ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಲ್ಲಕಡಲ್ ವಿದ್ಯಮಾನ ಎಚ್ಚರಿಕೆ; ಮೀನುಗಾರರಿಗೆ ಎಚ್ಚರಿಕೆ, ಏನಿದು ಬೆಳವಣಿಗೆ?

ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಲ್ಲಕಡಲ್ ವಿದ್ಯಮಾನ ಎಚ್ಚರಿಕೆ; ಮೀನುಗಾರರಿಗೆ ಎಚ್ಚರಿಕೆ, ಏನಿದು ಬೆಳವಣಿಗೆ?

ಹವಾಮಾನ ಎಚ್ಚರಿಕೆ ನೀಡುವ ಇನ್ಕೊಯಿಸ್ ದೇಶಾದ್ಯಂತ ಮೀನುಗಾರರಿಗೆ ಕಲ್ಲಕಡಲ್ ವಿದ್ಯಮಾನ ಎಚ್ಚರಿಕೆ ನೀಡಿದೆ. ಮೀನುಗಾರಿಕಾ ಹಡಗುಗಳನ್ನು ಬಂದರುಗಳಲ್ಲಿ ಸುರಕ್ಷಿತವಾಗಿ ಲಂಗರು ಹಾಕುವಂತೆ ಸೂಚಿಸಿದೆ. ಏನಿದು ಕಲ್ಲಕಡಲ್ ವಿದ್ಯಮಾನ ಅನ್ನೋದರ ಮಾಹಿತಿ ಇಲ್ಲಿದೆ.

ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಳ್ಳಕಡಲು ವಿದ್ಯಮಾನ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಏನಿದು ಕಳ್ಳಕಡಲು ವಿದ್ಯಮಾನ.
ಕೇರಳ, ತಮಿಳುನಾಡು ಕರಾವಳಿಯಲ್ಲಿ ಕಳ್ಳಕಡಲು ವಿದ್ಯಮಾನ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಏನಿದು ಕಳ್ಳಕಡಲು ವಿದ್ಯಮಾನ. (PTI)

ದೆಹಲಿ: ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ "ಕಲ್ಲಕಡಲ್ ವಿದ್ಯಮಾನ" (Kallakadalu) ಸಂಭವಿಸುವ ಸಾಧ್ಯತೆಯಿದೆ. ಈ ಪ್ರದೇಶದ ಕರಾವಳಿ ನಿವಾಸಿಗಳು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರಬೇಕೆಂದು ಎಂದು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸೋಮವಾರ (ಏಪ್ರಿಲ್ 29) ರಾತ್ರಿ 11.30 ರವರೆಗೆ ಕಲ್ಲಕಡಲ್ ವಿದ್ಯಮಾನದ ಎಚ್ಚರಿಕೆಯನ್ನು ನೀಡಲಾಗಿತ್ತು. ಇದರಿಂದ ಎಚ್ಚತ್ತ ಅಧಿಕಾರಿಗಳು ಕೂಡ ಅಪಾಯದ ವಲಯದ ಪ್ರದೇಶಗಳಿಂದ ದೂರವಿರಿ ಎಂದು ಮೀನುಗಾರರಿಕೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇಶಾದ್ಯಂತ ಕಲ್ಲಕಡಲ್ ವಿದ್ಯಮಾನದ ಬಗ್ಗೆ ಚರ್ಚೆಗಳಾಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡುವ ಜವಾಬ್ದಾರಿಯನ್ನು ಹೊತ್ತಿರುವ ಇನ್ಕೊಯಿಸ್ (INCOIS) ಮೀನುಗಾರಿಕಾ ಹಡಗುಗಳನ್ನು ಬಂದರುಗಳಲ್ಲಿ ಸುರಕ್ಷಿತವಾಗಿ ಲಂಗರು ಹಾಕಲು ಸೂಚಿಸಲಾಗಿದೆ. ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದರಿಂದ ಘರ್ಷಣೆಯ ಅಪಾಯವನ್ನು ತಪ್ಪಿಸಬಹುದು. ಮೀನುಗಾರಿಕೆ ಸಲಕರಣೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು" ಇದಲ್ಲದೆ, ಕಡಲತೀರಗಳಿಗೆ ಭೇಟಿ ನೀಡದಂತೆ ಮತ್ತು ಸಮುದ್ರ ಸಂಬಂಧಿತ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗದಂತೆ ಕೇಂದ್ರದ ಇನ್ಕೊಯಿಸ್ ಸಲಹೆ ನೀಡಿದೆ. ಅಷ್ಟಕ್ಕೂ ಏನಿದು ಕಲ್ಲಕಡಲ್? ಈ ಹೆಸರು ಹೇಗೆ ಬಂತು ಅನ್ನೋದನ್ನು ಇಲ್ಲಿ ತಿಳಿಯೋಣ.

