ಪಾಕಿಸ್ತಾನದ ಡ್ರೋನ್‌ ದಾಳಿ ಹೊಡೆದುರುಳಿಸಿದ ಭಾರತ; ಪಂಜಾಬ್‌ನಲ್ಲಿ ಮೂವರಿಗೆ ಗಾಯ, ಕಾಶ್ಮೀರದಲ್ಲಿ ಜನರ ಸ್ಥಳಾಂತರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನದ ಡ್ರೋನ್‌ ದಾಳಿ ಹೊಡೆದುರುಳಿಸಿದ ಭಾರತ; ಪಂಜಾಬ್‌ನಲ್ಲಿ ಮೂವರಿಗೆ ಗಾಯ, ಕಾಶ್ಮೀರದಲ್ಲಿ ಜನರ ಸ್ಥಳಾಂತರ

ಪಾಕಿಸ್ತಾನದ ಡ್ರೋನ್‌ ದಾಳಿ ಹೊಡೆದುರುಳಿಸಿದ ಭಾರತ; ಪಂಜಾಬ್‌ನಲ್ಲಿ ಮೂವರಿಗೆ ಗಾಯ, ಕಾಶ್ಮೀರದಲ್ಲಿ ಜನರ ಸ್ಥಳಾಂತರ

ಪಾಕಿಸ್ತಾನವು ಭಾರತದ ಜನನಿವಾಸವಿರುವ ಸ್ಥಳಗಳನ್ನು ಗುರಿಯಾಗಿಸಿ ಡ್ರೋನ್‌ ದಾಳಿ ನಡೆಸುತ್ತಿದೆ. ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯವಾಗಿ ಎಲ್ಲಾ ದಾಳಿಯನ್ನು ಮಟ್ಟಹಾಕಿದೆ. ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ, ಜಮ್ಮುವಿನಲ್ಲಿ ನಗರದಲ್ಲಿ ವಿದ್ಯುತ್ ಕಡಿತಗೊಂಡ ದೃಶ್ಯ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ, ಜಮ್ಮುವಿನಲ್ಲಿ ನಗರದಲ್ಲಿ ವಿದ್ಯುತ್ ಕಡಿತಗೊಂಡ ದೃಶ್ಯ. (PTI)

ಕತ್ತಲಾಗುತ್ತಿದ್ದಂತೆ ಪಾಕಿಸ್ತಾನವು ಭಾರತದ ಮೇಲೆ ಡ್ರೋನ್‌ ದಾಳಿ ಮತ್ತೆ ಶುರು ಮಾಡಿದೆ. ಗುರುವಾರ ರಾತ್ರಿ ನೂರಾರು ಡ್ರೋನ್‌ ದಾಳಿ ನಡೆಸಿದ್ದ ಪಾಕಿಸ್ತಾನ, ಇಂದು (ಮೇ 9) ಮತ್ತೆ ದಾಳಿ ಶುರು ಮಾಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಸ್ಫೋಟದ ಶಬ್ದ ಮತ್ತು ಸೈರನ್ ಸದ್ದಿನ ನಡುವೆ ಜಮ್ಮು ನಗರ ಇಂದು ಕತ್ತಲೆಯಲ್ಲಿ ಮುಳುಗಿದೆ. ಇಷ್ಟೇ ಅಲ್ಲ, ಪಂಜಾಬ್‌ ಹಾಗೂ ರಾಜಸ್ಥಾನದ ಕೆಲವು ನಗರಗಳನ್ನೂ ಬ್ಲ್ಯಾಕ್‌ಔಟ್‌ ಮಾಡಲಾಗಿದೆ. ಆಪರೇಷನ್ ಸಿಂದೂರದ ಭಾಗವಾಗಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಗುರಿಯ ದಾಳಿಯ ನಂತರ ಪಾಕಿಸ್ತಾನದ ನಿರಂತರ ಡ್ರೋನ್‌, ಶೆಲ್ ದಾಳಿ ನಡೆಸಿದ್ದು, ಹಲವೆಡೆ ಸ್ಫೋಟಗಳು ಸಂಭವಿಸಿವೆ.

