಟು 43,395 ಮತಗಳನ್ನು ಗಳಿಸಿದ್ದಾರೆ.
1.17: Assembly Election Results: ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿಗೆ ಜಯ
ತೆಲಂಗಾಣದ ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ 32,800 ಮತ ಅಂತರದಿಂದ ಜಯ ಗಳಿಸಿದ್ದಾರೆ.
1.08: Assembly Election Results: ನರೇಂದ್ರ ಮೋದಿ ಆಡಳಿತಕ್ಕೆ ಮೆಚ್ಚಿದ ಜನತೆ; ಗೆಲುವಿಗೆ ಇದುವೇ ಕಾರಣ: ಆರ್. ಅಶೋಕ್
ನರೇಂದ್ರ ಮೋದಿಜಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಇದರ ಪರಿಣಾಮವಾಗಿ 3 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ. 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಜನರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಚೀನಾ ಮಾದರಿಯದು ಎಂದು ಜನರಿಗೆ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
1.05: Assembly Election Results: ತೆಲಂಗಾಣದಲ್ಲಿ ರೇವಂತ್ ರೆಡ್ಡಿ ವಿಜಯೋತ್ಸವ ಮೆರವಣಿಗೆ
ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಹಿನ್ನೆಲೆ, ಹೈದಾರಾಬಾದ್‌ನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಕಾಂಗ್ರೆಸ್ ನಾಯಕ ರೇವಂತ ರೆಡ್ಡಿ ಬಹೃತ್ ರೋಡ್ ಶೋ ಆಯೋಜಿಸುವ ಮೂಲಕ ಕಾಂಗ್ರೆಸ್ ಮುನ್ನಡೆಯನ್ನು ಸಂಭ್ರಮಿಸುತ್ತಿದ್ದಾರೆ. ತಮ್ಮ ಮನೆಯಿಂದ ಕಾಂಗ್ರೆಸ್ ಕಚೇರಿವರೆಗೆ ವಿಜಯೋತ್ಸವ ಮೆರವಣಿಗೆ ಮಾಡುತ್ತಿದ್ದಾರೆ ರೇವಂತ್ ರೆಡ್ಡಿ.
1.00 Assembly Election Results: ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ ತೆಲಂಗಾಣ ಜನತೆ; ಡಿಕೆಶಿ
ತೆಲಂಗಾಣದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಇಲ್ಲಿನ ಜನರು ಪ್ರತ್ಯೇಕ ರಾಜ್ಯ ನೀಡಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರಣದಿಂದ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ. ಇದು ಪಕ್ಷದ ಗೆಲುವಲ್ಲ ತೆಲಂಗಾಣ ಜನತೆಯ ಗೆಲುವು ಎಂದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
12.56 Assembly Election Results: ಭೋಪಾಲ್‌ನಲ್ಲಿ ಬಿಜೆಪಿ ನಾಯಕರ ಸಭೆ
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಧ್ಯಪ್ರದೇಶ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಸಭೆ ನಡೆಸುತ್ತಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಕೇಂದ್ರ ನಾಯಕರು ಹಾಗೂ ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
12.52: ಚುನಾವಣಾ ಫಲಿತಾಂಶ ಕಾಂಗ್ರೆಸ್ ಧೂಳಿಪಟಕ್ಕೆ ನಾಂದಿ; ಬಿಜೆಪಿ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ
ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವುದು ಸಾಧಿಸುವುದು ಖಚಿತ. ಈ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿ ಬಿಜೆಪಿ ಆಡಳಿತ ನಡೆಸಲಿದೆ. ಛತ್ತೀಸ್‌ಗಢದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಫಲಿತಾಂಶ ಕಾಂಗ್ರೆಸ್ ಧೂಳಿಪಟ ಮಾಡಲು ನಾಂದಿ ಎಂದು ಬಿಜೆಪಿ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
12:42am: 50,996 ಮತಗಳ ಅಂತರದಿಂದ ಶಿವರಾಜ್ ಸಿಂಗ್ ಚೌಹಾಣ್ ಮುನ್ನಡೆ
8ನೇ ಸುತ್ತಿನ ಮತ ಎಣಿಕೆಯ ನಂತರ ಮಧ್ಯಪ್ರದೇಶ ಹಾಲಿ ಮುಖ್ಯಮಂತ್ರಿ ಮತ್ತು ಬುಧ್ನಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಿಂಗ್ ಚೌಹಾಣ್ 50,996 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ, ಇದುವರೆಗೆ ಒಟ್ಟು 70453 ಮತಗಳನ್ನು ಗಳಿಸಿದ್ದಾರೆ.