ಕಲ್ಲಕಡಲ್ ಎಂಬ ಹೆಸರು ಹೇಗೆ ಬಂತು?

"ಕಲ್ಲಕಡಲ್" ಎಂದರೆ "ಕಳ್ಳನಂತೆ ಇದ್ದಕ್ಕಿದ್ದಂತೆ ಬರುವ ಸಮುದ್ರದ ಅಲೆಗಳು". ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಬಲವಾದ ಮಾರುತಗಳಿಂದ ಉಬ್ಬರವು ಉಂಟಾಗುತ್ತದೆ, ಇದು ಯಾವುದೇ ನಿರ್ದಿಷ್ಟ ಸೂಚನೆಗಳು ಅಥವಾ ಎಚ್ಚರಿಕೆಗಳಿಲ್ಲದೆ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಆದ್ದರಿಂದ ಈ ಹೆಸರು ಬಂದಿದೆ ಎಂದು ಇನ್ಕೊಯಿಸ್ ವಿವರಿಸುತ್ತದೆ.

ಸ್ಥಳೀಯ ಮೀನುಗಾರರು ಸಾಮಾನ್ಯವಾಗಿ ಬಳಸುವ ಈ ಪದವು ಎರಡು ಮಲಯಾಳಂ ಪದಗಳ ಸಮ್ಮಿಲನದಿಂದ ಹುಟ್ಟಿಕೊಂಡಿದೆ. "ಕಲ್ಲನ್" ಎಂದರೆ ಕಳ್ಳ, ಮತ್ತು "ಕಡಲ್" ಎಂದರೆ ಸಮುದ್ರ. ಮಾತನಾಡುವಾಗ, ಈ ಪದಗಳನ್ನು ಸಂಯೋಜಿಸಿ "ಕಲ್ಲಕ್ಕದಲ್" ಎಂದು ಉಚ್ಚರಿಸಲಾಗುತ್ತದೆ, ಇದು ಕಳ್ಳನಂತೆ ವೇಗವಾಗಿ ಮತ್ತು ಅನಿರೀಕ್ಷಿತವಾಗಿ ಸಮೀಪಿಸುವ ಸಾಗರವನ್ನು ಸೂಚಿಸುತ್ತದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಹೇಳುವಂತೆ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಹಠಾತ್ ಬಲವಾದ ಗಾಳಿಯಿಂದಾಗಿ "ಕಲ್ಲಕ್ಕಡಲ್" ಎಂಬ ಪದಕ್ಕೆ ಕಾರಣವಾಯಿತು. 2012 ರಲ್ಲಿ "ಕಲ್ಲಕಡಲ್" ಎಂಬ ಪದವು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಯಿಂದ ಔಪಚಾರಿಕ ಅನುಮೋದನೆಯನ್ನು ಪಡೆದುಕೊಂಡಿದೆ.

ಕಲ್ಲಕಡಲ್ ಬಗ್ಗೆ ಭಾರಿ ಚರ್ಚೆಗೆ ಇದೇ ಕಾರಣ

ಕಲ್ಲಕಡಲ್ ಘಟನೆಗಳ ಸಮಯದಲ್ಲಿ ಸಮುದ್ರವು ಭೂಮಿಗೆ ನುಗ್ಗುತ್ತದೆ. ವಿಶಾಲ ಪ್ರದೇಶಗಳನ್ನು ಮುಳುಗಿಸುತ್ತದೆ. ಈ ಘಟನೆಗಳು ವಿಶೇಷವಾಗಿ 2004 ರ ಹಿಂದೂ ಮಹಾಸಾಗರದ ಸುನಾಮಿಯನ್ನು ನೆನಪಿಸುತ್ತೆ ಎಂದು ಅನೇಕರು ಹೇಳುತ್ತಾರೆ. ಆದರೆ ಕಲ್ಲಕಡಲ್ ಅನ್ನು ಸುನಾಮಿ ಎಂದು ತಪ್ಪಾಗಿ ಭಾವಿಸಿರುವ ಕಾರಣ ಇದು ಹೆಚ್ಚು ಗಮನ ಸೆಳೆಯುತ್ತಿದೆ.

