Gold Rate today in Karnataka: ಸೋಮವಾರವೂ ಚಿನ್ನದ ದರ ಏರುಮುಖ, ಆಭರಣ ಪ್ರಿಯರ ಮುಖದಲ್ಲಿ ಆತಂಕ, ಇಂದಿನ ಚಿನ್ನ-ಬೆಳ್ಳಿ ದರ ಮಾಹಿತಿ
Gold Rate: ನಿನ್ನೆ ಮೊನ್ನೆಗೆ ಹೋಲಿಸಿದರೆ ಇಂದಿನದ್ದು ಅಲ್ಪ ಏರಿಕೆಯಾಗಿದೆ. ಇಂದು ಗ್ರಾಂಗೆ ಒಂದು ರೂ., 8 ಗ್ರಾಂಗೆ 8 ರೂ., 100 ಗ್ರಾಂಗೆ 100 ರೂ. ಏರಿಕೆಯಾಗಿದೆ. ಅಪರಂಜಿ ಚಿನ್ನದ ದರವೂ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಂಗಳೂರು: ಕಳೆದ ಎರಡು ದಿನದಿಂದ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ಕೂಡ ಏರಿಕೆ ಮುಂದುವರೆಸಿದೆ. ವಾರದ ಆರಂಭದಲ್ಲಿ ಚಿನ್ನದಂಗಡಿಗೆ ಹೋಗಿ ಆಭರಣ ಖರೀದಿಸೋಣ ಎಂದುಕೊಂಡವರಿಗೆ ಇದರಿಂದ ನಿರಾಶೆಯಾಗಬಹುದು. ಆದರೆ, ಇಂದು ಚಿನ್ನದ ದರ ತುಸು ಏರಿಕೆ ಕಂಡಿದೆ. ನಿನ್ನೆ ಮೊನ್ನೆಗೆ ಹೋಲಿಸಿದರೆ ಇಂದಿನದ್ದು ಅಲ್ಪ ಏರಿಕೆಯಾಗಿದೆ. ಇಂದು ಗ್ರಾಂಗೆ ಒಂದು ರೂ., 8 ಗ್ರಾಂಗೆ 8 ರೂ., 100 ಗ್ರಾಂಗೆ 100 ರೂ. ಏರಿಕೆಯಾಗಿದೆ. ಅಪರಂಜಿ ಚಿನ್ನದ ದರವೂ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ದರ ಗ್ರಾಂಗೆ 75 ರೂ. ಏರಿಕೆ ಕಂಡಿತ್ತು.
ಟ್ರೆಂಡಿಂಗ್ ಸುದ್ದಿ
ಚಿನ್ನದ ದರ ಒಂದು ರೂಪಾಯಿಯಷ್ಟೇ ಏರಿಕೆ ಕಂಡಿದೆ ಎಂದು ಖುಷಿ ಪಡುವ ಹಾಗಿಲ್ಲ. ಏಕೆಂದರೆ, ಪ್ರತಿನಿತ್ಯ ಹೀಗೆ ತುಸುತುಸುವೇ ಏರಿಕೆ ಕಾಣುತ್ತ ತಿಂಗಳಾಂತ್ಯದಲ್ಲಿ ಚಿನ್ನದ ದರ ಸಾಕಷ್ಟು ಹೆಚ್ಚಳವಾಗಿರುತ್ತದೆ. ಮುಂದಿನ ಮದುವೆ ಸೀಸನ್‌ನಲ್ಲಿ ಚಿನ್ನ ಖರೀದಿಸಲು ಬಯಸಬೇಕಾಗಿರುವವರು ಮದುವೆ ದಿನದವರೆಗೆ ಕಾಯದೆ ದರ ಕಡಿಮೆ ಇರುವಾಗಲೇ ಹಣವಿದ್ದರೆ ಚಿನ್ನ ಖರೀದಿಸಿಡಬಹುದು.
ಇಂದು 22 ಕ್ಯಾರೆಟ್ ಚಿನ್ನದ ದರವೆಷ್ಟಿದೆ?
