ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭೆ ಫಲಿತಾಂಶ; ಎಕ್ಸಿಟ್ ಪೋಲ್‌ ಫೇಲಾಯ್ತು, ಲೈವ್‌ನಲ್ಲೇ ಕಣ್ಣೀರು ಹಾಕಿದ್ರು ಏಕ್ಸಿಸ್‌ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ

ಲೋಕಸಭೆ ಫಲಿತಾಂಶ; ಎಕ್ಸಿಟ್ ಪೋಲ್‌ ಫೇಲಾಯ್ತು, ಲೈವ್‌ನಲ್ಲೇ ಕಣ್ಣೀರು ಹಾಕಿದ್ರು ಏಕ್ಸಿಸ್‌ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ

ಲೋಕಸಭೆ ಫಲಿತಾಂಶ ಪ್ರಕಟವಾಗಿದ್ದು, ಎಕ್ಸಿಟ್ ಪೋಲ್‌ ಲೆಕ್ಕಚಾರಕ್ಕೆ ವಿರುದ್ಧವಾಗಿ ಫಲಿತಾಂಶ ಬಂದಿದೆ. ಇಂಡಿಯಾ ಟುಡೇ ಟಿವಿ ಚಾನೆಲ್‌ನಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಎಕ್ಸಿಟ್ ಪೋಲ್‌ ಫೇಲಾಯ್ತು ಎಂದು ಏಕ್ಸಿಸ್‌ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ ಲೈವ್‌ನಲ್ಲೇ ಕಣ್ಣೀರು ಹಾಕಿದ್ರು. ಇದರ ವಿಡಿಯೋ ವರದಿ ಇಲ್ಲಿದೆ.

ಲೋಕಸಭೆ ಫಲಿತಾಂಶ; ಎಕ್ಸಿಟ್ ಪೋಲ್‌ ಫೇಲಾಯ್ತು, ಲೈವ್‌ನಲ್ಲೇ ಕಣ್ಣೀರು ಹಾಕಿದ್ರು ಏಕ್ಸಿಸ್‌ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ
ಲೋಕಸಭೆ ಫಲಿತಾಂಶ; ಎಕ್ಸಿಟ್ ಪೋಲ್‌ ಫೇಲಾಯ್ತು, ಲೈವ್‌ನಲ್ಲೇ ಕಣ್ಣೀರು ಹಾಕಿದ್ರು ಏಕ್ಸಿಸ್‌ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಹಿನ್ನಡೆಯಾಗಿರುವುದು ಕಂಡುಬಂದಿದೆ. ಇದೇ ಸಂದರ್ಭದಲ್ಲಿ ಇಂಡಿಯಾ ಟುಡೇ ಚಾನೆಲ್‌ನ ಚುನಾವಣಾ ಫಲಿತಾಂಶದ ನೇರ ಪ್ರಸಾರದ ಚರ್ಚೆಯಲ್ಲಿ ಪಾಲ್ಗೊಂಡ ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಅವರು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದಂತೆ ಲೈವ್ ಟಿವಿಯಲ್ಲಿ ಕಣ್ಣೀರಿಟ್ಟರು.

ಟ್ರೆಂಡಿಂಗ್​ ಸುದ್ದಿ

ಇಂಡಿಯಾ ಟುಡೇಯ ಚುನಾವಣಾ ಫಲಿತಾಂಶದ ನೇರ ಪ್ರಸಾರದ ಚರ್ಚೆಯಲ್ಲಿ ಕಾಣಿಸಿಕೊಂಡ ಪ್ರದೀಪ್ ಗುಪ್ತಾ ಅವರು, ಪ್ಯಾನಲ್ ಚರ್ಚೆಯ ಸಮಯದಲ್ಲಿ ಎಕ್ಸಿಟ್ ಪೋಲ್ ಸಮೀಕ್ಷೆ ಸಂಪೂರ್ಣ ಉಲ್ಟಾ ಹೊಡೆದುದು ನೋಡಿ ಭಾವುಕರಾಗಿದ್ದರು. ತಮ್ಮ ಕೆಲಸದಲ್ಲಿ ವಿಫಲವಾದ ಕಾರಣ ನೋವು ಅನುಭವಿಸಿ ಕಣ್ಣೀರಿಟ್ಟಿದ್ದರು. ಇದೇ ವೇಳೆ ನಿರೂಪಕರು ಅವರನ್ನು ಸಂತೈಸಲು ಪ್ರಯತ್ನಿಸಿದರು.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 361-401 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಇಂಡಿಯಾ ಬ್ಲಾಕ್‌ 131-166 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇತರ ಪಕ್ಷಗಳಿಗೆ 8 ರಿಂದ 20 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆ ತಿಳಿಸಿತ್ತು.

