ಕನ್ನಡ ಸುದ್ದಿ  /  Nation And-world  /  Festival Of Democracy Has Been Celebrated With Great Pomp Says Pm Modi After He Casts His Vote In Ahmedabad

PM Modi: ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ: ಮತದಾನದ ಬಳಿಕ ಪ್ರಧಾನಿ ಮೋದಿ ಅಭಿಮತ

ಅಹಮದಾಬಾದ್:‌ ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳಾಗಿದ್ದು, ಈ ಹಬ್ಬದಲ್ಲಿ ದೇಶದ ಪ್ರತಿಯೊಬ್ಬ ಮತದಾರನ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪ್ರಧಾನಿ ಮೋದಿ, ಮತಗಟ್ಟೆಯಿಂದ ಹೊರಬಂದು ತಮ್ಮ ಕೈಗೆ ಹಾಕಿರುವ ಶಾಯಿಯನ್ನು ಪ್ರದರ್ಶಿಸಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ANI)

ಅಹಮದಾಬಾದ್:‌ ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳಾಗಿದ್ದು, ಈ ಹಬ್ಬದಲ್ಲಿ ದೇಶದ ಪ್ರತಿಯೊಬ್ಬ ಮತದಾರನ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪ್ರಧಾನಿ ಮೋದಿ, ಮತಗಟ್ಟೆಯಿಂದ ಹೊರಬಂದು ತಮ್ಮ ಕೈಗೆ ಹಾಕಿರುವ ಶಾಯಯನ್ನು ಪ್ರದರ್ಶಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಹಬ್ಬವನ್ನು ಗುಜರಾತ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನರು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಶಾಂತಿಯುತವಾಗಿ ಚುನಾವಣೆ ನಡೆಸಿದ್ದಕ್ಕಾಗಿ ನಾನು ಚುನಾವಣಾ ಆಯೋಗವನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಹೇಳಿದರು.

ನಾವು ಚುನಾವಣೆಗಳನ್ನು ಸಾರ್ವತ್ರಿಕ ಹಬ್ಬವೆಂದು ಪರಿಗಣಿಸುತ್ತೇವೆ. ಇಡೀ ದೇಶ ಒಂದಾಗಿ ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತದೆ. ಚುನಾವಣೆಯಲ್ಲಿ ಒಬ್ಬರು ಜಯಗಳಿಸಬಹುದು, ಮತ್ತೊಬ್ಬರು ಸೋಲಬಹುದು. ಆದರೆ ಅಂತಿಮವಾಗಿ ಪ್ರಜಾಪ್ರಭುತ್ವದ ಗೆಲುವನ್ನು ನಾವು ಸಂಭ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದರು.

ತವರು ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿರುವುದು ತಮಗೆ ಸಂತಸ ತಂದಿದೆ ಎಂದೂ ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.

ಚುನಾವಣೆ ಇರುವವರೆಗೂ ರಾಜಕೀಯ ಪಕ್ಷಗಳ ನಸುವೆ ಪರಸ್ಪರ ಸ್ಪರ್ಧೆ ಇರುತ್ತದೆ. ಒಂದು ಬಾರಿ ಚುನಾವಣೆ ಮುಗಿದರೆ, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ರೂಪದಲ್ಲಿ ಸ್ಥಾಪಿತವಾಗುವ ರಾಜಕೀಯ ಪಕ್ಷಗಳು, ದೇಶ ಮತ್ತು ರಾಜ್ಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತವೆ. ರಾಜಕೀಯ ಪಕ್ಷಗಳ ನಡುವಿನ ಈ ಸ್ಪರ್ಧೆಯನ್ನೂ ಸಂಭ್ರಮಿಸುವ ಅಪರೂಪದ ಅವಕಾಶವನ್ನು ಚುನಾವಣೆಗಳು ನಮಗೆ ನೀಡಿವೆ ಎಂದು ಪ್ರಧಾನಿ ಮೋದಿ ನುಡಿದರು.

ಗುಜರಾತ್‌ನ ಎರಡನೇ ಹಂತದ ಚುನಾವಣೆಯಲ್ಲಿ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಯಾವುದೇ ಉದಾಸೀನ ತೋರದೆ, ಮನೆಗಳಿಂದ ಹೊರಬಂದ ಮತಗಟ್ಟೆಯಲ್ಲಿ ಮತ ಚಲಾಯಿಸಿ. ನಿಮ್ಮ ಒಂದು ಮತ ರಾಜ್ಯದ ದಿಕ್ಕನ್ನು ನಿರ್ಣಯಿಸುವ ಶಕ್ತಿ ಹೊಂದಿದೆ ಎಂಬುದನ್ನು ಮರೆಯಬೇಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಗಟ್ಟಿಯಾಗಿ ಬೇರೂರಿದೆ. ಪ್ರಜಾಪ್ರಭುತ್ವ ಮತ್ತು ಭಾರತವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಚುನಾವಣೆಗಳಲ್ಲಿ ನಾವು ಒಬ್ಬರ ಗೆಲುವನ್ನು ಮಾತ್ರ ಸಂಭ್ರಮಿಸುತ್ತೇವೆಯೇ ಹೊರತು, ಒಬ್ಬರ ಸೋಲನ್ನಲ್ಲ. ಪ್ರಜಾಪ್ರಭುತ್ವ ಚಿರಾಯು ಎಂದು ಪ್ರಧಾನಿ ಮೋದಿ ಇದೇ ವೇಳೆ ಮಾರ್ಮಿಕವಾಗಿ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್‌ನಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಪ್ರಕ್ರಿಯೆ ಸದ್ಯ ಜಾರಿಯಲ್ಲಿದೆ. ಡಿ.08(ಗುರುವಾರ) ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗಲಿದೆ.

ಇಂದಿನ ಪ್ರಮುಖ ಸುದ್ದಿ

Basavaraj Bommai: ಆರ್‌ಎಸ್‌ಎಸ್‌ ಬಗ್ಗೆ ಗೊತ್ತಿಲ್ಲದ ರಾಹುಲ್‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ: ಬೊಮ್ಮಾಯಿ ಕಿಡಿ!

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಮಹಿಳಾ ವಿರೋಧಿಗಳಾಗಿದ್ದು, ಅವರು ಕೇವಲ 'ಜೈಶ್ರೀರಾಮ್‌' ಘೋಷಣೆ ಕೂಗುತ್ತಾರೆಯೇ ಹೊರತು, 'ಜೈ ಸಿಯಾ ರಾಮ್‌' ಎಂದು ಹೇಳುವುದಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ರಾಹುಲ್‌ ಗಾಂಧಿ ಅವರಿಗೆ ಯಾವ ವಿಷಯದ ಮೇಲೂ ಪೂರ್ಣ ಜ್ಷಾನವಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point