IBPS Updates: ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಅಂಕಪಟ್ಟಿ ಬಿಡುಗಡೆ, ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ನೇರ ಲಿಂಕ್ ಇಲ್ಲಿದೆ
IBPS Clerk Prelims Scorecard 2023: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಇದೀಗ CRP RRB Clerks XIII ಪರೀಕ್ಷೆಯ ಆನ್‌ಲೈನ್ ಪ್ರಿಲಿಮಿನರಿ ಸ್ಕೋರ್‌ಕಾರ್ಡ್ ಬಿಡುಗಡೆ ಮಾಡಿದೆ.
ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಇದೀಗ CRP RRB Clerks XIII ಪರೀಕ್ಷೆಯ ಆನ್‌ಲೈನ್ ಪ್ರಿಲಿಮಿನರಿ ಸ್ಕೋರ್‌ಕಾರ್ಡ್ ಬಿಡುಗಡೆ ಮಾಡಿದೆ. ಐಬಿಪಿಎಸ್ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಗಸ್ಟ್ ತಿಂಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆ ನಡೆದಿತ್ತು. ಈ ತಿಂಗಳ ಆರಂಭದಲ್ಲಿ ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿತ್ತು. ಇದೀಗ ಅಭ್ಯರ್ಥಿಗಳಿಗೆ ಅಂಕಪಟ್ಟಿ ಲಭ್ಯವಿದೆ. ನೀವು ಎಷ್ಟು ಅಂಕ ಪಡೆದಿದ್ದೀರಿ ಎಂದು ಈ ಮೂಲಕ ಪರೀಕ್ಷಿಸಿಕೊಳ್ಳಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರವಲ್ಲದೆ ಎಲ್ಲರೂ ಅಂಕಪಟ್ಟಿ ನೋಡಬಹುದಾಗಿದೆ.
ಮುಂದಿನ ನೇಮಕಾತಿ ಹಂತಕ್ಕೆ ಉತ್ತೀರ್ಣರಾದ ಅಭ್ಯರ್ಥಿಗಳು ಸಿದ್ಧತೆ ನಡೆಸಿಕೊಳ್ಳಬೇಕು. ಈ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬೇಕು. ಮುಖ್ಯ ಪರೀಕ್ಷೆಯು ಬಹುಶಃ ಅಕ್ಟೋಬರ್ 7ರಂದು ನಡೆಯಲಿದೆ. ಕ್ಲರ್ಕ್ ಮೇನ್ಸ್ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- ಮೊದಲಿಗೆ ಐಬಿಪಿಎಸ್ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್ ಲಿಂಕ್: ibps.in
- ಅಲ್ಲಿರುವ ಸಿಆರ್‌ಪಿ ಕ್ಲರ್ಕ್ ಪುಟಕ್ಕೆ ಹೋಗಿ
- ಸ್ಕೋರ್ ಕಾರ್ಡ್ ಕ್ಲಿಕ್ ಮಾಡಿ. ಡೌನ್‌ಲೋಡ್ ಲಿಂಕ್ ಅಲ್ಲಿರುತ್ತದೆ.
- ನಿಮ್ಮ ನೋಂದಣಿ ಸಂಖ್ಯೆ/ ರೋಲ್ ಸಂಖ್ಯೆ ಮತ್ತು ಪಾಸ್‌ವರ್ಡ್/ ಡೇಟ್ ಆಫ್ ಬರ್ತ್ ಹಾಕಿ. ಲಾಗಿನ್ ಆಗಿ
- ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ
ಸದ್ಯ ಐಬಿಪಿಎಸ್ ನೀಡಿರುವ ಮಾಹಿತಿ ಪ್ರಕಾರ ಪ್ರಿಲಿಮ್ಸ್ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವ ಸೌಲಭ್ಯವು ಅಕ್ಟೋಬರ್ 7ರವರೆಗೆ ಇರುತ್ತದೆ.
ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ, ನ್ಯೂಮರಿಕಲ್ ಎಬಿಲಿಟಿ, ರೀಸನಿಂಗ್ ಎಬಿಲಿಟಿ ಪ್ರಶ್ನೆಗಳು ಇತ್ತು. ಹಲವು ಸಾವಿರ ಜನರು ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯಲ್ಲಿ ಜನರಲ್/ ಫೈನಾನ್ಸಿಯಲ್ ಅವಾರ್ನೆಸ್, ಜನರಲ್ ಇಂಗ್ಲಿಷ್, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂರ್ ಆಪ್ಟಿಟ್ಯೂಡ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪ್ರಶ್ನೆಗಳು ಇರಲಿವೆ. ಈ ಪರೀಕ್ಷೆಗೆ ಸರಿಯಾದ ಸಿದ್ಧತೆ ನಡೆಸಿ, ಮಾಕ್ ಟೆಸ್ಟ್ ಎದುರಿಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿರಿ.
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ , ಇಂಡಿಯನ್ ಬ್ಯಾಂಕ್ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಲ್ಲಿ ಕರ್ಕ್ ಹುದ್ದೆಗಳಿವೆ.