ಕನ್ನಡ ಸುದ್ದಿ  /  Nation And-world  /  Gene Fingerprinting Can Be Used To Target Political Dissidents, Solve Crimes Explained Doctor-author Siddhartha Mukherjee With Concern

Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್‌ ಮಾಡಲು ಜೀನ್‌ ಫಿಂಗರ್‌ ಪ್ರಿಂಟಿಂಗ್‌ ಬಳಸಬಹುದು!; ಹೇಗೆ ಟಾರ್ಗೆಟ್‌ ಮಾಡ್ತಾರೆ?

Gene fingerprinting: ಜೆನಿಟಿಕ್‌ ಸ್ವೀಕ್ವೆನ್ಸಿಂಗ್‌ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಪುಲಿಟ್ಜೆರ್ ವಿಜೇತ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು.

ಫಿಂಗರ್‌ ಪ್ರಿಂಟಿಂಗ್‌ (ಸಾಂಕೇತಿಕ ಚಿತ್ರ)
ಫಿಂಗರ್‌ ಪ್ರಿಂಟಿಂಗ್‌ (ಸಾಂಕೇತಿಕ ಚಿತ್ರ) (unsplash)

ರಾಜಕೀಯ ಭಿನ್ನಮತೀಯರನ್ನು ಗುರುತಿಸಲು ಮತ್ತು ಟಾರ್ಗೆಟ್‌ ಮಾಡಲು ಹೊಸ ಜೆನಿಟಿಕ್‌ ಸೀಕ್ವೆನ್ಸಿಂಗ್‌ ಐಡೆಂಟಿಫಿಕೇಶನ್‌ ಟೆಕ್ನಿಕ್‌ ಬಳಕೆಯಾಗಬಹುದು ಎಂಬುದು ಈಗ ಹೊಸ ಆತಂಕ.

ಈ ಕಳವಳ ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ಪುಲಿಟ್ಜೆರ್‌ ಪ್ರಶಸ್ತಿ ವಿಜೇತ ಲೇಖಕ, ವೃತ್ತಿಯಲ್ಲಿ ವೈದ್ಯ ಡಾ.ಸಿದ್ಧಾರ್ಥ ಮುಖರ್ಜಿ. ಅವರು ಕ್ಯಾನ್ಸರ್‌ ಸಂಶೋಧಕ ಮತ್ತು ʻದ ಜೀನ್‌ - ಆನ್‌ ಇಂಟಿಮೇಟ್‌ ಹಿಸ್ಟರಿʼ ಕೃತಿಯ ಲೇಖಕ ಕೂಡ. ಹೊಸ ಜೆನಿಟಿಕ್‌ ಸೀಕ್ವೆನ್ಸಿಂಗ್‌ ಐಡೆಂಟಿಫಿಕೇಶನ್‌ ಟೆಕ್ನಿಕ್‌ ಅನ್ನು ಅಪರಾಧಗಳ ನಿಗೂಢತೆಯನ್ನು ಬೇಧಿಸುವುದಕ್ಕೂ ಬಳಸಬಹುದು ಎಂದೂ ಅವರು ಹೇಳಿದ್ದಾರೆ.

ಇನ್ನೊಬ್ಬ ಪ್ರಸಿದ್ಧ ಲೇಖಕ ಅಮಿತವ್‌ ಘೋಷ್‌ ಜತೆಗೆ ಮಾತುಕತೆ ನಡೆಸುತ್ತಿದ್ದಾಗ ಈ ವಿಚಾರದ ಕಡೆಗೆ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು. ಅಲಿಪುರ ಕಾರಾಗೃಹ ಮ್ಯೂಸಿಯಂನಲ್ಲಿ ಶುಕ್ರವಾರ ನಡೆದ ಮಾತುಕತೆ ವೇಳೆ ಈ ವಿಚಾರವನ್ನು ಅವರು ಪ್ರಸ್ತುತಪಡಿಸಿದರು. ಫಿಂಗರ್‌ಪ್ರಿಂಟಿಂಗ್‌ ಮೆಕಾನಿಸಂ ಮಾದರಿಯಲ್ಲೇ 19ನೇ ಶತಮಾನದ ಕೊನೆಯಲ್ಲಿ ಕೋಲ್ಕತ್ತದಲ್ಲೇ ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನವು ಅಪರಾಧಗಳ ನಿಗೂಢತೆಯನ್ನು ಬೇಧಿಸುವಲ್ಲಿ ನೆರವಾಗುವಂಥದ್ದು. ಜೆನಿಟಿಕ್‌ ಸ್ವೀಕ್ವೆನ್ಸಿಂಗ್‌ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಅವರು ಬೆಳಕು ಚೆಲ್ಲಿದರು.

