ಕನ್ನಡ ಸುದ್ದಿ  /  Nation And-world  /  From Qutub Minar To Charminar, Asi Monuments Lit Up In 'Tiranga' Theme

Azadi ka Amrit Mahotsav: ಕುತುಬ್‌ ಮಿನಾರ್‌ನಿಂದ ಚಾರ್‌ಮಿನಾರ್‌ವರೆಗೆ, ಎಎಸ್‌ಐ ಸ್ಮಾರಕಗಳು ತಿರಂಗಮಯ

ಕರ್ನಾಟಕದ ಹಂಪಿಯು ತ್ರಿವರ್ಣದಲ್ಲಿ ಬೆಳಗಿದ ಫೋಟೊಗಳನ್ನು ನೀವು ನೋಡಿರುವಿರಿ. ಇದೊಂದೇ ಅಲ್ಲ, ದೇಶದಲ್ಲಿರುವ ಎಲ್ಲಾ ಎಎಸ್‌ಐ ತಾಣಗಳು, ಸ್ಮಾರಕಗಳು, ಐತಿಹಾಸಿಕ ಸ್ಥಳಗಳು ಸ್ವಾತಂತ್ರ್ಯದ ಅಮೃತಮಹೋತ್ಸವ (Azadi ka Amrit Mahotsav)ದ ಸಂದರ್ಭದಲ್ಲಿ ತಿರಂಗವರ್ಣದಲ್ಲಿ ಮಿಂಚುತ್ತಿವೆ. "ಎಎಸ್‌ಐನ ಈ ಪ್ರಯತ್ನವು ಹರ್‌ ಘರ್‌ ತಿರಂಗದ ಆಶಯವನ್ನು ಇನ್ನಷ್ಟು ಅದ್ಭುತವಾಗಿಸಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಎಸ್‌ಐ ಸ್ಮಾರಕಗಳು ತಿರಂಗಮಯ
ಎಎಸ್‌ಐ ಸ್ಮಾರಕಗಳು ತಿರಂಗಮಯ (twitter)

ನವದೆಹಲಿ: ಕರ್ನಾಟಕದ ಹಂಪಿಯು ತ್ರಿವರ್ಣದಲ್ಲಿ ಬೆಳಗಿದ ಫೋಟೊಗಳನ್ನು ನೀವು ನೋಡಿರುವಿರಿ. ಇದೊಂದೇ ಅಲ್ಲ, ದೇಶದಲ್ಲಿರುವ ಎಲ್ಲಾ ಎಎಸ್‌ಐ ತಾಣಗಳು, ಸ್ಮಾರಕಗಳು, ಐತಿಹಾಸಿಕ ಸ್ಥಳಗಳು ಸ್ವಾತಂತ್ರ್ಯದ ಅಮೃತಮಹೋತ್ಸವ (Azadi ka Amrit Mahotsav)ದ ಸಂದರ್ಭದಲ್ಲಿ ತಿರಂಗವರ್ಣದಲ್ಲಿ ಮಿಂಚುತ್ತಿವೆ. "ಎಎಸ್‌ಐನ ಈ ಪ್ರಯತ್ನವು ಹರ್‌ ಘರ್‌ ತಿರಂಗದ ಆಶಯವನ್ನು ಇನ್ನಷ್ಟು ಅದ್ಭುತವಾಗಿಸಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ತ್ರಿರಂಗಮಯಿ ದಾಹೋಹರ್‌ ಎನ್ನುವುದು #HarGharTirangaರ ಭಾಗವಾಗಿದ್ದು, ಭಾರತದಾದ್ಯಂತ ಇರುವ ಎಲ್ಲಾ ಸ್ಮಾರಕಗಳು ತ್ರಿವರ್ಣ ತಿರಂಗ ಬಣ್ಣದಲ್ಲಿ ಮಿಣುಗುತ್ತಿವೆʼʼ ಎಂದು ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ಆರ್ಕಿಯೊಲಜಿ ಇಂಡಿಯಾದ ತ್ರಿವರ್ಣ ಸ್ಮಾರಕಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

"ನಮ್ಮ ಬೆಲೆಕಟ್ಟಲಾಗದ ಹೆರಿಟೇಜ್‌ ಮತ್ತು ತಿರಂಗ! ಎಎಸ್‌ಐನ ಕ್ರಮವು ಹರ್‌ಘರ್‌ ತಿರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಒಡಿಸ್ಸಾದ ಕೋನಾರ್ಕ್‌ ಸನ್‌ ಟೆಂಪಲ್‌, ಮಧ್ಯಪ್ರದೇಶದ ಸಂಚಿ ಸ್ತೂಪ, ಕರ್ನಾಟಕದ ಹಂಪಿ, ಹೈದರಾಬಾದ್‌ನ ಚಾರ್‌ಮೀನಾರ್‌, ಕೋಲ್ಕೋತ್ತಾದ ಮೆಟಾಕಾಲ್ಫೆ, ಬಿಹಾರದ ನಲಂದಾ ವಿಶ್ವವಿದ್ಯಾಲಯ, ಗೋವಾದ ಸೇಂಟ್‌ ಫ್ರಾನ್ಸಿಸ್‌ ಅಸಿಸಿ, ಲಖನೌನ ದಿ ರೆಸಿಡೆನ್ಸಿ, ಬಿಹಾರದ ಕೇಸರಿಯ ಸ್ತೂಪ ಸೇರಿದಂತೆ ಹಲವು ಸ್ಮಾರಕಗಳು, ಐತಿಹಾಸಿಕ ಸ್ಥಳಗಳು ತ್ರಿವರ್ಣ ವರ್ಣದಲ್ಲಿ ಬೆಳಗಿವೆ.

ದೆಹಲಿಯ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಕುತುಬ್‌ ಮಿನಾರ್‌, ಜಂತರ್‌ ಮಂತರ್‌, ಅಜ್ಮೀರ್‌ ಗೇಟ್‌ ಸೇರಿದಂತೆ ಪ್ರಮುಖ ಸ್ಥಳಗಳು, ಸ್ಮಾರಕಗಳು ತ್ರಿವರ್ಣಮಯವಾಗಿವೆ.

ಎಎಸ್‌ಐಯು ವಿವಿಧ ಕಡೆಗಳಲ್ಲಿನ ತ್ರಿವರ್ಣ ಥೀಮ್‌ಗಳ ವಿಡಿಯೋಗಳನ್ನೂ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ.

ಭಾರತದಲ್ಲಿರುವ ನೂರೈವತ್ತಕ್ಕೂ ಹೆಚ್ಚು ರಾಷ್ಟ್ರೀಯ ಸ್ಮಾರಕಗಳಲ್ಲಿ ಹರ್‌ ಘರ್‌ ತಿರಂಗ್‌ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ.

IPL_Entry_Point

ವಿಭಾಗ