12:31am ರೇವಂತ್ ರೆಡ್ಡಿ ನಿವಾಸಕ್ಕೆ ತೆಲಂಗಾಣ ಡಿಜಿಪಿ ಆಗಮನ
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಹಾಗೂ ರೇವಂತ್ ರೆಡ್ಡಿ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ರೇವಂತ್ ರೆಡ್ಡಿ ನಿವಾಸಕ್ಕೆ ಆಗಮಿಸಿದ್ದಾರೆ. ರೇವಂತ್ ರೆಡ್ಡಿ ನಿವಾಸದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಒಟ್ಟು 119 ಸ್ಥಾನಗಳ ಪೈಕಿ ಕಾಂಗ್ರೆಸ್ 65 ಸ್ಥಾನಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಬಿಆರ್‌ಎಸ್ 38 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
12:05am: ತೆಲಂಗಾಣದಲ್ಲಿ ‘ಕೈ’ ಮೇಲೆ.. ಗೆದ್ದ ಎಂಎಲ್ಎಗಳನ್ನ ಕಾಪಾಡಿಕೊಳ್ಳಲು ಬಸ್ ರೆಡಿ..!
ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಈಗಾಗಲೇ ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿರುವ ಕಾಂಗ್ರೆಸ್, ಅಧಿಕಾರಕ್ಕೇರುವುದು ಬಹುತೇಕ ಖಚಿತ. ಆದರೆ ಶತಾಯಗತಾಯ ಯತ್ನಿಸುತ್ತಿರುವ ಬಿಆರ್‌ಎಸ್, ಕಾಂಗ್ರೆಸ್ ಎಂಎಂಲ್ ಗಳ ಸಂಪರ್ಕದಲ್ಲಿದೆ. ಗೆದ್ದವರನ್ನ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಕಾಂಗ್ರೆಸ್ ತಮ್ಮ ಎಂಎಲ್ಎಗಳನ್ನ ಕಾಪಾಡಿಕೊಳ್ಳಲು ಬಸ್ ವ್ಯವಸ್ಥೆಗಳನ್ನ ಮಾಡಿದೆ. ಜೊತೆಗೆ ಶಾಸಕರಿಗೆ ಹೊಟೇಲ್ ರೂಂಗಳನ್ನೂ ಬುಕ್ ಮಾಡಿ ಸಕಲ ವ್ಯವಸ್ಥೆಗಳನ್ನ ಮಾಡಿದೆ. ಕರ್ನಾಟಕ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದರ ಸಾರಥ್ಯವಹಿಸಿದ್ದಾರೆ.
11.53am ರಾಜಸ್ಥಾನದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರ ಡ್ಯಾನ್ಸ್
ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸುತ್ತಲೇ ಇದೆ. ಜೈಪುರದ ಪಕ್ಷದ ಕಚೇರಿ ಎದುರು ಬಿಜೆಪಿ ಮಹಿಳಾ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಸದ್ಯ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ಗೆ (67) ಹಿನ್ನಡೆಯಾಗಿದೆ.
11.35 Assembly Election Results: ಗುಜರಾತ್: ಗಾಂಧಿನಗರ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮ
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣಾ ಫಲಿತಾಂಶ ಹಿನ್ನೆಲೆ ಗುಜರಾತ್‌ನ ಗಾಂಧಿನಗರ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
11.35 Assembly Election Results: ಗಿಡ ನೆಡುವ ಮೂಲಕ ಸಂಭ್ರಮಿಸಿದ ಮಧ್ಯಪ್ರದೇಶ ಸಿಎಂ
ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, ಇಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಹ್ ಗಿಡ ನೆಡುವ ಮೂಲಕ ಸಂಭ್ರಮಿಸಿರುವುದನ್ನು ಕಾಣಬಹುದಾಗಿದೆ.
