RRB PO Admit Card 2023: ಐಬಿಪಿಎಸ್ ಆರ್‌ಆರ್‌ಬಿ ಪಿಒ ಎಕ್ಸಾಂ, ಬ್ಯಾಂಕ್ ಆಫೀಸರ್ ಹುದ್ದೆ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ
IBPS RRB PO XII Admit Card: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನಡೆಸಲಿರುವ ಐಬಿಪಿಎಸ್ ಆರ್‌ಆರ್‌ಬಿ ಪಿಒ XII ಪರೀಕ್ಷೆಯ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿದೆ. ಗ್ರೂಪ್ ಎ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರು: ಐಬಿಪಿಎಸ್ ಪರೀಕ್ಷೆ ಬರೆದು ಬ್ಯಾಂಕ್ ಆಫೀಸರ್ ಆಗಲು ಬಯಸುವವರಿಗೆ ಸದ್ಯದಲ್ಲಿಯೇ ಆರ್‌ಆರ್‌ಬಿ ಪಿಒ ನೇಮಕಾತಿ ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಹಾಲ್ ಟಿಕೆಟ್ ಅಥವಾ ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದೆ. CRP-RRBs-XII ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ibps.in ವೆಬ್‌ಸೈಟ್ ಮೂಲಕ ಕರೆಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಆಗಸ್ಟ್ 6ರವರೆಗೆ ಅವಕಾಶವಿದೆ.
ಆಗಸ್ಟ್ ತಿಂಗಳಲ್ಲಿ ಐಬಿಪಿಎಸ್ ಆರ್‌ಆರ್‌ಬಿ ಪಿಒ ಪ್ರಿಲಿಮ್ಸ್ ಪರೀಕ್ಷೆ ನಡೆಸಲಿದೆ. ಪೂರ್ವಭಾವಿ ಪರೀಕ್ಷೆಯ ಫಲಿತಾಂಶವು ಆಗಸ್ಟ್ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಪ್ರಕಟಗೊಳ್ಳಲಿದೆ. ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಬಳಿಕ ಮೇನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
ಐಬಿಪಿಎಸ್ ಆರ್‌ಆರ್‌ಬಿ ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?
- ಮೊದಲಿಗೆ ಐಬಿಪಿಎಸ್ ವೆಬ್‌ಸೈಟ್‌ಗೆ ಪ್ರವೇಶಿಸಿ: ibps.in
- ಅಲ್ಲಿ CRP RRB ಪುಟವನ್ನು ಕ್ಲಿಕ್ ಮಾಡಿ
- RRBs Phase XII ಪುಟವನ್ನು ತೆರೆಯಿರಿ.
- download call letters ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ/ರೋಲ್ ನಂಬರ್ ನಮೂದಿಸಿ. ಪಾಸ್‌ವರ್ಡ್/ಜನ್ಮ ದಿನಾಂಕ ನಮೂದಿಸಿ. ಲಾಗಿನ್ ಆಗಿ
- ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿ.
ಈ ವರ್ಷ ಐಬಿಪಿಎಸ್ ಆರ್‌ಆರ್‌ಬಿ ನೇಮಕಾತಿ ಮೂಲಕ ಒಟ್ಟು 8611 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ 5538 ಆಫೀಸ್ ಅಸಿಸ್ಟೆಂಟ್ ಮತ್ತು 2485 ಹುದ್ದೆಗಳು ಆಫೀಸರ್ ಸ್ಕೇಲ್ 1 ಮತ್ತು 515 ಆಫೀಸರ್ ಸ್ಕೇಲ್ II ಮತ್ತು 73 ಆಫೀಸರ್ ಸ್ಕೇಲ್ III ಹುದ್ದೆಗಳಾಗಿವೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದಾಗಿದೆ. ಪ್ರಿಲಿಮ್ಸ್ ಪರೀಕ್ಷೆಯು ಕರ್ನಾಟಕದಲ್ಲಿ ಹುಬ್ಬಳ್ಳಿ, ಮಂಗಳೂರು, ದಾವಣಗೆರೆ, ಧಾರವಾಡ, ಉಡುಪಿ, ಮೈಸೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಬೀದರ್, ಬೆಂಗಳೂರಿನಲ್ಲಿ ನಡೆಯಲಿದೆ. ಮುಖ್ಯ ಪರೀಕ್ಷೆಯು ರಾಜ್ಯದಲ್ಲಿ ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ, ಕಲಬುರಗಿ, ಶಿವಮೊಗ್ಗ, ಉಡುಪಿಯಲ್ಲಿ ನಡೆಯಲಿದೆ.
ಐಬಿಪಿಎಸ್ ಆರ್‌ಆರ್‌ಬಿ ಹುದ್ದೆಗಳಿಗೆ ಈಗ ಪರೀಕ್ಷೆ ನಡೆಯುವ ಹಂತವಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮುಂದಿನ ತಿಂಗಳು ಪರೀಕ್ಷೆ ನಡೆಯಲಿದೆ. ಪ್ರಿಲಿಮ್ಸ್ ಪರೀಕ್ಷೆಯ ಸಿಲೆಬಸ್ ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಯಾರಿ ನಡೆಸಿ ಪರೀಕ್ಷೆ ಎದುರಿಸಿರಿ.