ಇಂದು ಒಂದು ಗ್ರಾಂ ಚಿನ್ನದ ದರ 5221 ರೂಪಾಯಿ ಇದೆ. ನಿನ್ನೆ 5220 ರೂ. ಇತ್ತು. ನಿನ್ನೆಗಿಂತ ಇಂದು 1 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 41,768ರೂ. ಇದೆ. ನಿನ್ನೆಯ 41,760 ರೂ.ಗೆ ಹೋಲಿಸಿದರೆ ಇಂದು 8 ರೂಪಾಯಿ ಹೆಚ್ಚಳವಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 52210 ರೂ. ಇದೆ. ನಿನ್ನೆಯ 52200 ರೂ.ಗೆ ಹೋಲಿಸಿದರೆ ಇಂದು 750 ರೂ. ಏರಿಕೆ ಕಂಡಿದೆ. ಎಲ್ಲಾದರೂ 100 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 522000 ರೂ. ನೀಡಬೇಕು. ನಿನ್ನೆಯ 522100 ರೂ.ಗೆ ಹೋಲಿಸಿದರೆ ಇಂದು 100 ರೂಪಾಯಿ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ ಚಿನ್ನದ ದರ 5695 ರೂಪಾಯಿ ಇದೆ. ನಿನ್ನೆ 5694 ರೂ. ಇತ್ತು. ನಿನ್ನೆಗಿಂತ ಇಂದು 1 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 45560 ರೂ. ಇದೆ. ನಿನ್ನೆಯ 45552 ರೂ.ಗೆ ಹೋಲಿಸಿದರೆ ಇಂದು 8 ರೂಪಾಯಿ ಹೆಚ್ಚಳವಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 56950 ರೂ. ಇದೆ. ನಿನ್ನೆಯ 56940 ರೂ.ಗೆ ಹೋಲಿಸಿದರೆ ಇಂದು 10 ರೂ. ಏರಿಕೆ ಕಂಡಿದೆ. ಎಲ್ಲಾದರೂ 100 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 569500 ರೂ. ನೀಡಬೇಕು. ನಿನ್ನೆಯ 569400 ರೂ.ಗೆ ಹೋಲಿಸಿದರೆ ಇಂದು 100 ರೂಪಾಯಿ ಹೆಚ್ಚಳವಾಗಿದೆ.
ಇಂದಿನ ಬೆಳ್ಳಿ ದರ
ಇಂದು ಒಂದು ಗ್ರಾಂ ಬೆಳ್ಳಿ ದರ 68.70 ರೂ. ಇದೆ. ಒಂದು ಕೆಜಿ ಬೆಳ್ಳಿಗೆ 68700 ರೂ. ಇದೆ. ನಿನ್ನೆಗೆ ಹೋಲಿಸದರೆ ಇಂದು ಬೆಳ್ಳಿ ದರ ತಟಸ್ಥವಾಗಿದ್ದು, ಯಾವುದೇ ಬದಲಾವಣೆ ಕಂಡಿಲ್ಲ.
ವಿವಿಧ ನಗರಗಳಲ್ಲಿ ಚಿನ್ನದ ದರ
ಇಂದು ಬೆಂಗಳೂರು, ಮಂಗಳೂರು, ಮೈಸೂರು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ 52,210 ರೂ. ಇದೆ. ಇದೇ ನಗರಗಳಲ್ಲಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರ 56,950 ರೂ. ಇದೆ. ಪಕ್ಕದ ರಾಜ್ಯವಾದ ಚೆನ್ನೈನಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ದರ ಕ್ರಮವಾಗಿ 52,710 ರೂ. ಮತ್ತು 57,500 ರೂ. ಇದೆ. ಪಕ್ಕದ ಕೇರಳದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ದರ ಕ್ರಮವಾಗಿ 52,160 ರೂ. ಮತ್ತು 56,890 ರೂ. ಇದೆ. ಹೈದರಾಬಾದ್, ಕೋಲ್ಕೊತ್ತಾ, ಪುಣೆ, ಅಹಮದಾಬಾದ್‌ಗಳಲ್ಲಿಯೂ ಕೇರಳದಷ್ಟೇ ದರವಿದೆ.
ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.