Rose Day: ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rose Day: ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ

Rose Day: ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ

ಗುಲಾಬಿ ಹೂ ದಿನದೊಂದಿಗೆ ಪ್ರೇಮಿಗಳ ವಾರ ಶುರುವಾಗಿದೆ. ಯುವ ಜೋಡಿಗಳು ಮಾತ್ರವಲ್ಲದೆ ಅದಾಗಲೇ ದಾಂಪತಿಗಳಾಗಿರುವವರು ಕೂಡಾ ಈ ಬಾರಿಯ ವ್ಯಾಲೆಂಟೈನ್ಸ್‌ ಡೇ ಸಂಭ್ರಮದಲ್ಲಿದ್ದಾರೆ. ಹೀಗಾಗಿ ರೋಸ್‌ ಡೇ ದಿನ ದಾಖಲೆ ಪ್ರಮಾಣದಲ್ಲಿ ಗುಲಾಬಿ ಹೂ ಮಾರಾಟವಾಗಿದೆ.

ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ
ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ

ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಅದಕ್ಕೂ ಮುನ್ನ ವಿವಿಧ ದಿನಗಳ ಸಂಭ್ರಮದಲ್ಲಿ ಪ್ರೇಮಿಗಳು ಮಿಂದೇಳುತ್ತಿದ್ದಾರೆ. ಫೆಬ್ರುವರಿ 7ರಂದು ಗುಲಾಬಿ ದಿನ (Rose Day) ಆಚರಣೆ ಮಾಡಲಾಗಿದ್ದು, ದೇಶದಲ್ಲಿ ಗುಲಾಬಿ ಮಾರಾಟ ಜೋರಾಗಿ ಆಗಿದೆ. ಮಹಾರಾಷ್ಟ್ರದ ಎರಡನೇ ಅತಿ ದೊಡ್ಡ ನಗರ ಪುಣೆಯಲ್ಲಿಯೂ ಹೂವು ವ್ಯಾಪಾರಿಗಳು ಭರ್ಜರಿ ಲಾಭ ಗಳಿಸಿದ್ದಾರೆ. ಗುಲಾಬಿ ಹೂ ಮಾರಾಟದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ನಗರದಲ್ಲಿ ದಿನವಿಡೀ ಸಾವಿರಾರು ಗುಲಾಬಿಗಳು ಮಾರಾಟವಾಗಿವೆ. ಪ್ರೇಮಿಗಳ ದಿನದ ಸಿದ್ಧತೆ ನಡುವೆ ಪ್ರತಿ ದಿನಗಳನ್ನು ಜೋಡಿ ಹಕ್ಕಿಗಳು ಖುಷಿಯಿಂದ ಆಚರಿಸುತ್ತಿರುವ ಸುಳಿವು ಸಿಗುತ್ತಿದೆ.

ಪುಣೆಯ ಎಫ್‌ಸಿ ರಸ್ತೆಯಿಂದ ಹಿಡಿದು ಪಕ್ಕದ ಪಿಂಪ್ರಿ ಮಾರುಕಟ್ಟೆಯಲ್ಲೂ, ಗುಲಾಬಿ ಹೂ ಖರೀದಿಗೆ ಯುವ ಜನತೆ ಮುಗಿಬಿತ್ತು. ಪ್ರತಿಯೊಂದು ಬಣ್ಣದಲ್ಲೂ ಗುಲಾಬಿ ಗೂವುಗಳಿಗೆ ಅಗಾಧ ಬೇಡಿಕೆ ಸೃಷ್ಟಿಯಾಗಿತ್ತು. ಹೂ ವ್ಯಾಪಾರಿಗಳು ತಮ್ಮ ಗ್ರಾಹಕರು ಕೇಳುವ ಹೂವುಗಳನ್ನು ಪೂರೈಸುವಲ್ಲಿ ನಿರತರಾಗಿದ್ದರು. ಪ್ರೇಮಿಗಳ ವಾರದ ಆರಂಭದ ದಿನ, ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿ ಶುಭಾರಂಭವಾಗಿದೆ.

ಸಾಮಾನ್ಯ ದಿನಗಳಲ್ಲಿ ಕೆಂಪು ಗುಲಾಬಿಗಳು ಪ್ರತಿಯೊಂದಕ್ಕೆ 10 ರೂ.ಗಳಂತೆ ಮಾರಾಟವಾಗುತ್ತವೆ. ಇದೇ ವೇಳೆ ಗುಲಾಬಿ ಮತ್ತು ಬಿಳಿ ಬಣ್ಣದ ಗುಲಾಬಿ ಹೂಗಳಿಗೆ 15 ರೂ. ಇರುತ್ತದೆ. ಆದರೆ ಇಂದು (ಫೆ.7) ಬೇಡಿಕೆ ತುಂಬಾ ಹೆಚ್ಚಿರುವುದರಿಂದ, ಕೆಂಪು ಗುಲಾಬಿಗೆ 30 ರೂ. ಮತ್ತು ಗುಲಾಬಿ ಮತ್ತು ಬಿಳಿ ಗುಲಾಬಿಗಳಿಗೆ 40 ರೂಪಾಯಿಗಳಂತೆ ದರ ನಿಗದಿಪಡಿಸಲಾಗಿದೆ. ಆದರೂ, ವಿಶೇಷ ದಿನದಂದು ಜನರು ಸಂತೋಷದಿಂದ ಅವುಗಳನ್ನು ಖರೀದಿಸುತ್ತಿದ್ದಾರೆ. ಗುಲಾಬಿ ದಿನವು ನಮಗೆ ಯಾವಾಗಲೂ ವಿಶೇಷ, ಎಂದು ಕಳೆದ 23 ವರ್ಷಗಳಿಂದ ಪುಣೆಗ ಎಫ್‌ಸಿ ರಸ್ತೆಯಲ್ಲಿ ಹೂವು ಮಾರಾಟ ನಡೆಸುತ್ತಿರುವ 46 ವರ್ಷದ ವ್ಯಾಪಾರಿ ರವಿರಾಜ್ ಶಿಂಧೆ ಅವರ ಹೇಳಿಕೆಯನ್ನು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