11.26 Assembly Election Results: ತೆಲಂಗಾಣದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕರ ಸಾಗಾಟಕ್ಕೆ ಬಸ್ ರೆಡಿ
ತೆಲಂಗಾಣದ ವಿವಿಧ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ನಾಯಕರನ್ನು ಅಲ್ಲಿಂದ ಬೇರೆಡೆಗೆ ಶಿಫ್ಟ್ ಮಾಡಲು ಮೂರು ಐಷಾರಾಮಿ ಬಸ್‌ಗಳನ್ನು ಸಿದ್ಧ ಮಾಡಿ ಇಡಲಾಗಿದೆ. ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಬಗ್ಗೆ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ ತಿಳಿಸಲಾಗಿದೆ ಎನ್ನಲಾಗುತ್ತಿದೆ.
11.22 Assembly Election Results: ರೇವಂತ ರೆಡ್ಡಿ ತೆಲಂಗಾಣ ಸಿಎಂ, ವಿಕಿಪೀಡಿಯಾ ಘೋಷಣೆ!
ತೆಲಂಗಾಣದಲ್ಲಿ ಬಹುತೇಕ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಎಸ್‌ಆರ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರೇವಂತ ರೆಡ್ಡಿ ಅವರು ತೆಲಂಗಾಣದ ಎರಡನೇ ಮುಖ್ಯಮಂತ್ರಿ ಎಂದು ವಿಕಿಪಿಡಿಯಾದಲ್ಲಿ ಅಪ್‌ಡೇಟ್ ಮಾಡಲಾಗಿದೆ.
11.17 Assembly Election Results: ಛತ್ತೀಸ್‌ಗಢದಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್‌ಗಢದಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧ್ಯತೆ. ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದೆ.
11.13 Assembly Election Results: ಜೈಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
Assembly Election Results 2023 Live Updates in Kannada: ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಫಲಿತಾಂಶದ ಜನರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ಮುನ್ನುಡಿ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು. ಕರ್ನಾಟಕದ ನೆರೆಯ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಬಿಆರ್‌ಎಸ್ ಪಕ್ಷದ ಮುನ್ನಡೆ-ಹಿನ್ನಡೆ ಕುರಿತು ಕರ್ನಾಟಕದಲ್ಲಿಯೂ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದರು. ಎಲ್ಲ ನಾಲ್ಕು ರಾಜ್ಯಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು ಮೊದಲ ಫಲಿತಾಂಶ ದಿಕ್ಸೂಚಿಯಲ್ಲಿ ಅವಧಿಯಲ್ಲಿ ತೆಲಂಗಾಣ, ರಾಜಸ್ಥಾನದಲ್ಲಿ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿತ್ತು. ಫಲಿತಾಂಶದ ತಾಜಾ ಮಾಹಿತಿ, ಕ್ಷಣಕ್ಷಣದ ಅಪ್‌ಡೇಟ್ಸ್ kannada.hindustantimes.com ಜಾಲತಾಣದಲ್ಲಿ ಲಭ್ಯ.
11.09 Assembly Election Results: ಜೈಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿಸಿದ್ದ.
11.09 Assembly Election Results: ತೆಲಂಗಾಣದಲ್ಲಿ ಎಮ್ಮೆ ಕಾಯುವ ರೀಲ್ಸ್ ಮಾಡಿ ಫೇಮಸ್ ಆದ, ಪಕ್ಷೇತರ ಅಭ್ಯರ್ಥಿ ಶಿರಿಷಾಗೆ ಮುನ್ನಡೆ
ಬರ್ರೆಲಕ್ಕಾ ಎಂದೇ ಫೇಮಸ್ಸ್ ಆಗಿರುವ ಶಿರಿಷಾ ಈ ಭಾರಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಕೆ ಸದ್ಯ ಮುನ್ನಡೆ ಸಾಧಿಸಿದ್ದಾರೆ.
