Gold Price: ಅಮೆರಿಕದಲ್ಲಿ ಟ್ರಂಪ್ ಆಟಾಟೋಪ, ಭಾರತದಲ್ಲಿ ಚಿನ್ನದ ಧಾರಣೆ ನಾಗಾಲೋಟ: ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಹಳದಿ ಲೋಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ಅಮೆರಿಕದಲ್ಲಿ ಟ್ರಂಪ್ ಆಟಾಟೋಪ, ಭಾರತದಲ್ಲಿ ಚಿನ್ನದ ಧಾರಣೆ ನಾಗಾಲೋಟ: ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಹಳದಿ ಲೋಹ

Gold Price: ಅಮೆರಿಕದಲ್ಲಿ ಟ್ರಂಪ್ ಆಟಾಟೋಪ, ಭಾರತದಲ್ಲಿ ಚಿನ್ನದ ಧಾರಣೆ ನಾಗಾಲೋಟ: ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಹಳದಿ ಲೋಹ

ಭಾರತದಲ್ಲಿ ಚಿನ್ನದ ದರವು ಭಾರಿ ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ. ಅಮೆರಿಕದಲ್ಲಿ ಗದ್ದುಗೆಗೆ ಏರಿದ ಟ್ರಂಪ್ ಆಡಳಿತವು ಚಿನ್ನಾಭರಣ ದರದಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇದೀಗ 10 ಗ್ರಾಂ ಚಿನ್ನದ ಮೇಲೆ 630 ರೂ ಏರಿಕೆಯಾಗಿ 82,700 ರೂಗೆ ತಲುಪಿದೆ.

ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಹಳದಿ ಲೋಹ
ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಹಳದಿ ಲೋಹ (Pexel)

ಬೆಂಗಳೂರು: ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಯ ಸುತ್ತಲಿನ ಅನಿಶ್ಚಿತತೆಯು ಹಳದಿ ಲೋಹದ ಬೆಲೆ ಗಗನಕ್ಕೇರುವಂತೆ ಮಾಡಿದೆ. ಈ ಹಿನ್ನೆಲೆ ಬುಧವಾರ (ಜನವರಿ 22) ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಮೇಲೆ 630 ರೂ ಹೆಚ್ಚಾಗಿ 82,700ಕ್ಕೆ ತಲುಪಿದೆ. ಆ ಮೂಲಕ ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜಾಗತಿಕವಾಗಿ ಬಲವಾದ ಪ್ರವೃತ್ತಿಗಳ ನಡುವೆಯೂ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಿರಂತರವಾಗಿ ಖರೀದಿ ಮಾಡಿದ ಹಿನ್ನೆಲೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 630 ರೂ. ಏರಿಕೆಯಾಗಿ 10 ಗ್ರಾಂಗೆ 82,700 ರೂ ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

ಸತತ ಆರನೇ ಬಾರಿಗೆ ಏರಿಕೆ ಕಂಡಿರುವ 99.5 ಶುದ್ಧ ಚಿನ್ನವು 630 ರೂಪಾಯಿ ಏರಿಕೆಯಾಗಿ, 10 ಗ್ರಾಂಗೆ 82,330 ರೂ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠವನ್ನು ತಲುಪಿದೆ.

‘ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಯ ಸುತ್ತಲಿನ ಅನಿಶ್ಚಿತತೆಯು ಲೋಹದ ಬೆಲೆಗಳಲ್ಲಿನ ವ್ಯತ್ಯಯಕ್ಕೆ ಕಾರಣವಾಗಿದೆ‘ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಈ ಹಿಂದೆ 2024ರ ಅಕ್ಟೋಬರ್ 31 ರಂದು 99.9 ಪ್ರತಿಶತ ಶುದ್ಧ ಚಿನ್ನದ ಬೆಲೆ 82,400 ರೂ.ಗಳ ದಾಖಲೆ ಮಟ್ಟವನ್ನು ತಲುಪಿತ್ತು. ಅದೇ ದಿನ 99.5 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 82,000 ರೂ.ಗಳ ಸಾರ್ವಕಾಲಿಕ ಏರಿಕೆ ಕಂಡಿತ್ತು.

ಬುಧವಾರ ಬೆಳ್ಳಿ ಬೆಲೆ ಕೂಡ ಕೆಜಿಗೆ 1,000 ರೂ ಏರಿಕೆಯಾಗಿ 94,000 ರೂ ಗೆ ತಲುಪಿದೆ.

ಏತನ್ಮಧ್ಯೆ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MCX) ನಲ್ಲಿ ನಡೆದ ಫ್ಯೂಚರ್ಸ್ ವಹಿವಾಟಿನಲ್ಲಿ, ಫೆಬ್ರವರಿ ವಿತರಣೆಗಾಗಿ ಚಿನ್ನದ ಒಪ್ಪಂದಗಳು ಬುಧವಾರ 299 ರೂ ಅಥವಾ ಶೇ 0.38 ರಷ್ಟು ಏರಿಕೆಯಾಗಿ 10 ಗ್ರಾಂಗೆ 79,523 ರೂ ಗೆ ವಹಿವಾಟು ನಡೆಸಿದವು.

ಡಾಲರ್ ಬೆಲೆ ಕುಸಿತವು ಚಿನ್ನದ ದರದಲ್ಲಿ ನಿರಂತರ ಏರಿಕೆಗೆ ಕಾರಣವಾಗುತ್ತಿದೆ. ಟ್ರಂಪ್ ಚೀನಾ, ಮೆಕ್ಸಿಕೊ ಮತ್ತು ಕೆನಡಾ ಮೇಲಿನ ವ್ಯಾಪಾರ ಸುಂಕಗಳನ್ನು ವಿಳಂಬ ಮಾಡಿದ ನಂತರ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಿದೆ. ಇದು ದೀರ್ಘಕಾಲ ಮುಂದುವರಿಯುವ ಸಾಧ್ಯತೆಯನ್ನು ತಜ್ಞರು ಸೂಚಿಸಿದ್ದಾರೆ.  

ಅಮೆರಿಕ ಅಧ್ಯಕ್ಷ ಟ್ರಂಪ್ ಆಮದುಗಳ ಮೇಲೆ ವಿಧಿಸಲು ಯೋಜಿಸಿರುವ ಸುಂಕಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಅನಿಶ್ಚಿತತೆ ಇರುವುದರಿಂದ, ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹಗಳ ಮಾರುಕಟ್ಟೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುವ ಆವೇಗವನ್ನು ನಿರ್ಮಿಸುತ್ತಿದೆ‘ ಎಂದು ಆಗ್ಮಾಂಟ್‌ನ ಸಂಶೋಧನಾ ಮುಖ್ಯಸ್ಥೆ ರೆನಿಶಾ ಚೈನಾನಿ ಹೇಳಿದ್ದಾಗಿ ಡೆಕ್ಕನ್ ಹೆರಾಡ್ಡ್ ವರದಿ ಮಾಡಿದೆ. 

 

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.