ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾ ಯುವಕ; ವೈರಲ್ ವಿಡಿಯೋ ನೋಡಿ ಆತನ ಪ್ರಾಣ ಉಳಿಸಿದ ಪೊಲೀಸರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾ ಯುವಕ; ವೈರಲ್ ವಿಡಿಯೋ ನೋಡಿ ಆತನ ಪ್ರಾಣ ಉಳಿಸಿದ ಪೊಲೀಸರು

ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾ ಯುವಕ; ವೈರಲ್ ವಿಡಿಯೋ ನೋಡಿ ಆತನ ಪ್ರಾಣ ಉಳಿಸಿದ ಪೊಲೀಸರು

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆಂದು ಆಗ್ರಾಕ್ಕೆ ಬಂದಿದ್ದ ಯುವಕ, ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ. ವೈರಲ್ ವಿಡಿಯೋ ನೋಡಿದ ಪೊಲೀಸರು ಆತನ ಪ್ರಾಣ ಉಳಿಸಿದ್ದಾರೆ. ಈ ರೀತಿ ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡುವುದು ಮುಖ್ಯ.

ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾದ ಯುವಕ (ಬಲಚಿತ್ರ) ಜೀವನ ಕೊನೆಗೊಳಿಸಲು ಮುಂದಾಗಿದ್ದ. ವೈರಲ್ ವಿಡಿಯೋ ನೋಡಿ ಪೊಲೀಸರು ಆತನ ಪ್ರಾಣ ಉಳಿಸಿದರು. ಆತ್ಮಹತ್ಯೆ ತಡೆಯ ಚಿತ್ರ ಎಡ ಭಾಗದ್ದು.
ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾದ ಯುವಕ (ಬಲಚಿತ್ರ) ಜೀವನ ಕೊನೆಗೊಳಿಸಲು ಮುಂದಾಗಿದ್ದ. ವೈರಲ್ ವಿಡಿಯೋ ನೋಡಿ ಪೊಲೀಸರು ಆತನ ಪ್ರಾಣ ಉಳಿಸಿದರು. ಆತ್ಮಹತ್ಯೆ ತಡೆಯ ಚಿತ್ರ ಎಡ ಭಾಗದ್ದು.

ನವದೆಹಲಿ: ಪ್ರೇಯಸಿ ಕೈಕೊಟ್ಟಳು ಎಂಬ ಅತೀವ ದುಃಖಕ್ಕೆ ಒಳಗಾದ ಆಗ್ರಾದ ಯುವಕನೊಬ್ಬ ಸೊಳ್ಳೆ ಔಷಧ ಕುಡಿದ. ಖಿನ್ನತೆಯಲ್ಲಿ ಮಾಡಿದ ಈ ಕೃತ್ಯದ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ. ಕೂಡಲೇ ಎಚ್ಚೆತ್ತ ಪೊಲೀಸರು ಆತ ಇರುವ ಸ್ಥಳ ಪತ್ತೆ ಹಚ್ಚಿ ಪ್ರಾಣ ಕಾಪಾಡಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ (ನವೆಂಬರ್ 8) ಈ ಘಟನೆ ನಡೆದಿದೆ. ಪೊಲೀಸರು ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆತ ಚೇತರಿಸುತ್ತಿದ್ದಾನೆ ಎಂದು ವರದಿ ವಿವರಿಸಿದೆ. ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಆತ ಸೊಳ್ಳೆ ಔಷಧ ಕುಡಿಯುತ್ತಿದ್ದ ದೃಶ್ಯವಿದೆ. ಗ್ಲಾಸ್‌ನಲ್ಲಿ ಇದ್ದ ದ್ರವವನ್ನು ಬಹಳ ಕಷ್ಟಪಟ್ಟು ಕುಡಿಯುತ್ತಿದ್ದ ಮತ್ತು ಮಾನಸಿಕ ಯಾತನೆ ಅನುಭವಿಸುತ್ತಿದ್ದುದು ಗಮನಸೆಳೆದಿದೆ.

