Fact Check: ನೋಟಿನ ಮೇಲೆ ಬರೆದಿದ್ರೆ ಆ ನೋಟು ಚಲಾವಣೆ ಆಗಲ್ವಾ!; ಫ್ಯಾಕ್ಟ್‌ಚೆಕ್‌ ಹೇಳಿರುವುದೇನು? ನಿಜ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fact Check: ನೋಟಿನ ಮೇಲೆ ಬರೆದಿದ್ರೆ ಆ ನೋಟು ಚಲಾವಣೆ ಆಗಲ್ವಾ!; ಫ್ಯಾಕ್ಟ್‌ಚೆಕ್‌ ಹೇಳಿರುವುದೇನು? ನಿಜ ತಿಳಿದುಕೊಳ್ಳಿ

Fact Check: ನೋಟಿನ ಮೇಲೆ ಬರೆದಿದ್ರೆ ಆ ನೋಟು ಚಲಾವಣೆ ಆಗಲ್ವಾ!; ಫ್ಯಾಕ್ಟ್‌ಚೆಕ್‌ ಹೇಳಿರುವುದೇನು? ನಿಜ ತಿಳಿದುಕೊಳ್ಳಿ

Fact Check: ಇತ್ತೀಚಿನ ಕೆಲವು ದಿನಗಳಲ್ಲಿ ವಾಟ್ಸ್‌ಆಪ್‌ ಮತ್ತು ಇತರೆ ಸೋಷಿಯಲ್‌ ಮೀಡಿಯಾಗಳಲ್ಲಿ ಇಂಥದ್ದೇ ಒಂದು ಸಂದೇಶ ಓಡಾಡುತ್ತಿದೆ. ಅದು ಭಾರತದ ಕರೆನ್ಸಿ ನೋಟಿಗೆ ಸಂಬಂಧಿಸಿದ್ದು. ಹೊಸ ನೋಟುಗಳ ಮೇಲೆ ಪೆನ್‌ ಅಥವಾ ಪೆನ್ಸಿಲ್‌ನಲ್ಲಿ ಬರೆದರೆ ಆ ನೋಟು ಅಮಾನ್ಯವಾಗಿ ಬಿಡುತ್ತದೆ ಎಂಬುದು ಸಂದೇಶದ ಸಾರ. ಇದು ನಿಜವಾ?

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (REUTERS)

ವಾಟ್ಸ್‌ಆಪ್‌ ಮತ್ತು ಇತರೆ ಸೋಷಿಯಲ್‌ ಮೀಡಿಯಾಗಳಲ್ಲಿ ಇತರೆ ಸಂದೇಶಗಳ ಜತೆಗೆ ಹಣಕಾಸಿಗೆ ಸಂಬಂಧಿಸಿದ ಸಂದೇಶಗಳು ಹರಿದಾಡುತ್ತಲೇ ಇವೆ. ಕೆಲವೊಂದು ವೈಯಕ್ತಿಕ ಹಣಕಾಸು ನಿರ್ವಹಣೆ ಕುರಿತಾದದ್ದು, ಆದಾಯ ತೆರಿಗೆ ರಿಟರ್ನ್ಸ್‌ ಸಂಬಂಧಿಸಿದ್ದು ಹೀಗೆ ಹಲವು. ಜನ ಕೂಡ ಅಂಥ ವಿಷಯಗಳನ್ನು ಕುತೂಹಲದಿಂದ ಗಮನಿಸುತ್ತಾರೆ.