ನಿಮ್ಮ ಜೆನಿಟಿಕ್‌ ಮೇಕಪ್‌ ನಿಮಗೆ ಮಾತ್ರವೇ ಅನ್ವಯಿಸುವಂಥದ್ದು. ಅಂತಹ ವಿಶಿಷ್ಟತೆ ಅದರದ್ದು. ಅದು ಇನ್ನೊಬ್ಬರಿಗೆ ಹೊಂದಿಕೆಯಾಗದು. ಒಂದೊಮ್ಮೆ ಅವಳಿಗಳಿದ್ದರೆ ಅಂತಹ ವಿರಳ ಸಂದರ್ಭದಲ್ಲಿ ಮಾತ್ರವೇ ಜೆನಿಟಿಕ್‌ ಮೇಕಪ್‌ ಇಬ್ಬರದ್ದು ಒಂದೇ ರೀತಿ ಕಂಡುಬರಬಹುದು. ಇದು ಕೂಡ ಅತ್ಯಂತ ವಿರಳ ಸಂದರ್ಭದಲ್ಲಿ ಮಾತ್ರವೇ ಸಾಧ್ಯ ಎಂದು ಡಾ.ಮುಖರ್ಜಿ ಹೇಳಿದರು.

ಫಿಂಗರ್‌ಪ್ರಿಂಟಿಂಗ್‌ ಅನ್ನು ಒಂದು ಗುರುತಿಸುವ ಮೆಕಾನಿಸಂ ಆಗಿ ಸಂಶೋಧಿಸಲಾಗಿತ್ತು. ಅಮೆರಿಕ ಮತ್ತು ಯುಕೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಬಳಿಕ ಇತರೆ ರಾಷ್ಟ್ರಗಳು ಕೂಡ ಇದನ್ನು ಅರಿತವು. ಇದರ ಮೂಲಕವೇ ಜೆನೆಟಿಕ್‌ ಫಿಂಗರ್‌ಪ್ರಿಂಟಿಂಗ್‌ ಅಭಿವೃದ್ಧಿಯಾಯಿತು ಎಂದು ಮುಖರ್ಜಿ ವಿವರಿಸಿದರು.

ಜೀನ್‌ ಫಿಂಗರ್‌ ಪ್ರಿಂಟಿಂಗ್‌ ಹೇಗೆ ಕೆಲಸ ಮಾಡುತ್ತೆ?

ಈಗ ಜನ ಬಹಳಷ್ಟು ಜೀನ್‌ ಸೀಕ್ವೆನ್ಸಿಂಗ್‌ ಮಾಡುತ್ತಿದ್ದಾರೆ. ಒಂದು ಕಲ್ಪನೆ ಒದಗಿಸುವುದಕ್ಕಾಗಿ ಹೇಳುವುದಾದರೆ, ಇಲ್ಲಿ ಕುಳಿತಿರುವ ವೀಕ್ಷಕರ ಪೈಕಿ ಶೇಕಡ 10 ಜನರ ಜೆನಿಟಿಕ್‌ ಸೀಕ್ವೆನ್ಸಿಂಗ್‌ ಆಗಿದೆ ಎಂದಿಟ್ಟುಕೊಳ್ಳಿ. ಮತ್ತು ಈ ವೀಕ್ಷಕರ ಪೈಕಿ ಯಾರೋ ಒಬ್ಬರು ಒಂದು ಅಪರಾಧ ಮಾಡಿದ್ದಾರೆ. ಆ ಕೃತ್ಯ ಎಸಗಿದ ವ್ಯಕ್ತಿಯ ಜೆನಿಟಿಕಲ್‌ ಪಿಂಗರ್‌ಪ್ರಿಂಟಿಂಗ್‌ ಆಗಿಲ್ಲ ಎಂದು ಭಾವಿಸೋಣ. ಆಗ ಅಪರಾಧಿ ಪತ್ತೆ ಕಷ್ಟಸಾಧ್ಯ.

