ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಅತಿಯಾದ ಕೀಟನಾಶಕ ಅಂಶ ಬಳಕೆ; ಉತ್ಪನ್ನ ಹಿಂಪಡೆಯಲು ಸಿಂಗಾಪುರ್ ಸೂಚನೆ -Everest Fish Curry Masala

ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಅತಿಯಾದ ಕೀಟನಾಶಕ ಅಂಶ ಬಳಕೆ; ಉತ್ಪನ್ನ ಹಿಂಪಡೆಯಲು ಸಿಂಗಾಪುರ್ ಸೂಚನೆ -Everest Fish Curry Masala

ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಅತಿಯಾದ ಕೀಟನಾಶಕ ಅಂಶ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ. ಕೂಡಲೇ ಉತ್ಪನ್ನ ಬಳಕೆಯಿಂದ ವಾಪಸ್‌ಗೆ ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರ ಸೂಚಿಸಿದೆ.

ಎವೆರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಹೆಚ್ಚು ಕೀಟನಾಶಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಸಿಂಗಾಪುರ್ ಫುಡ್ ಏಜೆನ್ಸಿ ಉತ್ಪನ್ನವನ್ನು ಹಿಂಪಡೆಯಲು ಸೂಚಿಸಿದೆ.
ಎವೆರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಹೆಚ್ಚು ಕೀಟನಾಶಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಸಿಂಗಾಪುರ್ ಫುಡ್ ಏಜೆನ್ಸಿ ಉತ್ಪನ್ನವನ್ನು ಹಿಂಪಡೆಯಲು ಸೂಚಿಸಿದೆ.

ಹಾಂಗ್‌ಕಾಂಗ್ (ಸಿಂಗಾಪುರ್): ನೆಸ್ಲೆ ಕಂಪನಿಯ ಸೆರಲ್ಯಾಕ್ ನಂತರ ಇದೀಗ ಎವರೆಸ್ಟ್ ಮಸಾಲಾ ಸರದಿ. ಆರೋಗ್ಯಕ್ಕೆ ಹಾನಿಕಾರಕ ಅಂಶವನ್ನು ಅತಿಯಾಗಿ ಬಳಸಿರುವ ಆರೋಪದಲ್ಲಿ ಭಾರತದ ಅತ್ಯಂತ ಜನಪ್ರಿಯ ಎವರೆಸ್ಟ್ ಫಿಶ್ ಕರಿ ಮಸಾಲವನ್ನು (Everest Fish Curry Masala) ಹಿಂಪಡೆಯಲು ಸಿಂಗಾಪುರ್ ಫುಡ್ ಏಜೆನ್ಸಿ (Singapore Food Agency) ಭಾರತ ಮೂಲದ ಕಂಪನಿಗೆ ಸೂಚಿಸಿದೆ. ಎವರೆಸ್ಟ್ ಫಿಶ್ ಕರಿ ಮಸಾಲದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥಿಲೀನ್ ಆಕ್ಸೈಡ್ ಎಂಬ ಕೀಟನಾಶಕವನ್ನು ಬಳಸಲಾಗಿದೆ ಎಂದು ಸಿಂಗಾಪುರ್ ಫುಡ್ ಏಜೆನ್ಸಿ ಆರೋಪಿಸಿರುವುದಾಗಿ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ರಾಸಾಯನಿಕವು ಮಾನವ ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಫಿಶ್ ಕರಿ ಉತ್ಪನ್ನದಲ್ಲಿ ಎಥಿಲೀನ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮಸಾಲೆ ಉತ್ಪನ್ನವನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅನುಮತಿಸಲಾದ ಮಿತಿಗಳನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಗಮನಿಸಿದ ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರವು ಹೊರಡಿಸಿದ ಅಧಿಸೂಚನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಂಗಾಪುರ್ ಫುಡ್ ಏಜೆನ್ಸಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ನೋಡುವುದಾದರೆ, "ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವ ಕಾರಣ ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರವು ಭಾರತದಿಂದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಅಧಿಸೂಚನೆ ಹೊರಡಿಸಿದೆ" ಎಂದು ಹೇಳಿದೆ. ಇದರ ನಂತರ ಸಿಂಗಾಪುರ್ ಫುಡ್ ಏಜೆನ್ಸಿ ಆಮದುದಾರ ಎಸ್ ಪಿ ಮುತ್ತಯ್ಯ & ಸನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಆಹಾರ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಉತ್ಪನ್ನಗಳನ್ನು ಹಿಂಪಡೆಯಲು ಪ್ರಾರಂಭಿಸಲು ನಿರ್ದೇಶನ ನೀಡಿದೆ. ಸೂಕ್ಷ್ಮಜೀವಿಯ ಮಾಲಿನ್ಯವನ್ನು ತಡೆಗಟ್ಟಲು ಈ ಕೀಟನಾಶಕವನ್ನು ಸಾಮಾನ್ಯವಾಗಿ ಕೃಷಿ ಉತ್ಪನ್ನಗಳಿಗೆ ಬಳಸಲಾಗುತ್ತದೆ.

ಎವರೆಸ್ಟ್ ಫಿಶ್ ಕರಿ ಮಸಾಲಾ ಸೇವಿಸಿದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಸಿಂಗಾಪುರದ ನಿಯಮಗಳ ಪ್ರಕಾರ, ಮಸಾಲೆಗಳ ಸಂತಾನಶಕ್ತಿ ಹರಣ ಚಿಕಿತ್ಸೆಯಲ್ಲಿ ರಾಸಾಯನಿಕವನ್ನು ಅನ್ವಯಿಸಲು ಅನುಮತಿಸಲಾಗಿದೆ. ಆದರೆ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿನ ಹೆಚ್ಚಿನ ಮಟ್ಟವು ಗ್ರಾಹಕರಿಗೆ ಸಂಭಾವ್ಯ ಆರೋಗ್ಯ ಅಪಾಯವನ್ನುಂಟು ಮಾಡುತ್ತದೆ."ಸಂಬಂಧಿತ ಉತ್ಪನ್ನಗಳನ್ನು ಸೇವಿಸಿರುವವರು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಸಿಂಗಾಪುರ್ ಫುಡ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ರಾಸಾಯನಿಕ ಅಂಶ ಇರುವ ಮಸಾಲಾ ಸೇವನೆಯಿಂದ ತಕ್ಷಣಕ್ಕೆ ಅಪಾಯ ಇಲ್ಲದಿದ್ದರೂ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಎವರೆಸ್ಟ್ ಇನ್ನೂ ಪ್ರತಿಕ್ರಿಯಿಸಿಲ್ಲ. ನೆಸ್ಲೆ ಕಂಪನಿಯ ಸೆರಿಲ್ಯಾಕ್‌ನಲ್ಲಿ ಅಧಿಕ ಸಕ್ಕರೆಯಂಶ ಪತ್ತೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆಗ ಆದೇಶಿದೆ.

IPL_Entry_Point