80ರಿಂದ 90ಕ್ಕೆ ಏರಿಕೆ

ಗುಲಾಬಿ ಮಾರಾಟ ಸಾಮಾನ್ಯವಾಗಿ 60-70 ಪ್ರತಿಶತದಷ್ಟು ಇರುತ್ತದೆ. ಆದರೆ ಗುಲಾಬಿ ದಿನದಂದು ಆ ಪ್ರಮಾಣ 80ರಿಂದ 90ಕ್ಕೆ ಏರುತ್ತವೆ ಎಂದು ರವಿರಾಜ್ ಹೇಳುತ್ತಾರೆ. ಹೂ ಎಷ್ಟೇ ಪೂರೈಕೆಯಾದರೂ ಅವು ಖಾಲಿಯಾಗುತ್ತವೆ. ಕಳೆದ ಕೆಲವು ವರ್ಷಗಳಿಂದ ಗುಲಾಬಿ ದಿನ ಬಹಳಷ್ಟು ಬದಲಾಗುವುದನ್ನು ನಾನು ಗಮನಿಸಿದ್ದೇನೆ. ಆರಂಭದಲ್ಲಿ ಗುಲಾಬಿ ಹೂ ಕೇವಲ ಪ್ರೀತಿಯನ್ನು ವ್ಯಕ್ತಪಡಿಸುವ ಸಂಕೇತವಾಗಿ ಬಳಕೆಯಾಗುತ್ತಿತ್ತು. ಆದರೆ ಈಗ, ಜನರು ವಿಭಿನ್ನ ಬಣ್ಣಗಳನ್ನು ಆರಿಸಿಕೊಳ್ಳುತ್ತಾರೆ. ಮೆಚ್ಚುಗೆಗಾಗಿ ಗುಲಾಬಿ ಬಣ್ಣದ ಹೂ, ಶಾಂತಿಗಾಗಿ ಬಿಳಿ ಮತ್ತು ಮಿಶ್ರ ಹೂಗುಚ್ಛಗಳು ಹೀಗೆ ಜನರ ಆಯ್ಕೆ ಇರುತ್ತವೆ. ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್‌ ಟ್ರೆಂಡ್‌ಗಳು ಕೂಡಾ ಜನರ ಕ್ರೇಜ್ ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ.

ಬೆಲೆ ಏರಿದರೂ ತಗ್ಗಡ ಬೇಡಿಕೆ

ಬೆಲೆ ಏರಿಕೆ ಹೊರತಾಗಿಯೂ, ಮಾರಾಟವು 90-94 ಶೇಕಡಾ ಏರಿದೆ. ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಹೂಗುಚ್ಛ ದರವು 480 ರೂ.ಗಳಿಂದ ಪ್ರಾರಂಭವಾಗಿ 2,680ರವರೆಗೂ ಇವೆ. ಹೀಗಾಗಿ ಈ ದಿನದಂದು ಗುಲಾಬಿಗಳ ಮಾರುಕಟ್ಟೆ ಮೌಲ್ಯವು ದೊಡ್ಡದು ಎಂದು ಪುಣೆಯ ವ್ಯಾಪಾರಿಗಳು ಹೇಳುತ್ತಾರೆ.

ಪುಣೆಯ ಮಾರ್ಕೆಟ್‌ಯಾರ್ಡ್‌ನಲ್ಲಿ, 26 ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಿರುವ ನೀರಜ್ ಪಾಟೀಲ್ ಅವರ ಪ್ರಕಾರ, ಹೂ ಮಾರಾಟವು ಸಾಮಾನ್ಯವಾಗಿ 50ರಿಂದ 60 ಶೇಕಡದಷ್ಟಿದೆ. ರೋಸ್‌ ಡೇ ದಿನ ಆ ಪ್ರಮಾಣ ಸುಮಾರು 90ರಿಂದ 95 ಶೇಕಡಕ್ಕೆ ಹೆಚ್ಚಾಗುತ್ತವೆ. ಯುವಕರು ಹಾಗೂ ಜೋಡಿಗಳು ಹೆಚ್ಚು ಖರೀದಿಸುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇಷ್ಟದ ಹೂ ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.