11.05 Assembly Election Results: ತೆಲಂಗಾಣದಲ್ಲಿ ಆಪರೇಷನ್ ಕಮಲ ಭೀತಿ: ಗೆದ್ದವರು ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ
ತೆಲಂಗಾಣದಲ್ಲಿ ಆಪರೇಷನ್ ಕಮಲ ಭೀತಿ ಇದ್ದು, ವಿವಿಧ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ನಾಯಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆಗೆ ಕಾಯುತ್ತಿರುವ ನಾಯಕರು.
11.00 Assembly Election Results: ಛತ್ತೀಸ್‌ಗಢ: ಸಿಎಂ ಭೂಪೇಶ್ ಬಘೇಲ್‌ಗೆ ಹಿನ್ನಡೆ
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಿನ್ನಡೆ ಅನುಭವಿಸಿದ್ದಾರೆ. ಪಟಾನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಭೂಪೇಶ್ ಬಘೇಲ್ ಹಿನ್ನಡೆ ಸಾಧಿಸಿದ್ದಾರೆ.
10.51 Assembly Election Results: ಮಧ್ಯಪ್ರದೇಶ ಬಿಜೆಪಿ ನಾಯಕರಿಗೆ ಅಮಿತ್ ಶಾ ಕರೆ
ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದಕ್ಕೆ ಕೇಂದ್ರ ನಾಯಕ ಅಮಿತ್ ಶಾ ಇಲ್ಲಿನ ಸ್ಥಳೀಯ ನಾಯಕರುಗಳಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ.
10.45 Assembly Election Results: ಕಾಂಗ್ರೆಸ್ ಸಂಭ್ರಮಾಚರಣೆ
ತೆಲಂಗಾಣದಲ್ಲಿ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ರಾಜ್ಯ ಘಟಕದ ಕಚೇರಿಯ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
10.35 Assembly Election Results: ವಿಪಕ್ಷ ನಾಯಕರ ಸಭೆ ಕರೆದ ಮಲ್ಲಿಕಾರ್ಜುನ ಖರ್ಗೆ
ಫಲಿತಾಂಶ ಹೊರಬರುತ್ತಿರುವುದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರ ಸಭೆ ಕರೆದಿದ್ದಾರೆ. ಡಿಸೆಂಬರ್ 6ರಂದು ದೆಹಲಿಯಲ್ಲಿ INDIA ಮೈತ್ರಿಕೂಟದ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ.
10.05 Assembly Election Results: ಕೆಸಿಆರ್‌ಗೆ ಹಿನ್ನಡೆ
ತೆಲಂಗಾಣ ಸಿಎಂ ಕೆಸಿಆರ್ ಹಿನ್ನಡೆ ಅನುಭವಿಸಿದ್ದಾರೆ. ಅತ್ತ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ರಾಜ್ಯಾಂದ್ಯಂತ ಸಂಭ್ರಮಾಚರಣೆ ಆರಂಭವಾಗಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುನ್ನಡೆಯಲ್ಲಿದ್ದರೆ, ಮಾಜಿ ಸಿಎಂ ಕಮಲ್‌ನಾಥ್ ಹಿನ್ನಡೆ ಅನುಭವಿಸಿದ್ದಾರೆ.
09:43: Assembly Election Results: ನಾಲ್ಕೂ ರಾಜ್ಯಗಳಲ್ಲಿ ಯಾರಿಗೆ ಅಧಿಕಾರ; ಮೊದಲ ಟ್ರೆಂಡ್ ಹೀಗಿದೆ
ತೆಲಂಗಾಣ, ಛತ್ತೀಸ್‌ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಬಿಜೆಪಿ ಬಹುಮತದತ್ತ ಮುನ್ನಡೆಯುತ್ತಿದೆ. ಯಾವ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಸಿಗಬಹುದು ಎಂಬ ಇಣುಕುನೋಟ ಇಲ್ಲಿದೆ.
