Fake Currency Surat?: ಸೂರತ್‌ನಲ್ಲಿ ಆಂಬುಲೆನ್ಸ್‌ನಲ್ಲಿತ್ತು 25.80 ಕೋಟಿ ರೂ. ಮೌಲ್ಯದ 2,000 ರೂಪಾಯಿ ನೋಟುಗಳು! ಅಸಲಿಯೋ ನಕಲಿಯೋ ನೋ ಐಡಿಯ
ಸೂರತ್‌ನಲ್ಲಿ ಆಂಬುಲೆನ್ಸ್ ಒಂದರಲ್ಲಿ ಸಾಗಿಸುತ್ತಿದ್ದ 25.80 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳನ್ನು ಪೊಲೀಸರು ವಶಪಡಿಸಿದ್ದಾರೆ. ಅದು ಅಸಲಿಯೋ ನಕಲಿಯೋ ಎಂಬುದನ್ನು ದೃಢೀಕರಿಸಲು ಭಾರತೀಯ ರಿಸರ್ವ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಹಾಯವನ್ನು ಕೋರಿದ್ದಾರೆ.
ಗುಜರಾತ್‌ನ ಸೂರತ್ ಜಿಲ್ಲೆಯ ಆಂಬ್ಯುಲೆನ್ಸ್‌ನಿಂದ ಪೊಲೀಸರು 25.80 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 'ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ' ಮತ್ತು 'ಫಿಲ್ಮ್‌ನಲ್ಲಿ ಬಳಸಲು' ಎಂದು ಮುದ್ರಿಸಲಾಗಿದೆ. ಪೊಲೀಸರು ಆಂಬ್ಯುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಈ ನಕಲಿ ನೋಟುಗಳನ್ನು ಚಲನಚಿತ್ರಗಳಲ್ಲಿ ಬಳಸಲು ಮುಂಬೈಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.
ಆಂಬ್ಯುಲೆನ್ಸ್ ಮೂಲಕ ಕಾಮ್ರೇಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲಕ ನಕಲಿ ಭಾರತೀಯ ಕರೆನ್ಸಿ ಸಾಗುತ್ತದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸೂರತ್ ಗ್ರಾಮಾಂತರ) ಹಿತೇಶ್ ಜೋಯ್ಸರ್ ಹೇಳಿದ್ದಾರೆ.
ಈ ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ಗುರುವಾರ ಚೆಕ್‌ಪಾಯಿಂಟ್‌ನಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ಆರು ಬಾಕ್ಸ್‌ಗಳಲ್ಲಿ ತುಂಬಿದ 2000 ರೂ. ನೋಟುಗಳ ಕಟ್ಟು ಕಂಡುಬಂದಿತ್ತು. ಪ್ರತಿ ನೋಟಿನ ಮೇಲೆ 'ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ' ಮತ್ತು 'ಫಿಲ್ಮ್‌ನಲ್ಲಿ ಬಳಕೆಗಾಗಿ' ಎಂದು ಮುದ್ರಿಸಲಾಗಿದೆ ಎಂದು ಅವರು ಹೇಳಿದರು.
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಈ ನೋಟುಗಳನ್ನು ನಕಲಿ ಕರೆನ್ಸಿ ಎಂದು ಪರಿಗಣಿಸಬಹುದೇ ಎಂದು ಪರಿಶೀಲಿಸಲು ತಂಡವನ್ನು ರಚಿಸಲಾಗಿದೆ. ಆಂಬ್ಯುಲೆನ್ಸ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನನ್ನು ಹಿತೇಶ್ ಕೊಟಾಡಿಯಾ ಎಂದು ಗುರುತಿಸಲಾಗಿದೆ. ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ನೋಟುಗಳನ್ನು ನಕಲಿ ಕರೆನ್ಸಿ ಎಂದು ಪರಿಗಣಿಸಬಹುದೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಭಾರತೀಯ ರಿಸರ್ವ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಹಾಯವನ್ನು ಕೋರಿದ್ದಾರೆ ಎಂದು ಜೋಯ್ಸರ್ ಹೇಳಿದರು. ಸೂರತ್‌ನಲ್ಲಿ ನೋಟುಗಳನ್ನು ಯಾರಿಂದ ಪಡೆಯಲಾಗಿದೆ ಎಂಬುದನ್ನು ಗುರುತಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ ಮತ್ತು ಅಂತಹ ನೋಟುಗಳು ಭಾರತದ ಆರ್ಥಿಕತೆಗೆ ಹಾನಿಯಾಗದಂತೆ ಮತ್ತು ಜನರು ಮೋಸ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟವಾಗಿ ಹೇಳಿದ್ದಾರೆ.