ಕನ್ನಡ ಸುದ್ದಿ  /  Nation And-world  /  Everyone Living In India Is Hindu, Says Rss Chief Mohan Bhagwat

Mohan Bhagwat on Hindu: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು - ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಛತ್ತೀಸ್‌ಗಢ: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಯಾರೊಬ್ಬರೂ ತಮ್ಮ ಆಚರಣೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಅಂಬಿಕಾಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವೈವಿಧ್ಯತೆಯಲ್ಲಿ ಏಕತೆಯು ಪುರಾತನದ ವೈಶಿಷ್ಟ್ಯವಾಗಿದೆ. ಹಿಂದುತ್ವವು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದನ್ನು ನಂಬುವ ವಿಶ್ವದ ಏಕೈಕ ಕಲ್ಪನೆಯಾಗಿದೆ ಎಂದರು.

ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎಂದು ನಾವು 1925 ರಿಂದ (ಆರ್‌ಎಸ್‌ಎಸ್ ಸ್ಥಾಪನೆಯಾದಾಗಿನಿಂದ) ಹೇಳುತ್ತಿದ್ದೇವೆ. ಯಾರು ಭಾರತವನ್ನು ಮಾತೃಭೂಮಿ ಎಂದು ಪರಿಗಣಿಸುತ್ತಾರೋ, ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯೊಂದಿಗೆ ಬದುಕಲು ಬಯಸುತ್ತಾರೋ ಮತ್ತು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಾರೋ, ಯಾವುದೇ ಬೇಧಭಾವವಿಲ್ಲದೇ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಹಾರ ಪದ್ಧತಿ ಮತ್ತು ಸಿದ್ಧಾಂತವನ್ನು ಅನುಸರಿಸುತ್ತಾರೂ, ಅವರು ಹಿಂದೂಗಳು ಎಂದು ಭಾಗವತ್ ಹೇಳಿದರು.

ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಇಂತಹ ವೈವಿಧ್ಯತೆಗಳನ್ನು ಒಗ್ಗೂಡಿಸಿರುವ ಕಾರಣ, ವೈವಿಧ್ಯತೆಗಳನ್ನು ಏಕೀಕರಿಸುವಲ್ಲಿ ನಂಬಿರುವ ಇಡೀ ಪ್ರಪಂಚದಲ್ಲಿ ಹಿಂದೂತ್ವವು ಏಕೈಕ ಕಲ್ಪನೆಯಾಗಿದೆ. ಇದು ಸತ್ಯ ಮತ್ತು ನೀವು ಅದನ್ನು ದೃಢವಾಗಿ ಮಾತನಾಡಬೇಕು. ಅದರ ಆಧಾರದ ಮೇಲೆ ನಾವು ಒಂದಾಗಬಹುದು. ವೈಯಕ್ತಿಕ ಮತ್ತು ರಾಷ್ಟ್ರೀಯ ಸ್ವರೂಪವನ್ನು ನಿರ್ಮಿಸುವುದು ಮತ್ತು ಜನರಲ್ಲಿ ಏಕತೆಯನ್ನು ತರುವುದು ಸಂಘದ ಕೆಲಸವಾಗಿದೆ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದರು.

ವೈವಿಧ್ಯತೆಗಳ ಹೊರತಾಗಿಯೂ ನಾವೆಲ್ಲರೂ ಒಂದೇ ರೀತಿಯಾಗಿದ್ದೇವೆ. ನಾವು ಸಾಮಾನ್ಯ ಪೂರ್ವಜರನ್ನು ಹೊಂದಿದ್ದೇವೆ. 40,000 ವರ್ಷಗಳಷ್ಟು ಹಳೆಯದಾದ ಅಖಂಡ ಭಾರತದ ಭಾಗವಾಗಿರುವ ಪ್ರತಿಯೊಬ್ಬ ಭಾರತೀಯನಿಗೂ ಸಾಮಾನ್ಯ ಡಿಎನ್‌ಎ ಇದೆ. ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ಆಚರಣೆಗಳಿಗೆ ಅಂಟಿಕೊಳ್ಳಬೇಕು ಮತ್ತು ಇತರರ ನಂಬಿಕೆಯನ್ನು ಪರಿವರ್ತಿಸಲು ಪ್ರಯತ್ನಿಸಬಾರದು ಎಂದು ನಮ್ಮ ಪೂರ್ವಜರು ಕಲಿಸಿದರು. ಎಂದು ಭಾಗವತ್ ನುಡಿದರು.

ಎಲ್ಲರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಿ. ಎಲ್ಲರನ್ನೂ ಸ್ವೀಕರಿಸಿ ಮತ್ತು ನಿಮ್ಮದೇ ದಾರಿಯಲ್ಲಿ ನಡೆಯಿರಿ. ನಿಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಿ, ಆದರೆ ಇತರರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸದಂತಹ ಸ್ವಾರ್ಥಿಯಾಗಬೇಡಿ ಎಂದರು. ಸತ್ಯದ ಹಾದಿಯಲ್ಲಿ ನಡೆಯುವಾಗ ಜನರನ್ನು ಒಗ್ಗೂಡಿಸುವುದು ಮತ್ತು ಸಮಾಜಗಳನ್ನು ಪ್ರಭಾವಶಾಲಿಯಾಗಿಸುವುದು 97 ವರ್ಷಗಳ ಹಿಂದಿನ ಸಂಘಟನೆಯ (ಆರ್​ಎಸ್​ಎಸ್​) ಗುರಿಯಾಗಿದೆ ಎಂದು ಹೇಳಿದರು.

ನಮ್ಮ ಸಂಸ್ಕೃತಿ ನಮ್ಮನ್ನು ಸಂಪರ್ಕಿಸುತ್ತದೆ. ನಾವು ನಮ್ಮೊಳಗೆ ಎಷ್ಟೇ ಜಗಳವಾಡಿದರೂ ಬಿಕ್ಕಟ್ಟಿನ ಸಮಯದಲ್ಲಿ ನಾವು ಒಂದಾಗುತ್ತೇವೆ. ದೇಶಕ್ಕೆ ಯಾವುದೇ ರೀತಿಯ ತೊಂದರೆ ಎದುರಾದಾಗ ನಾವು ಒಟ್ಟಾಗಿ ಹೋರಾಡುತ್ತೇವೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಇಡೀ ದೇಶವು ಅದನ್ನು ಎದುರಿಸಲು ಒಂದಾಗಿ ನಿಂತಿತ್ತು ಎಂದು ತಿಳಿಸಿದರು.

ವಿಭಾಗ