09:30: Telangana Assembly Election Results: ತೆಲಂಗಾಣದಲ್ಲಿ ಬಹುಮತದತ್ತ ಕಾಂಗ್ರೆಸ್
ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತದತ್ತ ದಾಪುಗಾಲು ಹಾಕುತ್ತಿದೆ. 119 ಸದಸ್ಯ ಬಲದ ತೆಲಂಗಾಣದಲ್ಲಿ 60 ಮ್ಯಾಜಿಕ್ ನಂಬರ್ ಎನಿಸಿದೆ. ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಆರ್‌ಎಸ್ 2ನೇ ಸ್ಥಾನದಲ್ಲಿದ್ದರೆ, ಗೆಲುವಿನ ನಿರೀಕ್ಷೆ ಇರಿಸಿಕೊಂಡಿದ್ದ ಬಿಜೆಪಿ ಕೇವಲ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಎಂಐಎಂ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಮುಂದಿದ್ದಾರೆ.
09:23: Assembly Election Results: ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ
ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬಿಜೆಪಿ ಬಹುತದತ್ತ ಮುನ್ನಡೆಯುತ್ತಿದೆ. 230 ಸದಸ್ಯ ಬಲದ ಮಧ್ಯ ಪ್ರದೇಶದಲ್ಲಿ ಅಧಿಕಾರ ಹಿಡಿಯಲು 116 ಮ್ಯಾಜಿಕ್ ನಂಬರ್ ಎನಿಸಿದೆ. 199 ಸದಸ್ಯ ಬಲದ ರಾಜಸ್ಥಾನದಲ್ಲಿ 100 ಮ್ಯಾಜಿಕ್ ನಂಬರ್ ಎನಿಸಿದೆ. ಮುಂಜಾನೆ 9:25ರ ಅವಧಿಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಮಧ್ಯ ಪ್ರದೇಶದ 125 ಹಾಗೂ ರಾಜಸ್ಥಾನದಲ್ಲಿ 103 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುತ್ತಿದೆ.
09.20 AM, Telangana Assembly Election Results: ಮುಖ್ಯಮಂತ್ರಿ ಕೆಸಿಆರ್‌ಗೆ ಹಿನ್ನಡೆ
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಹಿಂದಿದ್ದಾರೆ. ಕಾಮರೆಡ್ಡಿ ಮತ್ತು ಗೆಜ್ವಲ್ ಕ್ಷೇತ್ರಗಳಿಂದ ಕೆಸಿಆರ್ ಸ್ಪರ್ಧಿಸಿದ್ದಾರೆ. ಮತಗಟ್ಟೆ ಸಮೀಕ್ಷೆಗಳಲ್ಲಿ ಒಂದೂ ಕ್ಷೇತ್ರ ಗೆಲ್ಲುವುದಿಲ್ಲ ಎಂದು ಹೇಳಲಾಗಿದ್ದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 64, ಬಿಆರ್‌ಎಸ್ 40, ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ.
09:12 AM, Assembly Election Results 2023 LIVE Updates: ಎಚ್‌ಟಿ ಯುಟ್ಯೂಬ್ ಚಾನೆಲ್‌ನಲ್ಲಿ ಫಲಿತಾಂಶದ ತಾಜಾ ಮಾಹಿತಿ
ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ ಮತ್ತು ನಿಖರ ವಿಶ್ಲೇಷಣೆ 'ಹಿಂದೂಸ್ತಾನ್ ಟೈಮ್ಸ್' ಯುಟ್ಯೂಬ್ ಚಾನೆಲ್‌ನಲ್ಲಿ ಲಭ್ಯ.
09:05 AM, Madhya Pradesh Election Results 2023 LIVE Updates: ನಾನು ಜನರನ್ನು ನಂಬಿದ್ದೇನೆ -ಕಮಲ್ ನಾಥ್
ಮಧ್ಯ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸ್ಪಷ್ಟವಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮುನ್ನಡೆಸಿದ್ದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನಾನು ಫಲಿತಾಂಶದ ಟ್ರೆಂಡ್ ಗಮನಿಸಿಲ್ಲ. ಆದರೆ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ" ಎಂದು ಹೇಳಿದ್ದಾರೆ.
