ಮತ್ತೆ ಬೆಲೆ ಏರಿಕೆ; ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ FMCG ನಿರ್ಧಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮತ್ತೆ ಬೆಲೆ ಏರಿಕೆ; ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ Fmcg ನಿರ್ಧಾರ

ಮತ್ತೆ ಬೆಲೆ ಏರಿಕೆ; ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ FMCG ನಿರ್ಧಾರ

FMCG: ತಾಳೆ ಎಣ್ಣೆ, ಕಾಫಿ ಬೀಜ ಹಾಗೂ ಕೋಕಾ ಸೇರಿದಂತೆ ಹಲವು ಕಚ್ಚಾ ಉತ್ಪನ್ನಗಳ ಬೆಲೆ ಏರಿಕೆಯಾದ ಬೆನ್ನಲ್ಲೇ ಕೆಲವು ಎಫ್ಎಂಸಿಜಿ ಕಂಪನಿಗಳು ಬೆಲೆ ಏರಿಕೆಯ ಸುಳಿವು ನೀಡಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ FMCG ನಿರ್ಧಾರ
ಮ್ಯಾಗಿ, ಬಿಸ್ಕಟ್, ಎಣ್ಣೆ, ಕಾಫಿ ಸೇರಿದಂತೆ ವಿವಿಧ ಉತ್ಫನ್ನಗಳ ಬೆಲೆ ಹೆಚ್ಚಳಕ್ಕೆ FMCG ನಿರ್ಧಾರ (HT)

ನವದೆಹಲಿ: ಉತ್ಪಾದನಾ ವೆಚ್ಚ ಮತ್ತು ಆಹಾರ ಹಣ ದುಬ್ಬರದಿಂದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೇಗವಾಗಿ ಗ್ರಾಹಕರ ಕೈ ಸೇರುವ ಉತ್ಪನ್ನಗಳ (FMCG) ಲಾಭಾಂಶ ಕುಸಿದಿದೆ ಎಂದು ವರದಿಯಾಗಿದೆ. ಇದರಿಂದ ಹಲವು ಕಂಪನಿಗಳು ನಷ್ಟಗೊಂಡಿರುವ ಕಾರಣ ಬೆಲೆ ಏರಿಕೆಗೆ ಮುಂದಾಗಿವೆ. ಹೆಚ್​​​ಯುಎಲ್​, ಗೋದ್ರೆಜ್ ಕನ್​ಸ್ಯೂಮರ್​ ಪ್ರಾಡಕ್ಟ್​ ಲಿಮಿಟೆಡ್ಸ್ (GCPL), ಮಾರಿಕೊ, ಐಟಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಸೇರಿದಂತೆ ಹಲವು ಕಂಪನಿಗಳು ಬೆಲೆ ಏರಿಕೆ ಮಾಡಲು ಮುಂದಾಗಿವೆ. ತಾಳೆ ಎಣ್ಣೆ, ಕಾಫಿ ಬೀಜ ಹಾಗೂ ಕೋಕಾ ಸೇರಿದಂತೆ ಹಲವು ಕಚ್ಚಾ ಉತ್ಪನ್ನಗಳ ಬೆಲೆ ಏರಿಕೆಯಾಗುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ. ಎಫ್ಎಂಸಿಜಿ ಒಟ್ಟು ಮಾರಾಟದ ಶೇ.65-68ರಷ್ಟು ಆದಾಯ ನಗರ ಭಾಗಗಳಿಂದ ಬರುತ್ತಿದೆ.

ಕುಸಿತ ಕಂಡಿರುವುದು ಅಲ್ಪಾವಧಿ ಹೊಡೆತ ಎಂದು ಭಾವಿಸುತ್ತೇವೆ. ನ್ಯಾಯಯುತ ಬೆಲೆ ಏರಿಕೆ ಮತ್ತು ವೆಚ್ಚಗಳನ್ನು ಸ್ಥಿರಗೊಳಿಸುವ ಮೂಲಕ ಲಾಭಾಂಶ ಮರು ಪಡೆಯುತ್ತೇವೆ. ವ್ಯಾಪಾರ ವಹಿನಾಟಿನಲ್ಲಿ ತಾತ್ಕಾಲಿಕವಾಗಿ ಹಿನ್ನಡೆಯಾಗುತ್ತದೆ. ನಷ್ಟ ಭರ್ತಿಗೂ ಮುನ್ನ ಬೆಲೆ ಏರಿಕೆ ಮಾಡುವ ಮುನ್ನ ಎಲ್ಲ ಬೆಳವಣಿಗೆಗಳ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಕಂಪನಿಯ 2ನೇ ತ್ರೈಮಾಸಿಕದಲ್ಲಿ ಜಿಸಿಪಿಎಲ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಧಿಕಾರಿ ಸುಧೀರ್ ಸೀತಾಪತಿ ಹೇಳಿದ್ದಾರೆ. ಕುಸಿತದ ನಡುವೆಯೂ ಸಿಂಥೋಲ್, ಗೋದ್ರೇಜ್ ನಂ.1 ಆದಾಯ ಸ್ಥಿರವಾಗಿತ್ತು. ಇತ್ತೀಚೆಗೆ ನಗರ ಮಾರುಕಟ್ಟೆಗಳಂತೆ, ಗ್ರಾಮೀಣ ಮಾರುಕಟ್ಟೆಗಳಲ್ಲೂ ಬೆಳವಣಿಗೆ ಮುಂದುವರೆದಿದೆ. ಆದರೆ ನಗರ ಮಾರುಕಟ್ಟೆಗಳಲ್ಲಿ ಆದಾಯ ಶೇ. 65-68 ನಗರ ಭಾಗಗಳಿಂದ ಸಿಗುತ್ತದೆ.

