ಕನ್ನಡ ಸುದ್ದಿ  /  Nation And-world  /  Gold Price Today May 26 Gold And Silver Rate In Karnataka Bengaluru Mgb

Gold Silver Price Today: ಸ್ವಲ್ಪ ಇಳಿಕೆ ಕಂಡ ಬಂಗಾರದ ಬೆಲೆ; ಶುಕ್ರವಾರ ಕರ್ನಾಟಕದಲ್ಲಿ ಹೀಗಿದೆ ಚಿನ್ನ, ಬೆಳ್ಳಿ ದರ

Gold price today: ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇಂತಹ ಸಮಯದಲ್ಲಿ ಉಡುಗೊರೆ ನೀಡಲು, ಸ್ವಂತ ಬಳಕೆಗೆ ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

ಚಿನ್ನ-ಬೆಳ್ಳಿ ದರ (ಸಾಂದರ್ಭಿಕ ಚಿತ್ರ)
ಚಿನ್ನ-ಬೆಳ್ಳಿ ದರ (ಸಾಂದರ್ಭಿಕ ಚಿತ್ರ)

ಇಂದು ಶುಕ್ರವಾರ ಒಳ್ಳೆಯ ದಿನವೆಂದು ಬಂಗಾರ ಖರೀದಿಗೆ ಹೋಗುವವರಿಗೆ ಸಮಾಧಾನಕರ ಸಂಗತಿ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಒಂದು ಗ್ರಾಂ ಚಿನ್ನದ ದರ 49 ರೂ.ನಷ್ಟು ಕಡಿಮೆಯಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ (22 carat gold rate) 5,685 ರೂ. ಇದೆ. ಇದೇ ರೀತಿ, ಅಪರಂಜಿ ಚಿನ್ನದ ದರ (24 carat gold rate) 6,092 ರೂ. ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಒಂದೇ ಬೆಲೆ ಇರುತ್ತದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯಾದ್ಯಂತ ಇಂದಿನ 22 ಕ್ಯಾರೆಟ್‌ ಚಿನ್ನದ ದರ ಹೀಗಿದೆ

ಗ್ರಾಂ ಇಂದಿನ ದರನಿನ್ನೆಯ ದರಇಳಿಕೆ
1 ಗ್ರಾಂ5,585 ರೂ.5,630 ರೂ.49 ರೂ.
8 ಗ್ರಾಂ44,680 ರೂ.45,020 ರೂ.360 ರೂ. 
10 ಗ್ರಾಂ55,850 ರೂ.56,300 ರೂ.450 ರೂ.
100 ಗ್ರಾಂ5,58,500 ರೂ.5,63,000 ರೂ.4,500 ರೂ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನ 22 ಕ್ಯಾರೆಟ್‌ ಚಿನ್ನದ ದರ ಹೀಗಿದೆ

ಗ್ರಾಂಇಂದಿನ ದರನಿನ್ನೆಯ ದರಇಳಿಕೆ
1 ಗ್ರಾಂ 6,092 ರೂ.6,141 ರೂ.49 ರೂ.
8 ಗ್ರಾಂ48,736 ರೂ.49,128 ರೂ.392 ರೂ.
10 ಗ್ರಾಂ60,920 ರೂ.61,410 ರೂ.490 ರೂ.
100 ಗ್ರಾಂ6,09,200 ರೂ.6,14,100 ರೂ.4,900 ರೂ.

ಬೆಳ್ಳಿ ದರವೆಷ್ಟು?

ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 76.50 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ 76,500 ರೂ. ಇದೆ.

ಆಭರಣ ಖರೀದಿಸುವಾಗ ಹಲವು ಶುಲ್ಕಗಳು, ಮಜೂರಿ ಇತ್ಯಾದಿಗಳಿಂದ ದರದಲ್ಲಿ ಏರುಪೇರು ಇರಬಹುದು. ಚಿನ್ನದ ದರ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ವ್ಯತ್ಯಾಸ ಇರಬಹುದು. ಹೀಗಾಗಿ, ಹೆಚ್ಚು ನಂಬಿಕಸ್ಥವೆನಿಸುವ ಚಿನ್ನದಂಗಡಿಗೆ ಹೋಗಿ ಉತ್ತಮ ದರ್ಜೆಯ ಚಿನ್ನ ಅಥವಾ ಬೆಳ್ಳಿ ಖರೀದಿಸಿ. ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

IPL_Entry_Point