ಕನ್ನಡ ಸುದ್ದಿ  /  Nation And-world  /  Gold And Silver Rate Today In Karnataka 14 August 2022

Gold Price Today: ಇಂದು ಚಿನ್ನ ಬೆಳ್ಳಿ ದುಬಾರಿ, ಚಿನ್ನದ ದರ 440 ರೂ., ಬೆಳ್ಳಿ ಬೆಲೆ 800 ರೂ. ಏರಿಕೆ

ನಿನ್ನೆಗೆ ಹೋಲಿಸಿದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ (Gold Price Today) ಸುಮಾರು 440 ರೂ., ಬೆಳ್ಳಿ ಬೆಲೆ 800 ರೂ. ಏರಿಕೆ ಕಂಡಿದೆ.

Gold Price Today: ಮತ್ತೆ ಇಳಿಕೆ ಕಂಡ ಚಿನ್ನದ ದರ, ಇಂದು ಚಿನ್ನದ ದರ ಎಷ್ಟು? (Bloomberg)
Gold Price Today: ಮತ್ತೆ ಇಳಿಕೆ ಕಂಡ ಚಿನ್ನದ ದರ, ಇಂದು ಚಿನ್ನದ ದರ ಎಷ್ಟು? (Bloomberg) (HT_PRINT)

ಬೆಂಗಳೂರು: ನಾಳೆ ಭಾರತದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮವಿದ್ದು, ಇಂದು ಭಾನುವಾರ ರಜವೂ ಆಗಿರುವುದರಿಂದ ಚಿನ್ನದಂಗಡಿಗೆ ಹೋಗಿ ಆಭರಣ ಖರೀದಿಸೋಣವೆಂದು ಪ್ಲಾನ್‌ ಹಾಕಿಕೊಂಡಿದ್ದರೆ ಇಂದಿನ ಚಿನ್ನದ ದರವನ್ನು (Gold Price Today) ತಿಳಿದುಕೊಂಡು ಮುಂದಡಿ ಇಡಿ. ನಿನ್ನೆಗೆ ಹೋಲಿಸಿದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಸುಮಾರು 440 ರೂ., ಬೆಳ್ಳಿ ಬೆಲೆ 800 ರೂ. ಏರಿಕೆ ಕಂಡಿದೆ.

ದೇಶದಲ್ಲಿಂದು ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇತ್ತು. ಇದು ಇಂದು 48,150 ರೂ. ಆಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 52,090 ರೂ. ಇತ್ತು. ಇದು ಇಂದು 52,530 ರೂ.ಗೆ ತಲುಪಿದೆ. ಸುಮಾರು ನಾಲ್ಕುನೂರು ರೂ. ಹೆಚ್ಚಳವಾಗಿರುವುದರಿಂದ ನಿನ್ನೆಗಿಂತ ಇಂದು ಚಿನ್ನ ದುಬಾರಿಯಾಗಿದೆ.

24 ಕ್ಯಾರೆಟ್ ಚಿನ್ನದ ದರವೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 52,580 ರೂ, ಮಂಗಳೂರು- 52,580 ರೂ, ಮೈಸೂರು- 52,580 ರೂ. ಇದೆ. ಉಳಿದಂತೆ ಚೆನ್ನೈ- 53,610 ರೂ, ಮುಂಬೈ- 52,530 ರೂ, ದೆಹಲಿ- 52,690 ರೂ, ಕೊಲ್ಕತ್ತಾ- 52,530 ರೂ, ಹೈದರಾಬಾದ್- 52,530 ರೂ, ಕೇರಳ- 52,530 ರೂ, ಪುಣೆಯಲ್ಲಿ- 52,580 ರೂ. ದರವಿದೆ.

ಚಿನ್ನ ಬೇಡ, ಬೆಳ್ಳಿಯಾದರೂ ಖರೀದಿಸೋಣವೆಂದುಕೊಂಡರೆ ಬೆಳ್ಳಿ ದರವೂ ಹೆಚ್ಚಾಗಿದೆ. ಬೆಳ್ಳಿ ದರ ಇಂದು ಸುಮಾರು 800 ರೂ.ನಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,500 ರೂ. ಇತ್ತು. ಇದು ಇಂದು 59,300 ರೂ.ಗೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿದರ: ಬೆಂಗಳೂರು- 64,800 ರೂ, ಮೈಸೂರು- 64,800 ರೂ., ಮಂಗಳೂರು- 64,800 ರೂ., ಮುಂಬೈ- 59,300 ರೂ, ಚೆನ್ನೈ- 64,800 ರೂ, ದೆಹಲಿ- 59,300 ರೂ, ಹೈದರಾಬಾದ್- 64,800 ರೂ, ಕೊಲ್ಕತ್ತಾ- 59,300 ರೂ.

ಮತ್ತೆ ದೇಶದಲ್ಲಿ ಹಬ್ಬದ ಋತು ಆರಂಭವಾಗುತ್ತಿರುವುದರಿಂದ ಚಿನ್ನ ಬೆಳ್ಳಿ ಖರೀದಿ ಭರಾಟೆ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ರಷ್ಯಾ ಉಕ್ರೇನ್‌ ಬಿಕ್ಕಟ್ಟು, ಹಣದುಬ್ಬರವೂ ಖರೀದಿ ಮೇಲೆ ಪರಿಣಾಮ ಬೀರುತ್ತಿದೆ. ಅಂತಾರಾಷ್ಟ್ರೀಯ ಟ್ರೇಡಿಂಗ್‌ ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿದೆ.

ಭಾರತೀಯರು ಚಿನ್ನ ಖರೀದಿಗೆ ಚಿನ್ನದ ದರ ಕಡಿಮೆ ಯಾವಾಗ ಇದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಅದಕ್ಕಿಂತ ಮುಖ್ಯವಾಗಿ ಚಿನ್ನ, ಬೆಳ್ಳಿ ಆಭರಣಗಳ ಖರೀದಿಗೆ ಶುಭ ದಿನವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಚಿನ್ನವು ಭಾರತೀಯರ ಅಚ್ಚುಮೆಚ್ಚಿನ ಹೂಡಿಕೆಯ ಸ್ವತ್ತು. ಬೆಲೆಗಳು ಕಡಿಮೆಯಾದಾಗ ಹೆಚ್ಚಿನ ಹೂಡಿಕೆ ಮಾಡಿ ದರ ಏರಿಕೆಯಾದಾಗ ಅದನ್ನು ಮಾರಾಟ ಮಾಡುತ್ತಾರೆ. ಹಬ್ಬ-ಹರಿದಿನಗಳು, ಮದುವೆಗಳ ಸಂದರ್ಭದಲ್ಲಿ ಚಿನ್ನಾಭರಣಗಳ ದರವು ಕೊಂಚ ಏರಿಕೆಯಾಗಿಯೇ ಇರುತ್ತದೆ. ಕೆಲ ಮಹಿಳೆಯರು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಲು ಕೂಡ ಅವರ ಮೊದಲ ಆಯ್ಕೆ ಚಿನ್ನವಾಗಿರುತ್ತದೆ.

ಹಣದುಬ್ಬರ, ಸೆಂಟ್ರಲ್ ಬ್ಯಾಂಕಿನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತವೆ.

ವಿಭಾಗ