ನೇರ ಪ್ರಸಾರದಲ್ಲಿ ಪ್ರದೀಪ್ ಗುಪ್ತಾ ಅಳುತ್ತಿರುವ ವಿಡಿಯೋ ಇಲ್ಲಿದೆ

ಲೋಕಸಭಾ ಚುನಾವಣಾ ಫಲಿತಾಂಶ 2024 - ಈಗಿನ ಟ್ರೆಂಡ್ ಹೀಗಿದೆ

ಲೋಕಸಭಾ ಚುನಾವಣೆ ಫಲಿತಾಂಶ 2024 ಪ್ರಕಟವಾಗುತ್ತಿದ್ದು, ಸದ್ಯದ ಟ್ರೆಂಡ್ ಪ್ರಕಾರ, ಬಿಜೆಪಿ ಎನ್‌ಡಿಎ 280ರ ಆಸುಪಾಸಿನಲ್ಲಿದ್ದರೆ, ಇಂಡಿಯಾ ಮೈತ್ರಿಕೂಟ 220ರ ಆಸುಪಾಸಿನಲ್ಲಿದೆ.

ಮತ ಎಣಿಕೆಯ ಮುನ್ನಾದಿನ ಎಎನ್ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಗುಪ್ತಾ, "ಆಕ್ಸಿಸ್ ಮೈ ಇಂಡಿಯಾ ಕಳೆದ 10 ವರ್ಷಗಳಿಂದ ನಿರಂತರ ಎಕ್ಸಿಟ್ ಪೋಲ್‌ಗಳನ್ನು ನಡೆಸಿದೆ. 2 ಲೋಕಸಭಾ ಚುನಾವಣೆಗಳು ಸೇರಿ 69 ಚುನಾವಣೆಗಳಲ್ಲಿ ನಾವು ಅದನ್ನು ಮಾಡಿದ್ದೇವೆ. ನಮ್ಮ ಊಹೆಗಳು 65 ಬಾರಿ ಸರಿಯಾಗಿವೆ... ಮತ್ತು ಈ 65 ಸಲ ಕಾಂಗ್ರೆಸ್ ಸೇರಿ ಪ್ರತಿಯೊಂದು ವಿರೋಧ ಪಕ್ಷವು ಒಂದಲ್ಲ ಒಂದು ಬಾರಿ ಗೆದ್ದಿದೆ" ಎಂದು ಹೇಳಿದ್ದರು.

"ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುವ ಜನರು ನಮ್ಮ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಬೇಕು. ಅವರು ಖಚಿತವಾಗಿಯೂ ನಮ್ಮ ಕೆಲಸದ ಬಗ್ಗೆ ತೃಪ್ತಿ ತೋರಿಸುತ್ತಾರೆ." ಎಂದು ಗುಪ್ತಾ ವಿಶ್ವಾಸ ವ್ಯಕ್ತಪಡಿಸಿದ್ದರು. ಶನಿವಾರ (ಜೂನ್ 1) ಕೊನೆಯ ಹಂತದ ಮತದಾನದ ನಂತರ ಬಿಡುಗಡೆಯಾದ ಬಹುಪಾಲು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಎನ್‌ಡಿಎ ಮುನ್ನಡೆ ಸಾಧಿಸಲಿವೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ರಾಜ್ಯದಲ್ಲಿ ಸ್ಪರ್ಧಿಸಿದ್ದ 16 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯನ್ನು ಹಿಂದಿಕ್ಕಿದೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಪ್ರಚಂಡ ಗೆಲುವಿನತ್ತ ಮುನ್ನಡೆಸುವ ಹಾದಿಯಲ್ಲಿದ್ದಾರೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಟಿ20 ವರ್ಲ್ಡ್‌ಕಪ್ 2024