H-1B visa renewal: ಭಾರತಕ್ಕೆ ಪ್ರಯಾಣಿಸದೆ ಅಮೆರಿಕದ ಕೆಲಸದ ವೀಸಾ H-1B ವೀಸಾವನ್ನು ನವೀಕರಿಸಬಹುದು. ಹೇಗೆ ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  H-1b Visa Renewal: ಭಾರತಕ್ಕೆ ಪ್ರಯಾಣಿಸದೆ ಅಮೆರಿಕದ ಕೆಲಸದ ವೀಸಾ H-1b ವೀಸಾವನ್ನು ನವೀಕರಿಸಬಹುದು. ಹೇಗೆ ಇಲ್ಲಿದೆ ವಿವರ

H-1B visa renewal: ಭಾರತಕ್ಕೆ ಪ್ರಯಾಣಿಸದೆ ಅಮೆರಿಕದ ಕೆಲಸದ ವೀಸಾ H-1B ವೀಸಾವನ್ನು ನವೀಕರಿಸಬಹುದು. ಹೇಗೆ ಇಲ್ಲಿದೆ ವಿವರ

H-1B visa renewal: ಅಮೆರಿಕದಲ್ಲಿದ್ದುಕೊಂಡೇ ನವೀಕರಿಸಬಹುದಾದ ಯುಎಸ್ 'ಇನ್-ಕಂಟ್ರಿ' H-1B ವೀಸಾಗಳನ್ನು ಅಲ್ಲಿನ ಸರ್ಕಾರ ಪರಿಚಯಿಸುತ್ತದೆ. ಭಾರತೀಯ ವೃತ್ತಿಪರರು ಸ್ವದೇಶಕ್ಕೆ ಪ್ರಯಾಣಿಸದೆ ತಮ್ಮ ಕೆಲಸದ ವೀಸಾಗಳನ್ನು ಅಮೆರಿಕದಲ್ಲಿದ್ದುಕೊಂಡೇ ನವೀಕರಿಸಲು ಈ ಹೊಸ ನಿಯಮ ಪರಿಷ್ಕರಣೆ ಅನುವು ಮಾಡಿಕೊಡುತ್ತದೆ.

ಭಾರತಕ್ಕೆ ಪ್ರಯಾಣಿಸದೆ ಅಮೆರಿಕದ ಕೆಲಸದ ವೀಸಾ H-1B ವೀಸಾವನ್ನು ಅನಿವಾಸಿ ಭಾರತೀಯರು ನವೀಕರಿಸಬಹುದು. (ಸಾಂಕೇತಿಕ ಚಿತ್ರ)
ಭಾರತಕ್ಕೆ ಪ್ರಯಾಣಿಸದೆ ಅಮೆರಿಕದ ಕೆಲಸದ ವೀಸಾ H-1B ವೀಸಾವನ್ನು ಅನಿವಾಸಿ ಭಾರತೀಯರು ನವೀಕರಿಸಬಹುದು. (ಸಾಂಕೇತಿಕ ಚಿತ್ರ) (AP)

ಜನರಿಂದ ಜನರಿಗಾಗಿ (People to People) ಉಪಕ್ರಮದ ಭಾಗವಾಗಿ 'ದೇಶದಲ್ಲಿ' ಅಂದರೆ ಅಮೆರಿಕ (America) ದಲ್ಲೇ ನವೀಕರಿಸಬಹುದಾದ H-1B ವೀಸಾಗಳನ್ನು ಪರಿಚಯಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು (US Officials) ಘೋಷಿಸಿದ್ದಾರೆ. H-1B ವೀಸಾ (H-1B Visa)ದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಭಾರತೀಯರಿಗೆ H-1B ವೀಸಾ ನವೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವೃತ್ತಿಪರರು ಇನ್ನು ತಮ್ಮ ಕೆಲಸದ ವೀಸಾವನ್ನು ನವೀಕರಿಸಲು ಸ್ವದೇಶಕ್ಕೆ ಪ್ರಯಾಣಿಸಬೇಕಾಗಿಲ್ಲ. ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬಿಡೆನ್ ನಡುವೆ ಗುರುವಾರ ನಡೆದ ನಿರ್ಣಾಯಕ ದ್ವಿಪಕ್ಷೀಯ ಸಭೆಗೆ ಮುಂಚಿತವಾಗಿ ಯುಎಸ್ ವೀಸಾ ಕಚೇರಿ ಈ ವಿಚಾರವನ್ನು ಪ್ರಕಟಿಸಿದೆ.

H-1B ವೀಸಾ ಎಂದರೇನು?

H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಕಂಪನಿಗಳು H-1B ವೀಸಾವನ್ನು ಅವಲಂಬಿಸಿವೆ. ಭಾರತದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಕೂಲ ಮಾಡಿಕೊಡುವ H-1B ವೀಸಾವನ್ನು ಕೆಲಸದ ವೀಸಾ ಎಂದೇ ಗುರುತಿಸಲಾಗುತ್ತಿದೆ.

H-1B ವೀಸಾ ನವೀಕರಣ

ಅಮೆರಿಕದಲ್ಲಿ 2004 ರವರೆಗೆ, ವಲಸೆಯೇತರ ವೀಸಾಗಳ ನಿರ್ದಿಷ್ಟ ವರ್ಗಗಳು, ನಿಖರವಾಗಿ H-1B ವೀಸಾವನ್ನು ಅಮೆರಿಕದಲ್ಲೇ ನವೀಕರಿಸಬಹುದಿತ್ತು. ಆದರೆ, 2004 ರ ನಂತರ, H-1B ವೀಸಾ ನವೀಕರಣದ ನಂತರ ಹೆಚ್ಚು ಬೇಡಿಕೆಯಿರುವ ವಲಸೆ-ಅಲ್ಲದ ವೀಸಾಗಳು ವಿದೇಶಿ ಟೆಕ್ ಉದ್ಯೋಗಿಗಳು ತಮ್ಮ ಪಾಸ್‌ಪೋರ್ಟ್‌ನಲ್ಲಿ H-1B ವಿಸ್ತರಣೆ ಮುದ್ರೆ ಹಾಕಿಸಲು ಸ್ವದೇಶಕ್ಕೆ ಮರಳಬೇಕಾಗಿತ್ತು.

H-1B ವೀಸಾ ಅವಧಿ ಮೂರು ವರ್ಷ .

ಎಲ್ಲ H-1B ವೀಸಾ ಹೊಂದಿರುವವರಿಗೆ, ಅವರ ವೀಸಾವನ್ನು ನವೀಕರಿಸಿದಾಗ, ಅವರು ತಮ್ಮ ಪಾಸ್‌ಪೋರ್ಟ್‌ಗಳನ್ನು ನವೀಕರಣ ದಿನಾಂಕಗಳೊಂದಿಗೆ ಮುದ್ರೆಯೊತ್ತಬೇಕಾಗುತ್ತದೆ. ಅವರು ಅಮೆರಿಕದ ಹೊರಗೆ ಪ್ರಯಾಣಿಸಲು ಮತ್ತು ಅಮೆರಿಕಕ್ಕೆ ಮರು-ಪ್ರವೇಶಿಸಲು ಬಯಸಿದರೆ ಇದರ ಅಗತ್ಯವಿದೆ. ಸದ್ಯಕ್ಕೆ, H-1B ವೀಸಾ ಮರುಸ್ಥಾಪನೆ ಅಥವಾ ನವೀಕರಣವನ್ನು ಅಮೆರಿಕದೊಳಗೆ ಅನುಮತಿಸಲಾಗುವುದಿಲ್ಲ. ಯಾವುದೇ ಅಮೆರಿಕ ದೂತಾವಾಸದಲ್ಲಿ ಮಾತ್ರ H-1B ವೀಸಾವನ್ನು ನವೀಕರಿಸಬಹುದು. ವಿಶೇಷವಾಗಿ ವೀಸಾ ಕಾಯುವ ಸಮಯವು 800 ದಿನಗಳಿಗಿಂತ ಹೆಚ್ಚು ಅಥವಾ ಎರಡು ವರ್ಷಗಳಿಗಿಂತ ಹೆಚ್ಚು ಇರುವ ಸಮಯದಲ್ಲಿ ಇದು ವಿದೇಶಿ ಅತಿಥಿ ಉದ್ಯೋಗಿಗಳಿಗೆ ಮತ್ತು ಅವರ ಉದ್ಯೋಗದಾತರಿಗೆ ದೊಡ್ಡ ಅನಾನುಕೂಲವಾಗಿ ಕಾಡಿದೆ.

ಭಾರತೀಯರಿಗೆ ಅಮೆರಿಕನ್‌ ವೀಸಾ

ಯುನೈಟೆಡ್ ಸ್ಟೇಟ್ಸ್ ಕಳೆದ ವರ್ಷ ಭಾರತೀಯ ವಿದ್ಯಾರ್ಥಿಗಳಿಗೆ 125,000 ವೀಸಾಗಳನ್ನು ನೀಡಿತು, ಇದು ದಾಖಲೆ. ಅಮೆರಿಕದ ವಿದೇಶಿ ವಿದ್ಯಾರ್ಥಿ ಸಮೂಹದಲ್ಲಿ ಶೇಕಡ 20ಕ್ಕಿಂತ ಹೆಚ್ಚು ಭಾರತೀಯರಿದ್ದು, ಕಳೆದ ವರ್ಷವೇ ಅತಿದೊಡ್ಡ ಸಮೂಹವಾಗಿ ಗುರುತಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಈ ವರ್ಷದ ಕೊನೆಯಲ್ಲಿ ಕೆಲವು ಅರ್ಜಿ-ಆಧಾರಿತ ತಾತ್ಕಾಲಿಕ ಕೆಲಸದ ವೀಸಾಗಳ ದೇಶೀಯ ನವೀಕರಣಗಳನ್ನು ನಿರ್ಣಯಿಸುವ ಪೈಲಟ್ ಅನ್ನು ಪ್ರಾರಂಭಿಸಲಿದೆ. ವಿಸ್ತೃತವಾಗಿ ಇದನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಭಾರತೀಯ ಪ್ರಜೆಗಳು ಸೇರಿ H-1 ಮತ್ತು L ವೀಸಾ ಹೊಂದಿರುವವರನ್ನು ಪರಿಗಣಿಸಲಾಗುತ್ತದೆ ಎಂದು ಬಿಡೆನ್ ಆಡಳಿತದ ಹಿರಿಯ ಅಧಿಕಾರಿ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.