ಪ್ರೇಯಸಿ ಕೈಕೊಟ್ಟಳು ಅಂತ ಸೊಳ್ಳೆ ಔಷಧ ಕುಡಿದ ಆಗ್ರಾದ ಯುವಕ; ಘಟನೆ ವಿವರ ಹೀಗಿದೆ

ಸೊಳ್ಳೆ ಔಷಧ ಕುಡಿಯುತ್ತಿದ್ದ ವಿಡಿಯೋವನ್ನು ಆ ಯುವಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ. ಇದನ್ನು ಪೊಲೀಸರು ಗಮನಿಸಿದರು. ಅಷ್ಟೇ ಬಹಳ ಬೇಗ ಆತ ಇದ್ದ ಸ್ಥಳಕ್ಕೆ ಶನಿವಾರ (ನವೆಂಬರ್ 9) ನಸುಕಿನ 3.30ಕ್ಕೆ ಆಗಮಿಸಿದರು. ಮನೆ ಬಾಗಿಲು ಬಡಿದಾಗ ತೆರೆಯದ ಕಾರಣ ಬಾಗಿಲು ಒಡೆದು ಒಳಕ್ಕೆ ಹೋದರು. ಆತನನ್ನು ಅಲ್ಲಿಂದ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಆತನಿಗೆ ಕ್ಷಿಪ್ರವಾಗಿ ಚಿಕಿತ್ಸೆ ಕೊಡಿಸಿ, ಪ್ರಾಣ ಕಾಪಾಡಿದರು.

ಪೊಲೀಸ್ ಆಯುಕ್ತ ಮೀಡಿಯಾ ಸೆಲ್‌ನಿಂದ ಇನ್‌ಸ್ಟಾಗ್ರಾಂ ಪೋಸ್ಟ್ ಕುರಿತಂತೆ ಎಚ್ಚರಿಕೆ ಸಂದೇಶ ಟ್ರಾನ್ಸ್ ಯಮುನಾ ಪೊಲೀಸ್ ಠಾಣೆಗೆ ರವಾನೆಯಾಗಿದೆ. ಆ ವಿಡಿಯೋದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸುತ್ತಿರುವ ದೃಶ್ಯವಿದೆ ಎಂದು ಎಚ್ಚರಿಸಿದ್ದರು. ಕಾನ್‌ಸ್ಟೆಬಲ್‌ಗಳಾದ ದುರ್ಗಾಶಂಕರ್ ಮತ್ತು ಮನೋಜ್ ಕುಮಾರ್ ಕ್ಷಿಪ್ರವಾಗಿ ಸ್ಪಂದಿಸಿ, ಟ್ರಾನ್ಸ್ ಯಮುನಾ ಕಾಲನಿಯ ಸತಿ ನಗರ ನಾರೈಚ್‌ನಲ್ಲಿರುವ ಆತನ ನಿವಾಸಕ್ಕೆ ಹೋಗಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.

ಹಾಗೆ ಹೋದ ಪೊಲೀಸ್ ಸಿಬ್ಬಂದಿ, ಬಾಗಿಲು ಬಡಿದಿದ್ದಾರೆ. ಆದರೆ ಪ್ರತಿಸ್ಪಂದನೆ, ಪ್ರತಿಕ್ರಿಯೆ ಬರಾದ ಕಾರಣ ಬಾಗಿಲು ಒಡೆದು ಒಳ ಹೋಗಿದ್ದಾರೆ. ಒಳಗೆ ಒಬ್ಬ ಯುವಕ ತೀವ್ರ ಅಸ್ವಸ್ಥನಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಸೊಳ್ಳೆ ಔಷಧ ಸೇವಿಸಿದ್ದು ದೃಢಪಟ್ಟಿದೆ. ಅದನ್ನು ನಿವಾರಿಸಿದ ಡಾಕ್ಟರ್‌ ಆತನ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರೇಮ ವೈಫಲ್ಯದಿಂದ ನೊಂದಿದ್ದ ಯುವಕ

ಪ್ರೇಮ ವೈಫಲ್ಯದಿಂದ ನೊಂದಿದ್ದ ಆ ಯುವಕ ಆಗ್ರಾದವನಲ್ಲ. ಹೊರಗಿನಿಂದ ಬಂದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಹೀಗಾಗಿ ಟ್ರಾನ್ಸ್‌ ಯಮುನಾ ಕಾಲನಿಯ ಸತಿ ನಗರ ನಾರೈಚ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ. ಇತ್ತೀಚೆಗೆ ಪ್ರೇಯಸಿ ಕೈಕೊಟ್ಟ ಕಾರಣ ಪ್ರೇಮ ವೈಫಲ್ಯದಿಂದ ಭಾವನಾತ್ಮಕವಾಗಿ ಕುಸಿದು ಹೋಗಿದ್ದ. ಕೆಲವು ವಾರಗಳಿಂದ ಖಿನ್ನತೆ ಅನುಭವಿಸಿದ್ದ ಯುವಕ ಶುಕ್ರವಾರ ರಾತ್ರಿ ಈ ವಿಪರೀತ ಕೃತ್ಯ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ಧಾಗಿ ವರದಿ ಹೇಳಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.