Gold Price today: ದೇಶದಲ್ಲಿ ಚಿನ್ನದ ದರ ಮತ್ತೆ ಏರಿಕೆ; 10 ಗ್ರಾಂಗೆ ರೂ. 1 ಲಕ್ಷ ದಾಟಿದ ಬೆಲೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today: ದೇಶದಲ್ಲಿ ಚಿನ್ನದ ದರ ಮತ್ತೆ ಏರಿಕೆ; 10 ಗ್ರಾಂಗೆ ರೂ. 1 ಲಕ್ಷ ದಾಟಿದ ಬೆಲೆ

Gold Price today: ದೇಶದಲ್ಲಿ ಚಿನ್ನದ ದರ ಮತ್ತೆ ಏರಿಕೆ; 10 ಗ್ರಾಂಗೆ ರೂ. 1 ಲಕ್ಷ ದಾಟಿದ ಬೆಲೆ

ದೇಶದಲ್ಲಿ ಚಿನ್ನದ ದರ ಮತ್ತೊಮ್ಮೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಮತ್ತೆ 1 ಲಕ್ಷ ದಾಟಿದೆ, ಹೀಗಾಗಿ ಮದುವೆ ಸಂಭ್ರಮಕ್ಕೆ ಚಿನ್ನ ಖರೀದಿಸುವವರಿಗೆ ಸಮಸ್ಯೆಯಾಗಿದೆ.

ದೇಶದಲ್ಲಿ ಚಿನ್ನದ ದರ ಮತ್ತೊಮ್ಮೆ ಏರಿಕೆ
ದೇಶದಲ್ಲಿ ಚಿನ್ನದ ದರ ಮತ್ತೊಮ್ಮೆ ಏರಿಕೆ

ಬೆಂಗಳೂರು: ಚಿನ್ನದ ಬೆಲೆ ಮತ್ತೊಮ್ಮೆ ತೀವ್ರ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಬೆಲೆಯ ಮೇಲೂ ಪರಿಣಾಮ ಬೀರಿದೆ. ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ನಿರಂತರವಾಗಿ ಬಂಡವಾಳ ಹೂಡಿಕೆಯ ಹೆಚ್ಚಳವೂ ಬೆಲೆ ಏರಿಕೆಗೆ ಕಾರಣವಾಗಿದೆ.

ಎಲ್ಲೆಡೆ ಮದುವೆ ಹಾಗೂ ಹಬ್ಬದ ಸೀಸನ್ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಚಿನ್ನ ಖರೀದಿಗೆ ಭಾರಿ ಬೇಡಿಕೆ ಕಾಣಿಸಿಕೊಂಡಿದೆ. ಹೆಚ್ಚಿನ ಮಂದಿ ಬಂಡವಾಳ ಹೂಡಿಕೆಯ ಆಯ್ಕೆ ಎಂದು ಚಿನ್ನವನ್ನು ಪರಿಗಣಿಸುತ್ತಿದ್ದು, ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರವು 1 ಲಕ್ಷ ರೂಪಾಯಿ ಆಗಿದ್ದು ದಾಖಲೆ ಮಟ್ಟ ತಲುಪಿದೆ.

ಚಿನ್ನದ ದರ ಇನ್ನು ಏರಿಕೆ ಆಗಲಿದೆಯಾ ಎಂಬ ಪ್ರಶ್ನೆಗೆ ನಿಖರ ಉತ್ತರ ಸಿಗದಿದ್ದರೂ, ಆರ್ಥಿಕ ತಜ್ಞರು ಇನ್ನೂ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಹಣದುಬ್ಬರ ದರ, ಜಿಯೋಪಾಲಿಟಿಕಲ್ ಅಸ್ಥಿರತೆಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.