09.00 AM, Election Results Live: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 104 ಹಾಗೂ ಬಿಜೆಪಿ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ 46 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ರಾಜಸ್ಥಾನದಲ್ಲಿ ಬಿಜೆಪಿ 95 ಕ್ಷೇತ್ರಗಳಲ್ಲಿ ಮುಂದಿದೆ.
08:40 AM, Election Results Live: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮುನ್ನಡೆ
ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇಲ್ಲಿ ಮಾಜಿ ಸಿಎಂ ಕಮಲ್‌ನಾಥ್ ಮುನ್ನಡೆ ಸಾಧಿಸಿದ್ದಾರೆ. ಸಿಎಂ ಶಿವರಾಜ್‌ಸಿಂಗ್ ಚೌಹಾಣ್ ಕೂಡಾ ಮುನ್ನಡೆಯಲ್ಲಿದ್ದಾರೆ.
08:30 AM, Election Results Live: ತೆಲಂಗಾಣ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪೈಪೋಟಿ
ತೆಲಂಗಾಣದಲ್ಲಿ ಕಾಂಗ್ರೆಸ್ ಹಾಗೂ ಬಿಆರ್‌ಎಸ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಾವು-ಏಣಿ ಆಟ ಶುರುವಾಗಿದೆ.
08:15 AM, Election Results Live:ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ
ಅರಂಭಿಕ ಟ್ರೆಂಡ್ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಬಿಆರ್‌ಎಸ್ ಮತ್ತು ಬಿಜೆಪಿ ಹಿನ್ನಡೆ ಅನುಭವಿಸಿದೆ. ಅತ್ತ ಮಧ್ಯ ಪ್ರದೇಶದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಮುಂದಿದೆ.
08:00 AM: Election Results Live; ಕಾಂಗ್ರೆಸ್ ಪ್ರಧಾನ ಕಚೇರಿ ಎದುರು ಹನುಮಂತ ವೇಷಧಾರಿ
ದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಎದುರು ಭಾನುವಾರ (ನ 3) ನಸುಕಿನಲ್ಲಿ ಹನುಮಂತನ ವೇಷಧಾರಿಯೊಬ್ಬರು ಎಲ್ಲರ ಗಮನ ಸೆಳೆದರು. "ಸತ್ಯಕ್ಕೆ ಜಯವಾಗಲಿದೆ, ಜೈ ಶ್ರೀರಾಮ್" ಎಂದು ಹನುಮ ವೇಷಧಾರಿ ಘೋಷಣೆಗಳನ್ನು ಕೂಗಿದರು.
08.00 AM Election Results 2023 LIVE Updates, ಮತ ಎಣಿಕೆ ಆರಂಭ
ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭಗೊಂದಿದ್ದು, ಮೊದಲಿಗೆ ಅಂಚೆಮತಗಳ ಎಣಿಕೆ ನಡೆಯಲಿದೆ.
07:50 AM Election Results 2023 LIVE Updates: ರಾಯ್‌ಪುರದಲ್ಲಿ ಮತ ಎಣಿಕೆಗೆ ಅಂತಿಮ ಸಿದ್ಧತೆ
ಛತ್ತೀಸ್‌ಗಡದ ರಾಯ್‌ಪುರದ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಸಿದ್ಧತೆಗಳು ನಡೆಯುತ್ತಿದೆ. ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.
07:00 AM: Election Results 2023 LIVE Updates: ಮಧ್ಯಪ್ರದೇಶದಲ್ಲಿ ಮತ ಎಣಿಕೆಗೆ ಸಿದ್ಧತೆ
ಮಧ್ಯಪ್ರದೇಶದಲ್ಲೊ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಭೋಪಾಲ್‌ನ ಮತ ಎಣಿಕೆ ಕೇಂದ್ರದಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.