ಅದುವೇ, ಸ್ವಯಂ ಪ್ರೇರಿತವಾಗಿ ಜೆನಿಟಿಕ್‌ ಫಿಂಗರ್‌ಪ್ರಿಂಟ್ಸ್‌ ಒದಗಿಸಿದವರ ವಿಚಾರಕ್ಕೆ ಬರೋಣ. ಅವರು ಅಪರಾಧ ಎಸಗಿದ್ದರೆ, ಕೂಡಲೇ ಈ ಮೆಕಾನಿಸಂ ಬಳಸಿ ಅಪರಾಧ ಸ್ಥಳಕ್ಕೆ ಬಂದವರ ಪೈಕಿ ಈ ಫಿಂಗರ್‌ ಪ್ರಿಂಟ್ಸ್‌ ಕಂಡುಬಂದರೆ ಅಪರಾಧಿಯ ಪತ್ತೆ ಸುಲಭವಾಗಲಿದೆ. ಇದು ಫಾರೆನ್ಸಿಕ್‌ ಮತ್ತು ಕ್ರಿಮಿನಾಲಜಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಂಥ ಬೆಳವಣಿಗೆ. ತಥಾಕಥಿತ ಕೋಲ್ಡ್‌ ಕೇಸ್‌ಗಳೆಂದು ಪರಿಗಣಿಸಲ್ಪಟ್ಟ 30-40 ಕೇಸ್‌ಗಳನ್ನು ಇದು ಬಗೆಹರಿಸಿದೆ ಎಂದು ಡಾ.ಮುಖರ್ಜಿ ವಿವರಿಸಿದರು.

ಜೀನ್‌ ಫಿಂಗರ್‌ ಪ್ರಿಂಟಿಂಗ್ ತಂತ್ರಜ್ಞಾನವನ್ನು ಇನ್ನೊಂದು ರೀತಿಯಲ್ಲೂ ಬಳಸಬಹುದಾಗಿದೆ. ವಲಸಿಗರ, ರಾಜಕೀಯ ಸಂತ್ರಸ್ತರ, ರಾಜಕೀಯ ಭಿನ್ನಮತೀಯರ ಗುರುತಿಸುವಿಕೆಗೂ ಇದೇ ತಂತ್ರಜ್ಞಾನವನ್ನು ಬಳಸಬಹುದಾಗಿದೆ ಎಂದು ಕಳವಳದೊಂದಿಗೆ ಡಾ.ಮುಖರ್ಜಿ ಹೇಳಿದರು.

ಗಮನಿಸಬಹುದಾದ ಸುದ್ದಿ

ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಿ; ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿಯ ವಿಶ್ವಾಸದ ನುಡಿ

New Ayodhya: ಅಯೋಧ್ಯೆಯ ಪುನರುತ್ಥಾನ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಉತ್ತರ ಪ್ರದೇಶದ ಮು‍ಖ್ಯ ಕಾರ್ಯದರ್ಶಿ ದುರ್ಗಾಶಂಕರ್‌ ಮಿಶ್ರಾ, ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಬಹುದು. ಆ ರೀತಿಯಾದ ಅಭಿವೃದ್ಧಿಗಳೊಂದಿಗೆ ಅಯೋಧ್ಯಾ ನಗರ ರೂಪುಗೊಳ್ಳುತ್ತಿದೆ ಎಂದು ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