ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯಲು ಹೀಗೆ ಮಾಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯಲು ಹೀಗೆ ಮಾಡಿ

ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯಲು ಹೀಗೆ ಮಾಡಿ

ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಲೋಕಸಭಾ ಚುನಾವಣೆ, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯ ವಿಧಾನಸಭೆಗಳ ಉಪಚುನಾವಣೆಯ ಮತ ಎಣಿಕೆ ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯಲು ಹೀಗೆ ಮಾಡಿ.

ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯುವ ವಿವರ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್ಡೇಟ್ಸ್ ಪಡೆಯುವ ವಿವರ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆ 2024ರ ಫಲಿತಾಂಶ(Lok Sabha election 2024 results)ಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತದ ಉದ್ದಗಲಕ್ಕೂ ವಿವಿಧ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ಎಂಬುದು ನಿರ್ಣಯವಾಗಲಿದೆ.

ಲೋಕಸಭಾ ಚುನಾವಣೆಯಲ್ಲಿ 543 ಸದಸ್ಯರ ಲೋಕಸಭೆಗೆ (ಸೂರತ್ ಮತ್ತು ಇಂದೋರ್ ಸ್ಥಾನ) ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಿತು. ಏಪ್ರಿಲ್ 19 (ಹಂತ 1), ಏಪ್ರಿಲ್ 26 (ಹಂತ 2), ಮೇ 7 (ಹಂತ 3), ಮೇ 13 (ಹಂತ 4), ಮೇ 20 (ಹಂತ 5), ಮೇ 25 (ಹಂತ 6) ಮತ್ತು ಜೂನ್ 1 (ಹಂತ 7) ಮತದಾನ ಹಂತಗಳು. ಜೂನ್ 4ರಂದು ಅಂದರೆ ಇಂದು ಫಲಿತಾಂಶ ಪ್ರಕಟವಾಗುತ್ತಿದೆ.

ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯ ವಿಧಾನಸಭೆಗಳು ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಎಲ್ಲಿ ಪರಿಶೀಲಿಸಬಹುದು?

ಲೋಕಸಭಾ ಚುನಾವಣೆ 2024: ಜೂನ್ 4 ರಂದು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಭಾರತದ ಅಧಿಕೃತ ಚುನಾವಣಾ ಆಯೋಗದ (ಇಸಿಐ) ವೆಬ್ಸೈಟ್ ಎಣಿಕೆಯ ಪ್ರವೃತ್ತಿಗಳು ಮತ್ತು ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ. ಇವು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ https://results.eci.gov.in/ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತವೆ.

ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜೊತೆಗೆ ಸೇರಿಕೊಳ್ಳಿ. ಸಮಗ್ರ ಪ್ರಸಾರಕ್ಕಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಯೊಂದು ತಾಜಾ ಸುದ್ದಿಗಳು, ಬ್ರೇಕಿಂಗ್ ಸ್ಟೋರಿಗಳು, ಇತ್ತೀಚಿನ ವಿದ್ಯಮಾನಗಳು, ವಿವರವಾದ ವಿಶ್ಲೇಷಣೆ, ಇನ್ಫೋಗ್ರಾಫಿಕ್ಸ್ ಮತ್ತು ಲೈವ್ ಸ್ಟೋರಿಗಳನ್ನು ಒದಗಿಸುತ್ತದೆ. ಇದು ಎಲ್ಲಾ ರಾಜ್ಯಗಳ ಪ್ರಮುಖ ಸ್ಥಾನಗಳ ವಿವರಗಳನ್ನು ಒಳಗೊಂಡಿರುತ್ತದೆ.

ಲೋಕಸಭಾ ಚುನಾವಣೆ 2024ರ ಮತ ಎಣಿಕೆಯ ನೈಜ ಸಮಯದ ತಾಜಾ ಸುದ್ದಿಗಳಿಗಾಗಿ ಮೀಸಲಾದ kannada.hindustantimes.com/elections ಈ ಪುಟದಲ್ಲಿ ಕೂಡ ನೀವು ಸ್ಪಷ್ಟ & ನಿಖರ ಮಾಹಿತಿಗಾಗಿ ಅನುಸರಿಸಬಹುದು.

ಲೋಕಸಭಾ ಫಲಿತಾಂಶವನ್ನು ಆನ್ಲೈನ್ನಲ್ಲಿ ವೀಕ್ಷಿಸುವುದು ಹೇಗೆ?

ಆನ್‌ಲೈನ್‌ ಪ್ಲಾಟ್‌ಫಾರಂಗಳನ್ನು ಹುಡುಕಾಡುವವರು ಸಹಜವಾಗಿಯೇ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ವಿವಿಧ ಸುದ್ದಿ ಚಾನೆಲ್‌ಗಳನ್ನು, ಯೂಟ್ಯೂಬ್ ಚಾನೆಲ್‌ಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಗಮನಿಸಬಹುದು. ಚುನಾವಣಾ ಫಲಿತಾಂಶಗಳ ವಿವರವಾದ ವಿಶ್ಲೇಷಣೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ಸೈಟ್ ಅನ್ನು ಅನುಸರಿಸಬಹುದು.

ಪ್ರಮುಖ ಸುದ್ದಿ ವಾಹಿನಿಗಳು ಮುಂಜಾನೆಯಿಂದ ಲೈವ್ ಟ್ರೆಂಡ್ ಗಳನ್ನು ಪ್ರಸಾರ ಮಾಡಲಿವೆ. ಇನ್ನುಳಿದಂತೆ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಚಿತ್ರಮಂದಿರಗಳಲ್ಲಿ 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಮೂವಿಮ್ಯಾಕ್ಸ್ ನೇರ ಪ್ರಸಾರ ಮಾಡಲಿದೆ. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುವ "ಚುನಾವಣಾ ಫಲಿತಾಂಶಗಳು 2024" ಎಂಬ ಆರು ಗಂಟೆಗಳ ಸುದೀರ್ಘ ಪ್ರದರ್ಶನಕ್ಕಾಗಿ ಪೇಟಿಎಂ ಮೂಲಕ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಕೂಡ ಅದು ಶುರುಮಾಡಿದೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.