06:30 AM: Telangana Election Results 2023 LIVE Updates: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ತವಕ, ಬಿಆರ್‌ಎಸ್‌ಗೆ ಆತಂಕ
ಕರ್ನಾಟಕದ ನೆರೆಯ ತೆಲುಗು ಭಾಷಿಕ ರಾಜ್ಯ ತೆಲಂಗಾಣದ 119 ಸ್ಥಾನಗಳಿಗೆ ನ 30ರಂದು ಮತದಾನ ನಡೆಯಿತು. ಆಡಳಿತಾರೂಢ ಬಿಆರ್‌ಎಸ್ 34ರಿಂದ 44 ಸ್ಥಾನಗಳಿಸಬಹುದು, ಕಾಂಗ್ರೆಸ್ 63ರಿಂದ 73 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಇಲ್ಲಿ ಪಕ್ಷಕ್ಕೆ ವರವಾಗಿ ಪರಿಣಮಿಸಿತ್ತು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ತೆಲಂಗಾಣದಲ್ಲಿ ಸಕ್ರಿಯರಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
06:25 AM: Madhya Pradesh Election Results 2023 LIVE Updates: ಮಧ್ಯ ಪ್ರದೇಶದಲ್ಲಿ ಮಹಿಳೆಯರೇ ನಿರ್ಣಾಯಕ
ಮಧ್ಯ ಪ್ರದೇಶದಲ್ಲಿ ಈ ಸಲವೂ ಬಿಜೆಪಿಯೇ ಅಧಿಕಾರಕ್ಕೆ ಮರಳಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪರವಾಗಿ ಮಹಿಳೆಯರು ಗಮನಾರ್ಹ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಹೆಳಿವೆ. ಕಾಂಗ್ರೆಸ್‌ನ ಕಮಲ್ ನಾಥ್ ಅವರು ಪ್ರಬಲ ಸ್ಪರ್ಧೆ ಒಡ್ಡುವ ಪ್ರಯತ್ನವನ್ನಂತೂ ಮಾಡಿದ್ದರು. ಆದರೆ ಅಂತಿಮ ಫಲಿತಾಂಶ ಏನಾಗುವುದೋ ಕಾದು ನೋಡಬೇಕಿದೆ. 2018ರಲ್ಲಿ ಕಾಂಗ್ರೆಸ್ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿತ್ತು. ಅದರೆ ಮಾರ್ಚ್ 2020ರಲ್ಲಿ ಬಂಡಾಯದಿಂದ ಕುಸಿಯಿತು. ನಂತರ ಬಿಜೆಪಿ ಇಲ್ಲಿ ಸರ್ಕಾರ ರಚಿಸಿತ್ತು.
06:20 AM: Chhattisgarh Election Results 2023 LIVE Updates: ಛತ್ತೀಸ್‌ಗಡದಲ್ಲಿ ಯಾರಿಗೆ ಗದ್ದುಗೆ
ಛತ್ತೀಸ್‌ಗಡದಲ್ಲಿ ನವೆಂಬರ್ 7 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 20 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನಂತರ ನವೆಂಬರ್ 17ರಂದು ಉಳಿದ 70 ಸ್ಥಾನಗಳಿಗೆ ಮತದಾನ ನಡೆಯಿತು. 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 68 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ಈ ಬಾರಿ ಬಿಜೆಪಿಯು ಇಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಛತ್ತೀಸ್‌ಗಡದ ಹಾಲಿ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರ ಹೆಸರು 'ಮಹದೇವ್ ಬುಕ್ ಆಪ್' ಹಗರಣದಲ್ಲಿ ಕಾಣಿಸಿಕೊಂಡಿದ್ದು, ಅವರ ಜನಪ್ರಿಯತೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
06:14 AM: Rajasthan Election Results 2023 LIVE Updates: ರಾಜಸ್ಥಾನ ಚುನಾವಣೆ ಕುರಿತು ನೀವು ತಿಳಿಯಬೇಕಾದ ಮಾಹಿತಿ
ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ನ 25ರಂದು ಮತದಾನ ನಡೆಯಿತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸುವ ಕನಸನ್ನು ಬಿಜೆಪಿ ಕಾಣುತ್ತಿದೆ. ಮತಗಟ್ಟೆ ಸಮೀಕ್ಷೆಗಳು ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಪೈಪೋಟಿ ಇರುವುದನ್ನು ಸೂಚಿಸಿವೆ.