ಡಾಬರ್ ಕಂಪನಿಯ ಆದಾಯ ಕುಸಿತ

ಡಾಬರ್ ಚ್ಯವನ್ಪ್ರಾಶ್, ಪುದಿನರಾ ಮತ್ತು ರಿಯಲ್ ಜ್ಯೂಸ್ ತಯಾರಕ ಕಂಪನಿ ನಿವ್ವಳ ಲಾಭದಲ್ಲಿ ಶೇಕಡಾ 17.65 ರಷ್ಟು ಕುಸಿತ ಕಂಡು 417.52 ಕೋಟಿ ರೂಪಾಯಿಗೆ ತಲುಪಿದೆ. ಕಂಪನಿಯ ಆದಾಯ ಶೇಕಡಾ 5.46 ರಷ್ಟು ಕುಸಿದು 3,028.59 ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ. ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಅವರು ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಆಹಾರ ಹಣ ದುಬ್ಬರ ಗೃಹ ಬಜೆಟ್ ಅನ್ನು ದುರ್ಬಲಗೊಳಿಸುತ್ತಿರುವುದರಿಂದ ಮಧ್ಯಮ ವರ್ಗ ಒತ್ತಡಕ್ಕೆ ಸಿಲುಕುವಂತಾಗಿದೆ ಎಂದಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ತ್ರೈಮಾಸಿಕಗಳ ಹಿಂದೆ ಎರಡಂಕಿಯಲ್ಲಿದ್ದ ಎಫ್​ಬಿ ವಲಯದ ಬೆಳವಣಿಗೆಯು ಈಗ ಶೇ 1.5-2ಕ್ಕೆ ಇಳಿದಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

ಮ್ಯಾಗಿ, ಕಿಟ್ ಕ್ಯಾಟ್ ಬೆಲೆ ಏರಿಕೆ?

ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳು ಮತ್ತು ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಕಚ್ಚಾ ವಸ್ತುಗಳ ವೆಚ್ಚವನ್ನು ಕಂಪನಿಗಳಿಗೆ ನಿರ್ವಹಿಸಲು ಸಾಧ್ಯವಾಗದಿದ್ದರೆ ಇದು ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಕಾಫಿ ಮತ್ತು ಕೋಕೋ ಬೆಲೆಗಳಿಗೆ ಸಂಬಂಧಿಸಿದಂತೆ ನಾವು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಏಜೆನ್ಸಿಗೆ ತಿಳಿಸಿದ್ದಾರೆ. ಮ್ಯಾಗಿ, ಕಿಟ್ ಕ್ಯಾಟ್ ಮತ್ತು ನೆಸ್ಕಾಫೆಯಂತಹ ಬ್ರಾಂಡ್​​ಗಳನ್ನು ಹೊಂದಿರುವ ನೆಸ್ಲೆ ಇಂಡಿಯಾ ಕೂಡ ಶೇಕಡಾ 0.94 ರಷ್ಟು ಕುಸಿತ ಕಂಡಿದೆ. ದೇಶೀಯ ಮಾರಾಟದ ಬೆಳವಣಿಗೆ ಶೇಕಡಾ 1.2 ರಷ್ಟಿದೆ. ಇದೀಗ ಬೆಲೆ ಏರಿಕೆಗೆ ಈ ಕಂಪನಿಗಳು ನಿರ್ಧರಿಸಿವೆ ಎಂದು ವರದಿಯಾಗಿದೆ. ಎಚ್​ಯುಎಲ್ ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡಾ 2.33 ರಷ್ಟು ಕುಸಿದಿದೆ. ಎಚ್​ಯುಎಲ್​ನಂತೆ ಮಾರಿಕೊ ಕೂಡ ವರ್ಷದಿಂದ ವರ್ಷಕ್ಕೆ ನಗರ ಪ್ರದೇಶಕ್ಕಿಂತ 2 ಪಟ್ಟು ವೇಗದಲ್ಲಿ ಗ್ರಾಮೀಣ ಬೆಳೆಯುತ್ತಿದೆ ಎಂದು ವರದಿಯಾಗಿದೆ. ಇದು ಪ್ರಮುಖ ಪೋರ್ಟ್​ಪೊಲಿಯೊಗಳಲ್ಲಿ ಹೆಚ್ಚಿನ ಉತ್ಪಾದನಾ ವೆಚ್ಚಗಳನ್ನು ವರದಿ ಮಾಡಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.