ಭಾರತೀಯ ರೈಲ್ವೆ ನೇಮಕ 2025: ಆರ್‌ಆರ್‌ಬಿಯಿಂದ 1036 ಹುದ್ದೆಗಳಿಗೆ ಅರ್ಜಿ ಆಹ್ವಾನ; ಟೀಚರ್, ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿ
RRB Ministerial and Isolated category Jobs: ಭಾರತೀಯ ರೈಲ್ವೆ ನೇಮಕ ಮಂಡಳಿಯು ಸಚಿವಾಲಯದ ಮತ್ತು ಇತರೆ ವಿಭಾಗಗಳ ಉದ್ಯೋಗ ನೇಮಕಕ್ಕೆ ಚಾಲನೆ ನೀಡಿದೆ. ಜೂನಿಯರ್ ಸ್ಟೆನೊಗ್ರಫರ್, ಜೂನಿಯರ್ ಟ್ರಾನ್ಸ್‌ಲೇಟರ್, ಅಡುಗೆಯವರು, ಪಿಜಿಟಿ, ಟಿಜಿಟಿ ಇತ್ಯಾದಿ ಹುದ್ದೆಗಳಿಗೆ rrbapply.gov.in ಮೂಲಕ ಅರ್ಜಿ ಸಲ್ಲಿಸಬಹುದು.
RRB Ministerial and Isolated category Jobs: ಭಾರತೀಯ ರೈಲ್ವೆ ನೇಮಕ ಮಂಡಳಿಯು ವಿವಿಧ ಸಚಿವಾಲಯದ ಮತ್ತು ಇತರೆ ವಿಭಾಗಗಳ ಉದ್ಯೋಗ ನೇಮಕಕ್ಕೆ ಚಾಲನೆ ನೀಡಿದೆ. ಒಟ್ಟು 1,036 ಹುದ್ದೆಗಳಿಗೆ ಜನವರಿ 7ರಿಂದ ಫೆಬ್ರವರಿ 6, 2025ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕ ಪ್ರಕ್ರಿಯೆಯು ಕಂಪ್ಯೂಟರ್ ಆಧರಿತ ಪರೀಕ್ಷೆಗಳು, ಕೌಶಲ ಪರೀಕ್ಷೆಗಳು, ದಾಖಲೆ ದೃಢೀಕರಣ ಮತ್ತು ವೈದ್ಯಕೀಯ ಪರೀಕ್ಷೆ ಮುಂತಾದ ವಿವಿಧ ಹಂತಗಳನ್ನು ಹೊಂದಿದೆ. ಆಸಕ್ತರು rrbapply.gov.in ವೆಬ್‌ಸೈಟ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಯಾವೆಲ್ಲ ಹುದ್ದೆಗಳಿವೆ?
ಜೂನಿಯರ್ ಸ್ಟೆನೊಗ್ರಫರ್, ಜೂನಿಯರ್ ಟ್ರಾನ್ಸ್‌ಲೇಟರ್, ಸ್ಟಾಫ್ ಆಂಡ್ ವೆಲ್‌ಫೇರ್ ಇನ್‌ಸ್ಪೆಕ್ಟರ್, ಚೀಫ್ ಲಾ ಅಸಿಸ್ಟೆಂಟ್, ಅಡುಗೆಯವರು, ಪಿಜಿಟಿ, ಟಿಜಿಟಿ, ದೈಹಿಕ ತರಬೇತಿ ಇನ್‌ಸ್ಟ್ರಕ್ಷರ್ (ಪುರುಷ ಮತ್ತು ಮಹಿಳೆ), ಅಸಿಸ್ಟೆಂಟ್ ಮಿಸ್ಟ್ರೀಸ್ (ಜೂನಿಯರ್ ಸ್ಕೂಲ್), ಮ್ಯೂಸಿಕ್ ಮಿಸ್ಟ್ರೀಸ್, ಡ್ಯಾನ್ಸ್ ಮಿಸ್ಟ್ರೀಸ್, ಲ್ಯಾಬೋರೇಟರಿ ಅಸಿಸ್ಟೆಂಟ್ (ಸ್ಕೂಲ್), ಹೆಡ್ ಕುಕ್, ಫಿಂಗರ್‌ಪ್ರಿಂಟ್ ಎಕ್ಸಾಮಿನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿವಿಧ ಹುದ್ದೆಗಳಿಗೆ ತಕ್ಕಂತೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 48 ವರ್ಷಗಳು.