06:10 AM: Rajasthan Election Results 2023 LIVE Updates: ಮಧ್ಯಪ್ರದೇಶದಲ್ಲಿ ಮತ ಎಣಿಕೆಗೆ ಸಿದ್ಧತೆ
Assembly Election Results 2023 Live Updates: ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಚಿಂದ್ವಾರದ ಮತ ಎಣಿಕೆ ಕೇಂದ್ರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಇಲ್ಲಿ ಕಮಲ್ ನಾಥ್ ಅವರ ಕಠಿಣ ಸವಾಲಿನ ನಡುವೆ ನಾಲ್ಕು ಬಾರಿ ಸಿಎಂ ಆಗಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ.
ಮತಎಣಿಕೆ ಎಷ್ಟು ಗಂಟೆಗೆ ಆರಂಭ?
Assembly Election Results 2023 Live Updates: ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಆ ನಂತರ ಎಲೆಕ್ಟ್ರಾನಿಕ್ ಯಂತ್ರಗಳ ಮತ (ಇವಿಎಂ) ಎಣಿಕೆ ಆರಂಭವಾಗಲಿದೆ. ಮತದಾನ ನಡೆದ ದಿನದಿಂದ ಹಿಡಿದು ಈವರೆಗೆ ಇವಿಎಂಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆಯನ್ನು ಒದಸಲಾಗಿದೆ.
ಇದನ್ನೂ ಓದಿ | Election Results 2023: ಇಂದು ತೆಲಂಗಾಣ ಸೇರಿ 4 ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ; ಫಲಿತಾಂಶ ಎಲ್ಲಿ, ಹೇಗೆ ನೋಡುವುದು
ಮಿಜೋರಾಂನಲ್ಲಿ ಡಿಸೆಂಬರ್ 4ರಂದು ಮತ ಎಣಿಕೆ
Assembly Election Results 2023 Live Updates: ಮಿಜೋರಾಂನಲ್ಲಿ ಮಾತ್ರ ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ. ಮಿಜೋರಾಂ ರಾಜ್ಯದಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಭಾನುವಾರ ವಿಷೇಷ ದಿನವಾಗಿದ್ದು, ಏಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ ಅಲ್ಲಿನ ಜನರ ಮನವಿಯ ಮೇರೆಗೆ ಕೇಂದ್ರ ಚುನಾವಣಾ ಆಯೋಗ ಮಿಜೋರಾಂ ಚುನಾವಣಾ ಮತ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3 (ಭಾನುವಾರ) ರಿಂದ ಡಿಸೆಂಬರ್ 4ಕ್ಕೆ (ಸೋಮವಾರ) ಮುಂದೂಡಿದೆ.
Assembly Election Results 2023 Live Updates: ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. ಮಧ್ಯಾಹ್ನದ ವೇಳೆಗೆ ನಾಲ್ಕೂ ರಾಜ್ಯಗಳ ಫಲಿತಾಂಶದ ಸಂಪೂರ್ಣ ಚಿತ್ರಣ ಸಿಗಲಿದೆ.
Assembly Election Results 2023 Live Updates: ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಒಟ್ಟು 639 ಸ್ಥಾನಗಳಿಗೆ ಸುಮಾರು 11.9 ಕೋಟಿ ಮತಗಳು ಚಲಾವಣೆಯಾಗಿವೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಚುನಾವಣೆಯು ಸೆಮಿಫೈನಲ್ ಪಂದ್ಯದ ಜೋಶ್ ಪಡೆದುಕೊಂಡಿದೆ . ಈ ಫಲಿತಾಂಶಗಳು ಲೋಕಸಭೆ ಚುನಾವಣೆಯಲ್ಲೂ ಪಕ್ಷಗಳ ಚುನಾವಣಾ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಲಿವೆ.
ವಿಭಾಗ