Kannada News  /  Nation And-world  /  Gold And Silver Rate In Karnataka 14th March 2023
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯಿರಿ

Gold Rate today: ಚಿನಿವಾರ ಪೇಟೆಯಲ್ಲಿ ಮಂಗಳವಾರವೂ ಚಿನ್ನದ ದರ ಏರುಮುಖ, ಕರ್ನಾಟಕದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ

14 March 2023, 7:08 ISTHT Kannada Desk
14 March 2023, 7:08 IST

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5250 ರೂಪಾಯಿ ಇದೆ. ನಿನ್ನೆ 5221 ರೂ. ಇತ್ತು. ನಿನ್ನೆಗಿಂತ ಇಂದು 29 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 42000 ರೂ. ಇದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಇಂದಾದರೂ ದರ ಇಳಿಯಬಹುದೇ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮಂಗಳವಾರವೂ ಬೇಸರವಾಗಬಹುದು. ಏಕೆಂದರೆ, ಇಂದು ಕೂಡ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 29 ರೂ. ಮತ್ತು 24 ಕ್ಯಾರೆಟ್‌ ಚಿನ್ನದ ದರ 32 ರೂ.ನಷ್ಟು ಏರಿಕೆ ಕಂಡಿದೆ. ಹೀಗೆ, ತುಸುತುಸುವೇ ಏರುತ್ತ ಚಿನ್ನದ ದರ ಭರ್ಜರಿ ಏರಿಕೆಯತ್ತ ಮುನ್ನಡೆಯುತ್ತಿದೆ. ನಿನ್ನೆ ಒಂದು ಗ್ರಾಂ ಚಿನ್ನಕ್ಕೆ ಒಂದು ರೂ., 8 ಗ್ರಾಂಗೆ 8 ರೂ., 100 ಗ್ರಾಂಗೆ 100 ರೂ. ಏರಿಕೆಯಾಗಿತ್ತು. ಮೊನ್ನೆ ಚಿನ್ನದ ದರ ಗ್ರಾಂಗೆ 75 ರೂ. ಹೆಚ್ಚಳವಾಗಿತ್ತು.

22 ಕ್ಯಾರೆಟ್‌ ಚಿನ್ನದ ಇಂದಿನ ದರ

ಇಂದು ಒಂದು ಗ್ರಾಂ ಚಿನ್ನದ ದರ 5250 ರೂಪಾಯಿ ಇದೆ. ನಿನ್ನೆ 5221 ರೂ. ಇತ್ತು. ನಿನ್ನೆಗಿಂತ ಇಂದು 29 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 42000 ರೂ. ಇದೆ. ನಿನ್ನೆಯ 41,768 ರೂ.ಗೆ ಹೋಲಿಸಿದರೆ ಇಂದು 232 ರೂಪಾಯಿ ಹೆಚ್ಚಳವಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 52500 ರೂ. ಇದೆ. ನಿನ್ನೆಯ 52210 ರೂ.ಗೆ ಹೋಲಿಸಿದರೆ ಇಂದು 290 ರೂ. ಏರಿಕೆ ಕಂಡಿದೆ. ಎಲ್ಲಾದರೂ 100 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 525000 ರೂ. ನೀಡಬೇಕು. ನಿನ್ನೆಯ 522000 ರೂ.ಗೆ ಹೋಲಿಸಿದರೆ ಇಂದು 2900 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್‌ ಚಿನ್ನದ ಇಂದಿನ ದರ

ಇಂದು ಒಂದು ಗ್ರಾಂ ಚಿನ್ನದ ದರ 5727 ರೂಪಾಯಿ ಇದೆ. ನಿನ್ನೆ 5695 ರೂ. ಇತ್ತು. ನಿನ್ನೆಗಿಂತ ಇಂದು 32 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 45816 ರೂ. ಇದೆ. ನಿನ್ನೆಯ 45560 ರೂ.ಗೆ ಹೋಲಿಸಿದರೆ ಇಂದು 256 ರೂಪಾಯಿ ಹೆಚ್ಚಳವಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 57290 ರೂ. ಇದೆ. ನಿನ್ನೆಯ 56950 ರೂ.ಗೆ ಹೋಲಿಸಿದರೆ ಇಂದು 320 ರೂ. ಏರಿಕೆ ಕಂಡಿದೆ. ಎಲ್ಲಾದರೂ 100 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 572700 ರೂ. ನೀಡಬೇಕು. ನಿನ್ನೆಯ 569500 ರೂ.ಗೆ ಹೋಲಿಸಿದರೆ ಇಂದು 3200 ರೂಪಾಯಿ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಇಂದು ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಹೆಚ್ಚಿನ ನಗರಗಳಲ್ಲಿ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 52,500 ರೂ ಇದೆ. ಇದೇ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ 6,950 ರೂ. ಇದೆ.

ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ

ಇಂದು 22 ಕ್ಯಾರೆಟ್‌ ಚಿನ್ನಕ್ಕೆ ವಿವಿಧ ನಗರಗಳಲ್ಲಿ ಈ ಮುಂದಿನಂತೆ ದರವಿದೆ. ಚೆನ್ನೈ: 53,250 ರೂ., ಮುಂಬೈ: 52,450 ರೂ., ದೆಹಲಿ: 52,600 ರೂ., ಕೋಲ್ಕತಾ: 52,450 ರೂ., ಕೇರಳ: 52,450 ರೂ., ಅಹಮದಬಾದ್: 52,500 ರೂ., ಜೈಪುರ 52,600 ರೂ., ಲಖನೌ 52,600 ರೂ ಮತ್ತು ಭುವನೇಶ್ವರದಲ್ಲಿ 52,450 ರೂ. ಇದೆ.

ಇಂದಿನ ಬೆಳ್ಳಿ ದರ

ಇಂದು ಒಂದು ಗ್ರಾಂ ಬೆಳ್ಳಿ ದರ 69.50 ರೂ. ಇದೆ. ನಿನ್ನೆ 68.70 ರೂ. ಇತ್ತು. ಒಂದು ಕೆ.ಜಿ. ಬೆಳ್ಳಿಗೆ ಇಂದು 69,500 ರೂ. ಇದೆ. ನಿನ್ನೆ 68,700 ರೂ. ಇತ್ತು. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆಗಿಂತ ಇಂದು 800 ರೂ. ಹೆಚ್ಚಳವಾಗಿದೆ.

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.