ಸುನಾಮಿ ಮತ್ತು ಕಲ್ಲಕಡಲ್ ಅಥವಾ ಉಬ್ಬರದ ಅಲೆಗಳ ಉಲ್ಬಣವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಇವುಗಳ ಕಾರ್ಯವಿಧಾನಗಳನ್ನು ವಿಭಿನ್ನ ರೀತಿಯಲ್ಲಿರುತ್ತವೆ. ಅಲೆಗಳ ಸೃಷ್ಟಿಯೂ ಭಿನ್ನವಾಗಿರುತ್ತದೆ. ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಇನ್ಕೊಯಿಸ್, ಭಾರತೀಯ ಕರಾವಳಿಯಲ್ಲಿ ವಿಶೇಷವಾಗಿ ಪಶ್ಚಿಮ ಕರಾವಳಿಯಲ್ಲಿ ಕಲ್ಲಕಡಲ್ ಅಥವಾ ಉಲ್ಬಣ ಘಟನೆಗಳನ್ನು ಊಹಿಸಲು 2020 ರಲ್ಲಿ "ಸ್ವೆಲ್ ಸರ್ಜ್ ಫೋರ್ಕಾಸ್ಟಿಂಗ್ ಸಿಸ್ಟಮ್" ಅನ್ನು ಪ್ರಾರಂಭಿಸಿದೆ.

ಸಮುದ್ರದಲ್ಲಿ ಕಲ್ಲಕಡಲು ಯಾಕೆ ಉಂಟಾಗುತ್ತೆ?

ಕಲ್ಲಕಡಲ್ ಘಟನೆಗಳು ಸ್ಥಳೀಯ ಮಾರುತಗಳು ಅಥವಾ ಕರಾವಳಿ ಪರಿಸ್ಥಿತಿಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲದೆ ಇದ್ದಕ್ಕಿದ್ದಂತೆ ಸಂಭವಿಸುವ ದಿಢೀರ್-ಪ್ರವಾಹ ಘಟನೆಗಳಾಗಿವೆ. ಇದು ಸ್ಥಳೀಯ ಜನರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲು ಕಾರಣವಾಗಿದೆ. ಇನ್ಕೊಯಿಸ್ ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಈ ಘಟನೆಗಳು ದಕ್ಷಿಣ ಮಹಾಸಾಗರದಲ್ಲಿ 30° ಸೆ ದಕ್ಷಿಣದಲ್ಲಿ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುತ್ತವೆ.

ದಕ್ಷಿಣ ಮಹಾಸಾಗರದಲ್ಲಿ ಉತ್ಪತ್ತಿಯಾಗುವ ದೀರ್ಘಕಾಲೀನ ಉಬ್ಬರಗಳು ಉತ್ತರದ ಕಡೆಗೆ ಪ್ರಯಾಣಿಸಿ 3-5 ದಿನಗಳಲ್ಲಿ ಭಾರತೀಯ ಕರಾವಳಿಯನ್ನು ತಲುಪುತ್ತವೆ. ಇದು ಕರಾವಳಿ ಪ್ರದೇಶಗಳಲ್ಲಿ ಹಾನಿಯನ್ನುಂಟು ಮಾಡುತ್ತದೆ. ಹೊಸದಾಗಿ ಪ್ರಾರಂಭಿಸಲಾದ ವ್ಯವಸ್ಥೆಯು ಕಳ್ಳಕಡಲು ಘಟನೆಗಳನ್ನು ಅಂದಾಜಿಸುತ್ತದೆ. ಕನಿಷ್ಠ 2-3 ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಗಳನ್ನು ನೀಡುತ್ತದೆ. ಈ ಮುಂಚಿತ ಎಚ್ಚರಿಕೆಯು ಸ್ಥಳೀಯ ಅಧಿಕಾರಿಗಳಿಗೆ ಆಕಸ್ಮಿಕ ಯೋಜನೆಗಳನ್ನು ಸಿದ್ಧಪಡಿಸಲು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

IPL_Entry_Point