ಇತ್ತೀಚಿನ ಕೆಲವು ದಿನಗಳಲ್ಲಿ ವಾಟ್ಸ್‌ಆಪ್‌ ಮತ್ತು ಇತರೆ ಸೋಷಿಯಲ್‌ ಮೀಡಿಯಾಗಳಲ್ಲಿ ಇಂಥದ್ದೇ ಒಂದು ಸಂದೇಶ ಓಡಾಡುತ್ತಿದೆ. ಅದು ಭಾರತದ ಕರೆನ್ಸಿ ನೋಟಿಗೆ ಸಂಬಂಧಿಸಿದ್ದು. ಹೊಸ ನೋಟುಗಳ ಮೇಲೆ ಪೆನ್‌ ಅಥವಾ ಪೆನ್ಸಿಲ್‌ನಲ್ಲಿ ಬರೆದರೆ ಆ ನೋಟು ಅಮಾನ್ಯವಾಗಿ ಬಿಡುತ್ತದೆ ಎಂಬುದು ಸಂದೇಶದ ಸಾರ. ಇದು ಭಾರತೀಯ ರಿಸರ್ವ್‌ ಬ್ಯಾಂಕಿನ ಹೊಸ ಮಾರ್ಗಸೂಚಿಯಲ್ಲಿದೆ ಎಂದೂ ಒಕ್ಕಣೆಯಲ್ಲಿದೆ. ಹೋಲಿಕೆಯಾಗಿ ಅಮೆರಿಕದ ಡಾಲರ್‌ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ.

ಆದಾಗ್ಯೂ, ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್‌ಚೆಕ್‌ ತಂಡ ಈ ಸಂದೇಶವನ್ನು ಪರಿಶೀಲಿಸಿ, ಇದು ಫೇಕ್‌ ಎಂದು ಘೋಷಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಪಿಐಬಿ ಫ್ಯಾಕ್ಟ್‌ ಚೆಕ್‌, ಕರೆನ್ಸಿ ನೋಟುಗಳ ಮೇಲೆ ಬರೆದಿದ್ದರೆ ಅಂಥ ನೋಟು ಅಮಾನ್ಯ ಎಂದು ಘೋಷಣೆ ಮಾಡಲಾಗಿಲ್ಲ. ಅವು ಚಲಾವಣೆಗೆ ಯೋಗ್ಯವೇ ಆಗಿದ್ದು, ಚಲಾವಣೆಯಲ್ಲಿರುತ್ತವೆ. ಆದರೆ, ಸ್ವಚ್ಛ ನೋಟು ಯೋಜನೆ ಪ್ರಕಾರ, ಜನರು ಕರೆನ್ಸಿ ನೋಟುಗಳ ಮೇಲೆ ಏನೂ ಬರೆಯಬಾರದು. ಅದನ್ನು ವಿರೂಪಗೊಳಿಸಬಾರದು ಎಂದು ಹೇಳಿದೆ.

ಆ ಟ್ವೀಟ್‌ ಇಲ್ಲಿದೆ ಗಮನಿಸಿ:

ಗಮನಿಸಬಹುದಾದ ಇತರೆ ವಿಚಾರಗಳು

Chitra Sante 2023: ಬೆಂಗಳೂರಿನಲ್ಲಿ ಚಿತ್ರಸಂತೆ 2023 - ಒಂದು ಕಿರುನೋಟ

Chitra Sante 2023: ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಈ ವರ್ಷದ ಚಿತ್ರಸಂತೆ ನಡೆಯಿತು. ಅದರ ಕಿರು ಚಿತ್ರನೋಟ ಇಲ್ಲಿದೆ. ಕ್ಲಿಕ್‌ ಮಾಡಿ.

Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್‌ ರಿಜೆಕ್ಟ್‌ ಮಾಡಿದ ಆಯ್ಕೆ ಸಮಿತಿ!

Republic Day 2023: ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಸಲ ಅವಕಾಶ ಕೈತಪ್ಪಿ ಹೋಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ! ಇಲ್ಲಿದೆ ವಿವರ

Republic Day 2023: ಟಿಕೆಟ್‌ ಖರೀದಿ, ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಈ ಆಮಂತ್ರಣ ಪೋರ್ಟಲ್‌ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆ. ಅಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಟಿಕೆಟ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. ಕ್ಲಿಕ್‌ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.