Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

ತಮಿಳುನಾಡಿನ ಗಿರಿಧಾಮಗಳಾದ ಊಟಿ( Ooty) ಹಾಗೂ ಕೊಡೈಕೆನಾಲ್‌( Kodaikanal) ಪ್ರವೇಶಕ್ಕೆ ಈಗ ಇ ಪಾಸ್‌( E Pass) ಕಡ್ಡಾಯ. ಏನಿರದ ವಿಶೇಷ.

ಊಟಿ, ಕೊಡೈಕೆನಾಲ್‌ ನಲ್ಲಿ ಇ ಪಾಸ್‌ ಕಡ್ಡಾಯ
ಊಟಿ, ಕೊಡೈಕೆನಾಲ್‌ ನಲ್ಲಿ ಇ ಪಾಸ್‌ ಕಡ್ಡಾಯ

ಚೆನ್ನೈ: ದಕ್ಷಿಣ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರಮುಖ ಹೆಸರು ತಮಿಳುನಾಡಿನ ಊಟಿ( Ooty) ಮತ್ತು ಕೊಡೈಕೆನಾಲ್‌( Kodaikanal) ಗಿರಿಧಾಮಗಳು. ಬೆಟ್ಟಗುಡ್ಡಗಳ ಸಾಲಿನ ಜತೆಗೆ ಹಿಮಚ್ಛಾದಿತ ವಾತಾವರಣವೇ ಇಲ್ಲಿನ ಆಕರ್ಷಣೆ. ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಅತೀ ತಣ್ಣಗೆ, ಮಳೆಗಾಲದಲ್ಲಿ ಮಳೆ ಹಾಗೂ ಚಳಿಯೊಂದಿಗೆ ಆಯಾ ಋತುಮಾನಕ್ಕೆ ತಕ್ಕುನಾಗಿ ವಿಭಿನ್ನ ಪರಿಸರ ಹಾಗೂ ವಾತಾವರಣದಿಂದ ಲಕ್ಷಾಂತರ ಪ್ರವಾಸಿಗರನ್ನೂ ಈ ಎರಡೂ ತಾಣಗಳು ಸೆಳೆಯುತ್ತವೆ. ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಿಂದ ಹೆಚ್ಚಿನ ಪ್ರವಾಸಿಗರು ಎರಡೂ ತಾಣಗಳಿಗೂ ಬರುವುದುಂಟು. ಈ ಎರಡೂ ನಗರ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸೋದ್ಯಮ ಪ್ರಗತಿಗೆ ಎಷ್ಟು ವರದಾನವಾಗಿವೆಯೋ ಅಷ್ಟೇ ಅಡಚಣೆಗೂ ದಾರಿ ಮಾಡಿಕೊಟ್ಟಿವೆ. ಬೆಟ್ಟಗಳ ಪರಿಸರಕ್ಕೂ ಭಾರೀ ಸಂಖ್ಯೆ ವಾಹನಗಳು ಅಡಚಣೆ ಮಾಡುತ್ತಿವೆ ಎನ್ನುವ ಮಾತು ಕೇಳಿ ಬರುತ್ತಿವೆ. ಈ ಕಾರಣದಿಂದಲೇ ತಮಿಳನಾಡು ಸರ್ಕಾರ ಇದಕ್ಕೆ ನಿಗ್ರಹ ಹಾಕುವ ಮೂಲಕ ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದಲೇ ಹೊಸ ನಿಯಮ ಜಾರಿಗೆ ತಂದಿವೆ. ಅಂದರೆ ಈ ಎರಡೂ ಊರುಗಳಿಗೆ ಪ್ರವಾಸ ಬರುವವರು, ಅದರಲ್ಲೂ ಸ್ವಂತ ವಾಹನಗಳಲ್ಲಿ ಬರುವವರು ಕಡ್ಡಾಯವಾಗಿ ಇ ಪಾಸ್‌( E-Pass) ಅನ್ನು ಹೊಂದಿರಲೇಬೇಕು. ಇಲ್ಲದೇ ಇದ್ದರೆ ಪ್ರವೇಶ ಕಷ್ಟವಾಗಲಿದೆ. ಮೊದಲಿಗೆ ಇದನ್ನು ಬೇಸಿಗೆ ಪ್ರವಾಸಿ ಅವಧಿಗೆ ಮಾತ್ರ ಅನ್ವಯಿಸಲಿದೆ.

ಇ-ಪಾಸ್‌ಗಳು ಏಕೆ ಕಡ್ಡಾಯ?

ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಊಟಿ ಮತ್ತು ಕೊಡೈಕೆನಾಲ್‌ನಂತಹ ಗಿರಿಧಾಮಗಳಿಗೆ ವಾಹನ ಪ್ರವೇಶವನ್ನು ನಿಯಂತ್ರಿಸಲು ಆದೇಶವನ್ನು ಹೊರಡಿಸಿತು. ಹೆಚ್ಚು ಪ್ರವಾಸಿಗರು ಇರುವ ಸಮಯದಲ್ಲಿ ಆಗುತ್ತಿರುವ ಹೆಚ್ಚಳವನ್ನು ಗಮನಿಸಿ ತಮಿಳುನಾಡು ಸರ್ಕಾರವು ಇ ಪಾಸ್‌ ನಿಮಯ ಜಾರಿಗೆ ತಂದಿದೆ. ಈ ನಿಯಮವು ಮೇ 6 ರಂದು ಆರಂಭಗೊಂಡಿದ್ದು ಜೂನ್ 30 ರವರೆಗೆ ಜಾರಿಯಲ್ಲಿದೆ. ಈ ಪಾಸ್‌ಗಳು ಪ್ರವೇಶವನ್ನು ಸೀಮಿತಗೊಳಿಸುವುದಕ್ಕೆ ಅಲ್ಲ. ಬದಲಿಗೆ, ವಾಹನ ಸಂಖ್ಯೆಗಳು, ಪ್ರವಾಸಿಗರ ಸಂಖ್ಯೆ ಮತ್ತು ಅವರು ತಂಗುವ ಅವಧಿಯ ಮಾಹಿತಿಯನ್ನು ಸಂಗ್ರಹಿಸಲು ಅವು ಸರ್ಕಾರಕ್ಕೆ ನಿಖರ ಮಾಹಿತಿಯೂ ಆಗಲಿವೆ. ಇ ಪಾಸ್‌ ಮೂಲಕ ನೀಡುವ ಮಾಹಿತಿಯು ಭವಿಷ್ಯದಲ್ಲಿ ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಮೂಲಸೌಕರ್ಯ ಬದಲಾವಣೆಗಳ ಬೇಕಾದ ಸೌಲಭ್ಯಗಳನ್ನು ಒದಗಿಸಲು ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಇ-ಪಾಸ್ ಪಡೆಯಲು ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಇರುವುದಿಲ್ಲ. ಪ್ರವಾಸಿಗರು ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ಪ್ರವೇಶ ಪಾಸ್ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ ಎನ್ನುವ ಮಾಹಿತಿ ನೀಡಲಾಗಿದೆ.

ಇ-ಪಾಸ್ ಯಾರಿಗೆ ಬೇಕು?

ಖಾಸಗಿ ವಾಹನಗಳಲ್ಲಿ ಈ ಗಿರಿಧಾಮಗಳಿಗೆ ಚಾಲನೆ ಮಾಡುವ ಎಲ್ಲಾ ವ್ಯಕ್ತಿಗಳಿಗೆ ಪ್ರಾಥಮಿಕವಾಗಿ ಇ-ಪಾಸ್ ಅಗತ್ಯವಿದೆ. ಆದಾಗ್ಯೂ, ಈ ಗಿರಿಧಾಮಗಳ ನಿವಾಸಿಗಳು ಮತ್ತು ಸರ್ಕಾರಿ ಬಸ್‌ಗಳ ಮೂಲಕ ಬರುವ ಪ್ರವಾಸಿಗರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಇ-ಪಾಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಇದು ಸರ್ಕಾರದ ಅಧಿಕೃತ ವೆಬ್‌ಸೈಟ್ epass.tnega.org ಮೂಲಕ ಪಡೆಯಬಹುದಾದ ಸರಳವಾದ ಪ್ರಕ್ರಿಯೆ. ಆನ್‌ಲೈನ್ ಅಪ್ಲಿಕೇಶನ್ ಪ್ರಯಾಣಿಕರ ಸಂಖ್ಯೆ, ವಾಹನದ ಇಂಧನ ಪ್ರಕಾರ ಸೇರಿ ವಾಹನದ ವಿಶೇಷಗಳು, ಪ್ರವೇಶ ಮತ್ತು ನಿರ್ಗಮನದ ಉದ್ದೇಶಿತ ದಿನಾಂಕಗಳು, ಭೇಟಿಯ ಉದ್ದೇಶ ಮತ್ತು ನಿಮ್ಮ ಸಂಪರ್ಕ ಮಾಹಿತಿಯಂತಹ ಅಗತ್ಯ ವಿವರಗಳನ್ನು ಒದಗಿಸಬೇಕಾಗುತ್ತದೆ. ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ನೀವು QR ಕೋಡ್‌ನೊಂದಿಗೆ ಇ-ಪಾಸ್ ಅನ್ನು ಪಡೆಯುತ್ತೀರಿ. ಈ ಕೋಡ್ ಅನ್ನು ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಗೊತ್ತುಪಡಿಸಿದ ಪ್ರವೇಶ ಕೇಂದ್ರಗಳಲ್ಲಿ ಪರಿಶೀಲಿಸಲಾಗುತ್ತದೆ, ಅಧಿಕೃತ ವಾಹನಗಳಿಗೆ ತೊಂದರೆ-ಮುಕ್ತ ಪ್ರವೇಶ ಇರಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಇ ಪಾಸ್‌ ಜಾರಿಯಾದ ಕಳೆದ ವಾರ, ಊಟಿಯ ಪ್ರಮುಖ ಪ್ರವಾಸಿ ತಾಣಗಳಾದ ಬೊಟಾನಿಕಲ್ ಗಾರ್ಡನ್ ಮತ್ತು ಬೋಟ್ ಹೌಸ್ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಇ ಪಾಸ್‌ ವ್ಯವಸ್ಥೆಯಿಂದಲೇ ದಟ್ಟಣೆಯಲ್ಲಿ ಶೇ. 50ರಷ್ಟು ಕಡಿಮೆಯಾಗಿದೆ ಎನ್ನುವುದು ಊಟಿಯ ಪ್ರವಾಸೋದ್ಯಮ ನಂಬಿ ಬದುಕುತ್ತಿರುವ ಹಲವರ ಅಭಿಪ್ರಾಯವೂ ಹೌದು. ಮೊದಲ ಅವಧಿಯ ನಂತರ ಇ ಪಾಸ್‌ನ ಉದ್ದೇಶ. ಬಳಕೆ ಪ್ರಮಾಣವೂ ಹೆಚ್ಚಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.