Gold Price Today March 19: OMG! ಚಿನ್ನ, ಬೆಳ್ಳಿ ದರ ಸೀಳಿತು ಮುಗಿಲು: ಆಭರಣದ ಆಸೆಗೆ ತೆರೆಯದಿರಿ ಮನದ ಬಾಗಿಲು..!
ಇಂದು(ಮಾ.19-ಭಾನುವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಭಾರೀ ಏರಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.
ನವದೆಹಲಿ: ಇಂದು(ಮಾ.19.ಭಾನುವಾರ ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಭಾರೀ ಏರಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಕುರಿತು ಇಲ್ಲಿದೆ ಮಾಹಿತಿ.
ಟ್ರೆಂಡಿಂಗ್ ಸುದ್ದಿ
ಭಾನುವಾರದ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 6,032 ರೂ. ದಾಖಲಾಗಿದೆ. ನಿನ್ನೆ(ಮಾ.18-ಶನಿವಾರ) ಇದರ ಬೆಲೆ 5,869 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 163 ರೂ. ಏರಿಕೆ ಕಂಡುಬಂದಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ 6,037 ರೂ. ನಿಗದಿಯಾಗಿದೆ. ನಿನ್ನೆ (ಮಾ.18-ಶನಿವಾರ) ಇದರ ಬೆಲೆ 5,874 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 163 ರೂ. ಏರಿಕೆ ಕಂಡುಬಂದಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 55,350 ರೂ. ಆಗಿದ್ದು, ನಿನ್ನೆ (ಮಾ.18-ಶನಿವಾರ) ಇದರ ಬೆಲೆ 53,850 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 1,500 ರೂ. ಏರಿಕೆ ಕಂಡುಬಂದಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 60,370 ರೂ. ಆಗಿದೆ. ನಿನ್ನೆ (ಮಾ.18-ಶನಿವಾರ) ಇದರ ಬೆಲೆ 58,740 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 1,630 ರೂ. ಏರಿಕೆ ಕಂಡುಬಂದಿದೆ.
ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)
ನವದೆಹಲಿ: 55,450 ರೂ.(22 ಕ್ಯಾರಟ್) ಮತ್ತು 60,470 ರೂ. (24 ಕ್ಯಾರಟ್)
ಮುಂಬೈ: 55,300 ರೂ.(22 ಕ್ಯಾರಟ್) ಮತ್ತು 60,320 ರೂ. (24 ಕ್ಯಾರಟ್)
ಕೋಲ್ಕತ್ತಾ: 55,300 ರೂ.(22 ಕ್ಯಾರಟ್) ಮತ್ತು 60,320 ರೂ. (24 ಕ್ಯಾರಟ್
ಚೆನ್ನೈ: 55,600 ರೂ.(22 ಕ್ಯಾರಟ್) ಮತ್ತು 60,650 ರೂ. (24 ಕ್ಯಾರಟ್)
ಹೈದರಾಬಾದ್: 55,300 ರೂ.(22 ಕ್ಯಾರಟ್) ಮತ್ತು 60,320 ರೂ. (24 ಕ್ಯಾರಟ್)
ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 72,100 ರೂ. ಆಗಿದೆ. ನಿನ್ನೆ (ಮಾ.18-ಶನಿವಾರ) ಒಂದು ಕೆಜಿ ಬೆಳ್ಳಿ ಬೆಲೆ 69,800 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 2,300 ರೂ. ಏರಿಕೆ ಕಂಡುಬಂದಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 74,400 ರೂ. ಆಗಿದ್ದು, ನಿನ್ನೆ (ಮಾ.18-ಶನಿವಾರ) ಒಂದು ಕೆಜಿ ಬೆಳ್ಳಿ ಬೆಲೆ 73,100 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 1,300 ರೂ. ಏರಿಕೆ ಕಂಡುಬಂದಿದೆ.
ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..
ನವದೆಹಲಿ: 72,100 ರೂ. (ಒಂದು ಕೆಜಿ)
ಮುಂಬೈ: 72,100 ರೂ. (ಒಂದು ಕೆಜಿ)
ಕೋಲ್ಕತ್ತಾ: 72,100 ರೂ. (ಒಂದು ಕೆಜಿ)
ಚೆನ್ನೈ: 74,400 ರೂ. (ಒಂದು ಕೆಜಿ)
ಹೈದರಾಬಾದ್: 74,400 ರೂ. (ಒಂದು ಕೆಜಿ)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಅನುಕ್ರಮವಾಗಿ ಏರಿಕೆ ಕಂಡುಬಂದಿದೆ. ದೇಶದ ಎಲ್ಲಾ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಗಮನಿಸಬೇಕಾದ ಸಂಗತಿ.
ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ.