IBPS RRB: ಐಬಿಪಿಎಸ್‌ ಆರ್‌ಆರ್‌ಬಿ ನೇಮಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ibps Rrb: ಐಬಿಪಿಎಸ್‌ ಆರ್‌ಆರ್‌ಬಿ ನೇಮಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

IBPS RRB: ಐಬಿಪಿಎಸ್‌ ಆರ್‌ಆರ್‌ಬಿ ನೇಮಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

IBPS RRB PO Recruitment 2023 Notification: ಬ್ಯಾಂಕ್‌ ಸಿಬ್ಬಂದಿ ನೇಮಕಾರಿ ಸಂಸ್ಥೆ (ಐಬಿಪಿಎಸ್‌)ಯು ಆಫೀಸರ್‌ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫೀಸರ್‌, ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

IBPS RRB: ಐಬಿಪಿಎಸ್‌ ಆರ್‌ಆರ್‌ಬಿ ನೇಮಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ
IBPS RRB: ಐಬಿಪಿಎಸ್‌ ಆರ್‌ಆರ್‌ಬಿ ನೇಮಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

ಬ್ಯಾಂಕ್‌ ಸಿಬ್ಬಂದಿ ನೇಮಕಾರಿ ಸಂಸ್ಥೆ (ಐಬಿಪಿಎಸ್‌)ಯು ಆಫೀಸರ್‌ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫೀಸರ್‌, ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಐಬಿಪಿಎಸ್‌ ಆರ್‌ಆರ್‌ಬಿ ಆಫೀಸರ್‌ ಮತ್ತು ಕ್ಲರ್ಕ್‌ ಹುದ್ದೆಗಳಿಗೆ ಆಗಸ್ಟ್‌ನಲ್ಲಿ ಪ್ರಿಲಿಮ್ಸ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.

ಈ ವರ್ಷ ಒಟ್ಟು 8611 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ 5538 ಆಫೀಸ್‌ ಅಸಿಸ್ಟೆಂಟ್‌ ಮತ್ತು 2485 ಹುದ್ದೆಗಳು ಆಫೀಸರ್‌ ಸ್ಕೇಲ್‌ 1 ಮತ್ತು 515 ಆಫೀಸರ್‌ ಸ್ಕೇಲ್‌ II ಮತ್ತು 73 ಆಫೀಸರ್‌ ಸ್ಕೇಲ್‌ III ಹುದ್ದೆಗಳಾಗಿವೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: ಜೂನ್‌ 1, 2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 21, 2023

ವಯೋಮಿತಿ ಎಷ್ಟು?

ಸೀನಿಯರ್‌ ಮ್ಯಾನೇಜರ್‌ ಆಫೀಸರ್‌ ಸ್ಕೇಲ್‌ III ಹುದ್ದೆಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಫೀಸರ್‌ ಸ್ಕೇಲ್‌ II ಮ್ಯಾನೇಜರ್‌ ಹುದ್ದೆಗಳಿಗೆ 21-32 ವಯೋಮಿತಿ ನಿಗದಿಪಡಿಸಲಾಗಿದೆ. ಆಫೀಸರ್‌ ಸ್ಕೇಲ್‌ I ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗೆ 18-30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿಪರ್ಪೋಸ್‌) ಹುದ್ದೆಗೆ 18-28 ವಯೋಮಿತಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ

  1. ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು. ಕಂಪ್ಯೂಟರ್‌ ಜ್ಞಾನ ಇರಬೇಕು.
  2. ಆಫೀಸರ್‌ ಸ್ಕೇಲ್‌ 1 ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕೃಷಿ, ತೋಟಗಾರಿಕೆ, ಅರಣ್ಯ, ಅನಿಮಲ್‌ ಹಸ್ಬೆಂಡರಿ ಇತ್ಯಾದಿ ವಿಷಯಗಳಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯ ಭಾಷೆಯ ಮೇಲೆ ಹಿಡಿತ ಇರಬೇಕು.
  3. ಆಫೀಸರ್‌ ಸ್ಕೇಲ್‌ II ಮ್ಯಾನೇಜರ್‌ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
  4. ಆಫೀಸರ್‌ ಸ್ಕೇಲ್‌ III ಹುದ್ದೆಗೂ ಯಾವುದೇ ವಿಷಯದಲ್ಲಿ ಪಡೆದವರು ಅರ್ಜಿ ಸಲ್ಲಿಸಬಹುದು. ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.

ಆಯ್ಕೆ ಪ್ರಕ್ರಿಯೆ

ಐಬಿಪಿಎಸ್‌ ಆರ್‌ಆರ್‌ಬಿ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

850 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ಅರ್ಜಿ ಶುಲ್ಕ ಪಾವತಿಸಿದರೆ ಸಾಕು.

ಅರ್ಜಿ ಸಲ್ಲಿಸುವುದು ಹೇಗೆ?

ibps.in ವೆಬ್‌ಸೈಟ್‌ಗೆ ಹೋಗಿ. ಹೋಮ್‌ ಪೇಜ್‌ನಲ್ಲಿ Click here to apply online for CRP RRBs-XII ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಯಾವು ಹುದ್ದೆಗೆ ಅರ್ಜಿಸಲ್ಲಿಸುವಿರೋ ಆ ಹುದ್ದೆಗೆ ಅರ್ಜಿ ಸಲ್ಲಿಸಿ. ಅರ್ಜಿ ಶುಲ್ಕವನ್ನೂ ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು.

ಕೆಳಗೆ ನೀಡಲಾದ ಅಧಿಸೂಚನೆಯಿಂದ ಹೆಚ್ಚಿನ ವಿವರ ಪಡೆಯಿರಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.