ಡೊನಾಲ್ಡ್‌ ಟ್ರಂಪ್ ಕಾರ್ಯವೈಖರಿ ಎದುರಿಸಲು ಸಿದ್ಧರಾಗೋಣ: ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಡೊನಾಲ್ಡ್‌ ಟ್ರಂಪ್ ಕಾರ್ಯವೈಖರಿ ಎದುರಿಸಲು ಸಿದ್ಧರಾಗೋಣ: ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ

ಡೊನಾಲ್ಡ್‌ ಟ್ರಂಪ್ ಕಾರ್ಯವೈಖರಿ ಎದುರಿಸಲು ಸಿದ್ಧರಾಗೋಣ: ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ

ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೈರೋ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲಿ ಅವರು ಆತಂಕಪಡುತ್ತಿದ್ದಾರೆ.

 ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ
ಯೂರೋಪ್‌ ಮೇಲೆ ಅಮೆರಿಕ ಸವಾರಿಯ ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್ ಬೈರೋ ಯುರೋಪ್ ಮೇಲೆ ಅಮೆರಿಕ ಸವಾರಿ ನಡೆಸಲಿರುವ ಬಗ್ಗೆ ಎಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಎದುರಿಸದಿದ್ದರೆ ಯುರೋಪ್ ಮತ್ತು ಫ್ರಾನ್ಸ್ ಕಷ್ಟಪಡಬೇಕಾಗುತ್ತದೆ ಎಂದು ಅವರು ಹೇಳಿದರು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಕೂಡಲೇ ಅಮೆರಿಕದ ಪ್ರಾಬಲ್ಯದ ರಾಜಕೀಯ ಪ್ರಾರಂಭವಾಗುತ್ತದೆ ಎಂದು ಫ್ರಾಂಕೋಯಿಸ್ ಬೈರೋ ಹೇಳಿದ್ದರು. ನಾವು ಏನನ್ನೂ ಮಾಡದಿದ್ದರೆ, ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಫ್ರಾನ್ಸ್ ಮತ್ತು ಯುರೋಪ್ ಒಟ್ಟಾಗಿ ಭವಿಷ್ಯವನ್ನು ನಿರ್ಧರಿಸಬೇಕು ಎಂದು ಹೇಳಿದರು.

ಆತಂಕ ತೋಡಿಕೊಂಡ ಫ್ರಾನ್ಸ್ ಪ್ರಧಾನಿ

ಚುನಾವಣೆಯಲ್ಲಿ ಗೆಲ್ಲುವ ಮುನ್ನ ಡೊನಾಲ್ಡ್ ಟ್ರಂಪ್, ಯುರೋಪಿಯನ್ ಯೂನಿಯನ್ ಅಮೆರಿಕನ್ ಉತ್ಪನ್ನಗಳ ಖರೀದಿಯನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡಿದ್ದರು. ಆದ್ದರಿಂದ ಈಗ ಭಾರೀ ಬೆಲೆ ತೆರಬೇಕಾದ ಪ್ರಸಂಗ ಎದುರಾಗಬಹುದು ಎಂದು ಫ್ರೆಂಚ್ ಪ್ರಧಾನಿ ಹೇಳಿದರು. ಎಲ್ಲಾ ದೇಶಗಳ ಆಮದುಗಳ ಮೇಲೆ 10% ಸುಂಕ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 60% ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಈಗಾಗಲೇ ಶಪಥ ಮಾಡಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದರು.

ಈ ಹಿಂದೆ ಟ್ರಂಪ್ "ಅವರು ನಮ್ಮ ಕಾರುಗಳನ್ನು ಖರೀದಿಸುವುದಿಲ್ಲ. ಅವರು ನಮ್ಮ ಕೃಷಿ ಸಾಮಗ್ರಿಗಳನ್ನು ಖರೀದಿಸುವುದಿಲ್ಲ. ಆದರೆ ಅವರು ಮಿಲಿಯನ್ ಲೆಕ್ಕದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಾರೆ. ಆದ್ದರಿಂದ ಅವರು ಈ ಮಾರಾಟಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ" ಎಂದಿದ್ದರು. ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಗೆಲ್ಲುವುದಕ್ಕಿಂತಲೂ ಮುಂಚಿತವಾಗಿಯೇ ಡೊನಾಲ್ಡ್‌ ಟ್ರಂಪ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಆ ವಿಚಾರಗಳು ಮುಂದಿನ ದಿನಗಳಲ್ಲಿ ಯುರೋಪ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ನೇರ ಎಚ್ಚರಿಕೆ ಅವರ ಮಾತಿನಲ್ಲಿತ್ತು. "ಸಾಕಷ್ಟು ಅಮೇರಿಕನ್ ರಫ್ತುಗಳನ್ನು ಖರೀದಿಸದಿರುವುದಕ್ಕಾಗಿ ಯುರೋಪ್‌ ಒಕ್ಕೂಟವು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ" ಎಂದು ಟ್ರಂಪ್ ಎಚ್ಚರಿಸಿದ್ದರು.

ಚುನಾವಣೆಗೂ ಮೊದಲೇ ಸಿಕ್ಕಿತ್ತು ಆಡಳಿತ ವ್ಯತ್ಯಾಸದ ಸುಳಿವು

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಮೊದಲು ಡೊನಾಲ್ಡ್‌ ಟ್ರಂಪ್ “ಯುರೂಪ್ ಒಂದು ಸುಂದರವಾದ ದೇಶ. ಯುರೂಪಿಯನ್ ಒಗ್ಗಟ್ಟು ತುಂಬಾ ಚೆನ್ನಾಗಿದೆ. ಯೂರೋಪಿನ ಎಲ್ಲ ಪುಟ್ಟ ದೇಶಗಳೂ ಒಟ್ಟಾಗಿ ಸೇರುತ್ತವೆ” ಎಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಂಡಿದ್ದರು.

ಅದೇ ರೀತಿ, ಈಗ ಎಲ್ಲ ದೇಶಗಳೂ ಸಹ ಟ್ರಂಪ್ ಅಧ್ಯಕ್ಷರಾದರೆ ನಮಗೇನು ಲಾಭ? ಮತ್ತು ನಮಗೇನು ನಷ್ಟ ಎನ್ನುವುದನ್ನು ಖಂಡಿತ ಆಲೋಚಿಸುತ್ತವೆ ಮತ್ತು ಎಚ್ಚೆತ್ತುಕೊಳ್ಳಲು ಆರಂಭಿಸಿರುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.