"ನಾನು ಇರುವ ಪ್ರದೇಶದಲ್ಲಿ ಆಗಾಗ ಸ್ಫೋಟಗಳು ಪ್ರತಿಧ್ವನಿಸುತ್ತಿವೆ" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ನಗರವು ಕತ್ತಲೆಯಲ್ಲಿ ಮುಳುಗಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಜಮ್ಮು, ಸಾಂಬಾ ಮತ್ತು ಪಠಾಣ್ಕೋಟ್ ವಲಯದ ಮೇಲೆ ಪಾಕಿಸ್ತಾನದ ಡ್ರೋನ್‌ಗಳನ್ನು ಗುರುತಿಸಲಾಗಿದೆ. ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುತ್ತಿರುವ ಶೆಲ್ ದಾಳಿಯ ಮಧ್ಯೆ, ಭಾರತೀಯ ಸಶಸ್ತ್ರ ಪಡೆಗಳು ಶುಕ್ರವಾರ ಸಂಜೆ ಪಠಾಣ್‌ಕೋಟ್, ಜಮ್ಮು ಮತ್ತು ಸಾಂಬಾದಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದಿದೆ.

ರಕ್ಷಣಾ ಮೂಲಗಳ ಪ್ರಕಾರ, ಜಮ್ಮುವಿನ ಸಾಂಬಾ ವಲಯದಲ್ಲಿ ಆಕಾಶದಲ್ಲಿ ಕೆಂಪು ಗೆರೆಗಳು ಗೋಚರಿಸಿದವು. ಭಾರತದ ವಾಯು ರಕ್ಷಣಾ ಪಡೆಗಳು ಡ್ರೋನ್‌ಗಳನ್ನು ತಡೆಹಿಡಿಯುತ್ತಿದ್ದಂತೆ, ಸ್ಫೋಟದ ಶಬ್ದ ಕೇಳಿತು. ಭಾರತದ ಡ್ರೋನ್‌ ದಾಳಿ ವಿಫಲವಾಗಿಸಲು ಆ ಪ್ರದೇಶವನ್ನು ಕತ್ತಲೆಯಲ್ಲಿಡಲಾಗಿದೆ.

ಅತ್ತ ರಾಜಸ್ಥಾನದ ಬಾರ್ಮರ್, ಪೋಖ್ರಾನ್, ಜೈಸಲ್ಮೇರ್, ಫಲೋಡಿಯಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನ ಕಡೆಯಿಂದ 30 ನಿಮಿಷಗಳ ಅವಧಿಯಲ್ಲಿ ಎರಡು ಡ್ರೋನ್ ದಾಳಿಗಳು ನಡೆದವು. ಮೊದಲ ದಾಳಿ ರಾತ್ರಿ ಸರಿಸುಮಾರು 8:28ಕ್ಕೆ, ನಂತರ ಎರಡನೆಯ ದಾಳಿ ರಾತ್ರಿ 9:02ಕ್ಕೆ ನಡೆಯಿತು.

ಮೂವರಿಗೆ ಗಾಯ

ಪಂಜಾಬ್‌ನ ಫಿರೋಜ್‌ಪುರದ ವಸತಿ ಪ್ರದೇಶದ ಮೇಲೆ ಪಾಕಿಸ್ತಾನದ ಡ್ರೋನ್ ಅಪ್ಪಳಿಸಿ, ಒಂದು ಕುಟುಂಬ ಗಾಯಗೊಂಡಿದೆ. ಹಳ್ಳಿಯೊಂದರಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಸುಡುವ ಅವಶೇಷಗಳು ಬಿದ್ದು ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಮೂವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಪಾಕಿಸ್ತಾನಿ ಪಡೆಗಳ ದಾಳಿಗೆ ಪ್ರತಿಕ್ರಿಯೆಯಾಗಿ, ಕಾಶ್ಮೀರದ ಮೂರು ಗಡಿ ಜಿಲ್ಲೆಗಳಲ್ಲಿ ನಿಯಂತ್ರಣ ರೇಖೆಯ ಬಳಿ ವಾಸಿಸುವ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾರಾಮುಲ್ಲಾ, ಕುಪ್ವಾರಾ ಮತ್ತು ಬಂಡಿಪೋರಾ ಜಿಲ್ಲೆಗಳ ಜನರನ್ನು ಬಂಕರ್‌ಗಳು ಮತ್ತು ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.