ಹುದ್ದೆಯ ಹೆಸರು | ವೇತನ (ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ) | ಆರಂಭಿಕ ವೇತನ (ರೂಗಳಲ್ಲಿ) | ವಯೋಮಿತಿ (ಜನವರಿ 1, 20250 | ಹುದ್ದೆಗಳ ಸಂಖ್ಯೆ |
---|---|---|---|---|
ವಿವಿಧ ವಿಷಯಗಳಿಗೆ ಪಿಜಿಟಿ ಟೀಚರ್ಸ್ | 8 | 47600 | 18 - 48 | 187 |
ಸೈಂಟಿಫಿಕ್ ಸೂಪರ್‌ವೈಸರ್ | 7 | 44900 | 18 - 38 | 3 |
ವಿವಿಧ ವಿಷಯಗಳಿಗೆ ಟಿಜಿಟಿ | 7 | 44900 | 18 – 48 | 338 |
ಚೀಫ್ ಲಾ ಅಸಿಸ್ಟೆಂಟ್ | 7 | 44900 | 18 – 43 | 54 |
ಪಬ್ಲಿಕ್ ಪ್ರಾಸಿಕ್ಯೂಟರ್ | 7 | 44900 | 18 – 35 | 20 |
ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ) | 7 | 44900 | 18 - 48 | 18 |
ಸೈಂಟಿಫಿಕ್ ಅಸಿಸ್ಟೆಂಟ್/ ಟ್ರೈನರ್ | 6 | 35400 | 18 – 38 | 2 |
ಜೂನಿಯರ್ ಟ್ರಾನ್ಸ್‌ಲೇಟರ್ -ಹಿಂದಿ | 6 | 35400 | 18 – 36 | 130 |
ಸೀನಿಯರ್ ಪಬ್ಲಿಸಿಟಿ ಇನ್‌ಸ್ಪೆಕ್ಟರ್ | 6 | 35400 | 18 – 36 | 3 |
ಸ್ಟಾಫ್ ಆಂಡ್ ವೆಲ್‌ಫೇರ್ ಇನ್‌ಸ್ಪೆಕ್ಟರ್ | 6 | 35400 | 18 – 36 | 59 |
ಲೈಬ್ರೇರಿಯನ್ | 6 | 35400 | 18 – 33 | 10 |
ಮ್ಯೂಸಿಕ್ ಟೀಚರ್ (ಮಹಿಳೆ) | 6 | 35400 | 18 - 48 | 3 |
ವಿವಿಧ ವಿಷಯಗಳಿಗೆ ಪ್ರೈಮರಿ ರೈಲ್ವೆ ಟೀಚರ್ | 6 | 35400 | 18 - 48 | 188 |
ಅಸಿಸ್ಟೆಂಟ್ ಟೀಚರ್ (ಮಹಿಳೆ) (ಜೂನಿಯರ್ ಲೆವೆಲ್) | 6 | 35400 | 18 - 48 | 2 |
ಲೈಬ್ರೆರಿ ಅಸಿಸ್ಟೆಂಟ್ ಸ್ಕೂಲ್ | 4 | 25500 | 18 - 48 | 7 |
ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ 3 | 2 | 19900 | 18 – 33 | 12 |
ವಿದ್ಯಾರ್ಹತೆ ಏನು?
ಆಯಾ ಹುದ್ದೆಗಳಿಗೆ ತಕ್ಕಂತೆ ಪಿಯುಸಿ/12 ನೇ ತರಗತಿ, ಪದವಿ, ಸ್ನಾತಕ ಪದವಿ ಮುಂತಾದ ವಿದ್ಯಾರ್ಹತೆ ಬಯಸಲಾಗಿದೆ. ಅಂತಿಮ ವರ್ಷದ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಇಲ್ಲ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಫಲಿತಾಂಶ ಘೋಷಣೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಮೊದಲಿಗೆ ಆರ್‌ಆರ್‌ಬಿ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್ ವಿಳಾಸ: www.rrbapply.gov.in
ಹಂತ 2: ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಜನರೇಟ್ ಮಾಡಿ ಮೊದಲ ಹಂತದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
ಹಂತ 3: ನಿಮ್ಮ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ
ಹಂತ 3: Apply for RRB Ministerial and Isolated Category Teachers Vacancy 2025 ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 4: ವೈಯಕ್ತಿಕ, ಶೈಕ್ಷಣಿಕ, ವೃತ್ತಿಪರ ವಿವರವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತುಂಬಿರಿ. ಅರ್ಜಿ ಭರ್ತಿ ಮಾಡಿದ ಬಳಿಕ ಎರಡೆರಡು ಬಾರಿ ಮಾಹಿತಿ ಖಚಿತಪಡಿಸಿಕೊಂಡು ಸಬ್‌ಮಿಟ್ ಬಟನ್ ಕ್ಲಿಕ್ ಮಡಿ.
ಹಂತ 6: ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ. ಭವಿಷ್ಯದ ಉಪಯೋಗಕ್ಕೆ ಬೇಕಾಗುತ್ತದೆ.
ಭಾರತೀಯ ರೈಲ್ವೆಯ ಮಿನಿಸ್ಟ್ರೀಯಲ್ ಮತ್ತು ಐಸೋಲೇಟೆಡ್ ಕೆಟಗರಿಯ ಹುದ್ದೆಗಳಿಗೆ ಒಂದು ಹಂತದ ಕಂಪ್ಯೂಟರ್ ಆಧರಿತ (ಸಿಬಿಟಿ) ಪರೀಕ್ಷೆ ನಡೆಯುತ್ತದೆ. ಇದಾದ ಬಳಿಕ ಆಯಾ ಹುದ್ದೆಗಳಿಗೆ ತಕ್ಕಂತೆ ಸ್ಟೆನೊಗ್ರಫಿ ಸ್ಕಿಲ್ ಟೆಸ್ಟ್ (ಎಸ್‌ಎಸ್‌ಟಿ), ಟ್ರಾನ್ಸ್‌ಲೇಷನ್ ಟೆಸ್ಟ್ (ಟಿಟಿ), ಪರ್ಫಾಮೆನ್ಸ್ ಟೆಸ್ಟ್ (ಪಿಟಿ) ಅಥವಾ ಟೀಚಿಂಗ್ ಸ್ಕಿಲ್ ಟೆಸ್ಟ್ (ಟಿಎಸ್‌ಟಿ) ನಡೆಯುತ್ತದೆ. ಈ ಹಂತಗಳನ್ನು ಪೂರೈಸಿದ ಬಳಿಕ ಅರ್ಹ ಅಭ್ಯರ್ಥಿಗಳನ್ನು ದಾಖಲೆ ದೃಢೀಕರಣಕ್ಕೆ ಆಹ್ವಾನಿಸಲಾಗುತ್ತದೆ. ಇದಾದ ಬಳಿಕ ಮೆಡಿಕಲ್ ಪರೀಕ್ಷೆ ನಡೆಯುತ್ತದೆ. ಬಳಿಕ ನಿರ್ದಿಷ್ಟ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.