ಕನ್ನಡ ಸುದ್ದಿ  /  Nation And-world  /  Expressway Toll Tax Bengaluru-mysuru Expressway Toll Tax To Be Charged From Today

Expressway toll tax: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ಶುಲ್ಕ ವಸೂಲಾತಿ ಶುರು; ಯಾವ ವಾಹನಕ್ಕೆ ಎಷ್ಟು ವಿವರ ಇಲ್ಲಿದೆ

Bengaluru-Mysuru Expressway: ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟವರೆಗಿನ ಮೊದಲ ಎಕ್ಸ್‌ಪ್ರೆಸ್‌ವೇಗೆ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ 143 ಕಿ.ಮೀ. ಪ್ರಯಾಣವು ವಾಹನದ ವೇಗ ಅವಲಂಬಿಸಿ ಕೇವಲ ಒಂದೂವರೆ ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿ ಸಾಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವವರು ಇಂದಿನಿಂದ ಟೋಲ್‌ ಶುಲ್ಕ ಪಾವತಿಸಬೇಕಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನಗಳು ಇನ್ನು ಟೋಲ್‌ ಶುಲ್ಕ ಪಾವತಿಸಬೇಕು ಎಂದು ಘೋಷಿಸಿತ್ತು.

ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ಯೋಜನೆ ಕೂಡ ವಿಳಂಬವಾಗಿದೆ. ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟವರೆಗಿನ ಮೊದಲ ಎಕ್ಸ್‌ಪ್ರೆಸ್‌ವೇಗೆ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ 143 ಕಿ.ಮೀ. ಪ್ರಯಾಣವು ವಾಹನದ ವೇಗವನ್ನು ಅವಲಂಬಿಸಿ ಕೇವಲ ಒಂದೂವರೆ ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರುಗಳಿಗೆ ಒಂದು ದಾರಿಯ ಪ್ರಯಾಣಕ್ಕೆ 135 ರೂ. ಟೋಲ್ ಶುಲ್ಕ ವಿಧಿಸಲಾಗುತ್ತದೆ ಮತ್ತು ಅದೇ ದಿನ ಹಿಂತಿರುಗಿದರೆ 205 ರೂ. ಎರಡನೇ ಸ್ಟ್ರೆಚ್ ತೆರೆದಾಗ ಇದು 250 ರೂಪಾಯಿ ತನಕ ಹೆಚ್ಚಾಗಬಹುದು.

ವರ್ಗವಾರು ಟೋಲ್ ಶುಲ್ಕ ಹೀಗಿದೆ ನೋಡಿ:

ವಾಹನ ಮಾದರಿಒಂದು ದಾರಿಯ ಪ್ರಯಾಣಕ್ಕೆ ಶುಲ್ಕ ರೂಪಾಯಿಗಳಲ್ಲಿಹಿಂದಿರುಗುವ ಪ್ರಯಾಣಕ್ಕೂ ಸೇರಿಸಿ ಶುಲ್ಕ ರೂಪಾಯಿಗಳಲ್ಲಿಟ್ರಾಫಿಕ್‌ ಶುಲ್ಕ (ಸ್ಥಳೀಯ ವಾಣಿಜ್ಯ ವಾಹನಗಳಿಗೆ) ರೂಪಾಯಿಗಳಲ್ಲಿಮಾಸಿಕ ಪಾಸ್‌ನ ಶುಲ್ಕ 
( ತಿಂಗಳಿಗೆ 50 ಒಂದು ದಾರಿಯ ಪ್ರಯಾಣ) ರೂಪಾಯಿಗಳಲ್ಲಿ
ಕಾರು/ಜೀಪು/ವ್ಯಾನ್135205704525
ಟ್ರಕ್/ಬಸ್‌ (2 ಏಕ್ಸೆಲ್)46069023015,325
ಮಿನಿ ಬಸ್‌/ಎಲ್‌ಸಿವಿ /ಎಲ್‌ಜಿವಿ 2203301107,315
ವಾಣಿಜ್ಯ ವಾಹನ
(3 ಏಕ್ಸೆಲ್)
50075025016,715
ಹೆವಿ ಕನ್‌ಸ್ಟ್ರಕ್ಷನ್‌ ಮಷಿನರಿ (4-6 ಏಕ್ಸೆಲ್)7201,08036024,030
ಓವರ್‌ಸೈಸ್‌ನ ವಾಹನ (7 or ಹೆಚ್ಚಿನ ಏಕ್ಸೆಲ್)8801,31544029,255

“NH-275 ರ ಬೆಂಗಳೂರು-ನಿಡಘಟ್ಟ ವಿಭಾಗದ ಆರು ಪಥದ ಮುಖ್ಯ ಗಾಡಿ ಪೂರ್ಣಗೊಂಡಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಯು ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಆದೇಶವನ್ನು ಹೊರಡಿಸಿದೆ. ರಾಮನಗರ ಉಪ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗಿನ ಸಭೆಯ ನಂತರ, ಫೆ.28ರಂದು ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಮೈಸೂರು ಡೇಲಿ ವರದಿ ಮಾಡಿದೆ.

ಎಕ್ಸ್‌ಪ್ರೆಸ್‌ವೇ ಯೋಜನೆಯು ಎರಡು ಪ್ಯಾಕೇಜ್‌ಗಳನ್ನು ಹೊಂದಿದೆ - ಮೊದಲನೆಯದು ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿ.ಮೀ. ಮತ್ತು ಎರಡನೇ ಪ್ಯಾಕೇಜ್ ನಿಡಘಟ್ಟದಿಂದ ಮೈಸೂರಿಗೆ 61 ಕಿಲೋಮೀಟರ್‌ಗಳನ್ನು ಜೋಡಿಸುತ್ತದೆ.

ಗಮನಿಸಬಹುದಾದ ಸುದ್ದಿ

Challenges before Kejriwal: ಸಿಸೋಡಿಯಾ ಬಂಧನದ ಕೇಜ್ರಿವಾಲ್‌ಗೆ ಎದುರಾಗಿರುವ ಸವಾಲುಗಳೇನು?

ಕಳೆದ ವರ್ಷ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು. ಈಗ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಹೀಗೆ ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ (ಎಎಪಿ) ಎರಡನೇ ನಾಯಕ ಸಿಸೋಡಿಯಾ ಆಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ವಿಶ್ವಾಸಾರ್ಹ ನಾಯಕ ಸಿಸೋಡಿಯಾ ಒಟ್ಟು 33 ಇಲಾಖೆಗಳಲ್ಲಿ 18 ಖಾತೆಗಳನ್ನು ಹೊಂದಿದ್ದಾರೆ. ಅವರ ಬಂಧನವು ಪಕ್ಷವನ್ನು ಸಂಘಟನೆ ವಿಸ್ತರಿಸುವ ದೆಹಲಿ ಮುಖ್ಯಮಂತ್ರಿಯ ಯೋಜನೆಗೆ ಭಾರಿ ಹಿನ್ನಡೆಯಾಗಬಹುದು. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